For Quick Alerts
ALLOW NOTIFICATIONS  
For Daily Alerts

ಐಟಿಆರ್‌ ಫೈಲಿಂಗ್‌ ತಡವಾದರೂ ಇವರಿಗಿದೆ ವಿನಾಯಿತಿ..

|

2020-21ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಡಿಸೆಂಬರ್‌ 31, 2021 ಆಗಿದೆ. ಯಾರು ಈ ಕೊನೆಯ ದಿನಾಂಕ ಕಳೆದರೂ ಕೂಡಾ ಐಟಿಆರ್‌ ಸಲ್ಲಿಕೆ ಮಾಡುವುದಿಲ್ಲವೋ ಅಥವಾ ಐಟಿಆರ್‍ ಫೈಲಿಂಗ್‌ ಮಾಡುವುದಿಲ್ಲವೋ ಅವರು ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಈ ದಂಡದಿಂದ ಕೆಲವರಿಗೆ ವಿನಾಯತಿ ದೊರೆಯಲಿದೆ.

ಈ ಡಿಸೆಂಬರ್ 31 ರ ಗಡುವಿನವರೆಗೆ ಸುಮಾರು 5.89 ಕೋಟಿ ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಲ್ಲಿಸಲಾಗಿದೆ ಎಂದು ಐ-ಟಿ ಇಲಾಖೆ ಈಗಾಗಲೇ ಹೇಳಿದೆ. "ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ 2021 ರ ಡಿಸೆಂಬರ್ 31 ರ ವಿಸ್ತೃತ ಗಡುವು ದಿನಾಂಕದವರೆಗೆ ಸುಮಾರು 5.89 ಕೋಟಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಸಲಾಗಿದೆ," ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮಾಹಿತಿ ನೀಡಿದೆ.

 ಕೊನೆಯ ದಿನದವರೆಗೆ 5.89 ಕೋಟಿ ಐಟಿಆರ್‌ ಸಲ್ಲಿಕೆ ಕೊನೆಯ ದಿನದವರೆಗೆ 5.89 ಕೋಟಿ ಐಟಿಆರ್‌ ಸಲ್ಲಿಕೆ

ಇದಾದ ಬಳಿಕವೂ ಹಲವಾರು ಮಂದಿ ಇನ್ನು ಕೂಡಾ ಐಟಿಆರ್‌ ಸಲ್ಲಿಕೆ ಮಾಡಿಲ್ಲ. ಆದರೆ ಈ ತಡವಾಗಿ ಐಟಿಆರ್‌ ಸಲ್ಲಿಕೆ ಮಾಡುವಾಗ ದಂಡವಿದ್ದರೂ ಕೂಡಾ ಕೆಲವರು ಈ ದಂಡದಿಂದ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಯಾರೆಲ್ಲಾ ದಂಡದಿಂದ ವಿನಾಯಿತಿ ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ...

ಐಟಿಆರ್‌ ಫೈಲಿಂಗ್‌ ತಡವಾದರೂ ಇವರಿಗಿದೆ ವಿನಾಯಿತಿ..

ಯಾರಿಗೆ ದಂಡದಿಂದ ವಿನಾಯಿತಿ ಇದೆ?

ಐದು ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರು ಐಟಿಆರ್‌ ಫೈಲ್‌ ಮಾಡುವುದು ತಡವಾದರೆ ಸುಮಾರು 5,000 ದಂಡವನ್ನು ಪಾವತಿ ಮಾಡಬೇಕಾಗಿದೆ. ಐದು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಆದರೆ ಇನ್ನು ಕೆಲವರು ತಡವಾಗಿ ಐಟಿಆರ್‌ ಫೈಲ್‌ ಮಾಡಿದರೂ ಯಾವುದೇ ದಂಡವನ್ನು ಪಾವತಿ ಮಾಡಬೇಕಾಗಿಲ್ಲ. ಯಾರ ಮೂಲ ಆದಾಯವು ತೀರಾ ಕಡಿಮೆ ಆಗಿರುತ್ತದೋ ಅವರು ಐಟಿಆರ್‌ ಫೈಲಿಂಗ್‌ ಮಾಡುವುದು ತಡವಾದರೂ ಕೂಡಾ ಯಾವುದೇ ದಂಡವನ್ನು ಪಾವತಿ ಮಾಡಬೇಕಾಗಿಲ್ಲ. ಮೂಲ ಆದಾಯವು 2.5 ಲಕ್ಷ ರೂಪಾಯಿಗಿಂತ ಕಡಿಮೆ ಆಗಿದ್ದರೆ ಆ ವ್ಯಕ್ತಿಯು ಐಟಿಆರ್‌ ಫೈಲ್‌ ಮಾಡುವುದು ತಡವಾದರೂ ದಂಡವನ್ನು ಪಾವತಿ ಮಾಡಬೇಕಾಗಿಲ್ಲ. ಇನ್ನು ಈ ವೇಳೆ ಈ ಮೂಲ ಆದಾಯವು ಆ ವ್ಯಕ್ತಿಯ ವಯಸ್ಸಿನ ಮೇಲೆಯೂ ಆಧಾರಿತವಾಗಿದೆ. ಆದರೆ ಇದಕ್ಕೆ ಕೆಲವು ನಿಯಮಗಳು ಕೂಡಾ ಇದೆ.

2022: ಈ 12 ವೈಯಕ್ತಿಕ ಹಣಕಾಸು ವಿಚಾರಗಳ ಕೊನೆದ ದಿನ ನೆನಪಿರಲಿ2022: ಈ 12 ವೈಯಕ್ತಿಕ ಹಣಕಾಸು ವಿಚಾರಗಳ ಕೊನೆದ ದಿನ ನೆನಪಿರಲಿ

ಷರತ್ತುಗಳು ಅನ್ವಯ!

2.5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವವರು ಐಟಿಆರ್‌ ಫೈಲ್‌ ಮಾಡುವುದು ತಡವಾದರೂ ಕೂಡಾ ದಂಡವನ್ನು ಪಾವತಿ ಮಾಡಬೇಕಾಗಿಲ್ಲ. ಆದರೆ ಈ ವಿಚಾರದಲ್ಲಿ ಕೆಲವು ಷರತ್ತುಗಳು ಕೂಡಾ ಅನ್ವಯ ಆಗಲಿದೆ. ಯಾರು ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಹೂಡಿಕೆ ಮಾಡಿರುತ್ತಾರೋ ಅವರ ಆದಾಯ ಕಡಿಮೆ ಇದ್ದರೂ ಕೂಡಾ ಈ ವಿನಾಯಿತಿ ದೊರೆಯುವುದಿಲ್ಲ. ವಿದೇಶಕ್ಕೆ ಪ್ರಯಾಣ ಮಾಡುವವರಿಗೆ ಅಥವಾ ಯಾವುದೇ ಇತರ ವ್ಯಕ್ತಿಗೆ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನೀಡಿದವರಿಗೆ ಈ ವಿನಾಯಿತಿ ಇರುವುದಿಲ್ಲ. ವಿದ್ಯುತ್ ಬಳಕೆಗಾಗಿ ರೂ 1 ಲಕ್ಷಕ್ಕಿಂತ ಹೆಚ್ಚಿನ ಖರ್ಚು ಮಾಡಿದವರಿಗೆ ಈ ವಿನಾಯಿತಿ ಇಲ್ಲ.

English summary

ITR Filing: Who don't need to pay late fee for filing tax return after due date?

Who don't need to pay late fee for filing tax return after due date?.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X