For Quick Alerts
ALLOW NOTIFICATIONS  
For Daily Alerts

ಹುಟ್ಟಿನಿಂದ ಸಾವಿನವರೆಗೆ ಆಧಾರ್: ನವಜಾತ ಶಿಶುವಿಗೂ ಕಾರ್ಡ್

|

ನವಜಾತ ಶಿಶುವಿಗೆ ಶೀಘ್ರದಲ್ಲೇ ತಾತ್ಕಾಲಿಕ ಆಧಾರ್ ಸಂಖ್ಯೆ ಲಭ್ಯವಾಗಲಿದೆ. ಹಾಗೆಯೇ ಜನರ ಮರಣ ಹಾಗೂ ಜನನ ಎರಡೂ ವಿವರಗಳು ಆಧಾರ್ ಕಾರ್ಡ್‌ನಲ್ಲಿ ಇರಲಿದೆ. ಸಾವನ್ನಪ್ಪಿದ ಜನರ ಆಧಾರ್ ನಂಬರ್ ಅನ್ನು ದುರ್ಬಳಕೆ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲು ಯುಐಡಿಎಐ ನಿರ್ಧಾರ ಮಾಡಿದೆ.

 

ಆಧಾರ್ ಕಾರ್ಡ್ ವ್ಯವಸ್ಥೆಯನ್ನು 2010ರಲ್ಲಿ ಆರಂಭ ಮಾಡಲಾಗಿದ್ದು, ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಆಧಾರ್ ಕಡ್ಡಾಯವಾಗಿದೆ. ಇದೊಂದು ಮೂಲ ದಾಖಲೆಯಾಗಿ ಪರಿವರ್ತನೆಯಾಗಿದೆ. ಈಗ ಈ ಆಧಾರ್ ಅನ್ನು ಜನರ ಹುಟ್ಟಿನಿಂದ ಮರಣದವರೆಗೆ ಜನರ ಮೂಲ ಆಧಾರವಾಗಿ ಲಿಂಕ್ ಮಾಡಲು ಯುಐಡಿಎಐ ಮುಂದಾಗಿದೆ.

"ನವಜಾತ ಶಿಶು ಜನನ ಹೊಂದಿದ ಕೂಡಲೇ ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬೇಕಾಗಿದೆ. ಒಂದು ಕುಟುಂಬದ ಪ್ರತಿಯೋರ್ವ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ," ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನವಜಾತ ಶಿಶುವಿಗೆ ಆಧಾರ್ ಕಾರ್ಡ್

ನವಜಾತ ಶಿಶುವಿಗೆ ಆಧಾರ್ ಕಾರ್ಡ್

ದೇಶದಲ್ಲಿ ಶೀಘ್ರದಲ್ಲೇ ನವಜಾತ ಶಿಶುವಿನ ಬಯೋಮೆಟ್ರಿಕ್ ಡೇಟಾದೊಂದಿಗೆ ತಾತ್ಕಾಲಿಕ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು ಜನನದ ಸಂದರ್ಭದಲ್ಲಿ ಯುಐಡಿಎಐ ಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ. ಈ ಮೂಲಕ ಒಂದು ಕುಟುಂಬದ ಸಣ್ಣ ವಯಸ್ಸಿನ ಮಗುವಿಗೂ ಸರ್ಕಾರದ ಸೌಲಭ್ಯ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಣ್ಣ ಮಗುವಿದ್ದಾಗ ಮಾಡಿಸಿಕೊಂಡ ಆಧಾರ್

ಸಣ್ಣ ಮಗುವಿದ್ದಾಗ ಮಾಡಿಸಿಕೊಂಡ ಆಧಾರ್

ಸಣ್ಣ ಮಗುವಿದ್ದಾಗ ಮಾಡಿಸಿಕೊಂಡ ಈ ಆಧಾರ್ ಕಾರ್ಡ್ ಅನ್ನು ಸುಮಾರು ಹದಿನೆಂಟು ವರ್ಷ ಕಳೆದಾಗ ಮತ್ತೆ ರಿಜಿಸ್ಟರ್ ಮಾಡಬೇಕಾಗುತ್ತದೆ. ಆ ಬಳಿಕ ಆ ಆಧಾರ್ ನಂಬರ್ ವ್ಯಕ್ತಿಯ ಕಾಯಂ ನಂಬರ್ ಆಗಲಿದೆ. ಆಧಾರ್ ನಂಬರ್ ಅನ್ನು ಜಾರಿ ಮಾಡಿದ ಬಳಿಕ ಐದು ವರ್ಷದಿಂದ ಹದಿನೆಂಟು ವರ್ಷದವರಲ್ಲಿ ಶೇಕಡ 93ರಷ್ಟು ಮಂದಿಗೆ ಆಧಾರ್ ಕಾರ್ಡ್ ನೀಡಲಾಗಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಾಲು ಭಾಗದಷ್ಟು ಮಕ್ಕಳ ಗುರುತನ್ನು ಡೇಟಾಬೇಸ್‌ನಲ್ಲಿ ನೋಂದಾವಣಿ ಮಾಡಲಾಗಿದೆ.

ಮನ್‌ಮೋಹನ್ ಸಿಂಗ್ ಸರ್ಕಾರ ಆರಂಭ ಮಾಡಿದೆ
 

ಮನ್‌ಮೋಹನ್ ಸಿಂಗ್ ಸರ್ಕಾರ ಆರಂಭ ಮಾಡಿದೆ

ಈ ಆಧಾರ್ ವ್ಯವಸ್ಥೆಯನ್ನು ಮನ್‌ಮೋಹನ್ ಸಿಂಗ್ ಸರ್ಕಾರ ಆರಂಭ ಮಾಡಿದ್ದು, ಆದರೆ ಬಳಿಕ ನರೇಂದ್ರ ಮೋದಿ ಸರ್ಕಾರವು ಈ ಆಧಾರ್ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸಿಕೊಂಡಿದೆ. ಪ್ರಸ್ತುತ ಆಧಾರ್ ಅನ್ನು ಎಲ್ಲಾ ಕ್ಷೇತ್ರಗಳಲ್ಲಿ ಕೇಳಲಾಗುತ್ತದೆ. ಆಧಾರ್ ಅನ್ನು ದಾಖಲೆಯ ಗುರುತಾಗಿ ಪರಿಗಣಿಸಲಾಗುತ್ತಿದೆ.

ನಿಮ್ಮ ಮನೆ ಬಾಗಿಲಿಗೆ ಆಧಾರ್ ಸೇವೆ: ಇಲ್ಲಿದೆ ವಿವರ

English summary

UIDAI plans to expand Aadhaar to cover a person's entire lifecycle from Birth to Death

Aadhar from Birth to Death: UIDAI will soon start a pilot programme to assign a temporary ID to newborns; It will also integrate the Aadhaar database with death registration data to prevent misuse and leaks. Know more.
Story first published: Wednesday, June 15, 2022, 17:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X