For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!

|

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್‌ನ ಸುರಕ್ಷತೆಗಾಗಿ ಹೊಸ ಮಾರ್ಗಸೂಚಿಯೊಂದನ್ನು ಜಾರಿ ಮಾಡಿದೆ. ಈ ನಿಯಮದ ಪ್ರಕಾರ ಬಳಕೆದಾರರು ಆಧಾರ್ ಪ್ರಮಾಣಪತ್ರವನ್ನು ಪಡೆಯಬೇಕಾದರೆ ಬಳಕೆದಾರರು ಆಫ್‌ಲೈನ್‌ನಲ್ಲಿ ಆಗಲಿ, ಆನ್‌ಲೈನ್‌ನಲ್ಲಿ ಆಗಲಿ ಅನುಮತಿಯನ್ನು ಪಡೆಯುವುದು ಮುಖ್ಯವಾಗಿದೆ.

ಆಧಾರ್ ಕಾರ್ಡ್ ಅನ್ನು ವೆರಿಫೈ ಮಾಡಲು ಹಲವಾರು ಪ್ರಕ್ರಿಯೆಗಳು ಇರುವಂತೆಯೇ, ಆಧಾರ್ ಕಾರ್ಡ್‌ದಾರರು ಯಾವುದೇ ಅಧಿಕೃತ ಅನುಮತಿ ಇಲ್ಲದೆ ಆಧಾರ್ ಕಾರ್ಡ್ ಪ್ರಮಾಣಪತ್ರವನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಆನ್‌ಲೈನ್‌ನಲ್ಲಿ ಆಧಾರ್ ಪ್ರಮಾಣ ಪತ್ರದ ಮಾಡಿಕೊಳ್ಳುವ ಯಾವುದೇ ವ್ಯಕ್ತಿಯು ಆಧಾರ್ ಪ್ರಮಾಣಪತ್ರದ ಅಗತ್ಯವನ್ನು ಅರ್ಥ ಮಾಡಿಕೊಂಡಿರಬೇಕು ಎಂದು ಯುಐಡಿಎಐ ಹೇಳಿದೆ.

ಗಮನಿಸಿ: ಆಧಾರ್‌ ವೆರಿಫಿಕೇಶನ್‌ಗೆ ಯುಐಡಿಎಐ ಹೊಸ ಮಾರ್ಗಸೂಚಿಗಮನಿಸಿ: ಆಧಾರ್‌ ವೆರಿಫಿಕೇಶನ್‌ಗೆ ಯುಐಡಿಎಐ ಹೊಸ ಮಾರ್ಗಸೂಚಿ

ಆಧಾರ್ ವೆರಿಫಿಕೇಶನ್‌ಗೆ ಆಧಾರ್ ಕಾರ್ಡ್‌ದಾರರಿಂದ ಅನುಮೋದನೆಯನ್ನು ಪಡೆಯುವುದು ಮುಖ್ಯವಾಗಿದೆ. ಆಧಾರ್ ಕಾರ್ಡ್‌ದಾರರ ಅನುಮೋದನೆ ಬಳಿಕ, ಎಲ್ಲ ವೆರಿಫಿಕೇಶನ್ ಪ್ರಕ್ರಿಯೆ ಬಳಿಕ, ಎಲ್ಲ ದಾಖಲೆಗಳನ್ನು ಪ್ರಸ್ತುತ ಪಡಿಸಬೇಕಾಗುತ್ತದೆ.

 ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!

ಆಧಾರ್ ಕಾರ್ಡ್‌ಗಳನ್ನು ನೀಡುವ ಸಂಸ್ಥೆಯು ಯಾವುದೇ ರೀತಿಯ ವಂಚನೆಯನ್ನು ತಕ್ಷಣವೇ ವರದಿ ಮಾಡಬೇಕು ಎಂದು ಒತ್ತಿ ಹೇಳಿದೆ. ವಂಚನೆಯನ್ನು ವರದಿ ಮಾಡಲು ಮತ್ತು ಅದರ ಬಗ್ಗೆ ಮಾಹಿತಿಯನ್ನು ಒದಗಿಸಲು ಬಳಕೆದಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಯಾವುದೇ ಆಧಾರ್ ಕಾರ್ಡ್ ಅಪ್‌ಡೇಟ್‌ಗಾಗಿ ಯಾರಾದರೂ ಹೆಚ್ಚುವರಿ ಹಣವನ್ನು ಪಾವತಿ ಮಾಡಲು ಹೇಳಿದರೆ, ದೂರು ಸಲ್ಲಿಸಬಹುದು ಎಂದು ಕೂಡಾ ಉಲ್ಲೇಖಿಸಲಾಗಿದೆ.

ಆಧಾರ್ ಪ್ಯಾನ್ ಲಿಂಕ್ ಮಾಡಿಕೊಳ್ಳಿ

ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪ್ಯಾನ್ ಸಂಖ್ಯೆಯೊಂದಿಗೆ ಅಪ್‌ಡೇಟ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ ಎಂಬುವುದು ನೆನಪಿನಲ್ಲಿರಲಿ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ 1000 ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಅನ್ನು ನೀವು ಲಿಂಕ್ ಮಾಡದಿದ್ದರೆ ಕೂಡಲೇ ಲಿಂಕ್ ಮಾಡಿಕೊಳ್ಳಿ.

 ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ? ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?

ನೀವು ಸದ್ಯ ಏಪ್ರಿಲ್ 1, 2023ರವರೆಗೆ ಪ್ಯಾನ್ ಆಧಾರ್ ಲಿಂಕ್ ಮಾಡಬಹುದಾದರೂ ಅದಕ್ಕೆ ದಂಡವನ್ನು ಪಾವತಿಸಬೇಕಾಗುತ್ತದೆ. ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ನೀವು ಇನ್ನೂ ಕೂಡಾ ಪ್ಯಾನ್ ಆಧಾರ್ ಲಿಂಕ್ ಮಾಡಿಲ್ಲದಿದ್ದರೆ ಕೂಡಲೇ ಲಿಂಕ್ ಮಾಡಿಬಿಡಿ. ಇಲ್ಲವಾದರೆ ಪ್ಯಾನ್ ನಿಷ್ಕ್ರಿಯವಾಗುವ ಸಾಧ್ಯತೆಯಿದೆ. ಅದಕ್ಕಾಗಿ ಗಡುವು ಕೊನೆಯಾಗುವುದಕ್ಕೂ ಮುನ್ನವೇ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಿ.

English summary

UIDAI Aadhaar card update: UIDAI rules for using your Aadhaar card safely

A new guideline concerning the use of Aadhaar cards has been issued by the Unique Identification Authority of India (UIDAI).
Story first published: Thursday, January 26, 2023, 18:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X