For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ವಿಶೇಷ ಸೇವಿಂಗ್ ಅಕೌಂಟ್: ಎಫ್‌ಡಿಗಿಂತ ಹೆಚ್ಚಿನ ಬಡ್ಡಿ ದರ!

|

ಮಹಿಳೆಯರಿಗಾಗಿ ಉಜ್ಜೀವನ್ ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌ಗಳು ವಿಶೇಷ ಉಳಿತಾಯ ಖಾತೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಮಹಿಳೆಯರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಈ ಉಳಿತಾಯ ಯೋಜನೆಗಳು ಸಹಾಯವಾಗಲಿದ್ದು, ಈ ವಿಶೇಷ ಉಳಿತಾಯ ಖಾತೆಯನ್ನು ಗರಿಮಾ ಎಂದು ಹೆಸರಿಡಲಾಗಿದೆ.

ಈ ವಿಶೇಷ ಉಳಿತಾಯ ಖಾತೆಯಲ್ಲಿ ಮಹಿಳೆಯರಿಗೆ ಗರಿಷ್ಠ ಶೇಕಡಾ 7ರ ಬಡ್ಡಿದರವನ್ನು ನೀಡಲಾಗುವುದು. ಈ ಮೂಲಕ ಎಫ್‌ಡಿಗಿಂತಲೂ ಹೆಚ್ಚಿನ ಬಡ್ಡಿ ದರವನ್ನು ಈ ಖಾತೆಯಿಂದ ಪಡೆಯಲು ಸಾಧ್ಯವಾಗುತ್ತದೆ.

ಏನಿದು ಗರಿಮಾ ಸೇವಿಂಗ್ ಅಕೌಂಟ್?

ಏನಿದು ಗರಿಮಾ ಸೇವಿಂಗ್ ಅಕೌಂಟ್?

ಗರಿಮಾ ಸೇವಿಂಗ್ಸ್ ಅಕೌಂಟ್ ಮೂಲಕ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆರ್ಥಿಕವಾಗಿ ಜಾಗೃತ ಮತ್ತು ಆರ್ಥಿಕವಾಗಿ ಸಕ್ರಿಯವಾಗಿರುವ ಮಹಿಳೆಯರಿಗೆ ತಮ್ಮ ದಿನನಿತ್ಯದ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸಲು ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಸ್ವತಃ ಒಂದು ವಿಶೇಷ ರೀತಿಯ ಖಾತೆಯಾಗಿದ್ದು, ಇದು ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಮತ್ತು ಸಣ್ಣ ಉದ್ಯಮಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ.

ಗರಿಮಾ ಸೇವಿಂಗ್ ಅಕೌಂಟ್‌ನಿಂದ ಏನು ಪ್ರಯೋಜನ?

ಗರಿಮಾ ಸೇವಿಂಗ್ ಅಕೌಂಟ್‌ನಿಂದ ಏನು ಪ್ರಯೋಜನ?

ಗರಿಮಾ ಉಳಿತಾಯ ಖಾತೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ನಗದು ಮತ್ತು ಉಚಿತ ಅನಿಯಮಿತ ಹಣವನ್ನು ಹಿಂಪಡೆಯುವ ಸೌಲಭ್ಯ ಸಿಗಲಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮಹಿಳೆಯರು ಬ್ಯಾಂಕಿನ ಯಾವುದೇ ಶಾಖೆಯಿಂದ ಅನಿಯಮಿತ ಹಣವನ್ನು ಹಿಂಪಡೆಯಬಹುದು. ಖಾತೆಯನ್ನು ಹೊಂದಿರುವ ಶಾಖೆ ಅಷ್ಟೇ ಅಲ್ಲದೆ, ಇತರೆ ಶಾಖೆಗಳಲ್ಲೂ ಈ ಸೌಲಭ್ಯವನ್ನು ಒದಗಿಸಲಾಗುವುದು. ಇದಲ್ಲದೆ, ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಅನಿಯಮಿತ ಉಚಿತ ನೆಫ್ಟ್ ಮತ್ತು ಆರ್‌ಟಿಜಿಎಸ್ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುತ್ತದೆ.

ಡೆಬಿಟ್‌ ಕಾರ್ಡ್‌ ಮತ್ತು ಚೆಕ್ ಬುಕ್

ಡೆಬಿಟ್‌ ಕಾರ್ಡ್‌ ಮತ್ತು ಚೆಕ್ ಬುಕ್

ಗರಿಮಾ ಉಳಿತಾಯ ಖಾತೆಯಲ್ಲಿ ಮಹಿಳೆಯರಿಗೆ ರುಪೇ ಡೆಬಿಟ್ ಕಾರ್ಡ್ ಸಿಗುತ್ತದೆ, ಇದು ಇತರ ಅನೇಕ ಪ್ರಯೋಜನಗಳೊಂದಿಗೆ ಸಂಪರ್ಕಗೊಳ್ಳುತ್ತದೆ. ಖಾತೆ ಹೊಂದಿರುವವರು ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೈಯಕ್ತಿಕಗೊಳಿಸಿದ ಚೆಕ್ ಪುಸ್ತಕವನ್ನು ಪಡೆಯುತ್ತಾರೆ.

2017 ರಲ್ಲಿ ಬೆಂಗಳೂರಿನಲ್ಲಿ ಪ್ರಾಯೋಗಿಕ ಶಾಖೆ ಪ್ರಾರಂಭ

2017 ರಲ್ಲಿ ಬೆಂಗಳೂರಿನಲ್ಲಿ ಪ್ರಾಯೋಗಿಕ ಶಾಖೆ ಪ್ರಾರಂಭ

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಬ್ಯಾಂಕಿಂಗ್ ವ್ಯವಹಾರವನ್ನು 2017 ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಪ್ರಾಯೋಗಿಕ ಶಾಖೆಗಳೊಂದಿಗೆ ಪ್ರಾರಂಭಿಸಿತು. ಇಂದು ಇದು 575 ಶಾಖೆಗಳನ್ನು ಹೊಂದಿದೆ. ಇದರ ಶಾಖೆಗಳು ದೇಶದ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಹಿರಿಯ ನಾಗರಿಕರಿಗೆ ಶೇ. 7 ರಷ್ಟು ಬಡ್ಡಿ ದರ

ಹಿರಿಯ ನಾಗರಿಕರಿಗೆ ಶೇ. 7 ರಷ್ಟು ಬಡ್ಡಿ ದರ

ಇಂಡಸ್‌ಇಂಡ್ ಬ್ಯಾಂಕ್ ಮತ್ತು ಆರ್‌ಬಿಎಲ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಒಂದು ವರ್ಷದ ಎಫ್‌ಡಿ ಮೇಲೆ ಶೇ 7ರಷ್ಟು ಬಡ್ಡಿದರವನ್ನು ನೀಡುತ್ತಿದ್ದರೆ, ಸಾಮಾನ್ಯ ನಾಗರಿಕರಿಗೆ ಈ ಅವಧಿಯಲ್ಲಿ ಶೇ 6.5 ರಷ್ಟು ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಯೆಸ್‌ ಬ್ಯಾಂಕ್ ಶೇ 6.75, ಡಿಸಿಬಿ ಬ್ಯಾಂಕ್ ಶೇ 6.55 ಮತ್ತು ಬಂಧನ್ ಬ್ಯಾಂಕ್ ಶೇ 6.5 ರಷ್ಟು ಬಡ್ಡಿ ನೀಡುತ್ತಿದೆ.

English summary

Ujjivan Small Finance Bank Launches Women Savings Account: 7% Interest Rates

Ujjivan Small Finance Bank has announced the launch of a "Women Savings Account" on Monday catering to the financial needs of women.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X