For Quick Alerts
ALLOW NOTIFICATIONS  
For Daily Alerts

ಸಂಪತ್ತಿನೊಂದಿಗೆ ಮೌಲ್ಯವನ್ನು ರವಾನಿಸಬೇಕೇ?, ಬರೆಯಿರಿ ಲೆಗಸಿ ಲೆಟರ್

|

ಪ್ರಸ್ತುತ ಕೊರೊನಾ ವೈರಸ್‌ ಸೋಂಕಿನ ಸಂದರ್ಭದಲ್ಲಿ ಜೀವನದಲ್ಲಿ ಹಲವಾರು ಮಂದಿಗೆ ಏಳು ಬೀಳುಗಳು ಸಂಭವಿಸಿದೆ. ನಾವು ನಿನ್ನೆ ನೋಡಿದ ಜನರು ಇಂದು ಇಲ್ಲ ಎಂಬ ಸ್ಥಿತಿಯೂ ಇದೆ. ಈ ನಡುವೆ ನಮ್ಮಲ್ಲಿ ನಮ್ಮ ಜೀವದ ಮೌಲ್ಯದ ಬಗ್ಗೆ ಅಧಿಕ ಅರಿವು ಮೂಡಿದೆ.

 

ಈ ಸಂದರ್ಭದಲ್ಲಿ ನಾವು ಹಠತ್‌ ಆಗಿ ತೀರಿಕೊಂಡರೆ ನಮ್ಮ ಸಂಪತ್ತು ಹಂಚಿಕೆ ಮುಂದೆ ಹೇಗೆ ನಡೆಯುತ್ತದೆ ಎಂದು ಕೂಡಾ ಜನರು ಈಗಲೇ ಆಲೋಚನೆ ಮಾಡುತ್ತಿದ್ದಾರೆ. ನೀವು ಸಾಯುವ ಮುನ್ನವೇ ನಿಮ್ಮ ಆಸ್ತಿ, ಸಂಪತ್ತು, ಷೇರುಗಳ ಬಗ್ಗೆ ಮಾಹಿತಿ ನೀಡುವುದು, ಅದನ್ನು ಹಂಚಿಕೆ ಮಾಡುವುದು ಮುಖ್ಯವಾಗಿದೆ. ಇದರಿಂದಾಗಿ ನಿಮ್ಮ ಕುಟುಂಬಸ್ಥರು ಮುಂದೆ ನಿಮ್ಮ ಸಂಪತ್ತಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತೊಂದರೆಗೆ ಒಳಗಾಗುವುದನ್ನು ತಪ್ಪಿಸಬಹುದು. ಇದಕ್ಕಾಗಿ ನೀವು ವಿಲ್‌ ಬರೆಯುವುದು ಉತ್ತಮ.

ಮಿನಿ ಕೂಪರ್‌ ಎಸ್‌ಇ ಎಲೆಕ್ಟ್ರಿಕ್ ಕಾರು ಶೀಘ್ರ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿಮಿನಿ ಕೂಪರ್‌ ಎಸ್‌ಇ ಎಲೆಕ್ಟ್ರಿಕ್ ಕಾರು ಶೀಘ್ರ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

ಇನ್ನು ಈ ಸಂದರ್ಭದಲ್ಲೇ ನೀವು ಈ ವಿಲ್‌ನಲ್ಲಿ ಜೀವನದ ಮೌಲ್ಯವನ್ನು ಕೂಡಾ ಹಂಚಿಕೊಳ್ಳಬಹುದು. ನಿಮ್ಮ ಜೀವನದ ಅನುಭವಗಳು, ನೀವು ಜೀವನದಲ್ಲಿ ಕಲಿತ ಪಾಠ, ನಿಮ್ಮ ಜೀವನದ ಯಶಸ್ಸಿಗೆ ಕಾರಣ, ನಿಮ್ಮ ಪ್ರಮುಖ ನಂಬಿಕೆಗಳು ಜೀವನದ ಮೌಲ್ಯಗಳನ್ನು ನೀವು ನಿಮ್ಮ ವಿಲ್‌ ಮೂಲಕ ತಿಳಿಸಬಹುದು. ಇದಕ್ಕಾಗಿ ನೀವು ಲೆಗಸಿ ಲೆಟರ್‌ ಅನ್ನು ಬರೆಯಬಹುದು. ಇದನ್ನು ಎಥಿಕಲ್‌ ವಿಲ್‌ ಎಂದು ಕೂಡಾ ಕರೆಯಬಹುದು. ಹಾಗಾದರೆ ಈ ಲೆಗಸಿ ಲೆಟರ್‌ ಎಂದರೇನು?, ಇದರಿಂದ ಏನು ಪ್ರಯೋಜನ? ಮುಂದೆ ಓದಿ.

 ಲೆಗಸಿ ಲೆಟರ್‌ ಹೇಗೆ, ಯಾವಾಗ ಪ್ರಾರಂಭ?

ಲೆಗಸಿ ಲೆಟರ್‌ ಹೇಗೆ, ಯಾವಾಗ ಪ್ರಾರಂಭ?

ಹಲವಾರು ಶತಮಾನಗಳಿಂದ ಈ ಎಥಿಕಲ್‌ ವಿಲ್‌ ಅಥವಾ ಲೆಗಸಿ ಲೆಟರ್‌ ಅನ್ನು ನೀಡುವ ಸಂಸ್ಕೃತಿ ಇದೆ. ಪುರಾತನ ಯಹೂದಿ ಸಂಪ್ರದಾಯದಲ್ಲಿ ತಂದೆಯ ಮರಣದ ನಂತರ ತಂದೆಯು ತನ್ನ ಮಕ್ಕಳಿಗೆ ಈ ಎಥಿಕಲ್‌ ವಿಲ್‌ ನೀಡುವ ಮೂಲಕ ಮೌಲ್ಯಗಳನ್ನು ಕೂಡಾ ರವಾನಿಸುತ್ತಿದ್ದರು. ಈಜಿಪ್ಟ್‌ನಲ್ಲಿ ಫೇರೋಗಳು ತಮ್ಮ ಉತ್ತರಾಧಿಕಾರಿಗಳು ರಾಜ್ಯವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ತಿಳಿಸಲು ಅಂತಹ ನಿರ್ದೇಶನವನ್ನು ನೀಡುತ್ತಿದ್ದರು. ಈಗ ಈ ಎಥಿಕಲ್‌ ವಿಲ್‌ ಜೊತೆಗೆ ಲೀಗಲ್‌ ವಿಲ್‌ಗೂ ಜನರು ಅಧಿಕ ಆದ್ಯತೆ ನೀಡುತ್ತಾರೆ. ಅದರಲ್ಲೂ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಜನರು ಈ ವಿಲ್‌ ಬಗ್ಗೆ ಅಧಿಕವಾಗಿ ಗಮನ ಹರಿಸುತ್ತಿದ್ದಾರೆ. ನಾವು ದಿಡೀರ್‌ ಆಗಿ ತೀರಿಕೊಂಡರೆ ನಮ್ಮ ಆಸ್ತಿಯ ಬಗ್ಗೆ ಸಂಪೂರ್ಣವಾಗಿ ನಮ್ಮ ಕುಟುಂಬಕ್ಕೆ ತಿಳಿಯುವುದು ಹೇಗೆ ಎಂಬ ಬಗ್ಗೆ ಆಲೋಚನೆ ಮಾಡಿರುವ ಜನರು ವಿಲ್‌ ಅನ್ನು ಲೀಗಲ್‌ ವಿಲ್‌ ಬರೆಯುತ್ತಿದ್ದಾರೆ. ಹಾಗೆಯೇ ಇದರೊಂದಿಗೆ ಲೆಗಸಿ ಲೆಟರ್‌ ಕೂಡಾ ಬರೆಯುವ ಮೂಲಕ ಜೀವನದ ಮೌಲ್ಯವನ್ನು ತಮ್ಮ ಕುಟುಂಬಕ್ಕೆ ತಿಳಿಸುತ್ತಿದ್ದಾರೆ.

 ಎಥಿಕಲ್‌ ವಿಲ್‌ ಅಥವಾ ಲೆಗಸಿ ಲೆಟರ್‌ ಎಂದರೇನು?
 

ಎಥಿಕಲ್‌ ವಿಲ್‌ ಅಥವಾ ಲೆಗಸಿ ಲೆಟರ್‌ ಎಂದರೇನು?

ನಿಮ್ಮ ಸ್ವತ್ತುಗಳು ಮತ್ತು ಆಸ್ತಿಯನ್ನು ವರ್ಗಾವಣೆ ಮಾಡಲು ಮುಖ್ಯ ಸಾಧನವಾಗಿರುವ ಕಾನೂನು ವಿಲ್‌ಗಿಂತ ಭಿನ್ನವಾಗಿ ಈ ಎಥಿಕಲ್‌ ವಿಲ್‌ ಆಗಿದೆ. ಇದು ಒಂದು ವಿಶೇಷವಾದ ಪತ್ರವಾಗಿದೆ. ಇದನ್ನು ಲೆಗಸಿ ಲೆಟರ್‌ ಅಥವಾ ಶಾಶ್ವತ ಪತ್ರ ಎಂದು ಕೂಡಾ ಕರೆಯಲಾಗುತ್ತದೆ. ಈ ವಿಲ್‌ ಮೂಲಕ ವೈಯಕ್ತಿಕ ಮೌಲ್ಯಗಳು, ಮಾರ್ಗದರ್ಶಿ ತತ್ವಗಳನ್ನು ರವಾನಿಸುವ ಗುರಿ ಇದೆ. ಈ ಲೆಗಸಿ ಲೆಟರ್‌ ಮೂಲಕ ನಿಮ್ಮ ಜೀವನದ ಅನುಭವಗಳು, ನೀವು ಜೀವನದಲ್ಲಿ ಕಲಿತ ಪಾಠ, ನಿಮ್ಮ ಜೀವನದ ಯಶಸ್ಸಿಗೆ ಕಾರಣ, ನಿಮ್ಮ ಪ್ರಮುಖ ನಂಬಿಕೆಗಳು ಜೀವನದ ಮೌಲ್ಯಗಳನ್ನು ನಿಮ್ಮ ಮುಂದಿನ ಪೀಳಿಗೆಗೆ ಅಥವಾ ಕುಟುಂಬಕ್ಕೆ ತಿಳಿಸಬಹುದು. ಇದನ್ನು ತಮ್ಮ ಪ್ರೀತಿ ಪಾತ್ರರು ನಮ್ಮನ್ನು ಅಗಲಿದ ಬಳಿಕ ನೆನೆಪಿಗಾಗಿ ಇರಿಸಿಕೊಳ್ಳುವುದು ಕೂಡಾ ಈ ಹಿಂದೆ ನಡೆಯುತ್ತಿತ್ತು.

2021: ಭಾರತದಲ್ಲಿ ಮುಂಬರುವ ಐಪಿಒಗಳು2021: ಭಾರತದಲ್ಲಿ ಮುಂಬರುವ ಐಪಿಒಗಳು

 ನೀವು ಯಾವಾಗ ಎಥಿಕಲ್‌ ವಿಲ್ ಬರೆಯಲು ಆರಂಭ ಮಾಡಬೇಕು?

ನೀವು ಯಾವಾಗ ಎಥಿಕಲ್‌ ವಿಲ್ ಬರೆಯಲು ಆರಂಭ ಮಾಡಬೇಕು?

ನೀವು ಸಾಮಾನ್ಯವಾಗಿ ನಿಮ್ಮ ವೃತ್ತಿ ಜೀವನದಲ್ಲಿ ನಿವೃತ್ತಿ ಹೊಂದಿದ ಬಳಿಕ ಈ ಎಥಿಕಲ್‌ ವಿಲ್‌ನ ಕಾರ್ಯ ಆರಂಭ ಮಾಡಬಹುದು. ಯಾಕೆಂದರೆ ಈ ಸಂದರ್ಭದಲ್ಲಿ ನೀವು ಜೀವನದ ಹಲವಾರು ಘಟಕಗಳನ್ನು ಕಳೆದು ಬಂದಿರುತ್ತೀರಿ. ನಿಮಗೆ ನಿವೃತ್ತಿ ಆಗುವಷ್ಟರಲ್ಲಿ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ನೋಡಿರುತ್ತೀರಿ. ನಿಮಗೆ ಸಾಕಷ್ಟು ಅನುಭವ ಇರುತ್ತದೆ. ಈಗ ಎಥಿಕಲ್‌ ವಿಲ್‌ಗೆ ಯಾವುದೇ ಕಾನೂನು ಪ್ರಾಮುಖ್ಯತೆ ಇಲ್ಲ. ಈ ಎಥಿಕಲ್‌ ವಿಲ್‌ ಮೂಲಕ ನೀವು ಆಸ್ತಿಯನ್ನು ಯಾರಿಗೂ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಅಥವಾ ಅದು ಕಾನೂನು ಬದ್ಧವಾಗಿರುವುದಿಲ್ಲ. ಇದನ್ನು ನೀವು ಡೈರಿ, ಪತ್ರ, ಪವರ್ ಪಾಯಿಂಟ್ ಪ್ರೆಸೆಂಟೇಶನ್, ಕೊಲಾಜ್, ಆಡಿಯೋ ಅಥವಾ ವಿಡಿಯೋ ಸಂದೇಶದ ಮೂಲಕ ರವಾನೆ ಮಾಡಬಹುದು. ಇಲ್ಲಿ ಮುಖ್ಯ ವಿಷಯ ನಿಮ್ಮ ಸಂದೇಶವನ್ನು ತಲುಪಿಸುವುದು.

ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಗೆ ಇ-ನಾಮಿನೇಷನ್‌ ಸಲ್ಲಿಸುವುದು ಹೇಗೆ?ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಗೆ ಇ-ನಾಮಿನೇಷನ್‌ ಸಲ್ಲಿಸುವುದು ಹೇಗೆ?

 ಎಥಿಕಲ್‌ ವಿಲ್ ಬರೆಯುವುದು ಹೇಗೆ?

ಎಥಿಕಲ್‌ ವಿಲ್ ಬರೆಯುವುದು ಹೇಗೆ?

ನೀವು ಎಥಿಕಲ್‌ ವಿಲ್ ಬರೆಯುವ ಮುನ್ನ ನಿಮ್ಮ ಜೀವನದ ಪ್ರಮುಖ ಘಟ್ಟ, ಘಟನೆಗಳು ಹಾಗೂ ಅನುಭವಗಳ ಬಗ್ಗೆ ನೆನಪಿಸಿಕೊಳ್ಳಿ. ನೀವು ನಿಮ್ಮ ಕುಟುಂಬದೊಂದಿಗೆ ಹಂಚಲು ಬಯಸುವ ನಿಮ್ಮ ಜೀವನದ ಸುಂದರ ಕ್ಷಣ ಯಾವುದು?, ನಿಮ್ಮ ಜೀವನದ ಪ್ರಮುಖ ಸವಾಲಾಗಿ ಎದುರಾದ ಸಂದರ್ಭ ಯಾವುದು?, ನೀವು ನಿಮ್ಮ ಕುಟುಂಬದ ಮೇಲೆ ಯಾವ ಭರವಸೆಯನ್ನು ಹೊಂದಿದ್ದೀರಿ?, ನಿಮ್ಮ ಮುಂದಿನ ಹೇಗೆ ಇರಬೇಕು ಎಂದು ನೀವು ಬಯಸುತ್ತೀರಿ?, ಇವೆಲ್ಲವನ್ನು ನೀವು ಮೊದಲು ಪಟ್ಟಿ ಮಾಡಿಕೊಂಡು ಬಳಿಕ ಎಥಿಕಲ್‌ ವಿಲ್ ಬರೆಯಲು ಆರಂಭ ಮಾಡಿ. ಪ್ರೀತಿ ಹಾಗೂ ಪ್ರೋತ್ಸಾಹದ ಬಗ್ಗೆ ಹೆಚ್ಚು ಒತ್ತು ನೀಡಿ ಬರೆಯಿರಿ. ನಿಮ್ಮ ಕುಟುಂಬಸ್ಥರಿಗೆ ನೋವುಂಟು ಮಾಡುವಂತಹ ಮಾತುಗಳನ್ನು ಉಲ್ಲೇಖ ಮಾಡುವುದನ್ನು ತಪ್ಪಿಸಿ. ಇನ್ನು ನೀವು ಕ್ಷಮೆ, ಬೇಸರ, ಕುಟುಂಬದ ರಹಸ್ಯಗಳ ಬಗ್ಗೆ ಅತೀ ಹೆಚ್ಚು ಜಾಗರೂಕರಾಗಿ ಬರೆಯುವುದು ಉತ್ತಮ. ನೀವು ನಿಮ್ಮ ಕೆಟ್ಟ ಅನುಭವಗಳ ಬಗ್ಗೆ ಬರೆಯಬೇಕು ಎಂದು ಬಯಸಿದರೆ, ಇದನ್ನು ನಿಮ್ಮ ಕುಟುಂಬಕ್ಕೆ ಉದಾಹರಣೆಯಾಗಿ ಉಲ್ಲೇಖ ಮಾಡಿ.

ಇನ್ನು ನೀವು ಎಥಿಕಲ್‌ ವಿಲ್ ಬರೆಯುವ ಮೂಲಕ ಲೀಗಲ್‌ ವಿಲ್‌ ಅನ್ನು ಬರೆಯದಿದ್ದರೆ ಏನು ಆಗುವುದಿಲ್ಲ ಎಂದು ಕೊಳ್ಳಬೇಡಿ. ನಿಮ್ಮ ಮರಣದ ಬಗ್ಗೆ ಸಂಪತ್ತಿನ ಹಂಚಿಕೆಯ ಬಗ್ಗೆ ಉಲ್ಲೇಖ ಮಾಡಿರುವ ಲೀಗಲ್‌ ವಿಲ್‌ ಅತೀ ಮುಖ್ಯವಾಗಿದೆ.

English summary

Want to pass on values in addition to wealth? Write an ethical Will, Explained in Kannada

Want to pass on values in addition to wealth? Write an ethical Will, How to Write will, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X