For Quick Alerts
ALLOW NOTIFICATIONS  
For Daily Alerts

Budget 2023 Expectations: ಬಜೆಟ್‌ನಲ್ಲಿ 5 ಪ್ರಮುಖ ಘೋಷಣೆಗಳ ನಿರೀಕ್ಷೆ, ಯಾವುವು?

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಜನವರಿ 31ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಪ್ರತಿ ವರ್ಷದಂತೆ ಫೆಬ್ರವರಿ 1ರಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ ಮೇಲೆ ಈ ಬಾರಿ ಜನರ ನಿರೀಕ್ಷೆ ಅಧಿಕವೇ ಇದೆ.

 

ಪ್ರಮುಖವಾಗಿ 2024ರ ಲೋಕಸಭೆಗೂ ಮುನ್ನ ಬರುವ ಬಜೆಟ್ ಇದಾಗಿದೆ. ಅಂದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಇದಾಗಿದೆ. ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾದ ಕಾರಣ ನಿರೀಕ್ಷೆಗಳು ಹೆಚ್ಚೇ ಇದೆ. ಪ್ರಮುಖವಾಗಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನರಿಗೆ ತೆರಿಗೆ ವಿಚಾರದಲ್ಲಿ ರಿಲೀಫ್ ನೀಡುವಂತಹ ಘೋಷಣೆಯನ್ನು ಸರ್ಕಾರ ಮಾಡುವ ನಿರೀಕ್ಷೆಯಿದೆ. ಪ್ರಸ್ತುತ ಎಲ್ಲರ ಚಿತ್ತವು ಹಣದುಬ್ಬರ, ಹಣಕಾಸು ಕೊರತೆ, ಯೋಜನೆಗಳ ಮೇಲೆ ಮಾಡಲಾಗಿರುವ ವೆಚ್ಚ ಎಷ್ಟು ಎಂಬುವುದರ ಮೇಲಿದೆ.

ಸರ್ಕಾರವು ಆದಾಯಕ್ಕಿಂತ ಅಧಿಕ ವೆಚ್ಚವನ್ನು ಮಾಡಿದ್ದರೆ, ಈ ಬಾರಿಯೂ ಹಣಕಾಸು ಕೊರತೆ ಹೆಚ್ಚಾಗುವ ನಿರೀಕ್ಷೆಯಿದೆ. ಅಂದರೆ ಡೆಫಿಸಿಟ್ ಬಜೆಟ್ ಆಗುವ ಸಾಧ್ಯತೆಯಿದೆ. ಇದರಿಂದಾಗಿ ಹಣದುಬ್ಬರ ಹಾಗೂ ಬಡ್ಡಿದರ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರುಗಳು ಹೇಳುತ್ತಾರೆ. ಆದರೆ ಸರ್ಕಾರ ಈ ಬಾರಿ ಪ್ರಮುಖ 5 ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ. ಆ ನಿರೀಕ್ಷೆಗಳ ಬಗ್ಗೆ ತಿಳಿಯೋಣ ಮುಂದೆ ಓದಿ....

 ಡೆಫಿಸಿಟ್ ಮೊತ್ತ ಕಡಿಮೆಯಾಗುವ ನಿರೀಕ್ಷೆ

ಡೆಫಿಸಿಟ್ ಮೊತ್ತ ಕಡಿಮೆಯಾಗುವ ನಿರೀಕ್ಷೆ

ಭಾರತದ ಫಿಸಿಕಲ್ ಡೆಫಿಸಿಟ್ ಕಡಿತವಾಗುವ ಸಾಧ್ಯತೆಯಿದೆ ಎಂದು ಗೋಲ್ಡ್‌ಮ್ಯಾನ್ ಸ್ಯಾಚ್ಸ್ ಗ್ರೂಪ್ ಹೇಳಿದೆ. ಏಪ್ರಿಲ್ 1ರಿಂದ ಆರಂಭವಾಗುವ 2023-24ನೇ ಸಾಲಿನ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು 50 ಮೂಲಾಂಕ ಇಳಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಆಂಡ್ರಿವ್ ಟಿಲ್ಟಾನ್ ಮತ್ತು ಸಂತಾನು ಸೇನ್‌ಗುಪ್ತಾ ಸೇರಿದಂತೆ ಗೋಲ್ಡ್‌ಮ್ಯಾನ್ ಅರ್ಥಶಾಸ್ತ್ರಜ್ಞರ ವರದಿಯ ಪ್ರಕಾರ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಡೆಫಿಸಿಟ್ ಅಥವಾ ವಿತ್ತೀಯ ಕೊರತೆ ಶೇಕಡ 5.9ರಷ್ಟು ಇರಲಿದೆ. ಕೇಂದ್ರ ಸರ್ಕಾರವು ವೆಚ್ಚವನ್ನು ನಿಯಂತ್ರಣ ಮಾಡುವ ಜೊತೆಗೆ ಜನ ಕಲ್ಯಾಣ ಕಾರ್ಯಗಳನ್ನು ಹಚ್ಚಿಸಲಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ನಿವೇಶನ ಸೃಷ್ಟಿ ಮೊದಲ ಆದ್ಯತೆಯಾಗಿರಲಿದೆ ಎಂದು ತಜ್ಞರುಗಳು ಹೇಳಿದ್ದಾರೆ.

 ತೆರಿಗೆ ಸ್ಲ್ಯಾಬ್ ಪರಿಷ್ಕರಣೆ?

ತೆರಿಗೆ ಸ್ಲ್ಯಾಬ್ ಪರಿಷ್ಕರಣೆ?

ಪ್ರಸ್ತುತ ತೆರಿಗೆ ಸ್ಲ್ಯಾಬ್‌ನಲ್ಲಿ ತೆರಿಗೆ ವಿನಾಯಿತಿ ಮಿತಿಯ ಆದಾಯವು 2.5 ಲಕ್ಷ ರೂಪಾಯಿ ಆಗಿದೆ. ಅಂದರೆ 2.5 ಲಕ್ಷ ರೂಪಾಯಿಗಿಂತ ಕಡಿಮೆ ವಾರ್ಷಿಕ ಆದಾಯ ಇರುವವರು ಯಾವುದೇ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬೇಕಾಗಿಲ್ಲ. ಈ ಸ್ಲ್ಯಾಬ್‌ ಅನ್ನು 2014-15ರಿಂದ ಬದಲಾವಣೆ ಮಾಡಲಾಗಿಲ್ಲ. ಆದರೆ ಈ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಮುಂದಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 5 ಲಕ್ಷ ರೂಪಾಯಿಗೆ ಏರಿಸುವ ನಿರೀಕ್ಷೆಯನ್ನು ತೆರಿಗೆ ಪಾವತಿದಾರರು ಹೊಂದಿದ್ದಾರೆ.

 ತೆರಿಗೆ ಕಡಿತ ಅಥವಾ ಸ್ಟಾಂಡರ್ಡ್ ಡಿಡಕ್ಷನ್
 

ತೆರಿಗೆ ಕಡಿತ ಅಥವಾ ಸ್ಟಾಂಡರ್ಡ್ ಡಿಡಕ್ಷನ್

ಸರ್ಕಾರವು ಸ್ಟಾಂಡರ್ಡ್ ಡಿಡಕ್ಷನ್ ಅಥವಾ ತೆರಿಗೆ ಕಡಿತ ಮಿತಿಯನ್ನು ಡಬಲ್ ಮಾಡಬೇಕು ಎಂಬುವುದು ತೆರಿಗೆ ಪಾವತಿದಾರರ ನಿರೀಕ್ಷೆಯಾಗಿದೆ. ಅಂದರೆ ಪ್ರಸ್ತುತ ಇರುವ 50 ಸಾವಿರ ರೂಪಾಯಿ ಸ್ಟಾಂಡರ್ಡ್ ಡಿಡಕ್ಷನ್ ಅನ್ನು 1 ಲಕ್ಷ ರೂಪಾಯಿಗೆ ಏರಿಸಬೇಕು ಎಂಬ ನಿರೀಕ್ಷೆಯಿದೆ. ಪ್ರಸ್ತುತ ಹಣದುಬ್ಬರ ಏರಿಕೆಯಾಗುತ್ತಿದೆ, ಜನರ ಜೀವನ ವೆಚ್ಚವು ಅಧಿಕವಾಗುತ್ತಿದೆ, ಹೀಗಿರುವಾಗ ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸುವುದು ಉತ್ತಮ ಎಂದು ತಜ್ಞರ ಅಭಿಪ್ರಾಯವಾಗಿದೆ.

 ಮೂಲಸೌಕರ್ಯ, ಇತರೆ ಯೋಜನೆಗಳು

ಮೂಲಸೌಕರ್ಯ, ಇತರೆ ಯೋಜನೆಗಳು

ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಅಧಿಕ ಮೊತ್ತವನ್ನು ಕಾಯ್ದಿರಿಸುವ ನಿರೀಕ್ಷೆಯಿದೆ. ಈ ಬಜೆಟ್ ಮೊತ್ತದಿಂದ ಮುಂದಿನ ವರ್ಷಗಳಲ್ಲಿ ಕೊಂಚ ದೊಡ್ಡ ಮೂಲಸೌಕರ್ಯ ಯೋಜನೆಯನ್ನು ಜಾರಿ ಮಾಡುವ ಸಾಧ್ಯೆತೆಯು ಇದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾದ ಕಾರಣದಿಂದಾಗಿ ನಿರೀಕ್ಷೆಗಳು ಅಧಿಕವಾಗಿಯೇ ಇದೆ. ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ, ಜನ ಕಲ್ಯಾಣ ಯೋಜನೆಗಳಿಗೆ ಅಧಿಕ ನಿಧಿ ಹಂಚಿಕೆ ಮಾಡುವ ನಿರೀಕ್ಷೆಯಿದೆ.

 ಗೃಹ ಸಾಲ ಕಡಿತ ಮಿತಿ ಏರಿಕೆ?

ಗೃಹ ಸಾಲ ಕಡಿತ ಮಿತಿ ಏರಿಕೆ?

ಗೃಹ ಸಾಲವನ್ನು ಪಡೆದವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 (b) ಅಡಿಯಲ್ಲಿ ಗೃಹ ಸಾಲಕ್ಕೆ ಪಾವತಿಸುವ ಬಡ್ಡಿದರ ಮೇಲೆ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ. ವಾರ್ಷಿಕವಾಗಿ ಸುಮಾರು 2 ಲಕ್ಷ ರೂಪಾಯಿ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಪ್ರಾಪರ್ಟಿ ಮೊತ್ತವು ಕೂಡಾ ಏರಿಕೆಯಾಗುತ್ತಿದೆ. ಮನೆ ನಿರ್ಮಾಣಕ್ಕಾಗಿ ಜಾಗ ಖರೀದಿ ಮಾಡುವುದು ಭಾರೀ ದುಬಾರಿಯಾಗಿದೆ. ಹೀಗಿರುವಾಗ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 (b) ಅಡಿಯಲ್ಲಿನ ತೆರಿಗೆ ಕಡಿತವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

English summary

Union Budget 2023: Major Announcements Expected From The Budget, Details in Kannada

Union Budget 2023: The government is expected to focus on infrastructure development and announce some relief for people in the form of tax benefits. 5 Major Announcements Expected From The Budget, Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X