For Quick Alerts
ALLOW NOTIFICATIONS  
For Daily Alerts

ಯುಎಸ್ ನಲ್ಲಿ ಟ್ರಂಪ್- ಬಿಡೆನ್ ಕುರ್ಚಿ ಕಾಳಗ; ಯಾರು ಗೆದ್ದರೆ ಮುಂದೇನು ಗೊತ್ತಾ?

|

ಯುಎಸ್ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಏನೇ ಆಗಿದ್ದರೂ ಅದರ ಪರಿಣಾಮ ಇಡೀ ಜಗತ್ತಿನ ಮೇಲೆ ಆಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಅದು ಡೊನಾಲ್ಡ್ ಟ್ರಂಪ್ ಇರಲಿ ಅಥವಾ ಜೋ ಬಿಡೆನ್ ಆಗಿರಲಿ. ಯಾರೇ ಯುಎಸ್ ಅಧ್ಯಕ್ಷರಾದರೂ ಅದರ ಪರಿಣಾಮ ಯುಎಸ್ ಆರ್ಥಿಕತೆ ಮೇಲೆ ಮಾತ್ರವಲ್ಲ, ಇತರ ಪ್ರಬಲ ಆರ್ಥಿಕತೆ ಜತೆಗಿನ ವ್ಯವಹಾರ ಒಪ್ಪಂದಗಳ ಮೇಲೂ ಆಗಲಿದೆ.

ಇಡೀ ವಿಶ್ವದ ಜನಸಂಖ್ಯೆಗೆ ಹೋಲಿಸಿದರೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಇರುವುದು ಐದು ಪರ್ಸೆಂಟ್ ಮಾತ್ರ. ಆದರೆ ವಿಶ್ವದ ಸಂಪತ್ತಿನ ಶೇಕಡಾ ಇಪ್ಪತ್ತಕ್ಕೂ ಹೆಚ್ಚು ಸಂಪತ್ತು ಸೃಷ್ಟಿ ಆಗುವುದು ಅಲ್ಲಿ. ಮೈಕ್ರೋಸಾಫ್ಟ್, ಗೂಗಲ್ ನಂಥದ್ದು- ನಾವು ನಿತ್ಯವೂ ಬಳಸುವಂಥ ದೈತ್ಯ ಸಂಸ್ಥೆಗಳ ಪಾಲಿನ ತವರುಮನೆ ಯುಎಸ್. ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮೊತ್ತದ ಹಣಕಾಸು ಬರುವುದು ಸಹ ಅಲ್ಲಿಂದಲೇ.

ಆಂಟ್ ಐಪಿಒ ಎಫೆಕ್ಟ್: ಯುಎಸ್ ನಲ್ಲಿ ಚೀನಾದ ಅಲಿಬಾಬ ಷೇರುಗಳು ತತ್ತರಆಂಟ್ ಐಪಿಒ ಎಫೆಕ್ಟ್: ಯುಎಸ್ ನಲ್ಲಿ ಚೀನಾದ ಅಲಿಬಾಬ ಷೇರುಗಳು ತತ್ತರ

ಇವೆಲ್ಲದರ ಅರ್ಥ ಏನೆಂದರೆ, ಅಮೆರಿಕದ ಮುಂದಿನ ಅಧ್ಯಕ್ಷರು ಜಾಗತಿಕ ಆರ್ಥಿಕತೆ ಮೇಲೆ ಪ್ರಭಾವ ಹೊಂದಿರುತ್ತಾರೆ.

ಚುನಾವಣೆ ಫಲಿತಾಂಶ ಹಾಗೂ ಷೇರು ಮಾರ್ಕೆಟ್

ಚುನಾವಣೆ ಫಲಿತಾಂಶ ಹಾಗೂ ಷೇರು ಮಾರ್ಕೆಟ್

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಈಗಾಗಲೇ ಷೇರು ಮಾರುಕಟ್ಟೆಗಳು ಪ್ರತಿಕ್ರಿಯಿಸಿವೆ. ಯುಎಸ್ ಷೇರು ಮಾರುಕಟ್ಟೆಯು ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 943.24 ಪಾಯಿಂಟ್ ಇಳಿಕೆ ಆಗಿದ್ದು, ಇದಕ್ಕೆ ಅತಿ ಮುಖ್ಯ ಕಾರಣ ಆಗಿದ್ದು ಕೊರೊನಾ ಸೋಂಕಿತ ಪ್ರಕರಣಗಳ ಹೆಚ್ಚಳ. ಬ್ಲೂಮ್ ಬರ್ಗ್ ನಿಂದ ಬಯಲಾಗಿರುವ ದತ್ತಾಂಶದ ಪ್ರಕಾರ, ಯುಎಸ್ ಅಧ್ಯಕ್ಷೀಯ ಚುನಾವಣೆ ನಂತರ ಬಿಎಸ್ ಇ ಸೆನ್ಸೆಕ್ಸ್ ಐದು ಟ್ರೇಡಿಂಗ್ ಸೆಷನ್ ಗಳು ಇಳಿಕೆ ಕಂಡಿದ್ದವು. ಸದ್ಯದ ಅಮೆರಿಕ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲ್ ಇನ್ ಮತಗಳ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಸಂವಾದದ ಒಂದು ಸೆಷನ್ ನಲ್ಲಿ ಈ ಫಲಿತಾಂಶವನ್ನು ಒಪ್ಪಲು ಸಹ ಸಾಧ್ಯವಿಲ್ಲ ಎಂದಿದ್ದರು. ಟ್ರಂಪ್ ಪ್ರಕಾರ, ಮೇಲ್ ಇನ್ ಬ್ಯಾಲಟ್ ನಿಂದ ಚುನಾವಣೆ ವಂಚನೆ ಆಗುತ್ತದೆ. ಹೆಸರಾಂತ ಹೂಡಿಕೆದಾರ ಮಾರ್ಕ್ ಮೊಬಿಯಸ್ ಹೇಳುವಂತೆ, ಒಂದು ವೇಳೆ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ಪ್ರಶ್ನೆ ಮಾಡಿದಲ್ಲಿ ಇದರಿಂದ ಷೇರು ಮಾರುಕಟ್ಟೆ ಮೇಲೆ ನಾಟಕೀಯ ಪರಿಣಾಮ ಆಗುತ್ತದೆ. ನವೆಂಬರ್ ಮೂರರ ನಂತರ ಷೇರು ಮಾರುಕಟ್ಟೆ ಏರಿಳಿತ ಶುರು ಆಗಬಹುದು. ಒಂದು ಅಥವಾ ಅದಕ್ಕಿಂತ ಹೆಚ್ಚು ಅಮೆರಿಕನ್ ರಾಜ್ಯಗಳ ಚುನಾವಣೆ ಫಲಿತಾಂಶ ಕೋರ್ಟ್ ನಲ್ಲಿ ನಿರ್ಧರಿಸುವತಾಗಬಹುದು.

ಭಾರತದ ಮೇಲೆ ಯುಎಸ್ ಚುನಾವಣೆ ಪರಿಣಾಮ

ಭಾರತದ ಮೇಲೆ ಯುಎಸ್ ಚುನಾವಣೆ ಪರಿಣಾಮ

ಕಳೆದ ಕೆಲವು ವರ್ಷಗಳಿಂದ ಭಾರತದ ಪ್ರಮುಖ ವಾಣಿಜ್ಯ ಸಹಭಾಗಿ ಆಗಿದೆ ಯುಎಸ್. ಭಾರತ ಹಾಗೂ ಯುಎಸ್ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ವಹಿವಾಟು 2019- 20ರಲ್ಲಿ $ 88.75 ಬಿಲಿಯನ್ ಇತ್ತು. ಗೆಲ್ಲುವ ಅಭ್ಯರ್ಥಿ ನೀತಿ ನಿರೂಪಣೆ ಮೂಲಕ ಭಾರತದ ಆರ್ಥಿಕತೆ ಮೇಲೆ ಮಾತ್ರವಲ್ಲ, ಭಾರತದ ನೆರೆ ರಾಷ್ಟ್ರಗಳೊಂದಿಗೆ ಸಂಬಂಧದಲ್ಲೂ ಪ್ರಭಾವ ಇರಲಿದೆ. ಯುಎಸ್ ನಲ್ಲಿ ಡೆಮಾಕ್ರಟ್ ಭರ್ಜರಿ ಗೆಲುವು ಕಂಡು, ಜೋ ಬಿಡೆನ್ ಗೆದ್ದರೂ, ಬಿಡನ್ ಗೆದ್ದು- ಕಾಂಗ್ರೆಸ್ ವಿಭಜನೆಯಾದರೂ ಮತ್ತು ಡೊನಾಲ್ಡ್ ಟ್ರಂಪ್ ಗೆದ್ದರೂ ಹೀಗೆ ಮೂರೂ ಸನ್ನಿವೇಶದಲ್ಲಿ ಭಾರತಕ್ಕೆ ಅನುಕೂಲ ಇರಲಿದೆ ಎನ್ನುತ್ತದೆ ಯುಬಿಎಸ್ ವಿಶ್ಲೇಷಣೆ. ಕಳೆದ ತಿಂಗಳು ಈ ಬಗ್ಗೆ ಅಧ್ಯಯನ ಪ್ರಕಟವಾಗಿತ್ತು. ವ್ಯಾಪಾರ- ವಿದೇಶ ನೀತಿ, ಯುಎಸ್ ಫೆಡರಲ್ ನೀತಿ ಮತ್ತು ಮೂಲಸೌಕರ್ಯದ ಮೇಲೆ ಹಣಕಾಸು ವೆಚ್ಚ ಕೂಡ ಪರಿಣಾಮ ಆಗುತ್ತದೆ.

ಯುರೋಪ್ ಮತ್ತು ಚೀನಾ ಮೇಲೆ ಪರಿಣಾಮ

ಯುರೋಪ್ ಮತ್ತು ಚೀನಾ ಮೇಲೆ ಪರಿಣಾಮ

ಟ್ರಂಪ್ ಆಡಳಿತಾವಧಿಯಲ್ಲಿ ಅಮೆರಿಕ ಮತ್ತು ಯುರೋಪ್ ಸಂಬಂಧ ಹಾಳಾಗಿತ್ತು. ವಾಣಿಜ್ಯ, ರಕ್ಷಣೆ ಮತ್ತು ತಂತ್ರಜ್ಞಾನ ವಿಚಾರದಲ್ಲಿ ತಿಕ್ಕಾಟ ಇತ್ತು. ಈಗಾಗಲೇ ಆರ್ಥಿಕ ಬೆಳವಣಿಗೆ ಕುಗ್ಗಿ, ಕೊರೊನಾದಿಂದಲೂ ಪೆಟ್ಟು ತಿಂದಿರುವ ಯುರೋಪಿಯನ್ ಒಕ್ಕೂಟ ಸದ್ಯಕ್ಕೆ ಯುಎಸ್ ಚುನಾವಣೆ ಕಡೆಗೆ ನೋಡುತ್ತಿದೆ. ಈ ಚುನಾವಣೆ ಮುಗಿದ ಮೇಲಾದರೂ ಉದ್ವಿಗ್ನತೆ ನಿರಾಳ ಆಗಬಹುದು ಎಂಬ ನಿರೀಕ್ಷೆ ಅದು. ಇನ್ನು ಚೀನಾದ ವಿಚಾರಕ್ಕೆ ಬಂದರೆ, ಎರಡನೇ ಅವಧಿಗೆ ಟ್ರಂಪ್ ಆಯ್ಕೆಯಾದರಲ್ಲಿ ಹೂಡಿಕೆ, ತೆರಿಗೆ ಸೇರಿದಂತೆ ಅನೇಕ ಬಗೆಯ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಕೊರೊನಾ ವೈರಸ್ ಹರಡುವುದಕ್ಕೆ ಚೀನಾ ನೇರ ಹೊಣೆ ಎಂಬುದು ಟ್ರಂಪ್ ಆಡಳಿತದ ಸಿಟ್ಟು. ಆದರೆ ಹಲವು ವಿಶ್ಲೇಷಕರ ಪ್ರಕಾರ, ಜೋ ಬಿಡೆನ್ ಗೆದ್ದು ಬಂದರೂ ಚೀನಾ ಜತೆಗಿನ ಯುಎಸ್ ಸಂಬಂಧದಲ್ಲಿ ಯಾವ ದೊಡ್ಡ ಬದಲಾವಣೆ ಆಗಲ್ಲ.

ಹೆಚ್ಚುವರಿ ಆರ್ಥಿಕ ಉತ್ತೇಜನ ಪ್ಯಾಕೇಜ್

ಹೆಚ್ಚುವರಿ ಆರ್ಥಿಕ ಉತ್ತೇಜನ ಪ್ಯಾಕೇಜ್

ಯುಎಸ್ ಚುನಾವಣೆಗೆ ಮುನ್ನ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಆಗುವ ಸಾಧ್ಯತೆ ಇಲ್ಲ ಎಂಬುದು ಈಚೆಗೆ ಸುಪ್ರೀಂ ಕೋರ್ಟ್ ನ್ಯಾ. ರುಥ್ ಬಡೆರ್ ಗಿನ್ಸ್ ಬರ್ಗ್ ಸಾವಿನಿಂದ ಖಾತ್ರಿ ಆಗಿದೆ. ಸ್ವತಃ ಟ್ರಂಪ್ ಹೇಳಿರುವ ಪ್ರಕಾರ, ಕೊರೊನಾ ಹೊಡೆತಕ್ಕೆ ಸಿಲುಕಿದ ಯುಎಸ್ ಆರ್ಥಿಕತೆಯ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡುವುದು ಚುನಾವಣೆ ನಂತರವೇ. "ನೀವು ಈ ವರೆಗೆ ನೋಡಿರದ ಆರ್ಥಿಕ ಪ್ಯಾಕೇಜ್ ನೀಡುತ್ತೇವೆ," ಎಂದಿದ್ದಾರೆ ಟ್ರಂಪ್. ಈಗಾಗಲೇ ನಿರುದ್ಯೋಗ ಸೇರಿದಂತೆ ನಾನಾ ಸಮಸ್ಯೆಗಳಿಂದ ಹೈರಾಣಾಗಿರುವ ಯುಎಸ್ ಆರ್ಥಿಕತೆಗೆಗೆ ಉತ್ತೇಜನ ಪ್ಯಾಕೇಜ್ ತಡವಾದಷ್ಟೂ ಕಷ್ಟವೇ. ಅಲ್ಲಿನ ಷೇರು ಮಾರುಕಟ್ಟೆ ಒಂದಿಷ್ಟು ಭರವಸೆಯಿಂದ ಇದ್ದಲ್ಲಿ ಅದು ಈ ಉತ್ತೇಜನಾ ಪ್ಯಾಕೇಜ್ ನಿಂದ. ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ಈಗ ನಿರ್ಣಾಯಕವಾಗಿ ಪರಿಣಾಮ ಬೀರಲಿದೆ.

English summary

US Presidential Elections Results Impact On India And Global Economy

How US presidential elections results impact on India and global economy? Here is analysis about equity and bullion market and other issues.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X