For Quick Alerts
ALLOW NOTIFICATIONS  
For Daily Alerts

ಜೂನ್‌ 2022ರಿಂದ ಪ್ರಮುಖ 5 ವೈಯಕ್ತಿಕ ಹಣಕಾಸು ಬದಲಾವಣೆ ತಿಳಿಯಿರಿ

|

ಜೂನ್ ತಿಂಗಳು ಆರಂಭವಾಗಲು ಇನ್ನು ನಾಲ್ಕೈದು ದಿನಗಳು ಮಾತ್ರ ಬಾಕಿ ಉಳಿದಿದೆ. ಇದಕ್ಕೂ ಮುನ್ನ ನೀವು ಹೊಸ ತಿಂಗಳಿನಲ್ಲಿ ಆಗುವ ಪ್ರಮುಖ ಹಣಕಾಸು ಬದಲಾವಣೆಗಳನ್ನು ತಿಳಿದಿರುವುದು ಬಹಳ ಮುಖ್ಯವಾಗಿದೆ. ಇಲ್ಲವಾದರೆ ನಿಮಗೆ ತೊಂದರೆ ಉಂಟಾಗಬಹುದು.

ಜೂನ್ ತಿಂಗಳಿನಲ್ಲಿ ಆಗುವ ಈ ವೈಯಕ್ತಿಕ ಹಣಕಾಸು ಬದಲಾವಣೆಗಳು ನಮ್ಮ ವೈಯಕ್ತಿಕ ಹಣಕಾಸು ನಿರ್ವಹಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ಪಡೆದಿರುವವರು, ಆಕ್ಸಿಸ್ ಬ್ಯಾಂಕ್ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು, ವಾಹನ ಮಾಲೀಕರಿಗೆ ಪ್ರಮುಖ ಪ್ರಭಾವ ಉಂಟಾಗಲಿದೆ. ಏಕೆಂದರೆ ಜೂನ್‌ನಲ್ಲಿ ಜಾರಿಗೆ ಬರಲಿರುವ ಈ ಬದಲಾವಣೆಗಳು ಈ ಜನರ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡಲಿದೆ.

ಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ: ಇನ್ಮುಂದೆ ಇಎಂಐ ಹೆಚ್ಚಳಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ: ಇನ್ಮುಂದೆ ಇಎಂಐ ಹೆಚ್ಚಳ

ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರುವ ಜೂನ್‌ನಿಂದ ಜಾರಿಗೆ ಬರಲಿರುವ ಐದು ಪ್ರಮುಖ ವೈಯಕ್ತಿಕ ಹಣಕಾಸು ಬದಲಾವಣೆಗಳನ್ನು ಈಗಲೇ ತಿಳಿದರೆ ಅದರ ನಿರ್ವಹಣೆಗೆ ದಾರಿ ಕಾಣಬಹುದು. ಈ ಬದಲಾವಣೆಗಳು ಯಾವುದು ಎಂದು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ...

 ಎಸ್‌ಬಿಐನ ಗೃಹ ಸಾಲದ ಬಡ್ಡಿದರ ಹೆಚ್ಚಳ

ಎಸ್‌ಬಿಐನ ಗೃಹ ಸಾಲದ ಬಡ್ಡಿದರ ಹೆಚ್ಚಳ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗೃಹ ಸಾಲದ ಇಬಿಎಲ್‌ಆರ್‌ ಅನ್ನು 40 ಬೇಸಿಸ್ ಪಾಯಿಂಟ್‌ ಹೆಚ್ಚಳ ಮಾಡಿದೆ. ಈ ಪರಿಷ್ಕರಣೆಯ ಬಳಿಕ ಎಸ್‌ಬಿಐ ಗೃಹ ಸಾಲದ ಬಡ್ಡಿದರ 7.05 ಪ್ರತಿಶತಕ್ಕೆ ಹೆಚ್ಚಾಗಿದೆ. ಆದರೆ ಆರ್‌ಎಲ್‌ಎಲ್‌ಆರ್ 6.65 ಪ್ರತಿಶತ ಪ್ಲಸ್ ಸಿಆರ್‌ಪಿ ಆಗಿದೆ. ಎಸ್‌ಬಿಐನ ವೆಬ್‌ಸೈಟ್ ಪ್ರಕಾರ, ಹೆಚ್ಚಿದ ಬಡ್ಡಿದರಗಳು ಜೂನ್ 1, 2022 ರಂದು ಜಾರಿಗೆ ಬರುತ್ತವೆ. ಈ ಹಿಂದೆ ಇಬಿಎಲ್‌ಆರ್ ಶೇಕಡ 6.65ರಷ್ಟಿದ್ದರೆ, ರೆಪೊ-ಲಿಂಕ್ಡ್ ಲೆಂಡಿಂಗ್ ದರ (ಆರ್‌ಎಲ್‌ಎಲ್‌ಆರ್) ಶೇಕಡ 6.25 ರಷ್ಟಿತ್ತು. ಇನ್ನು ಎಸ್‌ಬಿಐ ಎಂಸಿಎಲ್‌ಆರ್ ಅನ್ನು ಕೂಡಾ ಹತ್ತು ಮೂಲಾಂಕ ಏರಿಕೆ ಮಾಡಿದೆ. ಮೇ 15, 2022 ರಿಂದ, ಹೊಸ ಎಂಸಿಎಲ್‌ಆರ್ ಬಡ್ಡಿ ದರಗಳು ಜಾರಿಯಲ್ಲಿರುತ್ತವೆ.

 ಥರ್ಡ್ ಪಾರ್ಟಿ ಮೋಟಾರು ವಿಮಾ ಕಂತುಗಳು ಅಧಿಕ

ಥರ್ಡ್ ಪಾರ್ಟಿ ಮೋಟಾರು ವಿಮಾ ಕಂತುಗಳು ಅಧಿಕ

ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಸೂಚನೆಯ ಪ್ರಕಾರ 1000 ಸಿಸಿ ಮೀರದ ಖಾಸಗಿ ಕಾರುಗಳಿಗೆ ಥರ್ಡ್-ಪಾರ್ಟಿ ವಿಮೆಯ ವಾರ್ಷಿಕ ದರವನ್ನು 2019-20 ರಲ್ಲಿ ರೂ 2,072 ರಿಂದ ರೂ 2,094 ಗೆ ನಿಗದಿಪಡಿಸಲಾಗಿದೆ. ಹೊಸ ದರಗಳ ಅಡಿಯಲ್ಲಿ, 1000 ಸಿಸಿ ಮತ್ತು 1500 ಸಿಸಿ ನಡುವಿನ ಎಂಜಿನ್ ಸಾಮರ್ಥ್ಯದ ಖಾಸಗಿ ಕಾರುಗಳಿಗೆ ಥರ್ಡ್ ಪಾರ್ಟಿ ವಿಮೆ 2019-20 ರಲ್ಲಿ 3,221 ರಿಂದ 3,416 ಕ್ಕೆ ಹೆಚ್ಚಿಸಲಾಗಿದೆ. 1500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ ದೊಡ್ಡ ಖಾಸಗಿ ವಾಹನಗಳ ಪ್ರೀಮಿಯಂಗಳು ರೂ 7,890 ರಿಂದ ರೂ 7,897 ಕ್ಕೆ ತಲುಪಿದೆ.

ಇನ್ನು 150 ಸಿಸಿಗಿಂತ ಹೆಚ್ಚಿನ ಆದರೆ 350 ಸಿಸಿಗಿಂತ ಕಡಿಮೆಯ ದ್ವಿಚಕ್ರ ವಾಹನಗಳಿಗೆ ವಿಮಾ ಪ್ರೀಮಿಯಂ ರೂ 1,366 ಆಗಿರುತ್ತದೆ. 350 ಸಿಸಿಗಿಂತ ಹೆಚ್ಚಿನ ದ್ವಿಚಕ್ರ ವಾಹನಗಳು ರೂ 2,804 ಪ್ರೀಮಿಯಂ ಅನ್ನು ಕಟ್ಟಬೇಕಾಗುತ್ತದೆ. 1000 ಸಿಸಿ ಮೀರದ ಹೊಸ ಕಾರಿಗೆ ಮೂರು ವರ್ಷಗಳ ಸಿಂಗಲ್ ಪ್ರೀಮಿಯಂ ಅನ್ನು 6,521 ರೂ.ಗೆ ನಿಗದಿಪಡಿಸಲಾಗಿದೆ. 1000 ಸಿಸಿ ಮತ್ತು 1500 ಸಿಸಿ ನಡುವಿನ ಕಾರಿಗೆ 10,640 ರೂ ವಿಮೆ ಮೊತ್ತವಾಗಿದೆ. 1500 ಸಿಸಿಗಿಂತ ಹೆಚ್ಚಿನ ಹೊಸ ಖಾಸಗಿ ವಾಹನವನ್ನು ಮೂರು ವರ್ಷಗಳವರೆಗೆ ರೂ 24,596 ಕ್ಕೆ ವಿಮೆ ಮಾಡಲಾಗುವುದು. ದರಗಳನ್ನು 2019-20 ಹಣಕಾಸು ವರ್ಷದ ಕೊನೆಯಲ್ಲಿ ಪರಿಷ್ಕರಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬದಲು ಮಾಡಲಾಗಿಲ್ಲ. ಆದರೆ ಈ ಪರಿಷ್ಕೃತ ದರಗಳು ಜೂನ್ 1, 2022 ರಿಂದ ಅನ್ವಯವಾಗುತ್ತವೆ.

 

 ಚಿನ್ನದ ಹಾಲ್‌ಮಾರ್ಕಿಂಗ್

ಚಿನ್ನದ ಹಾಲ್‌ಮಾರ್ಕಿಂಗ್

ಜೂನ್ 1, 2022 ರಿಂದ, ಎರಡನೇ ಹಂತದ ಕಡ್ಡಾಯ ಹಾಲ್‌ಮಾರ್ಕಿಂಗ್ ಜಾರಿಗೆ ಬರಲಿದೆ. ಅಸ್ತಿತ್ವದಲ್ಲಿರುವ 256 ಜಿಲ್ಲೆಗಳು ಮತ್ತು 32 ಹೊಸ ಜಿಲ್ಲೆಗಳಲ್ಲಿ ಅಸ್ಸೇಯಿಂಗ್ ಮತ್ತು ಹಾಲ್‌ಮಾರ್ಕಿಂಗ್ ಸೆಂಟರ್ (AHC) ವ್ಯಾಪ್ತಿಗೆ ಬರುವ ಚಿನ್ನದ ಆಭರಣಗಳು/ಕಲಾಕೃತಿಗಳ ಹಾಲ್‌ಮಾರ್ಕಿಂಗ್ ಅನ್ನು ಸಂಪೂರ್ಣವಾಗಿ ಕಡ್ಡಾಯಗೊಳಿಸುತ್ತದೆ. ಈ 288 ಜಿಲ್ಲೆಗಳಲ್ಲಿ 14, 18, 20, 22, 23 ಮತ್ತು 24 ಕ್ಯಾರೆಟ್ ತೂಕದ ಚಿನ್ನಾಭರಣಗಳು ಮತ್ತು ಪ್ರಾಚೀನ ವಸ್ತುಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಅವುಗಳನ್ನು ಕಡ್ಡಾಯವಾಗಿ ಹಾಲ್‌ಮಾರ್ಕಿಂಗ್‌ನೊಂದಿಗೆ ಮಾರಾಟ ಮಾಡಬೇಕಾಗಿದೆ.

 ಆಧಾರ್ ಸಕ್ರಿಯಗೊಳಿಸಿದ ಪಾವತಿಗಳಿಗೆ ಶುಲ್ಕ ವಿಧಿಸುವ ಈ ಬ್ಯಾಂಕ್

ಆಧಾರ್ ಸಕ್ರಿಯಗೊಳಿಸಿದ ಪಾವತಿಗಳಿಗೆ ಶುಲ್ಕ ವಿಧಿಸುವ ಈ ಬ್ಯಾಂಕ್

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಆಧಾರ್ ಸಕ್ರಿಯಗೊಳಿಸಿದ ಪಾವತಿಗೆ (ಎಇಪಿಎಸ್) ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಿದೆ. ಈ ಶುಲ್ಕಗಳನ್ನು ಜೂನ್ 15, 2022 ರಂದು ಜಾರಿಗೆ ತರಲಾಗುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಭಾರತೀಯ ಅಂಚೆಯ ಅಂಗಸಂಸ್ಥೆಯಾಗಿದ್ದು, ಇದನ್ನು ಅಂಚೆ ಇಲಾಖೆಯು ನಿರ್ವಹಣೆ ಮಾಡುತ್ತದೆ. ಎಇಪಿಎಸ್ ನಗದು ಹಿಂಪಡೆಯುವಿಕೆ, ಎಇಪಿಎಸ್ ನಗದು ಠೇವಣಿ ಸೇರಿದಂತೆ ಪ್ರತಿ ತಿಂಗಳು ಮೊದಲ ಮೂರು ಎಇಪಿಎಸ್ ವಹಿವಾಟುಗಳು ಉಚಿತವಾಗಿರುತ್ತದೆ. ಉಚಿತ ವಹಿವಾಟಿನ ಬಳಿಕ ನಡೆಸುವ ಎಲ್ಲಾ ವಹಿವಾಟಿಗೆ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರತಿ ನಗದು ಹಿಂಪಡೆಯುವಿಕೆ ಅಥವಾ ನಗದು ಠೇವಣಿಗೆ ರೂ 20 ಮತ್ತು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಮಿನಿ ಸ್ಟೇಟ್‌ಮೆಂಟ್ ವಹಿವಾಟಿಗೆ ರೂ 5 ಮತ್ತು ಜಿಎಸ್‌ಟಿ ವೆಚ್ಚವಾಗುತ್ತದೆ.

 ಆಕ್ಸಿಸ್ ಬ್ಯಾಂಕ್‌ನ ಪರಿಷ್ಕೃತ ಉಳಿತಾಯ ಖಾತೆ ಶುಲ್ಕ

ಆಕ್ಸಿಸ್ ಬ್ಯಾಂಕ್‌ನ ಪರಿಷ್ಕೃತ ಉಳಿತಾಯ ಖಾತೆ ಶುಲ್ಕ

ಸೆಮಿ ಅರ್ಬನ್/ಗ್ರಾಮೀಣ ಪ್ರದೇಶಗಳಲ್ಲಿ ಉಳಿತಾಯ ಖಾತೆಗೆ ಸರಾಸರಿ ಮಾಸಿಕ ಬಾಕಿ ಅಗತ್ಯವನ್ನು ರೂ.15,000 ರಿಂದ ರೂ. 25,000 ಅಥವಾ ರೂ. 1 ಲಕ್ಷ ಅವಧಿಯ ಠೇವಣಿಗೆ ಹೆಚ್ಚಿಸಲಾಗಿದೆ. ಲಿಬರ್ಟಿ ಉಳಿತಾಯ ಖಾತೆಗೆ, ಅಗತ್ಯವನ್ನು 15,000 ರೂಪಾಯಿಯಿಂದ 25,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಸುಂಕಗಳು ಜೂನ್ 1, 2022 ರಿಂದ ಜಾರಿಯಲ್ಲಿರುತ್ತವೆ.

English summary

Money Changes in June 2022 will have impact on your financial life

Money Changes from June 1: Here are the five major money and person finances changes from June 2022 which will affect on your financial life. Know more.
Story first published: Friday, May 27, 2022, 15:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X