For Quick Alerts
ALLOW NOTIFICATIONS  
For Daily Alerts

ದೀಪಾವಳಿ ಬಳಿಕ ಕೆಲವು ಫೋನ್‌ನಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸಲ್ಲ!

|

ನೀವು ಹಳೆ ವರ್ಜನ್‌ನ ಐಫೋನ್‌ ಅನ್ನು ಬಳಕೆ ಮಾಡುತ್ತಿದ್ದರೆ ಅಥವಾ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಅಪ್‌ಡೇಟ್ ಮಾಡದಿದ್ದರೆ ದೀಪಾವಳಿ ಬಳಿಕ ಅಥವಾ ಅಕ್ಟೋಬರ್ 24ರ ಬಳಿಕ ನಿಮಗೆ ವಾಟ್ಸಾಪ್ ಬಳಕೆ ಮಾಡಲು ಸಾಧ್ಯವಾಗದೆ ಇರಬಹುದು.

 

ಆಪಲ್, ಐಫೋನ್ iOS 10 ಮತ್ತು iOS ನಲ್ಲಿ ಇತ್ತೀಚೆಗೆ ಕೆಲವು ಅಪ್‌ಡೇಟ್‌ಗಳು ಇರುತ್ತದೆ. ಇತ್ತೀಚಿನ ಅಪ್‌ಡೇಟ್ ಪ್ರಕಾರ ಅಕ್ಟೋಬರ್ 24ರ ಬಳಿಕ ಪ್ರಮುಖವಾಗಿ 11 ಸಾಧನಗಳಲ್ಲಿ ವಾಟ್ಸಾಪ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.

ಇನ್ನು ವಾಟ್ಸಾಪ್ ಕೂಡಾ ಈ ಬಗ್ಗೆ ನೊಟೀಫಿಕೇಶನ್ ನೀಡಲು ಆರಂಭ ಮಾಡಿದೆ. iOS 10 ಅಥವಾ iOS 11 ನಲ್ಲಿ ವಾಟ್ಸಾಪ್ ಕಾರ್ಯನಿರ್ವಹಣೆಯಾಗದು ಎಂದು ವಾಟ್ಸಾಪ್ ತನ್ನ ಬಳಕೆದಾರರಿಗೆ ಮಾಹಿತಿ ನೀಡುತ್ತಿದೆ. ಹಾಗೆಯೇ ಅಪ್‌ಡೇಟ್ ಮಾಡಿಕೊಳ್ಳಿ ಎಂದು ಕೂಡಾ ತಿಳಿಸಿದೆ. ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ದೀಪಾವಳಿ ಬಳಿಕ ಕೆಲವು ಫೋನ್‌ನಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸಲ್ಲ!

ನಿಮ್ಮ ಫೋನ್ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ

* ವಾಟ್ಸಾಪ್ ಸಹಾಯ ಕೇಂದ್ರದ ಪ್ರಕಾರ ಐಫೋನ್ ಬಳಕೆದಾರರು ಅಪ್ಲಿಕೇಶನ್ ಅನ್ನು ಬಳಕೆ ಮಾಡುವುದನ್ನು ಮುಂದುವರಿಸಬೇಕಾದರೆ iOS 12 ಅಥವಾ ಬೇರೆ ಅಪ್‌ಡೇಟೆಟ್ ವರ್ಜನ್ ಅಗತ್ಯವಿದೆ.
* iOS 10 ಮತ್ತು iOS 11 ಸಾಫ್ಟ್‌ವೇರ್‌ನಲ್ಲಿ ಚಾಲನೆಯಲ್ಲಿರುವ ಐಫೋನ್‌ಗಳಲ್ಲಿ ಅಕ್ಟೋಬರ್ 24 ರ ನಂತರ ವಾಟ್ಸಾಪ್ ಅನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ .
* ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಲು ನಿಮ್ಮ ಅಂಡ್ರಾಯ್ಡ್ ಫೋನ್‌ಗಳಲ್ಲಿ Android 4.1 ಅಥವಾ ನಂತರದ ಅಪ್‌ಡೇಟ್ ವರ್ಜನ್ ಇರುವುದು ಅಗತ್ಯವಾಗಿದೆ.

ಗೌಪ್ಯತೆ ಹಾಗೂ ಬಳಕೆದಾರರ ಮಾಹಿತಿಯನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಎಲ್ಲ ಫೋನ್‌ಗಳು ಅಪ್‌ಡೇಟ್ ಆವೃತ್ತಿಗಳನ್ನು ಪರಿಚಯಿಸುತ್ತದೆ. ವಾಟ್ಸಾಪ್‌ನಂತಹ ಆಪ್‌ಗಳು ಕೂಡಾ ಅಪ್‌ಡೇಟ್ ವರ್ಜನ್ ಅನ್ನು ಪರಿಚಯಿಸುತ್ತಿರುತ್ತದೆ.

ನಿಮ್ಮ ಐಫೋನ್ ಸ್ವಯಂ-ಅಪ್‌ಡೇಟ್‌ನಲ್ಲಿಲ್ಲದಿದ್ದರೆ, ನೀವು ಸೆಟ್ಟಿಂಗ್‌ಗೆ ಹೋಗಿ ಜೆನರಲ್‌ನಲ್ಲಿ ಸಾಫ್ಟವೇರ್‌ ಅಪ್‌ಡೇಟ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಅಪ್‌ಡೇಟ್ ಮಾಡಿಕೊಳ್ಳಬಹುದು. ಇನ್ನು ನಿಮ್ಮ ಸ್ಮಾರ್ಟ್ ಫೋನ್‌ಗಳಲ್ಲಿಯೂ ನೀವು ಸೆಟ್ಟಿಂಗ್ಸ್‌ಗೆ ಹೋಗಿ ಸಿಸ್ಟಪ್ ಅಪ್‌ಡೇಟ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಅಪ್‌ಡೇಟ್ಸ್ ಇದ್ದರೆ ಅದಕ್ಕೆ ಕ್ಲಿಕ್ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಮೊಬೈಲ್‌ಗಳಲ್ಲಿ ಅಪ್‌ಡೇಟ್ ನೋಟಿಫಿಕೇಶನ್ ಬರುತ್ತದೆ.

English summary

WhatsApp May Not Work On Some Phones After Deepavali, Here's Details

if you are using an older version of your iPhone or if you have not updated your phone lately, you may not be able to use WhatsApp after October 24.
Story first published: Friday, October 21, 2022, 18:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X