For Quick Alerts
ALLOW NOTIFICATIONS  
For Daily Alerts

ಇಎಸ್ ಐಸಿ ನಿರುದ್ಯೋಗ ಯೋಜನೆ ಸರಳ ಮಾಡಿದ ಕೇಂದ್ರ; ಏನು ಹೊಸ ನಿಯಮ?

|

ಇಎಸ್ ಐಸಿ ಅಡಿಯಲ್ಲಿ ಅಟಲ್ ಬಿಮಿತ್ ಕಲ್ಯಾಣ್ ಯೋಜನಾ (ABVKY)ಗೆ ಕ್ಲೇಮ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಎಂದು ಸರ್ಕಾರ ಭಾನುವಾರ ತಿಳಿಸಲಾಗಿದೆ. ಇನ್ನು ಮುಂದೆ ಕ್ಲೇಮ್ ಗೆ ಅಫಿಡವಿಟ್ ಅರ್ಜಿಯ ಅಗತ್ಯ ಇರುವುದಿಲ್ಲ ಎಂದು ಮಾಹಿತಿಯನ್ನು ನೀಡಲಾಗಿದೆ.

ಅಟಲ್ ಬಿಮಿತ್ ಕಲ್ಯಾಣ್ ಯೋಜನಾವನ್ನು 1 ಜುಲೈ 2020ರಿಂದ ಜೂನ್ 30ರ 2021ರ ತನಕ ಈ ಯೋಜನೆ ವಿಸ್ತರಣೆ ಮಾಡುವ ಬಗ್ಗೆ ಇಎಸ್ ಐ ಕಾರ್ಪೊರೇಷನ್ ಕಳೆದ ಆಗಸ್ಟ್ ನಲ್ಲಿ ನಿರ್ಧರಿಸಿತ್ತು. ಇದರ ಜತೆಗೆ ಪರಿಹಾರವನ್ನು ಕೂಡ ಸರಾಸರಿ ಇಪ್ಪತ್ತೈದು ಪರ್ಸೆಂಟ್ ದಿನದ ಗಳಿಕೆಯಿಂದ ಐವತ್ತು ಪರ್ಸೆಂಟ್ ಗೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಅರ್ಹತೆಯ ಮಾನದಂಡವನ್ನು 24.3.2020ರಿಂದ 31.12.2020ರ ಮಧ್ಯೆ ವಿನಾಯಿತಿ ನೀಡಿತ್ತು.

ಬಡ್ಡಿ ಮನ್ನಾದ ಹಣ ಖಾತೆಗೆ ಜಮೆ ಮಾಡಲು ಆರಂಭಿಸಿದ ಬ್ಯಾಂಕ್ ಗಳುಬಡ್ಡಿ ಮನ್ನಾದ ಹಣ ಖಾತೆಗೆ ಜಮೆ ಮಾಡಲು ಆರಂಭಿಸಿದ ಬ್ಯಾಂಕ್ ಗಳು

ಯಾವ ಕಾರ್ಮಿಕರು ಕೊರೊನಾ ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಂಡಿರುತ್ತಾರೋ ಅಂಥವರಿಗೆ ಪರಿಹಾರ ದೊರಕಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಈ ಹೇಳಿಕೆ ನೀಡಲಾಗಿತ್ತು.

ಇಎಸ್ ಐಸಿ ನಿರುದ್ಯೋಗ ಯೋಜನೆ ಸರಳ ಮಾಡಿದ ಕೇಂದ್ರ; ಏನು ಹೊಸ ನಿಯಮ?

ಆದರೆ, ಈ ಸ್ಕೀಮ್ ಅಡಿಯಲ್ಲಿ ಕ್ಲೇಮ್ ಮಾಡಲು ಅಫಿಡವಿಟ್ ಅರ್ಜಿ ಸಲ್ಲಿಸಬೇಕಿತ್ತು. ಇದು ಕೆಲವರಿಗೆ ಸಮಸ್ಯೆಯಾಗಿತ್ತು ಎಂಬುದು ಫಲಾನುಭವಿಗಳ ಪ್ರತಿಕ್ರಿಯೆ ಮೂಲಕ ಗಮನಕ್ಕೆ ಬಂದಿತ್ತು. "ಫಲಾನುಭವಿಗಳು ಎದುರಿಸುವ ಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಂಡು, ಅಟಲ್ ಬಿಮಿತ್ ಕಲ್ಯಾಣ್ ಯೋಜನಾ ಅಡಿಯಲ್ಲಿ ಸ್ಕ್ಯಾನ್ ಮಾಡಿರುವ ಪ್ರತಿಗಳಾದ ಆಧಾರ್, ಬ್ಯಾಂಕ್ ಮಾಹಿತಿ ಇತರ ದಾಖಲೆಗಳನ್ನು ಫಿಸಿಕಲ್ ಕ್ಲೇಮ್ ಮಾಡುವ ಅಗತ್ಯ ಇಲ್ಲ," ಎಂದು ಸಚಿವಾಲಯ ಹೇಳಿದೆ.

ಆನ್ ಲೈನ್ ಕ್ಲೇಮ್ ಫೈಲಿಂಗ್ ಮಾಡುವ ವೇಳೆ ದಾಖಲಾತಿಗಳನ್ನು ಅಪ್ ಲೋಡ್ ಮಾಡದಿದ್ದಲ್ಲಿ ಕ್ಲೇಮೆಂಟ್ ಪ್ರಿಂಟ್ ಔಟ್ ಸಹಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು. ಅಫಿಡವಿಟ್ ಫಾರ್ಮ್ ನಲ್ಲಿ ಕ್ಲೇಮ್ ಸಲ್ಲಿಸುವ ಅಗತ್ಯವನ್ನು ಕೈ ಬಿಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

English summary

Unemployment Scheme Claim Of ESIC Makes Easier By Government

Unemployment scheme claim of ESIC makes easier by union government. Here is the details.
Story first published: Monday, November 9, 2020, 12:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X