ಸದಾ ಬಡ್ಡಿ ನೀಡುವ ಪರ್ಪೆಚುಯಲ್ ಬಾಂಡ್ !

ಹೆಸರೇ ಸೂಚಿಸುವಂತೆ ಇದು ನಿಗದಿತ ದಿನದಲ್ಲಿ ಕೊನೆಗೊಳ್ಳದ ಬಾಂಡ್ . ಸಾಮಾನ್ಯವಾಗಿ ಬಾಂಡ್ ಗಳು ಸಮಯದ ಮಿತಿಯಲ್ಲಿ ವಿತರಿಸಲ್ಪಡುತ್ತದೆ . ಅಂದರೆ ಹತ್ತು ವರ್ಷದ ಅವಧಿ ಅಥವಾ 15 ಹೀಗೆ . ಈ ಸಮಯದ ಮುಕ್ತಾಯದ ನಂತರ ಬಾಂಡ್ ವಿತರಿಸಿದ ಸಂಸ್ಥೆ ಅಥವಾ ಸರಕಾರ ನಿಗದಿತ ಮೊತ್ತ ವಾಪಸ್ಸು ಕೊಟ್ಟು ಬಾಂಡ್ ನನ್ನ ಮರಳಿ ಖರೀದಿ ಮಾಡುತ್ತದೆ . ಆ

ದರೆ ಪರ್ಪೆಚುಯಲ್ ಬಾಂಡ್ ವಿಷಯದಲ್ಲಿ ಮಾತ್ರ ಹೀಗಿಲ್ಲ . ಇಲ್ಲಿ ನಿಗದಿತ ಸಮಯವಿಲ್ಲ . ಹೌದು ಇದೊಂದು ಹಣ ಮರು ಪಾವತಿಸಲು ಅಥವಾ ಬಾಂಡ್ ಮರಳಿ ಪಡೆಯಲು ಸಮಯದ ಕೊನೆಯಿಲ್ಲದ ಬಾಂಡ್ . ಸದಾ(ಫಾರ್ ಎವರ್ ) ಸಾಲದ ಮೇಲಿನ ಬಡ್ಡಿಯನ್ನ ಕೊಡುತ್ತಲೇ ಇರುತ್ತದೆ .

ಇದು ಈಕ್ವಿಟಿ ಯಂತೆ ಕಾರ್ಯನಿರ್ವಹಿಸುತ್ತದೆ . ಆದರೂ ಇದನ್ನ ಬಾಂಡ್ ಎಂದು ಕರೆಯಲು ಕಾರಣ ಮುಕ್ಕಾಲು ಪಾಲು ಇಂತ ಪರ್ಪೆಚುಯಲ್ ಬಾಂಡ್ ಗಳು 'ಕಾಲ್ ಪ್ರಾವಿಷನ್ ' ಅಡಿಯಲ್ಲಿ ವಿತರಣೆ ಆಗಿರುತ್ತದೆ . ಅಂದರೆ ಬಾಂಡ್ ವಿತರಿಸಿದ ಸಂಸ್ಥೆ ಅಥವಾ ಸರಕಾರ ಸಾಲವನ್ನ ಮರಳಿ ಕೊಡಲು ಯಾವುದೇ ನಿಗದಿತ ಸಮಯ ಇಲ್ಲದಿದ್ದರೂ , ಮುಂದೊಮ್ಮೆ ಸಂಸ್ಥೆ ಅಥವಾ ಸರಕಾರದ ಬಳಿ ಹೆಚ್ಚಿನ ಹಣದ ಹರಿವು ಕಂಡು ಬಂದಲ್ಲಿ ಅವಕ್ಕೆ ಬಾಂಡ್ ಮರು ಖರೀದಿ ಮಾಡುವ ಅವಕಾಶವಿರುತ್ತದೆ .ಹೀಗಾಗಿ ಇವನ್ನ ಬಾಂಡ್ ಎಂದೇ ವರ್ಗಿಕರಿಸಲಾಗಿದೆ.

ಸದಾ ಬಡ್ಡಿ ನೀಡುವ ಪರ್ಪೆಚುಯಲ್ ಬಾಂಡ್ !

ಒಂದು ಉದಾಹರಣೆ ಇದನ್ನ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ . ನಮ್ಮ ವಿಜಯಾ ಬ್ಯಾಂಕ್ ಪರ್ಪೆಚುಯಲ್ ಬಾಂಡ್ ಅನ್ನು ವಿತರಿಸುತ್ತದೆ ಎಂದುಕೊಳ್ಳಿ ಅದನ್ನ ರಾಮ ಎನ್ನುವನು ಕೊಂಡರೆ ವಿಜಯಾ ಬ್ಯಾಂಕ್ ಈ ಸಾಲದ ಮೇಲೆ ಬಡ್ಡಿ ಕೊಡುತ್ತಿದ್ದರೆ ಸಾಕು . ಸಾಲದ ಮೊತ್ತವನ್ನ 5/10 ಅಥವಾ 15 ವರ್ಷದಲ್ಲಿ ಮರಳಿ ಕೊಡಬೇಕು ಎನ್ನುವ ಯಾವುದೇ ತೆರೆನಾದ ಒತ್ತಡ ಬ್ಯಾಂಕ್ ಮೇಲಿರುವುದಿಲ್ಲ . ಆದರೆ ಆಕಸ್ಮಾತ್ ವಿಜಯ ಬ್ಯಾಂಕ್ ಬಳಿ 15 ಅಥವಾ 20 ವರ್ಷದ ನಂತರ ತನ್ನ ವ್ಯಾಪಾರಕ್ಕೆ ಬೇಕಾದ ಹಣವನ್ನ ಮೀರಿ ಹಣದ ಲಭ್ಯತೆ ಇದ್ದಲ್ಲಿ ಅಂದು ಅವರು ರಾಮನ ಸಾಲದ ಹಣವನ್ನ ವಾಪಸ್ಸು ಕೊಟ್ಟು ತಮ್ಮ ಬಾಂಡ್ ಮರಳಿ ಪಡೆಯಬಹುದು .

ಇತ್ತೀಚಿಗನ ಅಂಕಿ-ಅಂಶದ ಪ್ರಕಾರ ತಿಂಗಳ ಸರಾಸರಿ ವಹಿವಾಟು ಈ ಬಾಂಡ್‌ಗಳಲ್ಲಿ 150 ರಿಂದ 200 ಕೋಟಿ ರೂಪಾಯಿ . ಇದೇನು ದೊಡ್ಡ ಮೊತ್ತವಲ್ಲ . ಆದರೆ ಇವುಗಳು ಕೊಡುತ್ತಿರುವ ಲಾಭಾಂಶ (ಅಂದರೆ ಬಡ್ಡಿ ಮತ್ತು ಮಾರುಕಟ್ಟೆಯಲ್ಲಿ ಏರಿದ ಬಾಂಡ್ ಬೆಲೆ ಎರಡನ್ನೂ ಕೂಡಿ) 15 ರಿಂದ 17 ಪ್ರತಿಶತದಷ್ಟಿದೆ. ಬರಿ ಬಡ್ಡಿಯ ಲೆಕ್ಕಾಚಾರವನ್ನ ತೆಗೆದುಕೊಂಡರೆ 2 ರಿಂದ 9 ರ ವರೆಗೆ ವಿವಿಧ ಸಂಸ್ಥೆಗಳು ನೀಡುತ್ತಿವೆ. ಬ್ಯಾಂಕ್ ಬಡ್ಡಿ ದರ 5.5 ಪ್ರತಿಶತಕ್ಕೆ ಕುಸಿದಿರುವ ಈ ದಿನಗಳಲ್ಲಿ ಇದೊಂದು ಅತ್ಯುತ್ತಮ ಹೂಡಿಕೆ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+