For Quick Alerts
ALLOW NOTIFICATIONS  
For Daily Alerts

ತಿಂಗಳಿಗೆ 12,500 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಬಳಿಕ ಪಡೆಯಿರಿ 40 ಲಕ್ಷಕ್ಕಿಂತ ಅಧಿಕ ಹಣ!

|

ನೀವು ಹಣವನ್ನು ಉತ್ತಮ ರಿಟರ್ನ್ ಪಡೆಯಲು ಸಾಧ್ಯವಾಗುವ ಕಡೆ ಹೂಡಿಕೆ ಮಾಡಲು ಮುಂದಾಗಿದ್ದರೆ, ನಿಮಗೆ ಇಲ್ಲಿದೆ ಉತ್ತಮ ಆಯ್ಕೆ. ಅದರಲ್ಲೂ ಯಾವುದೇ ಅಪಾಯವಿಲ್ಲದೆಯೇ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡುವ ಉಪಾಯವನ್ನು ನಾವು ನಿಮಗೆ ಹೇಳಲಿದ್ದೇವೆ.

 

ನೀವು ಯಾವುದೇ ಅಪಾಯವಿಲ್ಲದ ವಿಭಾಗದಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದರೆ, ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳಿಗೆ ನೀವು ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಆಗಿದೆ. ಇದರಲ್ಲಿ ನೀವು ಯಾವುದೇ ಅಪಾಯವಿಲ್ಲದೆಯೇ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ.

ಅಂಚೆ ಕಚೇರಿಯ ಜನಪ್ರಿಯ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಅರಿಯಿರಿ

ನೀವು ಅಂಚೆ ಕಚೇರಿಯಲ್ಲಿ ನೂರು ರೂಪಾಯಿ ಹೂಡಿಕೆ ಮಾಡಿಯಾದರೂ ಈ ಯೋಜನೆಗಾಗಿ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಕಡಿಮೆ ಹೂಡಿಕೆ ಮಾಡಿ ಅಧಿಕ ರಿಟರ್ನ್ ನೀಡುವ ಅಂಚೆ ಕಚೇರಿಯ ಯೋಜನೆಗಳಲ್ಲಿ ಒಂದು ಪೋಸ್ಟ್‌ ಆಫಿಸ್‌ ಪಬ್ಲಿಕ್‌ ಪ್ರೊವಿಡೆಂಟ್‌ ಫಂಡ್‌ (ಅಂಚೆ ಕಛೇರಿ ಸಾರ್ವಜನಿಕ ಭವಿಷ್ಯ ನಿಧಿ) ಆಗಿದೆ. ಇದರ ಮೆಚ್ಯೂರಿಟಿಯು 15 ವರ್ಷದಲ್ಲಿ ಆಗಲಿದ್ದು, ಈ ಸಂದರ್ಭದಲ್ಲಿ ನೀವು ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಲಕ್ಷಾಂತರ ರೂಪಾಯಿಯನ್ನು ರಿಟರ್ನ್ ಆಗಿ ಪಡೆಯಬೇಕು ಎಂದು ಬಯಸಿದ್ದರೆ, ನೀವು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು ಹಾಗೂ ಎಷ್ಟು ಸಮಯದವರೆಗೆ ಹೂಡಿಕೆ ಮಾಡಬೇಕು ಎಂದು ತಿಳಿಯುವುದು ಮುಖ್ಯ. ಅದಕ್ಕಾಗಿ ಮುಂದೆ ಓದಿ.

 ಲಕ್ಷಾಂತರ ಹಣವನ್ನು ರಿಟರ್ನ್ ಆಗಿ ಪಡೆಯಬೇಕೇ?: ಇಲ್ಲಿ ಓದಿ

ಲಕ್ಷಾಂತರ ಹಣವನ್ನು ರಿಟರ್ನ್ ಆಗಿ ಪಡೆಯಬೇಕೇ?: ಇಲ್ಲಿ ಓದಿ

ಅಧಿಕ ಟರ್ಮ್‌ನ ಹೂಡಿಕೆ ಮಾಡಬೇಕಾದರೆ ಪೋಸ್ಟ್‌ ಆಫೀಸ್‌ನ ಪಬ್ಲಿಕ್‌ ಪ್ರೊವಿಡೆಂಟ್‌ ಫಂಡ್‌ ಉತ್ತಮ ಆಯ್ಕೆ ಆಗಿದೆ. ಈ ಅಂಚೆ ಕಛೇರಿ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹೂಡಿಕೆದಾರರಿಗೆ ಶೇಕಡ 7 ರಷ್ಟು ಅಧಿಕ ರಿಟರ್ನ್ ದೊರೆಯಲಿದೆ. ಈ ಯೋಜನೆಯ ಮೂಲಕ ನೀವು ಪ್ರತಿ ವರ್ಷ 1.5 ಲಕ್ಷಕ್ಕಿಂತ ಅಧಿಕ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ನೀವು ತಿಂಗಳಿಗೆ 12,500 ರೂಪಾಯಿಯನ್ನು ಹೂಡಿಕೆ ಮಾಡಬಹುದು.

 ಎಷ್ಟು ಹೂಡಿಕೆ ಮಾಡಿದರೆ, ಎಷ್ಟು ರಿಟರ್ನ್?

ಎಷ್ಟು ಹೂಡಿಕೆ ಮಾಡಿದರೆ, ಎಷ್ಟು ರಿಟರ್ನ್?

ನೀವು ಈ ಅಂಚೆ ಕಛೇರಿ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಮೂಲಕ ವರ್ಷಕ್ಕೆ ಶೇಕಡ 7.1 ರಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ. ಲೆಕ್ಕಾಚಾರದ ಪ್ರಕಾರ ನೀವು ತಿಂಗಳಿಗೆ 12500 ರೂಪಾಯಿಯನ್ನು ಹೂಡಿಕೆ ಮಾಡಿದರೆ, 15 ವರ್ಷಗಳ ಬಳಿಕೆ ಮೆಚ್ಯೂರಿಟಿ ಸಮಯದಲ್ಲಿ ನೀವು 40,68,209 ಅನ್ನು ರಿಟರ್ನ್ ಆಗಿ ಪಡೆಯಬಹುದು. ಈ ಯೋಜನೆಯಲ್ಲಿ ಒಟ್ಟು ಹೂಡಿಕೆಯು 22.5 ಲಕ್ಷ ರೂಪಾಯಿ ಆಗಿದೆ. ಒಟ್ಟು ಬಡ್ಡಿಯು 18,18,209 ರೂಪಾಯಿ ಆಗಿದೆ. ತಿಂಗಳಿಗೆ ಶೇಕಡ 7.1 ರಷ್ಟು ಬಡ್ಡಿಯೊಂದಿಗೆ ನಿಮಗೆ ಮೆಚ್ಯೂರಿಟಿ ಸಮಯದಲ್ಲಿ 18,18,209 ರೂಪಾಯಿ ಬಡ್ಡಿಯಾಗಿಯೇ ದೊರೆಯಲಿದೆ.

ಎಂಡೋಮೆಂಟ್ ವಿಮೆಯಲ್ಲಿ ದಿನಕ್ಕೆ 95 ರೂ. ಪಾವತಿಸಿ ಮೆಚ್ಯೂರಿಟಿ ವೇಳೆ 14 ಲಕ್ಷ ರೂ. ಗಳಿಸಿ

 ಆದಾಯ ತೆರಿಗೆ ವಿನಾಯಿತಿಯನ್ನು ಕೂಡಾ ಪಡೆಯಬಹುದು!
 

ಆದಾಯ ತೆರಿಗೆ ವಿನಾಯಿತಿಯನ್ನು ಕೂಡಾ ಪಡೆಯಬಹುದು!

ಇನ್ನು ನೀವು ಈ ಅಂಚೆ ಕಛೇರಿ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಅಡಿಯಲ್ಲಿ ಹಣಕಾಸು ವರ್ಷದಲ್ಲಿ 500 ರೂಪಾಯಿಯಿಂದ 1,50,000 ರೂಪಾಯಿವರೆಗೆ ಹೂಡಿಕೆಯನ್ನು ಮಾಡಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಭಾರತೀಯರು ಅಂಚೆ ಕಛೇರಿ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಅಡಿಯಲ್ಲಿ ಹೂಡಿಕೆಯನ್ನು ಮಾಡಲು ಅರ್ಹರು ಆಗಿದ್ದಾರೆ. ಇನ್ನು ಈ ಯೋಜನೆಯಲ್ಲಿ ಇನ್ನೊಂದು ಕುತೂಹಲಕಾರಿ ಅಂಶ ಎಂದರೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ನೀವು ವಿನಾಯಿತಿಯನ್ನು ಕೂಡಾ ಪಡೆಯಬಹುದು.

ಅಂಚೆ ಕಚೇರಿ: ಪ್ರತಿ ತಿಂಗಳು 10 ಸಾವಿರ ಹೂಡಿಕೆ, 16 ಲಕ್ಷ ರೂ. ರಿಟರ್ನ್

 ನಿಯಮಗಳು ಮತ್ತು ಷರತ್ತುಗಳು ಅನ್ವಯ

ನಿಯಮಗಳು ಮತ್ತು ಷರತ್ತುಗಳು ಅನ್ವಯ

ಈ ಪೋಸ್ಟ್‌ ಆಫಿಸ್‌ ಪಬ್ಲಿಕ್‌ ಪ್ರೊವಿಡೆಂಟ್‌ ಫಂಡ್‌ (ಅಂಚೆ ಕಛೇರಿ ಸಾರ್ವಜನಿಕ ಭವಿಷ್ಯ ನಿಧಿ) ಯೋಜನೆಯಲ್ಲಿ ಕೆಲವೊಂದು ನಿಯಮಗಳು ಮತ್ತು ಷರತ್ತುಗಳು ಕೂಡಾ ಅನ್ವಯ ಆಗಲಿದೆ. ಅಂಚೆ ಕಚೇರಿಯಲ್ಲಿ ಪಾಸ್‌ಬುಕ್ ಜೊತೆಗೆ ಖಾತೆಯನ್ನು ಮುಚ್ಚುವ ಬಗ್ಗೆ ಫಾರ್ಮ್ ಅನ್ನು ಸಲ್ಲಿಕೆ ಮಾಡುವ ಮೂಲಕ ನೀವು ಹಣವನ್ನು ಕ್ಲೇಮ್‌ ಮಾಡಲು ಸಾಧ್ಯವಾಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ನೀವು ಒಂದು ವರ್ಷದಲ್ಲಿ ಒಂದು ಬಾರಿ ವಿತ್‌ಡ್ರಾ ಮಾಡಿಕೊಳ್ಳಬಹುದು ಅಥವಾ ಯಾವುದೇ ಸಮಯದಲ್ಲಿ ಪೂರ್ಣ ಹಣವನ್ನು ವಾಪಾಸ್‌ ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ನೀವು ಈ ಹೂಡಿಕೆಯ ಅವಧಿಯನ್ನು ಇನ್ನೂ ಐದು ವರ್ಷಗಳ ಕಾಲ ಹೆಚ್ಚಳ ಮಾಡಬಹುದು.

English summary

With Investment of Just Rs 12500 Per Month, You Can Earn up to Rs 40 Lakh After Maturity

Post Office Small Saving Scheme: With Investment of Just Rs 12500 Per Month, You Can Earn up to Rs 40 Lakh After Maturity.
Story first published: Sunday, November 21, 2021, 15:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X