For Quick Alerts
ALLOW NOTIFICATIONS  
For Daily Alerts

Budget 2023 Expectations: ತೆರಿಗೆ ವಿನಾಯಿತಿ, ಕಡಿತ, ತೆರಿಗೆ ಪಾವತಿದಾರರ ಬಜೆಟ್ ನಿರೀಕ್ಷೆಗಳಿವು

|

2023-24ನೇ ಸಾಲಿನ ಕೇಂದ್ರ ಬಜೆಟ್ ಸೆಷನ್ ಇನ್ನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈಗಾಗಲೇ ಈ ಬಜೆಟ್ ಮೇಲೆ ಜನರು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ. ಬೇರೆ ಬೇರೆ ವಲಯಗಳು ತಮ್ಮ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.

 

2022ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ತೆರಿಗೆದಾರರಿಗೆ ಹೆಚ್ಚಿನ ರಿಲೀಫ್ ನೀಡುವ ನಿರೀಕ್ಷೆಯನ್ನು ತೆರಿಗೆ ಪಾವತಿದಾರರು ಹೊಂದಿದ್ದರು. ಆದರೆ ತೆರಿಗೆದಾರರಿಗೆ ಯಾವುದೇ ಸಿಹಿಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿಲ್ಲ. ಆದರೆ ಈ ಬಜೆಟ್‌ 2024ರ ಲೋಕಸಭೆ ಚುನಾವಣೆಗೂ ಮುನ್ನ ಬರುವ ಕಾರಣದಿಂದಾಗಿ ತೆರಿಗೆದಾರರಿಗೆ ಬೇಕಾದಂತಹ ಯೋಜನೆಗಳನ್ನು, ನಿರ್ಧಾರಗಳನ್ನು ಕೇಂದ್ರ ಸರ್ಕಾರವು ಕೈಗೊಳ್ಳುವ ಸಾಧ್ಯೆತೆಯಿದೆ.

 Budget 2023 Expectations: ತೆರಿಗೆ, ಉದ್ಯೋಗ, ಮಧ್ಯಮ ವರ್ಗದ ಬಜೆಟ್‌ ನಿರೀಕ್ಷೆಗಳೇನು? Budget 2023 Expectations: ತೆರಿಗೆ, ಉದ್ಯೋಗ, ಮಧ್ಯಮ ವರ್ಗದ ಬಜೆಟ್‌ ನಿರೀಕ್ಷೆಗಳೇನು?

ಈಗಾಗಲೇ ಹಲವಾರು ವಲಯಗಳು ತೆರಿಗೆ ವಿನಾಯಿತಿ, ತೆರಿಗೆ ಕಡಿತ ಸೇರಿದಂತೆ ಹಲವಾರು ತೆರಿಗೆ ಸಂಬಂಧಿತ ಬೇಡಿಕೆಗಳನ್ನು ಹೊಂದಿದ್ದಾರೆ. ತೆರಿಗೆ ಪಾವತಿದಾರರ ಬೇಡಿಕೆ ಕೂಡಾ ತೆರಿಗೆ ವಿನಾಯಿತಿ, ತೆರಿಗೆ ಕಡಿತಕ್ಕೆ ಸಂಬಂಧಿಸಿದ್ದಾಗಿದೆ. ಹೆಚ್ಚಾಗಿ ತೆರಿಗೆ ಪಾವತಿಸುವ ಮಧ್ಯಮ ವರ್ಗ ಹಾಗೂ ಬಡವರ್ಗಕ್ಕೆ ಸಹಾಯವಾಗುವಂತಹ ತೆರಿಗೆ ನೀತಿಯನ್ನು ಜಾರಿ ಮಾಡುವ ನಿರೀಕ್ಷೆಯನ್ನು ಹೊಂದಿದ್ದಾರೆ. ಹಾಗಾದರೆ ತೆರಿಗೆ ಪಾವತಿದಾರರ ನಿರೀಕ್ಷೆಗಳೇನು ತಿಳಿಯೋಣ ಮುಂದೆ ಓದಿ....

 ತೆರಿಗೆ ದರದಲ್ಲಿ ಬದಲಾವಣೆ ನಿರೀಕ್ಷೆ

ತೆರಿಗೆ ದರದಲ್ಲಿ ಬದಲಾವಣೆ ನಿರೀಕ್ಷೆ

ತೆರಿಗೆ ಸ್ಲ್ಯಾಬ್ ಮತ್ತು ತೆರಿಗೆ ದರವು ಹಲವಾರು ವರ್ಷಗಳಿಂದ ಸ್ಥಿರವಾಗಿದೆ. 2020ರ ಬಜೆಟ್‌ನಲ್ಲಿ ಹೊಸ ತೆರಿಗೆ ನೀತಿಯನ್ನು ಪ್ರಸ್ತುತ ಪಡಿಸಲಾಗಿದೆ. ಆದರೆ ವೈಯಕ್ತಿಕ ತೆರಿಗೆ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಪ್ರಸ್ತುತ ಜೀವನ ವೆಚ್ಚವು ಅಧಿಕವಾಗುತ್ತಿದೆ, ಸಾಲದ ಬಡ್ಡಿದರವು ಕೂಡಾ ಹೆಚ್ಚಾಗುತ್ತಿದೆ. ಇದರಿಂದಾಗಿ ತೆರಿಗೆದಾರರು ತೆರಿಗೆ ವಿನಾಯಿತಿಯ ನಿರೀಕ್ಷೆಯನ್ನು ಹೊಂದಿದ್ದಾರೆ. ತೆರಿಗೆ ದರವನ್ನು ಕಡಿಮೆ ಮಾಡಿದರೆ ಜನರಿಗೆ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಜೀವನ ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತದೆ ಎಂಬುವುದು ತೆರಿಗೆ ಪಾವತಿದಾರರ ಅಭಿಪ್ರಾಯವಾಗಿದೆ.

 ಭಾರತ vs ವಿದೇಶದಲ್ಲಿನ ತೆರಿಗೆ ದರ
 

ಭಾರತ vs ವಿದೇಶದಲ್ಲಿನ ತೆರಿಗೆ ದರ

ಸರ್‌ಚಾರ್ಜ್ ಮತ್ತು ಸೆಸ್ ಸೇರಿ ಭಾರತದಲ್ಲಿ ಗರಿಷ್ಠ ಆದಾಯ ತೆರಿಗೆಯು ಶೇಕಡ 42.744ರಷ್ಟಿದೆ. ಬೇರೆ ದೇಶಗಳಿಗಿಂತ ತೆರಿಗೆ ದರ ಇಷ್ಟೊಂದು ಅಧಿಕವಾಗಿಲ್ಲ. ಹಾಂಗ್‌ಕಾಂಗ್‌ನಲ್ಲಿ ಗರಿಷ್ಠ ತೆರಿಗೆ ದರ ಶೇಕಡ 17 ಆಗಿದೆ. ಸಿಂಗಾಪುರದಲ್ಲಿ ಗರಿಷ್ಠ ತೆರಿಗೆ ದರ ಶೇಕಡ 22 ಆಗಿದೆ. ಮಲೇಷಿಯಾದಲ್ಲಿ ಗರಿಷ್ಠ ತೆರಿಗೆ ದರ ಶೇಕಡ 30 ಆಗಿದೆ. ಆದರೆ ಭಾರತದಲ್ಲಿ ಗರಿಷ್ಠ ತೆರಿಗೆ ದರ ಭಾರೀ ಅಧಿಕವಾಗಿದೆ. ಆದ್ದರಿಂದಾಗಿ ಸರ್ಕಾರವು ಈ ಗರಿಷ್ಠ ತೆರಿಗೆಯನ್ನು 20 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಗೆ ಇಳಿಸಬೇಕು. ಗರಿಷ್ಠ ತೆರಿಗೆ ದರವನ್ನು ಶೇಕಡ 30ರಿಂದ ಶೇಕಡ 25ಕ್ಕೆ ಇಳಿಸಬೇಕು ಎಂಬುವುದು ತೆರಿಗೆ ಪಾವತಿದಾರರ ಬೇಡಿಕೆಯಾಗಿದೆ. 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿ ಆದಾಯ ಹೊಂದಿರುವವರಿಗೆ ತೆರಿಗೆ ಸ್ಲ್ಯಾಬ್ ಶೇಕಡ 20ರಷ್ಟು ಇರಬೇಕು. 20 ಲಕ್ಷಕ್ಕಿಂತ ಅಧಿಕ ಆದಾಯವರಿಗೆ ಶೇಕಡ 25ರಷ್ಟು ತೆರಿಗೆ ಸ್ಲ್ಯಾಬ್ ಇರಬೇಕು ಎಂಬ ನಿರೀಕ್ಷೆಯಿದೆ.

 ತೆರಿಗೆ ಉಳಿತಾಯಕ್ಕಾಗಿ ಆದಾಯದಿಂದ ಕಡಿತ

ತೆರಿಗೆ ಉಳಿತಾಯಕ್ಕಾಗಿ ಆದಾಯದಿಂದ ಕಡಿತ

ಬ್ಯಾಂಕ್‌ನ, ಪೋಸ್ಟ್‌ ಆಫೀಸ್‌ನ ಅಥವಾ ಕೋ-ಆಪರೇಟಿವ್ ಸೊಸೈಟಿಯಲ್ಲಿ ಉಳಿತಾಯ ಖಾತೆಯಿಂದ ಪಡೆದು ಬಡ್ಡಿದರದ ಮೇಲೆ ಆದಾಯ ತೆರಿಗೆ ಕಾಯ್ದೆ 1961ರ 80ಟಿಟಿಎ ಅಡಿಯಲ್ಲಿ ತೆರಿಗೆ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಈ ತೆರಿಗೆ ಕಡಿತ ಮೊತ್ತವು ಸ್ಥಿರವಾಗಿದೆ, ಹಲವಾರು ವರ್ಷಗಳಿಂದ ಪರಿಷ್ಕರಣೆ ಮಾಡಲಾಗಿಲ್ಲ. ಸರ್ಕಾರವು ಬಡ್ಡಿದರ ಮಿತಿಯನ್ನು ಹತ್ತು ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿಗೆ ಏರಿಸಬೇಕು ಎಂಬ ಬೇಡಿಕೆಯಿದೆ.

 ಮಕ್ಕಳ ಶಿಕ್ಷಣ ವೆಚ್ಚಕ್ಕಾಗಿ ತೆರಿಗೆ ಕಡಿತ

ಮಕ್ಕಳ ಶಿಕ್ಷಣ ವೆಚ್ಚಕ್ಕಾಗಿ ತೆರಿಗೆ ಕಡಿತ

ಪ್ರಸ್ತುತ ಮಕ್ಕಳ ಶಿಕ್ಷಣ ವೆಚ್ಚವು ಭಾರೀ ಪ್ರಮಾಣದಲ್ಲಿ ಅಧಿಕವಾಗುತ್ತಿದೆ. ಈ ಸ್ಪರ್ಧಾತ್ಪಕ ಕಾಲದಲ್ಲಿ ಶಿಕ್ಷಣವು ಕೂಡಾ ಮಾರಾಟದ ಸರಕಾಗಿದೆ. ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಶಿಕ್ಷಣ ಪಡೆಯುವುದು ಸಾಲದ ಬಲೆಗೆ ನೂಕುತ್ತಿದೆ. ಅದರಿಂದಾಗಿ ಮಕ್ಕಳ ಶಿಕ್ಷಣಕ್ಕಾಗಿ ಮಾಡಲು ವೆಚ್ಚಕ್ಕೆ ತೆರಿಗೆ ಕಡಿತವನ್ನು ಹೆಚ್ಚಿಸಬೇಕು ಎಂಬುವುದು ತೆರಿಗೆ ಪಾವತಿದಾರರ ಆಗ್ರಹವಾಗಿದೆ. ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಒಟ್ಟು ವೆಚ್ಚದಲ್ಲಿ ಒಟ್ಟಾಗಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಿದೆ. ಆದರೆ ಈ ಮಿತಿಯನ್ನು ಹೆಚ್ಚಿಸಬೇಕು. ಹೊಸ ಸೆಕ್ಷನ್ ಅನ್ನು ಜಾರಿಗೊಳಿಸಿ ಅದರಡಿಯಲ್ಲಿ ತೆರಿಗೆ ವಿನಾಯಿತಿಯನ್ನು ನೀಡಬೇಕು ಎಂಬ ಆಗ್ರಹವಿದೆ.

 ಆರೋಗ್ಯ ವಿಮೆಯ ತೆರಿಗೆ ವಿನಾಯಿತಿ ಮಿತಿ ಏರಿಕೆ

ಆರೋಗ್ಯ ವಿಮೆಯ ತೆರಿಗೆ ವಿನಾಯಿತಿ ಮಿತಿ ಏರಿಕೆ

ಆರೋಗ್ಯ ವಿಮೆಯು ಪ್ರಸ್ತುತ ಅತೀ ಮುಖ್ಯವಾಗಿದೆ. ಆರೋಗ್ಯ ಚಿಕಿತ್ಸೆಗಾಗಿ ತಗುಲುವ ವೆಚ್ಚವು ಅಧಿಕವಾಗುತ್ತಿದ್ದಂತೆ ಆರೋಗ್ಯ ವಿಮೆಯು ಅತೀ ಅಗತ್ಯವಾಗುತ್ತದೆ. ಅದು ಕೂಡಾ ಕೋವಿಡ್ ಸಾಂಕ್ರಾಮಿಕದ ಬಳಿಕ ಆರೋಗ್ಯ ವಿಮೆ ಪ್ರಮುಖವಾಗಿದೆ. ಈ ಆರೋಗ್ಯ ವಿಮೆ ತೆರಿಗೆ ಕಡಿತ ಮಿತಿಯನ್ನು 25000/30000 ರೂಪಾಯಿಯಿಂದ 50000/1 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ತೆರಿಗೆ ಪಾವತಿದಾರರು ಹೊಂದಿದ್ದಾರೆ.

 ವರ್ಕ್ ಫ್ರಮ್ ಹೋಮ್ ವೆಚ್ಚದ ಮೇಲೆ ತೆರಿಗೆ ಕಡಿತ

ವರ್ಕ್ ಫ್ರಮ್ ಹೋಮ್ ವೆಚ್ಚದ ಮೇಲೆ ತೆರಿಗೆ ಕಡಿತ

ಕೋವಿಡ್ ಸಾಂಕ್ರಾಮಿಕದ ಬಳಿಕ ಹಲವಾರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ನೀಡಿದೆ. ಎಲ್ಲ ಸಭೆಗಳನ್ನು ವರ್ಚುವಲ್ ಆಗಿ ನಡೆಸಲು ಆರಂಭ ಮಾಡಲಾಯಿತು. ಇದು ಉದ್ಯಮಕ್ಕೆ ಹೊಸ ತಿರುವನ್ನು ನೀಡಿದೆ. ವರ್ಕ್ ಫ್ರಮ್ ಆಫೀಸ್‌ ಮಾಡುವಾಗ ಡೆಸ್ಕ್, ಕುರ್ಚಿ, ಚಹಾ, ಕಾಫಿ, ಏರ್‌ ಕಂಡಿಷನರ್, ಕ್ಯಾಂಟೀನ್, ನೆಟ್‌ವರ್ಕ್, ಲೈಟ್‌ ಮೊದಲಾದ ವ್ಯವಸ್ಥೆಯನ್ನು ನೀಡಲಾಗುತ್ತದೆ. ಆದರೆ ವರ್ಕ್‌ ಫ್ರಮ್ ಹೋಮ್ ಮಾಡುವಾಗ ಈ ಎಲ್ಲ ವ್ಯವಸ್ಥೆಯನ್ನು ಉದ್ಯೋಗಿಯೇ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಇದಕ್ಕೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ. ಈ ಖರ್ಚಿಗಾಗಿ ತೆರಿಗೆ ವಿನಾಯಿತಿಯನ್ನು ನೀಡಬೇಕು ಅಥವಾ ಸಂಸ್ಥೆಯಿಂದ ವರ್ಕ್ ಫ್ರಮ್ ಹೋಮ್ ಭತ್ಯೆಯನ್ನು ನೀಡಬೇಕು ಎಂಬ ಬೇಡಿಕೆಯನ್ನು ತೆರಿಗೆ ಪಾವತಿದಾರರು ಹೊಂದಿದ್ದಾರೆ.

English summary

Union Budget 2023: Taxpayers Expectation From The Budget, Details in Kannada

Union Budget 2023: Taxpayers in India may have many expectations from the Union budget, here we list out some expectations, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X