For Quick Alerts
ALLOW NOTIFICATIONS  
For Daily Alerts

ಯುಕೆ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡ ಭಾರತೀಯ ಮೂಲದ ಉದ್ಯಮಿಗಳು ಇವರೇ ನೋಡಿ

|

ಸಂಡೇ ಟೈಮ್ಸ್ ಯುಕೆ ಶ್ರೀಮಂತರ ಪಟ್ಟಿ 2022 ಬಿಡುಗಡೆಯಾಗಿದೆ. ಇದು ಬ್ರಿಟನ್‌ನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಾಗಿದೆ. ಈ ಪಟ್ಟಿಯಲ್ಲಿ ಶ್ರೀಚಂದ್ ಮತ್ತು ಗೋಪಿಚಂದ್ ಹಿಂದುಜಾ ನೇತೃತ್ವದ ಹಿಂದೂಜಾ ಕುಟುಂಬವು ಅಗ್ರಸ್ಥಾನದಲ್ಲಿದೆ. ಭಾರತೀಯ ಮೂಲದ ಕುಟುಂಬವು ಬ್ರಿಟನ್‌ನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ.

ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಇರುವ ಹಿಂದೂಜಾ ಕುಟುಂಬ 28.472 ಬಿಲಿಯನ್ ಪೌಂಡ್‌ಗಳ ಅಂದಾಜು ಸಂಪತ್ತನ್ನು ಹೊಂದಿದೆ. ಕಳೆದ ವರ್ಷ ಹಿಂದೂಜಾ ಕುಟುಂಬವು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಆದರೆ ಈಗ ಒಂದು ವರ್ಷದಲ್ಲೇ 11 ಶತಕೋಟಿ ಪೌಂಡ್‌ಗಳ ಸಂಪತ್ತು ಹೆಚ್ಚಳವಾಗಿದ್ದು, ಮೊದಲ ಸ್ಥಾನಕ್ಕೆ ಏರಿದೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್ ಮುಖ್ಯಸ್ಥರನ್ನೇ ಹಿಂದಿಕ್ಕಿದ ಎಲಾನ್ ಮಸ್ಕ್ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್ ಮುಖ್ಯಸ್ಥರನ್ನೇ ಹಿಂದಿಕ್ಕಿದ ಎಲಾನ್ ಮಸ್ಕ್

250 ಶ್ರೀಮಂತ ಬ್ರಿಟಿಷ್ ನಿವಾಸಿಗಳ ಪಟ್ಟಿಯಲ್ಲಿ ಹಿಂದೂಜಾಗಳು ಮಾತ್ರ ಭಾರತೀಯ ಮೂಲದ ಶ್ರೀಮಂತರು ಅಲ್ಲ. ಉಕ್ಕಿನ ಉದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಅವರು ಸುಮಾರು 17 ಬಿಲಿಯನ್ ಪೌಂಡ್‌ಗಳ ಸಂಪತ್ತನ್ನು ಹೊಂದಿದ್ದು ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರು ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರು. ಆದರೆ ಈ ವರ್ಷ ಒಂದು ಸ್ಥಾನ ಕೆಳಕ್ಕೆ ಇಳಿದಿದ್ದಾರೆ. ಹಾಗಾದರೆ ಇನ್ನು ಯಾರು ಈ ಪಟ್ಟಿಯಲ್ಲಿ ಇದ್ದಾರೆ, ಈ ಪಟ್ಟಿಯಲ್ಲಿರುವ ಭಾರತೀಯರ ಬಗ್ಗೆ ತಿಳಿಯಲು ಮುಂದೆ ಓದಿ..

 16 ನೇ ಸ್ಥಾನದಲ್ಲಿ ಅನಿಲ್ ಅಗರ್ವಾಲ್

16 ನೇ ಸ್ಥಾನದಲ್ಲಿ ಅನಿಲ್ ಅಗರ್ವಾಲ್

ವೇದಾಂತ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಅನಿಲ್ ಅಗರ್ವಾಲ್ 9.2 ಬಿಲಿಯನ್ ಪೌಂಡ್‌ಗಳ ಸಂಪತ್ತನ್ನು ಹೊಂದಿರುವ 16 ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಈ ಪಟ್ಟಿಯಲ್ಲಿ 15ನೇ ಸ್ಥಾನ ಪಡೆದಿದ್ದರು. ಆದರೆ ಈ ವರ್ಷ ಒಂದು ಸ್ಥಾನ ಕೆಳಕ್ಕೆ ಕುಸಿದಿದ್ದಾರೆ. 200 ಮಿಲಿಯನ್ ಪೌಂಡ್‌ಗಳಷ್ಟು ಸಂಪತ್ತಿನ ಹೆಚ್ಚಳದಿಂದಾಗಿ ಅವರು ಒಂದು ಶ್ರೇಣಿ ಮೇಲಿದ್ದರು. ಉಕ್ಕಿನ ಉದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಕೂಡಾ ಒಂದು ಸ್ಥಾನ ಕೆಳಕ್ಕೆ ಕುಸಿದು, ಆರನೇ ಸ್ಥಾನಕ್ಕೆ ತಲುಪಿದ್ದಾರೆ.

 ಮಹಿಳಾ ಬಿಲಿಯನೇರ್‌ಗಳು ಯಾರು?

ಮಹಿಳಾ ಬಿಲಿಯನೇರ್‌ಗಳು ಯಾರು?

ಬಯೋಕಾನ್ ಸಂಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಮತ್ತು ಅವರ ಕುಟುಂಬವು 2.5 ಬಿಲಿಯನ್ ಪೌಂಡ್‌ಗಳ ಅಂದಾಜು ಸಂಪತ್ತನ್ನು ಹೊಂದಿದ್ದು ಈ ಶ್ರೀಮಂತರ ಪಟ್ಟಿಯಲ್ಲಿದೆ. ಕಳೆದ ವರ್ಷ ಪ್ರಕಟವಾದ ಪಟ್ಟಿಯಲ್ಲಿ 56ನೇ ಸ್ಥಾನ ಪಡೆದಿದ್ದರು. ಆದರೆ ಈ ವರ್ಷ 75 ಸ್ಥಾನದಲ್ಲಿ ಇದ್ದಾರೆ. ಈ ವರ್ಷ ಪ್ರಕಟವಾದ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಶಾ ಇತ್ತೀಚೆಗೆ 913 ನೇ ಸ್ಥಾನ ಪಡೆದಿದ್ದರು. ಫಿಸ್ಕರ್‌ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಫಿಸ್ಕರ್ ಇಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಗೀತಾ ಗುಪ್ತಾ, 1.20 ಬಿಲಿಯನ್ ಮೌಲ್ಯದೊಂದಿಗೆ 149 ನೇ ಸ್ಥಾನದಲ್ಲಿದೆ.

 ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರು ಯಾರಿದ್ದಾರೆ ನೋಡಿ

ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರು ಯಾರಿದ್ದಾರೆ ನೋಡಿ

* ಸ್ಥಾನ 1, ಗೋಪಿ ಹಿಂದುಜಾ ಮತ್ತು ಕುಟುಂಬ, 28.472 ಬಿಲಿಯನ್ ಪೌಂಡ್
* ಸ್ಥಾನ 6, ಲಕ್ಷ್ಮಿ ಮಿತ್ತಲ್ ಮತ್ತು ಕುಟುಂಬ, 17 ಬಿಲಿಯನ್ ಪೌಂಡ್
* ಸ್ಥಾನ 16, ಅನಿಲ್ ಅಗರ್ವಾಲ್, 9.2 ಬಿಲಿಯನ್ ಪೌಂಡ್
* ಸ್ಥಾನ 39, ಮೊಹ್ಸಿನ್ ಮತ್ತು ಜುಬರ್ ಇಸ್ಸಾ, 4.73 ಬಿಲಿಯನ್ ಪೌಂಡ್
* ಸ್ಥಾನ 41, ಶ್ರೀ ಪ್ರಕಾಶ್ ಲೋಹಿಯಾ, 4.37 ಬಿಲಿಯನ್ ಪೌಂಡ್
* ಸ್ಥಾನ 69 ಸೈಮನ್, ಬಾಬಿ ಮತ್ತು ರಾಬಿನ್ ಅರೋರಾ, 2.54 ಬಿಲಿಯನ್ ಪೌಂಡ್
* ಸ್ಥಾನ 75 ಕಿರಣ್ ಮಜುಂದಾರ್-ಶಾ ಮತ್ತು ಕುಟುಂಬ, 2.49 ಬಿಲಿಯನ್ ಪೌಂಡ್
* ಸ್ಥಾನ 99 ಜಸ್ಮಿಂದರ್ ಸಿಂಗ್ ಮತ್ತು ಕುಟುಂಬ, 1.82 ಬಿಲಿಯನ್ ಪೌಂಡ್
* ಸ್ಥಾನ 110 ಸಾಕೇತ್ ಬರ್ಮನ್, 1.65 ಬಿಲಿಯನ್ ಪೌಂಡ್
* ಸ್ಥಾನ 138 ಸುರಿಂದರ್ ಅರೋರಾ ಮತ್ತು ಕುಟುಂಬ, 1.25 ಬಿಲಿಯನ್ ಪೌಂಡ್
* ಸ್ಥಾನ 140, ರಾಜ್, ಟೋನಿ ಮತ್ತು ಹರ್ಪಾಲ್ ಮಥಾರು, 1.25 ಬಿಲಿಯನ್ ಪೌಂಡ್
* ಸ್ಥಾನ 140, ಸುನಿಲ್ ವಾಸ್ವಾನಿ ಮತ್ತು ಕುಟುಂಬ, 1.25 ಬಿಲಿಯನ್ ಪೌಂಡ್
* ಸ್ಥಾನ 149, ಗೀತಾ ಗುಪ್ತಾ-ಫಿಸ್ಕರ್ ಮತ್ತು ಹೆನ್ರಿಕ್ ಫಿಸ್ಕರ್, 1.20 ಬಿಲಿಯನ್ ಪೌಂಡ್
* ಸ್ಥಾನ 222, ಅಕ್ಷತಾ ಮೂರ್ತಿ ಮತ್ತು ರಿಷಿ ಸುನಕ್, 730 ಮಿಲಿಯನ್ ಪೌಂಡ್
* ಸ್ಥಾನ 225, ಮಹ್ಮದ್ ಕಮಾನಿ, 720 ಮಿಲಿಯನ್ ಪೌಂಡ್
* ಸ್ಥಾನ 247, ಜಟಾನಿಯಾ ಸಹೋದರರು, 650 ಮಿಲಿಯನ್ ಪೌಂಡ್

 ಪಟ್ಟಿಯಲ್ಲಿ ಕಾಣಿಸಿಕೊಂಡ ರಿಷಿ ಸುನಕ್, ಅಕ್ಷತಾ ಮೂರ್ತಿ

ಪಟ್ಟಿಯಲ್ಲಿ ಕಾಣಿಸಿಕೊಂಡ ರಿಷಿ ಸುನಕ್, ಅಕ್ಷತಾ ಮೂರ್ತಿ

ಯುಕೆ ಹಣಕಾಸು ಸಚಿವ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಕೂಡ 730 ಮಿಲಿಯನ್ ಪೌಂಡ್‌ಗಳ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅವರ ಪುತ್ರಿಯಾಗಿರುವ ಅಕ್ಷತಾ ಮೂರ್ತಿ, ಯುಕೆ ಹಣಕಾಸು ಸಚಿವ ರಿಷಿ ಸುನಕ್ ಅವರ ಪತ್ನಿಯಾಗಿದ್ದಾರೆ.

English summary

UK Rich List 2022: Gopi Hinduja, Kiran, Lakshmi Mittal among richest Indian-origin tycoons

UK Rich List 2022: Gopi Hinduja, Kiran Mazumdar-Shaw and Lakshmi Niwas Mittal are included in the Sunday Times UK Rich List 2022. Take a look.
Story first published: Saturday, May 21, 2022, 13:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X