For Quick Alerts
ALLOW NOTIFICATIONS  
For Daily Alerts

Budget 2023 Expectations: ತೆರಿಗೆ ಕಡಿತ, ಬಡ್ಡಿದರ, ಹಿರಿಯ ನಾಗರಿಕರ ನಿರೀಕ್ಷೆಗಳೇನು?

|

ಫೆಬ್ರವರಿ 1, 2023ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ರ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. 2024ರ ಚುನಾವಣೆಗೂ ಮುನ್ನ ನಡೆಯಲಿರುವ ಈ ಬಜೆಟ್ ಮೇಲೆ ಬೇರೆ ಬೇರೆ ವಲಯದ ಜನರು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ. ಎಲ್ಲ ವಲಯದ ಜನರಲ್ಲಿ ಮುಖ್ಯವಾಗಿ ಕೇಳಿ ಬರುವ ಕೂಗು ತೆರಿಗೆ ವಿನಾಯಿತಿ ಅಥವಾ ತೆರಿಗೆ ಕಡಿತ ಎಂಬುವುದಾಗಿದೆ.

 

ಈ ಬಾರಿಯ ಬಜೆಟ್‌ನಲ್ಲಾದರೂ ಕೇಂದ್ರ ವಿತ್ತ ಸಚಿವೆ ನಮಗೆ ರಿಲೀಫ್ ನೀಡಬಹುದು ಎಂದು ತೆರಿಗೆದಾರರು ನಿರೀಕ್ಷಿಸುತ್ತಿದ್ದಾರೆ. ಇದರಿಂದಾಗಿ ಈ ಹಣದುಬ್ಬರದ ನಡುವೆ ಜೀವನ ಸಾಗಿಸಲು ಕೊಂಚವಾದರೂ ಸುಲಭವಾಗಬಹುದು ಎಂಬುವುದು ತೆರಿಗೆದಾರರ ಇರಾದೆಯಾಗಿದೆ. ಆದರೆ ಕಳೆದ ಬಜೆಟ್‌ನಂತೆಯೇ ಈ ಬಜೆಟ್ ಕೂಡಾ ಸಪ್ಪೆಯಾಗಿರಲಿದೆಯೇ ಎಂಬುವುದನ್ನು ನಾವು ಕಾದು ನೋಡಬೇಕಾಗಿದೆ.

ಗೃಹ ಖರೀದಿದಾರರು, ತೆರಿಗೆ ಪಾವತಿ ಮಾಡುವವರು ತಮ್ಮದೇ ಆದ ಬೇಡಿಕೆಯನ್ನು ಹೊಂದಿರುವಾಗ ಹಿರಿಯ ನಾಗರಿಕರು ಕೂಡಾ ಈ 2023-24ರ ಸಾಲಿನ ಬಜೆಟ್‌ನಲ್ಲಿ ಕೆಲವು ನಿರೀಕ್ಷೆಗಳನ್ನು ಹೊಂದಿದ್ದಾರೆ. ಹಾಗಾದರೆ ಹಿರಿಯ ನಾಗರಿಕರ ನಿರೀಕ್ಷೆಗಳೇನು, ಏನಿದೆ ಬೇಡಿಕೆ ಎಂದು ತಿಳಿಯೋಣ ಮುಂದೆ ಓದಿ....

 ಸೆಕ್ಷನ್ 80C ಮಿತಿ ಏರಿಕೆ ನಿರೀಕ್ಷೆ

ಸೆಕ್ಷನ್ 80C ಮಿತಿ ಏರಿಕೆ ನಿರೀಕ್ಷೆ

ಎಸ್‌ಸಿಎಸ್‌ಎಸ್‌ ನಿಯಮ 2019ರ ಪ್ರಕಾರ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಾದ (ಎಸ್‌ಸಿಎಸ್‌ಎಸ್) 5 ವರ್ಷದ ಟರ್ಮ್ ಡೆಪಾಸಿಟ್, ಎಲ್‌ಐಸಿ, ಪಿಪಿಎಫ್, ಎನ್‌ಎಸ್‌ಸಿ ಮೊದಲಾದವುಗಳ ಮೂಲಕ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಈ ಸೆಕ್ಷನ್ ಅಡಿಯಲ್ಲಿ ಸುಮಾರು 1,50,000 ರೂಪಾಯಿಯ ತೆರಿಗೆ ವಿನಾಯಿತಿಯನ್ನು ನಾವು ಪಡೆಯಲು ಸಾಧ್ಯವಾಗುತ್ತದೆ. ಕಳೆದ ಬಾರಿ 2014ರ ಬಜೆಟ್‌ನಲ್ಲಿ ಈ ಮಿತಿಯನ್ನು ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರು ಇದಕ್ಕೂ ಹೆಚ್ಚುವರಿ 50 ಸಾವಿರ ರೂಪಾಯಿಯ ತೆರಿಗೆ ವಿನಾಯಿತಿಯನ್ನು ಪಡೆಯಬೇಕು ಎಂಬ ಬೇಡಿಕೆಯನ್ನು ಹೊಂದಿದ್ದಾರೆ.

 ಲಾಕಿನ್ ಅವಧಿಯ ಪರಿಷ್ಕರಣೆ

ಲಾಕಿನ್ ಅವಧಿಯ ಪರಿಷ್ಕರಣೆ

ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿರುವ ಫಿಕ್ಸಿಡ್ ಡೆಪಾಸಿಟ್, ಎನ್‌ಎಸ್‌ಸಿ, ಈಕ್ವಿಟಿ ಲಿಂಕ್ಡ್‌ ಉಳಿತಾಯ ಯೋಜನೆ ಮೊದಲಾದವುಗಳಿಗೆ ನೀವು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಿದೆ. ಆದರೆ ಇದಕ್ಕೂ ಲಾಕನ್ ಅವಧಿಯಿದೆ. 3 ವರ್ಷದಿಂದ 5 ವರ್ಷದವರೆಗಿನ ಲಾಕಿನ್ ಅವಧಿಯ ಹೂಡಿಕೆ ಇರಬೇಕಾಗುತ್ತದೆ. ಅಂದರೆ ಅಷ್ಟು ಸಮಯ ಆ ಹೂಡಿಕೆಯು ಲಾಕ್ ಆಗಿರುತ್ತದೆ, ವಿತ್‌ಡ್ರಾ ಮಾಡುವಂತಿಲ್ಲ. ಆದರೆ ಹಿರಿಯ ನಾಗರಿಕರು ಹೆಚ್ಚಾಗಿ ಆರೋಗ್ಯ ಸಮಸ್ಯೆ ಹಾಗೂ ಬೇರೆ ತುರ್ತಿಗಾಗಿ ಕೈಯಲ್ಲಿ ನಗದನ್ನು ಹೊಂದಿರಬೇಕಾಗುತ್ತದೆ. ಇದಕ್ಕಾಗಿ ಹಿರಿಯ ನಾಗರಿಕರು ಈ ಲಾಕಿನ್ ಅವಧಿಯಲ್ಲಿ ಬದಲಾವಣೆ ಮಾಡಬೇಕು ಎಂದು ಬಯಸುತ್ತಿದ್ದಾರೆ. ಲಾಕಿನ್ ಅವಧಿಯನ್ನು ಪರಿಷ್ಕರಣೆ ಮಾಡಬೇಕು. ಕಡಿಮೆ ಮಾಡಬೇಕು ಎಂಬುವುದು ಹಿರಿಯ ನಾಗರಿಕರ ಬೇಡಿಕೆಯಾಗಿದೆ.

 ಸೆಕ್ಷನ್ 80TTB ಮಿತಿ ಹೆಚ್ಚಿಸಿ, ಎನ್‌ಎಸ್‌ಸಿ ಬಡ್ಡಿದರ ಸೇರಿಸಿ
 

ಸೆಕ್ಷನ್ 80TTB ಮಿತಿ ಹೆಚ್ಚಿಸಿ, ಎನ್‌ಎಸ್‌ಸಿ ಬಡ್ಡಿದರ ಸೇರಿಸಿ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTB ಹಿರಿಯ ನಾಗರಿಕರು ಬಡ್ಡಿದರದ ಮೇಲಿನ ತೆರಿಗೆ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂದರೆ ಒಂದು ಹಣಕಾಸು ವರ್ಷದಲ್ಲಿ ಯಾವುದೇ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಡೆಪಾಸಿಟ್ ಮಾಡಿದ್ದರೆ, ಕಾಪೋರೇಟಿವ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರೆ, ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTB ಹಿರಿಯ ನಾಗರಿಕರು ಬಡ್ಡಿದರದ ಮೇಲಿನ ತೆರಿಗೆ ಕಡಿತವನ್ನು ಪಡೆಯಬಹುದು. ಆದರೆ ಈ ಮಿತಿಯನ್ನು ಹೆಚ್ಚಿಸದೆ ಹಲವು ವರ್ಷಗಳು ಕಳೆದಿದೆ. ಹಣದುಬ್ಬರ ಹೆಚ್ಚಾಗಿರುವ ಈ ಸ್ಥಿತಿಯಲ್ಲಿ 80TTB ಮಿತಿಯನ್ನ 50 ಸಾವಿರ ರೂಪಾಯಿಯಿಂದ 75 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಎಂಬುವುದು ಹಿರಿಯ ನಾಗರಿಕರ ಮನವಿಯಾಗಿದೆ. ಇದು ಮಾತ್ರವಲ್ಲದೆ ಹಿರಿಯ ನಾಗರಿಕರಿಗೆ ಎನ್‌ಎಸ್‌ಸಿಯಲ್ಲಿನ ಬಡ್ಡಿದರವೇ ಆದಾಯದ ಮೂಲವಾಗಿರುವಾಗ ಎನ್‌ಎಸ್‌ಸಿಯನ್ನು ಕೂಡಾ ಸೆಕ್ಷನ್ 80TTB ಅಡಿ ಸೇರಿಸಬೇಕು ಎಂಬ ಆಗ್ರಹವಿದೆ.

 ಮೆಡಿಕ್ಲೈಮ್ ಪ್ರೀಮಿಯಂ ಮಿತಿ ಹೆಚ್ಚಿಸಲು ಆಗ್ರಹ

ಮೆಡಿಕ್ಲೈಮ್ ಪ್ರೀಮಿಯಂ ಮಿತಿ ಹೆಚ್ಚಿಸಲು ಆಗ್ರಹ

ಪ್ರಸ್ತುತ ಈ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಹೆಚ್ಚಾಗಿ ಆರೋಗ್ಯ ತುರ್ತು ಸ್ಥಿತಿಯನ್ನು, ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗೆಯೇ ವಯೋ ಸಹಜ ಕಾಯಿಲೆಗಳು ಇದ್ದೆ ಇರುತ್ತದೆ. ಆದ್ದರಿಂದಾಗಿ ಚಿಕಿತ್ಸಾ ವೆಚ್ಚ ಆರೋಗ್ಯ ವಿಮೆ ಅಥವಾ ಮೆಡಿಕ್ಲೈಮ್ ಪ್ರೀಮಿಯಂ ಕೂಡಾ ಹೆಚ್ಚಾಗಿದೆ. ಪ್ರಸ್ತುತ ಆದಾಯ ತೆರಿಗೆ ಕಾಯ್ದೆ 80D ಅಡಿಯಲ್ಲಿ 50,000 ರೂಪಾಯಿವರೆಗೆ ಮೆಡಿಕ್ಲೈಮ್ ಪ್ರೀಮಿಯಂ ಅಥವಾ ಚಿಕಿತ್ಸಾ ವೆಚ್ಚಕ್ಕಾಗಿ ಹಿರಿಯ ನಾಗರಿಕರು ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಆದರೆ ಇದನ್ನು 100,000 ರೂಪಾಯಿಗೆ ಏರಿಕೆ ಮಾಡಬೇಕು ಎಂಬುವುದು ಹಿರಿಯ ನಾಗರಿಕರ ಒತ್ತಾಯವಾಗಿದೆ.

 ಹಿರಿಯ ನಾಗರಿಕರ ವಯೋಮಿತಿಯನ್ನು ಇಳಿಸಿ

ಹಿರಿಯ ನಾಗರಿಕರ ವಯೋಮಿತಿಯನ್ನು ಇಳಿಸಿ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194P ಅಡಿಯಲ್ಲಿ 75 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಬೇಕಾಗಿಲ್ಲ. ಆದಾಯ ತೆರಿಗೆ ಕಾಯ್ದೆ ಪ್ರಕಾರ 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಐಟಿಆರ್ ಫೈಲ್ ಮಾಡಲು ಸಾಧ್ಯವಾಗದ ಹಿರಿಯ ನಾಗರಿಕರು ಆಗಿದ್ದಾರೆ. ಹಾಗೆಯೇ ಈ ಹಿರಿಯ ನಾಗರಿಕರಿಗೆ ಕೇವಲ ಪಿಂಚಣಿ, ಹೂಡಿಕೆಯ ಬಡ್ಡಿದರ ಮಾತ್ರ ಆದಾಯದ ಮೂಲ ಆಗಿರಬೇಕಾಗುತ್ತದೆ. ಆದರೆ ಆದಾಯ ತೆರಿಗೆ ಅಡಿಯಲ್ಲಿನ ಈ ಹಿರಿಯ ನಾಗರಿಕರ ವಯೋಮಿತಿಯನ್ನು 65 ವರ್ಷಕ್ಕೆ ಇಳಿಸಬೇಕು. ಇದರಿಂದಾಗಿ ಹಿರಿಯ ನಾಗರಿಕರಿಗೆ ಐಟಿಆರ್ ಫೈಲ್ ಮಾಡುವ ಹೊರೆ ಇರುವುದಿಲ್ಲ ಎಂಬ ಅಭಿಪ್ರಾಯವಿದೆ.

 ಚಿಕಿತ್ಸಾ ವೆಚ್ಚದ ಕಡಿತ ಮಿತಿ ಏರಿಕೆ

ಚಿಕಿತ್ಸಾ ವೆಚ್ಚದ ಕಡಿತ ಮಿತಿ ಏರಿಕೆ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80DDB ಅಡಿಯಲ್ಲಿ ಹಿರಿಯ ನಾಗರಿಕರು ತಮ್ಮ ಚಿಕಿತ್ಸೆಗಾಗಿ ಸಂಗಾತಿ, ಮಕ್ಕಳು, ಪೋಷಕರು, ಸಹೋದರ, ಸಹೋದರಿಯರು ಪಾವತಿಸಿದ ಚಿಕಿತ್ಸಾ ವೆಚ್ಚದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಹಿರಿಯ ನಾಗರಿಕರಾದರೆ ಸುಮಾರು 100,000 ರೂಪಾಯಿಯ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಕಳೆದ ಬಾರಿ 2018ರಲ್ಲಿ ಈ ಪರಿಷ್ಕರಣೆ ಮಾಡಲಾಗಿದೆ. ಆದರೆ ಈ ಮಿತಿಯನ್ನು 1,50,000 ರೂಪಾಯಿಗೆ ಹೆಚ್ಚಿಸಬೇಕು ಎಂಬುವುದು ಹಿರಿಯ ನಾಗರಿಕರ ನಿರೀಕ್ಷೆಯಾಗಿದೆ.

English summary

Union Budget 2023: Senior Citizens Expectation From The Budget, Details in Kannada

Union Budget 2023: Senior Citizens in India may have many expectations from the Union budget, here we list out some expectations, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X