For Quick Alerts
ALLOW NOTIFICATIONS  
For Daily Alerts

ಮನರಂಜನೆಗೂ ತೆರಿಗೆ: ಯಾವ ರಾಜ್ಯದಲ್ಲಿ ಎಷ್ಟಿದೆ, ಹೇಗೆ ಅನ್ವಯ?

|

ಮನರಂಜನೆ ಎಂಬುವುದು ನಮ್ಮ ಜೀವನದ ಬಹು ಮುಖ್ಯವಾದ ಭಾಗವಾಗಿದೆ. ಹಾಗೆಯೇ ಯಾವುದೇ ಸರ್ಕಾರದ ಪ್ರಮುಖ ಒಂದು ಭಾಗ ತೆರಿಗೆಯಾಗಿದೆ. ಆದಾಯ ತೆರಿಗೆ,ಇತರೆ ತೆರಿಗೆಗಳು ಇರುವಂತೆ ಈ ಮನರಂಜನೆಗೂ ತೆರಿಗೆಯನ್ನು ಸರ್ಕಾರವು ವಿಧಿಸುತ್ತದೆ. ಸಿನಿಮಾ ಟಿಕೆಟ್, ವಾಣಿಜ್ಯ ಕಾರ್ಯಕ್ರಮಗಳು, ಖಾಸಗಿಯಾಗಿ ಹಬ್ಬ ಆಚರಣೆ ಮಾಡುವುದಕ್ಕೆ ಸರ್ಕಾರ ವಿಧಿಸುವ ತೆರಿಗೆಯೇ ಮನರಂಜನೆ ತೆರಿಗೆಯಾಗಿದೆ.

 

ಭಾರತದಲ್ಲಿ ಓರ್ವ ವ್ಯಕ್ತಿ ಅಥವಾ ಒಂದು ಸಂಸ್ಥೆ ಸಂಪಾದನೆ ಮಾಡಿದ ಆದಾಯದ ಮೇಲೆಯೂ ತೆರಿಗೆಯನ್ನು ವಿಧಿಸಲಾಗುತ್ತದೆ. ಸರಕು ಮತ್ತು ಸೇವೆ ತೆರಿಗೆ (ಜಿಎಸ್‌ಟಿ) ಆರಂಭವಾದ ಬಳಿಕ ಈ ಮನರಂಜನೆ ತೆರಿಗೆ ಅನ್ವಯವಾಗುತ್ತಿಲ್ಲ. ಆದರೆ ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ.

2022ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಧಿಕ ಹಣ ಬಾಚಿದ ಟಾಪ್ 5 ಭಾರತೀಯ ಸಿನೆಮಾಗಳು

ನಾವು ಖರೀದಿ ಮಾಡುವ ಟಿಕೆಟ್‌ಗೆ ನಾವು ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಸಿನಿಮಾ ಟಿಕೆಟ್‌ಗಳಿಗೆ ಸುಮಾರು ಶೇಕಡ 28ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಹಾಗಾದರೆ ಮನರಂಜನೆ ತೆರಿಗೆಯು ಯಾವುದಕ್ಕೆಲ್ಲ ಅನ್ವಯವಾಗಲಿದೆ, ಯಾವ ರಾಜ್ಯದಲ್ಲಿ ಎಷ್ಟು ತೆರಿಗೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಮನರಂಜನೆ ತೆರಿಗೆ ಯಾವುದಕ್ಕೆಲ್ಲಾ ಅನ್ವಯ?

ಮನರಂಜನೆ ತೆರಿಗೆ ಯಾವುದಕ್ಕೆಲ್ಲಾ ಅನ್ವಯ?

* ನಾವು ಖರೀದಿ ಮಾಡುವ ಸಿನಿಮಾ ಟಿಕೆಟ್‌ಗಳ ಮೇಲೆ ಮನರಂಜನೆ ತೆರಿಗೆಯನ್ನು ವಿಧಿಸಲಾಗುತ್ತದೆ.
* ಈ ತೆರಿಗೆಯನ್ನು ದೇಶದ ಎಲ್ಲಾ ಮೂಲೆಯಲ್ಲಿಯೂ ವಿಧಿಸಲಾಗುತ್ತದೆ.
* ತೆರಿಗೆಯನ್ನು ಸಂಗ್ರಹ ಮಾಡುವ ಹೊಣೆಯು ಆಯಾ ಅಧಿಕಾರಿಗಳಿಗೆ ಇರಲಿದೆ.
* ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ತೆರಿಗೆ ಇರಲಿದೆ
* ಮನರಂಜನೆ ತೆರಿಗೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯು ಭಾರತದ ಸಂವಿಧಾನದ 246ನೇ ವಿಧಿಯಲ್ಲಿ ಇದೆ
* ಟಾಟಾ ಸ್ಕೈ, ಏರ್‌ಟೆಲ್ ಟಿವಿ, ಡಿಶ್ ಟಿವಿಯಂತಹ ಸೇವೆಗಳಿಗೆ ಇನ್ನೂ ಅಧಿಕ ತೆರಿಗೆಯನ್ನು ವಿಧಿಸಲಾಗುತ್ತದೆ
* ಎಕ್ಸಿಬೀಷನ್ ಅಥವಾ ಪ್ರದರ್ಶನ, ಗೇಮಿಂಗ್, ಸೆಲೆಬ್ರೆಟಿಗಳ ಸ್ಟೇಜ್ ಶೋ, ಥಿಯೇಟರ್ ಶೋ, ವಿಡಿಯೋ ಗೇಮ್ಸ್, ಕ್ರೀಡೆ ಸಂಬಂಧಿತ ಚಟುವಟಿಕೆ, ಉತ್ಸವದಲ್ಲಿನ ಆಟಗಳಿಗೆ ಕೂಡಾ ತೆರಿಗೆ ಅನ್ವಯವಾಗಲಿದೆ.
* ಭಾರತದಲ್ಲಿ ಬ್ರಿಟಿಷ್ ಆಡಳಿತ ಸಂದರ್ಭದಲ್ಲಿ ಈ ತೆರಿಗೆ ಆರಂಭವಾಗಿದೆ. ಈಗಲೂ ಜಾರಿಯಲ್ಲಿದೆ

 ದೇಶದ ವಿವಿಧ ಭಾಗಗಳಲ್ಲಿ ಮನರಂಜನೆ ತೆರಿಗೆ ಎಷ್ಟಿದೆ?
 

ದೇಶದ ವಿವಿಧ ಭಾಗಗಳಲ್ಲಿ ಮನರಂಜನೆ ತೆರಿಗೆ ಎಷ್ಟಿದೆ?

ಮನರಂಜನೆ ತೆರಿಗೆಯು ರಾಜ್ಯಗಳಲ್ಲಿ ಬೇರೆ ಬೇರೆ ರೀತಿ ಇದೆ. ಆಯಾ ರಾಜ್ಯ ಸರ್ಕಾರದ ಅಧೀನಕ್ಕೆ ಈ ತೆರಿಗೆ ಒಳಪಡುತ್ತದೆ. ಯಾವ ರಾಜ್ಯದಲ್ಲಿ ಎಷ್ಟು ಶೇಕಡ ತೆರಿಗೆ ಇದೆ ಎಂದು ಈ ಕೆಳಗೆ ಪಟ್ಟಿ ನೀಡಲಾಗಿದೆ.

ಉತ್ತರ ಪ್ರದೇಶ: ಶೇಕಡ 60
ಬಿಹಾರ: ಶೇಕಡ 50
ಮಹಾರಾಷ್ಟ್ರ: ಶೇಕಡ 45
ಕರ್ನಾಟಕ: ಶೇಕಡ 30
ಕೇರಳ: ಶೇಕಡ 30
ಪಶ್ಚಿಮ ಬಂಗಾಳ: ಶೇಕಡ 30
ಹರಿಯಾಣ: ಶೇಕಡ 30
ಒಡಿಶಾ: ಶೇಕಡ 25
ದೆಹಲಿ: ಶೇಕಡ 20
ಮಧ್ಯಪ್ರದೇಶ: ಶೇಕಡ 20
ಗುಜರಾತ್: ಶೇಕಡ 20
ಆಂಧ್ರಪ್ರದೇಶ: ಶೇಕಡ 20
ಅಸ್ಸಾಂ: 20 ರೂಪಾಯಿಗಿಂತ ಕೆಳಗಿನ ಟಿಕೆಟ್‌ಗೆ ಶೇ.15 ತೆರಿಗೆ, 20 ರೂಪಾಯಿಗಿಂತ ಅಧಿಕ ಟಿಕೆಟ್‌ಗೆ ಶೇ. 20 ತೆರಿಗೆ
ತಮಿಳುನಾಡು: ಶೇಕಡ 15 (ಎಲ್ಲಾ ತಮಿಳು ಚಿತ್ರಗಳು ತೆರಿಗೆಮುಕ್ತ)
ಜಾರ್ಖಂಡ್: ಶೇಕಡ 10
ರಾಜಸ್ಥಾನ: ಯಾವುದೇ ತೆರಿಗೆ ಇಲ್ಲ
ಜಮ್ಮು & ಕಾಶ್ಮೀರ: ಯಾವುದೇ ತೆರಿಗೆ ಇಲ್ಲ
ಹಿಮಾಚಲ ಪ್ರದೇಶ: ಯಾವುದೇ ತೆರಿಗೆ ಇಲ್ಲ
ಪಂಜಾಬ್: ಯಾವುದೇ ತೆರಿಗೆ ಇಲ್ಲ

 ಮನರಂಜನೆ ಉದ್ಯಮದ ಮೇಲೆ ಜಿಎಸ್‌ಟಿ ಪರಿಣಾಮವೇನು?

ಮನರಂಜನೆ ಉದ್ಯಮದ ಮೇಲೆ ಜಿಎಸ್‌ಟಿ ಪರಿಣಾಮವೇನು?

ಜಿಎಸ್‌ಟಿ ಜಾರಿಗೆ ಬಂದ ಬಳಿಕ ಅಂದರೆ ಜುಲೈ 2017ರಿಂದ ಮನರಂಜನೆ ತೆರಿಗೆಯಲ್ಲಿ ಬದಲಾವಣೆಯಾಗಿದೆ.

* ಸರ್ಕಸ್, ಥಿಯೇಟರ್, ನಾಟಕ, ಜಾನಪದ ನೃತ್ಯ ಸೇರಿ ಭಾರತದ ಕ್ಲಾಸಿಕಲ್ ನೃತ್ಯಗಳಿಗೆ ಶೇಕಡ 18ರಷ್ಟು ಜಿಎಸ್‌ಟಿ
* ಸಿನಿಮೋತ್ಸವ, ಸಿನಿಮಾ, ಮನರಂಜನೆ ಆಟಗಳ ಪಾರ್ಕ್, ರೇಸ್, ಕ್ಯಾಸಿನೋ, ಐಪಿಎಲ್‌ನಂತಹ ಕ್ರೀಡಾ ಚಟುವಟಿಕೆಗೆ ಶೇಕಡ 28ರಷ್ಟು ಜಿಎಸ್‌ಟಿ

ನಾವು ಮಲ್ಟಿಪ್ಲೆಕ್ಸ್ ಅಥವಾ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಾದರೆ ಆಹಾರ, ಪಾನೀಯಕ್ಕೆ ಶೇಕಡ 20.5ರಷ್ಟು ವ್ಯಾಟ್ ಹೇರಲಾಗುತ್ತದೆ. ಟಿಕೆಟ್ ಮೇಲೆ ಶೇಕಡ 30ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಇವೆಲ್ಲವೂ ವ್ಯಕ್ತಿ ಯಾವ ರಾಜ್ಯದಲ್ಲಿ ಸಿನಿಮಾ ನೋಡುತ್ತಿದ್ದಾನೆ ಎಂಬುವುದರ ಮೇಲೆ ನಿರ್ಧಾರವಾಗುತ್ತದೆ.

ಸಿನಿಮಾ ಟಿಕೆಟ್‌ಗಳ ಮೇಲೆ ಶೇಕಡ 28ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆಹಾರ, ಪಾನೀಯಗಳಿಗೆ ಶೇಕಡ 5 - 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ಮನರಂಜನೆಯ ಮೇಲೆ ವ್ಯಾಟ್ ಹಾಗೂ ಸೇವಾ ತೆರಿಗೆಗಿಂತ ಕಡಿಮೆ ಕಡಿಮೆ ಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ ಇವೆಲ್ಲವೂ ರಾಜ್ಯಗಳ ಮೇಲೆ ನಿರ್ಧರಿತವಾಗಿರುತ್ತದೆ. ಕೆಲವು ರಾಜ್ಯದಲ್ಲಿ ಮನರಂಜನಾ ತೆರಿಗೆ ಅಧಿಕವಾದರೆ, ಇನ್ನು ಕೆಲವೆಡೆ ತೆರಿಗೆಯೇ ಇಲ್ಲ.

English summary

What is Entertainment Tax: Check Features, State wise Tax Rates and Other Details in Kannada

Entertainment Tax is levied by the government of India on circus, movie tickets, theater, drama, race, sports events etc. Know more about entertainment tax features, rate of tax from different states in India and other details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X