For Quick Alerts
ALLOW NOTIFICATIONS  
For Daily Alerts

ಸೈಬರ್ ದಾಳಿಯಿಂದ ನಿಮ್ಮ ಡೇಟಾ ಸೋರಿಕೆಯಾಗಿದೆಯೇ? ತಕ್ಷಣವೇ ಹೀಗೆ ಮಾಡಿ!

|

ನೀವು ಇತ್ತೀಚಿನ ದಿನಗಳಲ್ಲಿ ಸೈಬರ್ ದಾಳಿಯಿಂದಾಗಿ ಡೇಟಾ ಸೋರಿಕೆಯಾಗಿದೆ ಎಂಬ ಸುದ್ದಿಗಳನ್ನ ಪದೇ ಪದೇ ಓದಿರ್ತೀರಿ, ಕೇಳಿರ್ತೀರಿ. ಅದ್ರಲ್ಲೂ ಇತ್ತೀಚೆಗಂತೂ ದೊಡ್ಡ ದೊಡ್ಡ ಸಂಸ್ಥೆಗಳೇ ಸೈಬರ್ ದಾಳಿಗೆ ಒಳಗಾಗಿದ್ದು ಇದೆ.

ಸೈಬರ್‌ ದಾಳಿಗೆ ಖಾಸಗಿ ಕಂಪನಿ, ಸರ್ಕಾರಿ ಕಂಪನಿ ಎಂಬ ಯಾವುದೇ ವ್ಯತ್ಯಾಸವಿಲ್ಲ, ಹ್ಯಾಕರ್ಸ್‌ ದೊಡ್ಡ ದೊಡ್ಡ ಸಂಸ್ಥೆಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸರ್ಕಾರಿ ಸ್ವಾಮ್ಯದ ಏರ್‌ಇಂಡಿಯಾದ ಮೇಲೆ ಬೃಹತ್ ಸೈಬರ್ ದಾಳಿ ನಡೆದಿದ್ದು, ಸುಮಾರು 45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡಲಾಗಿದೆ.

ಈ ಡೇಟಾ ಸೋರಿಕೆಯಲ್ಲಿ ಪ್ರಯಾಣಿಕರ ಹೆಸರು, ಹುಟ್ಟಿದ ದಿನಾಂಕ, ಅಡ್ರೆಸ್‌, ಪಾಸ್‌ಪೋರ್ಟ್‌ ಮಾಹಿತಿ, ಟೆಕೆಟ್ ಮಾಹಿತಿ, ಕ್ರೆಡಿಟ್-ಡೆಬಿಟ್ ಕಾರ್ಡ್ ಡೇಟಾ ಸೇರಿದೆ.

ಇನ್ನೂ ಇತ್ತೀಚೆಗೆ ಡಾಮಿನೋಸ್ ಮೇಲೂ ಸೈಬರ್ ದಾಳಿ ಆಗಿ ಡೇಟಾ ಸೋರಿಕೆಯಾಗಿತ್ತು. ಗ್ರಾಹಕರ ಖಾಸಗಿ ಮಾಹಿತಿಗಳು ಸಾರ್ವಜನಿಕವಾಗಿ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಡೇಟಾ ಪರಿಶೀಲಿಸುವ ಲಿಂಕ್ ಕೂಡ ನೀಡಲಾಗಿತ್ತು. ಅದೇ ರೀತಿಯಲ್ಲಿ ಬಿಗ್‌ಬಾಸ್ಕೆಟ್ ಕೂಡ ಈ ಸೈಬರ್ ದಾಳಿಯಿಂದ ಹೊರತಾಗಿಲ್ಲ.

ಹೀಗೆ ಸೈಬರ್‌ ದಾಳಿಗೊಳಗಾದಾದ ಆ ಸಂಸ್ಥೆಯ ಗ್ರಾಹಕರು, ಪ್ರಯಾಣಿಕರು ನೀವಾಗಿದ್ರೆ, ನಿಮ್ಮ ಖಾಸಗಿ ಮಾಹಿತಿಯು ಸೋರಿಕೆ ಆಗಿದೆಯೇ ಎಂದು ಪರಿಶೀಲಿಸುವುದರ ಜೊತೆಗೆ ತಕ್ಷಣವೇ ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ಈ ಕೆಳಗಿದೆ.

ಡೇಟಾ ಸೋರಿಕೆ ಕುರಿತು ತಿಳಿದಾಗ ಈ ವೆಬ್‌ಸೈಟ್‌ಗೆ ಭೇಟಿ ನೀಡಿ

ಡೇಟಾ ಸೋರಿಕೆ ಕುರಿತು ತಿಳಿದಾಗ ಈ ವೆಬ್‌ಸೈಟ್‌ಗೆ ಭೇಟಿ ನೀಡಿ

ಡೇಟಾ ಸೋರಿಕೆ ಕುರಿತು ನೀವು ಸುದ್ದಿಯನ್ನು ಓದಿದಾಗಲೆಲ್ಲಾ, ಮೊದಲು haveibeenpwned.com ನಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು. ಹ್ಯಾಕರ್ಸ್‌ ಮಾಡಿರುವ ಡೇಟಾ ಸೋರಿಕೆ ಕುರಿತಾದ ವಿವರಗಳನ್ನು ನೀವು ಇಲ್ಲಿ ಪಡೆಯಬಹುದು.

ಮೊದಲು ಪಾಸ್‌ವರ್ಡ್‌ ಬದಲಾಯಿಸಿ

ಮೊದಲು ಪಾಸ್‌ವರ್ಡ್‌ ಬದಲಾಯಿಸಿ

ನಿಮ್ಮ ಖಾಸಗಿ ಮಾಹಿತಿಯು ಸೋರಿಗೆ ಆಗಿದೆಯಲ್ಲಾ ಎಂದು ಚಿಂತಿಸುತ್ತಾ ಕೂರುವ ಮೊದಲು ನೀವು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ ನಿಮ್ಮ ಪಾಸ್‌ವರ್ಡ್‌ ಅನ್ನು ಬದಲಾಯಿಸುವುದು.
ಕೇವಲ ಸೈಬರ್ ದಾಳಿಯಾದ ಸಂಸ್ಥೆಯ ಕುರಿತಾದ ವೆಬ್‌ಸೈಟ್‌ ಅಥವಾ ಆ್ಯಪ್‌ಗಳಲ್ಲಷ್ಟೇ ನಿಮ್ಮ ಪಾಸ್‌ವರ್ಡ್‌ ಬದಲಾಯಿಸಿದರೆ ಸಾಲದು, ನೀವು ಅದೇ ರೀತಿಯಾದ ಪಾಸ್‌ವರ್ಡ್‌ ಅನ್ನು ಬೇರೆ ಕಡೆಯಲ್ಲಿಯೂ ಎಲ್ಲಾದರೂ ಬಳಸಿದ್ದರೆ, ಎಲ್ಲವನ್ನೂ ಬದಲಾಯಿಸಿಬಿಡಿ.

ಏಕೆಂದರೆ ನಿಮ್ಮ ಲಾಗಿನ್ ವಿವರಗಳನ್ನು ಪಡೆಯಲು ಹ್ಯಾಕರ್ಸ್‌ಗಳು ಇತರೆ ವೆಬ್‌ಸೈಟ್‌ಗಳಲ್ಲೂ ನಿಮ್ಮ ಪಾಸ್‌ವರ್ಡ್‌ ಬಳಸುವ ಸಾಧ್ಯತೆಯಿದೆ.

 

ಒಂದೇ ರೀತಿಯ ಪಾಸ್‌ವರ್ಡ್‌ ಕೊಡಬಹುದೇ?

ಒಂದೇ ರೀತಿಯ ಪಾಸ್‌ವರ್ಡ್‌ ಕೊಡಬಹುದೇ?

ಪ್ರತಿ ಸೇವೆಗೂ ನೀವು ವಿಭಿನ್ನ ರೀತಿಯ ಪಾಸ್‌ವರ್ಡ್‌ಗಳನ್ನು ಕೊಡುವುದು ಕಷ್ಟವಾಗಬಹುದು. ಏಕೆಂದರೆ ಪ್ರತಿ ಪಾಸ್‌ವರ್ಡ್‌ ಅನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ ಬಲವಾದ ಪಾಸ್‌ವರ್ಡ್‌ ಕೊಡಲು ಬಯಸಿದರೆ ಮತ್ತು ನಿಮಗೆ ನೆನಪಿಟ್ಟುಕೊಳ್ಳಲು ಸಹಾಯ ಮಾಡುವ ಅನೇಕ ಸೇವೆಗಳು ಲಭ್ಯವಿದೆ. ಉದಾಹರಣೆಗೆ ಲಾಸ್ಟ್‌ಪಾಸ್ ಮತ್ತು 1ಪಾಸ್‌ವರ್ಡ್‌ನಂತಹ ಸೇವೆಗಳ ಸಲಹೆ ಮೂಲಕ ಬಲವಾದ ಪಾಸ್‌ವರ್ಡ್‌ ಕೊಡಬಹುದು.

ಫ್ಯಾಕ್ಟರ್ ಅಥೆಂಟಿಕೇಶನ್

ಫ್ಯಾಕ್ಟರ್ ಅಥೆಂಟಿಕೇಶನ್

ಸಾಧ್ಯವಾದರೆ ನೀವು ಎಲ್ಲಾ ಸೇವೆಗಳಿಗೆ ಲಾಗಿನ್ ಆಗುವಾಗ ಎರಡು ಬಾರಿ ದೃಢೀಕರಿಸುವ ವ್ಯವಸ್ಥೆಯನ್ನು ಬಳಸಿರಿ. ಇತ್ತೀಚೆಗೆ ಪ್ರಮುಖ ಸೇವೆಗಳಾದ ಇಮೇಲ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಕೆಲವು ಇ-ಕಾಮರ್ಸ್ ವೆಬ್‌ಸೈಟ್‌ಗಳು ಇದನ್ನು ಅನುಮತಿಸಿವೆ.

ಅಂದರೆ ನೀವು ಲಾಗಿನ್ ಆಗುವಾಗ ಪಾಸ್‌ವರ್ಡ್ ನಮೂದಿಸುವ ಜೊತೆಗೆ ನಿಮ್ಮ ಅಧಿಕೃತ ಮೊಬೈಲ್‌ಗೆ ಒಟಿಪಿ ಮೂಲಕ ದೃಢೀಕರಿಸುವ ವ್ಯವಸ್ಥೆಯಿದ್ದರೆ ಉತ್ತಮ. ಏಕೆಂದರೆ ಎರಡು ಬಾರಿ ದೃಢೀಕರಣವು ನಿಮ್ಮ ಖಾತೆಗೆ ಹೆಚ್ಚುವರಿ ಸುರಕ್ಷತೆಯನ್ನು ಒದಗಿಸುತ್ತದೆ. ಈ ಮೂಲಕ ಒಂದು ವೇಳೆ ಹ್ಯಾಕರ್ಸ್ ನಿಮ್ಮ ಲಾಗಿನ್ ಪಾಸ್‌ವರ್ಡ್ ಪ್ರಯತ್ನಿಸಿದರೂ ಸಹ ಹೆಚ್ಚುವರಿ ಭದ್ರತೆಯಿಂದಾಗಿ ಅವರಿಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.

 

ಬ್ಯಾಂಕ್‌ನಿಂದ ಹೊಸ ಕಾರ್ಡ್ ಪಡೆಯಿರಿ

ಬ್ಯಾಂಕ್‌ನಿಂದ ಹೊಸ ಕಾರ್ಡ್ ಪಡೆಯಿರಿ

ಒಂದು ವೇಳೆ ನಿಮ್ಮ ಡೇಟಾ ಸೋರಿಕೆಯಾಗಿದೆ ಎಂದು ದೃಢವಾದರೆ ನಿಮ್ಮ ಹಣಕಾಸಿನ ವಿವರಗಳು , ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್, ಡೆಬಿಟ್‌ ಕಾರ್ಡ್‌ಗಳ ಸಂಖ್ಯೆಗಳು ಸೋರಿಕೆಯಾಗಬಹುದು. ಹೀಗಾಗಿ ನೀವು ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ ಅನ್ನು ಬ್ಯಾಂಕ್‌ನಿಂದ ಪಡೆಯಿರಿ.

ನಿಮ್ಮ ಬ್ಯಾಂಕ್ ಮತ್ತು ಕಾರ್ಡ್ ವಿವರಗಳು ಸೋರಿಕೆಯಾಗದಂತೆ ರಕ್ಷಿಸಲು ನೀವು ಹಣ ಪಾವತಿಗಳಿಗಾಗಿ ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ಅನ್ನು ಸಹ ಬಳಸಬಹುದು. ಹ್ಯಾಕರ್ಸ್ ಕಳ್ಳತನಕ್ಕೆ , ಸಾಲ ಮತ್ತು ಸೇವೆ ಪಡೆಯಲು ನಿಮ್ಮ ಗುರುತಿನ ಮಾಹಿತಿಗಳನ್ನು ಹಲವು ಬಾರಿ ಬಳಸಬಹುದು.

ಹೀಗಾಗಿ ನೀವು ಕ್ರೆಡಿಟ್ ಬ್ಯೂರೋದಿಂದ ವರ್ಷಕ್ಕೆ ಒಂದು ಬಾರಿಯಾದರು ಕ್ರೆಡಿಟ್ ವರದಿ ಪಡೆದು ಪರಿಶೀಲಿಸಿ. ಕ್ರೆಡಿಟ್ ವರದಿ ಪಡೆಯಲು ನಾಲ್ಕು ಬ್ಯೂರೋಗಳಿಸಿದ್ದು ಅದು ನಿಮಗೆ ನಾಲ್ಕು ಉಚಿತ ವರದಿಗಳನ್ನು ಪಡೆಯಲು ಅನುಮತಿಸುತ್ತದೆ. ಈ ಮೂಲಕ ಪ್ರತಿ ತ್ರೈಮಾಸಿಕದಲ್ಲಿ, ಹೊಸ ಸಾಲಗಳಿವೆಯೇ ಎಂದು ನೋಡಲು ಕ್ರೆಡಿಟ್ ವರದಿಯನ್ನು ಪರಿಶೀಲಿಸಿ.

 

English summary

What to do if your details are leaked in a data breach? Explained in Kannada

What to do if your details are leaked in a data breach? Explained in Kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X