For Quick Alerts
ALLOW NOTIFICATIONS  
For Daily Alerts

ಎಫ್‌ಡಿಗಳ ಮೇಲೆ ಬ್ಯಾಂಕ್, ಪೋಸ್ಟ್‌ ಆಫೀಸ್‌ಗಿಂತ ಹೆಚ್ಚಿನ ಬಡ್ಡಿ ಎಲ್ಲಿ ಸಿಗುತ್ತೆ?

|

ಇತ್ತೀಚಿನ ಕೆಲ ತಿಂಗಳುಗಳಲ್ಲಿ ಬ್ಯಾಂಕುಗಳಲ್ಲಿ ಬಡ್ಡಿದರಗಳು ತೀವ್ರ ಕುಸಿತ ದಾಖಲಿಸಿವೆ. ಪ್ರಮುಖವಾಗಿ ಸರ್ಕಾರಿ ಮತ್ತು ಖಾಸಗಿಯ ಬಹುತೇಕ ಬ್ಯಾಂಕುಗಳು ವಾರ್ಷಿಕ ಬಡ್ಡಿದರವನ್ನು ಇಳಿಕೆ ಮಾಡಿವೆ. ಇಂತಹ ಸಂದರ್ಭದಲ್ಲಿ ಎಲ್ಲಿ ಹೆಚ್ಚು ಬಡ್ಡಿ ಸಿಗಬಹುದು ಎಂದು ಹುಡುಕುತ್ತಿದ್ದವರಿಗೆ ಇಲ್ಲಿದೆ ಮಾಹಿತಿ

ಎಎಎ ರೇಟಿಂಗ್ ಹೊಂದಿರುವ ಕೆಲವು ಕಂಪನಿಗಳು ನಿಶ್ಚಿತ ಠೇವಣಿಗಳ ಮೇಲೆ ಶೇಕಡಾ 8.40ರಷ್ಟು ಬಡ್ಡಿದರವನ್ನು ನೀಡುತ್ತವೆ. ಆದರೆ ಈ ಎಫ್‌ಡಿ ಆಯ್ಕೆಗಳು ಅಪಾಯಕಾರಿ ಅನ್ನೋದನ್ನು ನೀವು ನೆನಪಿನಲ್ಲಿಡಿ. ಹಣ ಹೂಡಿಕೆಗೂ ಮುನ್ನ ಅಪಾಯಕಾರಿ ಅಂಶವನ್ನು ಗಮನದಲ್ಲಿಟ್ಟು ಹಣವನ್ನು ಇರಿಸಿ.

ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಎಫ್‌ಡಿ

ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಎಫ್‌ಡಿ

ಈ ಕಂಪನಿಯ ಎಫ್‌ಡಿಯನ್ನು ಎಎಎ ಅನ್ನು ರೇಟಿಂಗ್ ಏಜೆನ್ಸಿ ಸಿಆರ್‍ಸಿಎಲ್ ನಿಂದ ರೇಟ್ ಮಾಡಲಾಗಿದೆ. ಇಲ್ಲಿ ನೀವು 5 ವರ್ಷದ ಎಫ್‌ಡಿ ಯಲ್ಲಿ ಶೇ 8.40 ರಷ್ಟು ಬಡ್ಡಿದರವನ್ನು ಪಡೆಯುತ್ತೀರಿ. 4 ವರ್ಷದ ಎಫ್‌ಡಿ ಮೇಲೆ ಶೇ. 8.20 ಪ್ರತಿಶತ ಮತ್ತು 3 ವರ್ಷದ ಎಫ್‌ಡಿ ಮೇಲೆ ಶೇ. 8.15 ಬಡ್ಡಿದರವನ್ನು ಪಡೆಯುತ್ತೀರಿ.

ಇತರ ಎಎಎ ದರದ ಎನ್‌ಬಿಎಫ್‌ಸಿ (ಬ್ಯಾಂಕೇತರ ಹಣಕಾಸು ಕಂಪನಿ) ಠೇವಣಿಗಳಿಗೆ ಹೋಲಿಸಿದರೆ ಈ ಬಡ್ಡಿದರಗಳು ಬಹುಶಃ ಅತ್ಯಧಿಕವಾಗಿರುತ್ತವೆ. ಭದ್ರತೆಯ ವಿಷಯದಲ್ಲಿ, ಹೂಡಿಕೆ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ನೀವೇ ನಿರ್ಧರಿಸಬೇಕು. ಏಕೆಂದರೆ ಕೊರೊನಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಎನ್‌ಬಿಎಫ್‌ಸಿ ಮತ್ತು ಬ್ಯಾಂಕುಗಳು ಸಾಕಷ್ಟು ಆರ್ಥಿಕ ಒತ್ತಡಕ್ಕೆ ಸಿಲುಕಿವೆ. ಅಂದಹಾಗೆ, ಇಲ್ಲಿ ಹಿರಿಯ ನಾಗರಿಕರಿಗೆ ಶೇಕಡಾ 0.40 ರಷ್ಟು ಹೆಚ್ಚು ಬಡ್ಡಿ ಸಿಗಲಿದೆ.

 

ಬಜಾಜ್ ಫೈನಾನ್ಸ್‌ ನಿಶ್ಚಿತ ಠೇವಣಿ

ಬಜಾಜ್ ಫೈನಾನ್ಸ್‌ ನಿಶ್ಚಿತ ಠೇವಣಿ

ಬಜಾಜ್ ಫೈನಾನ್ಸ್‌ ಲಿಮಿಟೆಡ್‌ನ ಎಫ್‌ಡಿ ಕ್ರಿಸಿಲ್‌ನಿಂದ ಎಫ್‌ಎಎಎ ಮತ್ತು ಐಸಿಆರ್‌ಎಯಿಂದ ಎಂಎಎಎ ರೇಟಿಂಗ್ ಪಡೆದಿದೆ. ಇದು ಉತ್ತಮ ಸುರಕ್ಷತಾ ರೇಟಿಂಗ್ ಆಗಿದೆ. 3, 4 ಮತ್ತು 5 ವರ್ಷಗಳ ಠೇವಣಿಗಳ ಮೇಲೆ ಕಂಪನಿಯು ಶೇಕಡಾ 7.20 ರಷ್ಟು ಬಡ್ಡಿದರಗಳನ್ನು ನೀಡುತ್ತದೆ.

ನೀವು ನಿಶ್ಚಿತ ಠೇವಣಿಗೆ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪಾವತಿ ಬಡ್ಡಿ ಆಯ್ಕೆಯನ್ನು ಮಾಡಬಹುದು. ಹಿರಿಯ ನಾಗರಿಕರಿಗೆ ಬಜಾಜ್ ಫೈನಾನ್ಸ್ ಶೇ. 0.25 ರಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡುತ್ತದೆ. 1 ವರ್ಷದ ಅಲ್ಪಾವಧಿಗೆ, ಬಜಾಜ್ ಫೈನಾನ್ಸ್ ಶೇ. 7 ರಷ್ಟು ಬಡ್ಡಿದರವನ್ನು ನೀಡುತ್ತಿದೆ.

 

ಪಿಎನ್‌ಬಿ ವಸತಿ

ಪಿಎನ್‌ಬಿ ವಸತಿ

ಪಿಎನ್‌ಬಿ ಹೌಸಿಂಗ್ ಅನ್ನು ಎಆರ್ಎ ಎಂದು ಕ್ರಿಸಿಲ್ ರೇಟ್ ಮಾಡಿದೆ. ಈ ಹೌಸಿಂಗ್ ಫೈನಾನ್ಸ್ ಕಂಪನಿಯು 5 ವರ್ಷದ ಠೇವಣಿಗಳ ಮೇಲೆ ಶೇಕಡಾ 7ರವರೆಗೆ 2 ಮತ್ತು 3 ವರ್ಷಗಳ ಠೇವಣಿಗಳ ಮೇಲೆ ನಿಮಗೆ ಶೇ. 6.90 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಠೇವಣಿ ಮೊತ್ತದ ಮೇಲೆ ಶೇಕಡಾ 0.50 ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುವುದು. ನೀವು ಕೇವಲ 1 ವರ್ಷದ ಅಲ್ಪಾವಧಿಗೆ ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನಲ್ಲಿ ಹಣವನ್ನು ಠೇವಣಿ ಇಟ್ಟರೂ ಸಹ, ನಿಮಗೆ ಶೇಕಡಾ 6.65 ರಷ್ಟು ಬಡ್ಡಿದರವನ್ನು ನೀಡಲಾಗುವುದು.

ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಸ್‌

ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಸ್‌

ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಇತ್ತೀಚೆಗೆ ತನ್ನ ಬಡ್ಡಿದರಗಳನ್ನು ಗಮನಾರ್ಹವಾಗಿ ಕಡಿತಗೊಳಿಸಿದೆ. ಕಂಪನಿಯು ತನ್ನ 1 ವರ್ಷದ ಠೇವಣಿಗಳ ಮೇಲೆ ಕೇವಲ 5.70 ರಷ್ಟು ಬಡ್ಡಿದರವನ್ನು ನೀಡುತ್ತಿದ್ದರೆ. 4 ಮತ್ತು 5 ವರ್ಷದ ಠೇವಣಿಗಳ ಮೇಲೆ ಶೇ 6.40 ರಷ್ಟು ಬಡ್ಡಿಯನ್ನು ಕೊಡಿದೆ.

ಈ ಕಂಪನಿಯ ಬಡ್ಡಿದರಗಳು ಅಷ್ಟೊಂದು ಉತ್ತಮವಾಗಿರದಿದ್ದರೂ, ಎಎಎ ರೇಟಿಂಗ್ ಹೊಂದಿವೆ. ಕಳೆದ 1 ವರ್ಷದಲ್ಲಿ ಕುಸಿಯುತ್ತಿರುವ ಬಡ್ಡಿದರಗಳ ದೃಷ್ಟಿಯಿಂದ, ನೀವು 5 ವರ್ಷಗಳ ಸುದೀರ್ಘ ಅವಧಿಗೆ ಎಫ್‌ಡಿ ಪಡೆಯಬಾರದು. ಏಕೆಂದರೆ ಮುಂದಿನ 1 ವರ್ಷದಲ್ಲಿ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಈ ಮೇಲ್ಕಂಡ ಎಫ್‌ಡಿ ಆಯ್ಕೆಗಳ ನಿರ್ಧಾರವು ಅಂತಿಮವಾಗಿ ನಿಮ್ಮದೇ ಆಗಿದ್ದು, ಹೂಡಿಕೆಗೂ ಮುನ್ನ ಅಪಾಯಕಾರಿ ಅಂಶವನ್ನು ಗಮನದಲ್ಲಿಟ್ಟು ಹಣವನ್ನು ಇರಿಸಿ.

 

English summary

Where To Earn More Interest Rate Than Bank And Post Office: Know More

In this article explained where you can get more interest rate on Fds, More than bank and post office schemes
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X