For Quick Alerts
ALLOW NOTIFICATIONS  
For Daily Alerts

Budget 2023 Expectations: ತೆರಿಗೆ ಕಡಿತ, ಭತ್ಯೆ, ಟಿವಿ ಇಂಡಸ್ಟ್ರಿ ನಿರೀಕ್ಷೆಗಳು ಹೀಗಿದೆ

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ರ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1, 2023ರಂದು ಮಂಡನೆ ಮಾಡಲಿದ್ದಾರೆ. ಮುಂದಿನ ವರ್ಷ ಅಂದರೆ 2024ರಲ್ಲಿ ಲೋಕಸಭೆ ಚುನಾವಣೆ ಬರಲಿರುವ ಕಾರಣ ಈ ಬಜೆಟ್ ಕೇಂದ್ರ ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಆಗಿದೆ. ಚುನಾವಣೆಗೂ ಮುನ್ನ ಬರುವ ಬಜೆಟ್ ಆದ್ದರಿಂದ ನಿರೀಕ್ಷೆಗಳು ಹೆಚ್ಚೇ ಇದೆ.

 

ಈಗಾಗಲೇ ಹಲವಾರು ವಲಯಗಳು ಬಜೆಟ್‌ನ ಮೇಲೆ ತಮ್ಮ ವಲಯದ ನಿರೀಕ್ಷೆಗಳೇನಿದೆ, ಯಾವೆಲ್ಲ ಬೇಡಿಕೆಗಳು ಇದೆ ಎಂದು ತಿಳಿಸಿದೆ. ಪ್ರಮುಖವಾಗಿ ಎಲ್ಲ ವಲಯಕ್ಕೂ ತೆರಿಗೆ ಸ್ಲ್ಯಾಬ್ ಮೇಲೆ ಕಣ್ಣಿದೆ. ಹಿರಿಯ ನಾಗರಿಕರು, ಗೃಹ ಖರೀದಿದಾರರು, ರಿಯಲ್ ಇಂಡಸ್ಟ್ರಿ ತೆರಿಗೆ ಸ್ಲ್ಯಾಬ್‌ನ ಪರಿಷ್ಕರಣೆಗಾಗಿ ಕಾಯುತ್ತಿದೆ. ಈ ನಡುವೆ ಟಿವಿ ಇಂಡಸ್ಟ್ರಿ ಕೂಡಾ ತೆರಿಗೆ ಸಂಬಂಧಿತ ಬೇಡಿಕೆ ಸೇರಿ ಹಲವಾರು ಬೇಡಿಕೆ, ನಿರೀಕ್ಷೆಯನ್ನುಈ ಬಾರಿಯ ಕೇಂದ್ರ ಬಜೆಟ್‌ನ ಮೇಲೆ ಹೊಂದಿದೆ.

ಕೋವಿಡ್ ಸಾಂಕ್ರಾಮಿಕ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟಿನಿಂದಾಗಿ ತತ್ತಿರಿಸಿ ಹೋಗಿರುವ ಟೆಲಿವಿಜನ್ ಇಂಡಸ್ಟ್ರಿ ಅಥವಾ ಟಿವಿ ಇಂಡಸ್ಟ್ರಿಯಲ್ಲಿ ಟಿವಿ ಉತ್ಪಾದಕರು ತಮಗೆ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಸಿಹಿಸುದ್ದಿಯನ್ನು ನೀಡಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ. ತೆರಿಗೆ ಸ್ಲ್ಯಾಬ್ ಕಡಿತ, ಭತ್ಯೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಹೊಂದಿದ್ದಾರೆ. ಈ ಇಂಡಸ್ಟ್ರಿಯ ಬೇಡಿಕೆಯ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ತೆರಿಗೆ ಸ್ಲ್ಯಾಬ್ ಪರಿಷ್ಕರಣೆ

ತೆರಿಗೆ ಸ್ಲ್ಯಾಬ್ ಪರಿಷ್ಕರಣೆ

ಕಳೆದ ವರ್ಷದಲ್ಲಿ ಆರ್ಥಿಕ ಸ್ಥಿತಿ ಹಾಗೂ ಮಧ್ಯಮ ವರ್ಗದಲ್ಲಿನ ಗ್ರಾಹಕರ ಪ್ರಮಾಣ ಕಡಿಮೆಯಾದ ಕಾರಣದಿಂದಾಗಿ ಟಿವಿ ಇಂಡಸ್ಟ್ರಿ ಮೇಲೆ ಭಾರೀ ಪ್ರಭಾವ ಉಂಟಾಗಿದೆ. ಇಂಡಸ್ಟ್ರಿಯಲ್ಲಿ ಯಾವುದೇ ಬೆಳವಣಿಗೆಯು ಕಂಡುಬಂದಿಲ್ಲ. ಪ್ರಮುಖವಾಗಿ ಜಿಎಸ್‌ಟಿ ಕೂಡಾ ಹೆಚ್ಚಾಗಿರುವುದು ಈ ಉದ್ಯಮಕ್ಕೆ ಏಟು ನೀಡಿದೆ. ಆದ್ದರಿಂದಾಗಿ ಈ ಕೇಂದ್ರ ಬಜೆಟ್‌ನಲ್ಲಿ ಜಿಎಸ್‌ಟಿಯನ್ನು ಪರಿಷ್ಕರಿಸುವ ನಿರೀಕ್ಷೆಯನ್ನು ಉದ್ಯಮವು ಹೊಂದಿದೆ. ಕಳೆದ ವರ್ಷದಂತೆಯೇ ಟಿವಿ ಮೇಲಿನ ಜಿಎಸ್‌ಟಿ ಸ್ಲ್ಯಾಬ್ ಕಡಿಮೆ ಮಾಡಬೇಕು ಎಂಬುವುದು ಇಂಡಸ್ಟ್ರಿಯ ಬೇಡಿಕೆಯಾಗಿದೆ. ಇದರಿಂದಾಗಿ ಟಿವಿ ಜನರ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ, ಮಾರಾಟ ಪ್ರಮಾಣ ಹೆಚ್ಚಾಗಿ ಉದ್ಯಮಕ್ಕೆ ಸಹಾಯವಾಗಲಿದೆ ಎಂಬ ಅಭಿಪ್ರಾಯವಿದೆ.

 ಪ್ರಸ್ತುತ ಜಿಎಸ್‌ಟಿ ಸ್ಲ್ಯಾಬ್ ಹೇಗಿದೆ?

ಪ್ರಸ್ತುತ ಜಿಎಸ್‌ಟಿ ಸ್ಲ್ಯಾಬ್ ಹೇಗಿದೆ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಡಿಯೋಕೆಕ್ಸ್ ಇಂಟರ್‌ನ್ಯಾಷನಲ್‌ನ ಡೈರೆಕ್ಟರ್, ಅರ್ಜುನ್ ಬಜಾಜ್, "ಟಿವಿ ಇಂಡಸ್ಟ್ರಿಗೆ ಜಿಎಸ್‌ಟಿ ಸ್ಲ್ಯಾಬ್ ದೊಡ್ಡ ಸಮಸ್ಯೆಯಾಗಿದೆ. ಹಲವಾರು ವರ್ಷಗಳಿಂದ ಸ್ಲ್ಯಾಬ್ ಪರಿಷ್ಕರಣೆಗೆ ಉದ್ಯಮ ಕಾಯುತ್ತಿದೆ. ಪ್ರಸ್ತುತ 32 ಇಂಚಿನವರೆಗಿನ ಟಿವಿಗೆ ಶೇಕಡ 18ರಷ್ಟು ಜಿಎಸ್‌ಟಿ ಇದೆ. ಹಾಗೆಯೇ 32 ಇಂಚಿಗಿಂತ ಅಧಿಕ ಗಾತ್ರದ ಟಿವಿಗೆ ಶೇಕಡ 28ರಷ್ಟು ಜಿಎಸ್‌ಟಿ ಇದೆ. ಈ ಸ್ಲ್ಯಾಬ್‌ ಅನ್ನು ಇಳಿಸುವುದರಿಂದ ಜನರಲ್ಲಿ ಕೊಂಡುಕೊಳ್ಳುವಿಕೆ ಶಕ್ತಿ ಹೆಚ್ಚಾಗಲಿದೆ. ಅಂದರೆ ಬೆಲೆ ಕಡಿಮೆಯಾದಂತೆ ಜನರು ಆ ವಸ್ತು ಖರೀದಿಸಲು ಮುಂದೆ ಬರುತ್ತದೆ. ಇದು ಟಿವಿ ಉದ್ಯಮದ ಮಾರುಕಟ್ಟೆಗೆ ಸಹಾಯವಾಗಲಿದೆ," ಎಂದು ತಿಳಿಸಿದ್ದಾರೆ. "ಸರ್ಕಾರವು ಆಮದಿನ ಮೇಲಿನ ಶೇಕಡ 5ರಷ್ಟು ಸುಂಕ ವಿಧಿಸುವ ನಿರ್ಧಾರವನ್ನು ಹಿಂಪಡೆಯಬೇಕು," ಎಂದು ತಜ್ಞರು ಹೇಳಿದ್ದಾರೆ.

 ಟಿವಿ ಇಂಡಸ್ಟ್ರಿಗೆ ಭತ್ಯೆ ಆಕಾಂಕ್ಷೆ
 

ಟಿವಿ ಇಂಡಸ್ಟ್ರಿಗೆ ಭತ್ಯೆ ಆಕಾಂಕ್ಷೆ

ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರವು ಮೊಬೈಲ್ ಫೋನ್, ಐಟಿ ಹಾರ್ಡ್‌ವೇರ್, ಏರ್‌ ಕಂಡಿಷನಲ್ (ಎಸಿ) ಉದ್ಯಮವನ್ನು ಬೆಳೆಸಲು ಉತ್ಪಾದನೆ ಆಧಾರದಲ್ಲಿ ಭತ್ಯೆ ನೀಡುವ ಪಿಎಲ್‌ಐ (Production Linked Incentive) ಯೋಜನೆಯನ್ನು ಪರಿಚಯಿಸಿದೆ. ಟಿವಿ ಇಂಡಸ್ಟ್ರಿಯು ಕೂಡಾ ಈ ಉದ್ಯಮಕ್ಕಾಗಿ ಪಿಎಲ್‌ಐ ಯೋಜನೆಯನ್ನು ಜಾರಿ ಮಾಡಬೇಕು ಎಂಬ ಬೇಡಿಕೆಯನ್ನು ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಅರ್ಜುನ್ ಬಜಾಜ್, "ಭಾರತದ ಸ್ಮಾರ್ಟ್ ಟಿವಿ ಉತ್ಪಾದನಾ ವಲಯವು ಈಗಲೂ ಪಿಎಲ್‌ಐ ಯೋಜನೆಯ ಪ್ರಯೋಜನವನ್ನು ಪಡೆಯಲು ಕಾಯುತ್ತಿದೆ. ಈ ಬಜೆಟ್ ಮೂಲಕ ಸರ್ಕಾರವು ಆತ್ಮನಿರ್ಭರ ಭಾರತಕ್ಕೆ ಪ್ರೋತ್ಸಾಹ ನೀಡಲಿದೆ ಎಂಬ ನಂಬಿಕೆಯಿದೆ," ಎಂದು ತಿಳಿಸಿದ್ದಾರೆ. ಸೂಪರ್ ಪ್ಲಾಸ್ಟ್ರೋನಿಕ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಅವನೀತ್ ಸಿಂಗ್ ಮಾರ್ವಾಹ, "ಕೋವಿಡ್ ಸಂದರ್ಭದಲ್ಲಿ ಆರ್ಥಿಕತೆಗೆ ಸಹಾಯ ಮಾಡುವ ಹಲವಾರು ಕಾರ್ಯಗಳನ್ನು ಟಿವಿ ಇಂಡಸ್ಟ್ರಿ ಮಾಡಿದೆ. ಇನ್ನೂ ಅಧಿಕ ಹೂಡಿಕೆಯನ್ನು ಮಾಡುವಾಗ ಉದ್ಯಮಿಗಳು ಹಾಗೂ ಇಂಡಸ್ಟ್ರಿಗೆ ಸುರಕ್ಷಿತ ಭಾವನೆ ಬರುವುದು ಮುಖ್ಯವಾಗಿದೆ," ಎಂದು ಹೇಳಿದ್ದಾರೆ.

 ಸಾರಿಗೆ ಮೂಲಸೌಕರ್ಯ ಬೆಳವಣಿಗೆ

ಸಾರಿಗೆ ಮೂಲಸೌಕರ್ಯ ಬೆಳವಣಿಗೆ

ಸರ್ಕಾರವು ಈ ಬಜೆಟ್‌ನಲ್ಲಿ ಸಾರಿಗೆ ಮೂಲಸೌಕರ್ಯದ ಬೆಳವಣಿಗೆಗೆ ಉತ್ತಮ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಇಂಡಸ್ಟ್ರಿ ಭರವಸೆಯನ್ನು ಹೊಂದಿದೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ನಡುವೆ ಒಂದು ನಂಟು ಇರುವುದು ಮುಖ್ಯವಾಗಿದೆ. ಸಾರಿಗೆ, ಹೆದ್ದಾರಿ, ರೋಡ್ ಅಭಿವೃದ್ಧಿಯಿಂದಾಗಿ ಈ ಕಾರ್ಯ ಸಾಧ್ಯವಾಗಲಿದೆ. ಗ್ರಾಮೀಣ ಪ್ರದೇಶಕ್ಕೆ ಪ್ರಯಾಣ ಮಾಡಲು ಸೌಕರ್ಯ ಹೆಚ್ಚಾದರೆ ಅಲ್ಲಿಯೂ ಟಿವಿ ಇಂಡಸ್ಟ್ರಿ ಬೆಳವಣಿಗೆ ಕಾಣಲಿದೆ. ರಸ್ತೆಯು ಹಳ್ಳ-ಕೊಳ್ಳಗಳಿಲ್ಲದೆ ಸರಿಯಾಗಿದ್ದರೆ ಟಿವಿ ಡೆಲಿವರಿ ಮಾಡಲು ಸಹಾಯವಾಗಲಿದೆ ಎಂಬ ಅಭಿಪ್ರಾಯವನ್ನು ಕೂಡಾ ಇಂಡಸ್ಟ್ರಿ ವ್ಯಕ್ತಪಡಿಸಿದೆ.

English summary

Union Budget 2023: TV industry Expectation From The Budget, Details in Kannada

Union Budget 2023: TV industry in India may have many expectations from the Union budget, here we list out some expectations, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X