For Quick Alerts
ALLOW NOTIFICATIONS  
For Daily Alerts

2021: ಭಾರತದಲ್ಲಿ ಮುಂಬರುವ ಐಪಿಒಗಳು

|

ಪ್ರಸ್ತುತ ಮಾರುಕಟ್ಟೆಯಲ್ಲಿ ಐಪಿಒ ಗಳ ಅಲೆ ಇದೆ. 2021 ರಲ್ಲಿ ಜನರು ಹೆಚ್ಚಾಗಿ ಪ್ರಮುಖ ಸಾರ್ವಜನಿಕ ಕೊಡುಗೆ (ಐಪಿಒ) ಅತ್ತ ಮುಖ ಮಾಡುತ್ತಿದ್ದಾರೆ. ಇನ್ನು ಈ ನಡುವೆ ಜೊಮ್ಯಾಟೊ, ಐಆರ್‌ಸಿಟಿಟಿಗಳು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗ ಎಂಬಂತೆ ಆಗಿದೆ. ಅಷ್ಟು ಮಟ್ಟಿಗೆ ಈ ಸಂಸ್ಥೆಗಳು ಹೆಸರುವಾಸಿಯಾಗಿದೆ.

2021 ರ ಮೊದಲಾರ್ಧದಲ್ಲಿ ಜೊಮ್ಯಾಟೊ, ಕಾಮ್‌ಸ್ಟಾರ್‌, ಐಆರ್‌ಎಫ್‌ಸಿ, ಪವರ್‌ ಗ್ರಿಡ್‌ ಇನ್‌ವಿಟ್‌ ಹಾಗೂ ಹಲವು ಐಪಿಒಗಳು ಹೆಸರುವಾಸಿಯಾಗಿದ್ದವು. ಈ ಅರ್ಧ ವರ್ಷದಲ್ಲಿ, ಇನ್ನು ಕಲೆವು ಐಪಿಒಗಳು ಪ್ರಚಲಿತವಾಗಿದೆ. ಈ ವರ್ಷದಲ್ಲಿ ಯಾವೆಲ್ಲಾ ಐಪಿಒಗಳು ಹೆಸರುವಾಸಿಯಾಗಿದೆ ಎಂದು ತಿಳಿಯುವ ಮುನ್ನ ನಾವು ಮೊದಲು ಐಪಿಒ ಎಂದರೇನು ಎಂಬುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ. ಮುಂದೆ ಓದಿ.

IPO ನಲ್ಲಿ ಹೂಡಿಕೆ ಮಾಡುವಿರಾ? ಹಾಗಾದ್ರೆ ಈ ಮಾಹಿತಿ ಗೊತ್ತಿರಲೇಬೇಕುIPO ನಲ್ಲಿ ಹೂಡಿಕೆ ಮಾಡುವಿರಾ? ಹಾಗಾದ್ರೆ ಈ ಮಾಹಿತಿ ಗೊತ್ತಿರಲೇಬೇಕು

ಐಪಿಒ ಎಂದರೆ ಪ್ರಮುಖ ಸಾರ್ವಜನಿಕ ಕೊಡುಗೆ ಆಗಿದೆ. ಖಾಸಗಿ ಸಂಸ್ಥೆಗಳು ಸಾಮಾನ್ಯ ಜನರಿಗೆ ಈ ಸಂಸ್ಥೆಯ ಷೇರುಗಳನ್ನು ಖರೀದಿ ಮಾಡಲು ಆಹ್ವಾನ ನೀಡುವುದೇ ನಾವು ಐಪಿಒ ಎಂದು ಕರೆಯತ್ತೇವೆ. ಸಾಮಾನ್ಯವಾಗಿ ಬಂಡವಾಳ, ಸಂಸ್ಥೆಯ ವಿಸ್ತರಣೆ, ಸಾಲ ಮರುಪಾವತಿ ಹಾಗೂ ಇತರೆ ಉದ್ದೇಶಗಳಿಗಾಗಿ ಹಣವನ್ನು ಸಂಗ್ರಹ ಮಾಡಲು ಮಾಡಲಾಗುತ್ತದೆ. ಒಂದು ಕಂಪನಿಯ ಐಪಿಒ ಬರುತ್ತಿದೆ ಎಂದರೆ ಅದು ಖಾಸಗಿ ಸಂಸ್ಥೆಯಿಂದ ಸಾರ್ವಜನಿಕ ಉದ್ಯಮವಾಗುತ್ತಿದೆ ಎಂದು ಅರ್ಥ. ಹೀಗಾಗಿ ಸಾಮಾನ್ಯವಾಗಿ ಐಪಿಒ ಅನ್ನು ಖಾಸಗಿ ಸಂಸ್ಥೆಯಿಂದ ಸಾರ್ವಜನಿಕ ಉದ್ಯಮದೆಡೆ ತೆರಳುವ ಹಾದಿ ಎಂದು ಕರೆಯಬಹುದು. ಐಪಿಒ ಅಪ್ಲಿಕೇಷನ್‌ ಅನ್ನು ಸಲ್ಲಿಸುವ ಮೂಲಕ ನಾವು ಈ ಸಂಸ್ಥೆಗಳ ಷೇರನ್ನು ಖರೀದಿ ಮಾಡಲು ಮುಂದಾಗಬಹುದು. ಹಾಗಾದರೆ ಮುಂಬರುವ ಐಪಿಒಗಳು ಯಾವುದು? ಎಂದು ತಿಳಿಯಲು ಮುಂದೆ ಓದಿ.

 ಎಲ್‌ಐಸಿ ಐಪಿಒ

ಎಲ್‌ಐಸಿ ಐಪಿಒ

ಭಾರತೀಯ ಜೀವ ವಿಮಾ ನಿಗಮವು ಸುಮಾರು 66 ವರ್ಷಗಳಷ್ಟು ಹಳೆಯದಾಗಿದೆ. 2021 ರಲ್ಲಿ ಎಲ್‌ಐಸಿ ಯ ಐಪಿಒ ಆರಂಭವಾಗಲಿದೆ. ಈ ಎಲ್‌ಐಸಿ ಐಪಿಒನ ಮೌಲ್ಯವು 7000-8000 ಕೋಟಿ ಆಗಿದೆ. ಎಲ್‌ಐಸಿ ಶೇಕಡ ನೂರರಷ್ಟು ಸರ್ಕಾರದ ನಿಯಂತ್ರಣದಲ್ಲಿ ಇರುವ ಸಂಸ್ಥೆ ಆದರೂ ಕೂಡಾ ವಾಸ್ತವದಲ್ಲಿ ಅದು ಸಾರ್ವಜನಿಕರ ಹಣವೇ ವ್ಯಾಪಾರದ ಮೂಲವಾಗಿರುವ ಕಂಪನಿ. ಸರ್ಕಾರದ ಬಂಡವಾಳ ಹೂಡಿಕೆ ಬಹಳ ಕಡಿಮೆ.

 ಪೆಟಿಎಂ ಐಪಿಒ

ಪೆಟಿಎಂ ಐಪಿಒ

ನಿಮಗೆ ತಿಳಿದಿರುವಂತೆ ಪೆಟಿಎಂ ಭಾರತದ ಫಿನ್‌ಟೆಕ್ ಕಂಪನಿಯಾಗಿದೆ ಮತ್ತು ಅತ್ಯಂತ ಜನಪ್ರಿಯವಾದ ಸಂಸ್ಥೆಗಳಲ್ಲಿ ಒಂದಾಗಿದೆ. ಅಕ್ಟೋಬರ್ 2021 ರಲ್ಲಿ ಇದರ ಐಪಿಒ ಆರಂಭವಾಗಲಿದೆ. ಆದರೆ ತಾತ್ಕಾಲಿಕವಾಗಿ ಈ ಐಪಿಒ ಇರಲಿದೆ. ಇದು ಸುಮಾರು ರೂ. 160 ಬಿಲಿಯನ್‌ ಐಪಿಒ ಆಗಿರಲಿದೆ.

ಜೊಮ್ಯಾಟೊ ತೊರೆದ ಸಹ ಸಂಸ್ಥಾಪಕ ಗೌರವ್ ಗುಪ್ತ: ರಾಜೀನಾಮೆ!ಜೊಮ್ಯಾಟೊ ತೊರೆದ ಸಹ ಸಂಸ್ಥಾಪಕ ಗೌರವ್ ಗುಪ್ತ: ರಾಜೀನಾಮೆ!

 ಉತ್ಕರ್ಷ್ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ ಐಪಿಒ

ಉತ್ಕರ್ಷ್ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ ಐಪಿಒ

ಈ ಸಣ್ಣ ಹಣಕಾಸು ಬ್ಯಾಂಕ್ ರೂ. 1350 ಕೋಟಿ ಮೌಲ್ಯದ ಐಪಿಒಗಾಗಿ ಸೆಬಿಗೆ ಅರ್ಜಿ ಸಲ್ಲಿಸಿದೆ. ಮೊದಲ ಐಪಿಒ ರೂ. 750 ಕೋಟಿ ಆಗಲಿದೆ. ನಂತರ ಐಪಿಒ ರೂ. 600 ಆಗಲಿದೆ. ಈ ಐಪಿಒ ವು ಈ ವರ್ಷದಿಂದ ಆರಂಭವಾಗಲಿದೆ. ಈ ಐಪಿಒ ಅಕ್ಟೋಬರ್ 2021 ಕ್ಕೆ ಆರಂಭ ಆಗಿದೆ.

 ಸ್ಟೆರ್ಲೈಟ್ ಪವರ್‌ ಐಪಿಒ

ಸ್ಟೆರ್ಲೈಟ್ ಪವರ್‌ ಐಪಿಒ

ಡಿಆರ್‌ಎಚ್‌ಪಿ ರೂಪಾಯಿ 1250 ಕೋಟಿ ಐಪಿಒಗಾಗಿ ಸೆಬಿಗೆ ಸಲ್ಲಿಕೆ ಮಾಡಿದ್ದಾರೆ. ಇದು ಪವರ್ ಟ್ರಾನ್ಸ್‌ಮಿಷನ್ ಕಂಪನಿಯಾಗಿದೆ. 25 ಪ್ರಾಜೆಕ್ಟ್‌ಗಳು ಚಾಲನೆಯಲ್ಲಿವೆ. ಇನ್ನು ಇತ್ತೀಚೆಗೆ ಐಪಿಒ-ಬೌಂಡ್‌ ಸ್ಟೆರ್ಲೈಟ್ ಪವರ್ ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ರೂಪಾಯಿ 324 ಕೋಟಿ ಮೌಲ್ಯದ ನಂಗಲ್ಬಿಬ್ರಾ-ಬೊಂಗೈಗಾಂವ್ ಅಂತರ-ರಾಜ್ಯ ವಿದ್ಯುತ್ ಪ್ರಸರಣ ಯೋಜನೆಯನ್ನು ಗೆದ್ದಿದೆ ಎಂದು ಘೋಷಿಸಿದೆ.

 ಕೆವೆಂಟರ್ ಆಗ್ರೋ ಐಪಿಒ

ಕೆವೆಂಟರ್ ಆಗ್ರೋ ಐಪಿಒ

ಕೆವೆಂಟರ್ ಗ್ರೂಪ್‌ನ ಕೆವೆಂಟರ್ ಆಗ್ರೋ ಐಪಿಒ ರೂ. 800 ಕೋಟಿ ಆಗಿದೆ. ಕಂಪನಿಯ ಪ್ರಸ್ತುತ ವಹಿವಾಟು ಸುಮಾರು ರೂ. 1000 ಕೋಟಿ ಆಗಿದೆ.

English summary

Upcoming IPOs in India 2021, Explained in Kannada

Upcoming IPOs in India 2021, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X