For Quick Alerts
ALLOW NOTIFICATIONS  
For Daily Alerts

World Cancer Day: ಕ್ಯಾನ್ಸರ್ ವಿಮೆ ಎಂದರೇನು, ಪ್ರಾಮುಖ್ಯತೆ, ಇತರೆ ಮಾಹಿತಿ

|

ವಿಶ್ವದಾದ್ಯಂತ ವಿಶ್ವ ಕ್ಯಾನ್ಸರ್ ದಿನವನ್ನು ಫೆಬ್ರವರಿ 4ರಂದು ಆರಂಭ ಆಚರಣೆ ಮಾಡಲಾಗುತ್ತದೆ. ಜಗತ್ತಿನಲ್ಲಿ ಕೋಟ್ಯಾಂತರ ಜನರನ್ನು ಕಾಡುತ್ತಿರುವ ಕ್ಯಾನ್ಸರ್‌ ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಕ್ಯಾನ್ಸರ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

 

ಪ್ರಸ್ತುತ ಭಾರತದಲ್ಲಿ ಕ್ಯಾನ್ಸರ್‌ನಿಂದಾಗಿ ಅಧಿಕ ಸಾವುಗಳು ಸಂಭವಿಸುತ್ತಿದೆ. ಹಾಗೆಯೇ ಕ್ಯಾನ್ಸರ್‌ ಚಿಕಿತ್ಸೆಗಾಗಿ ಅಧಿಕ ಖರ್ಚಾಗುತ್ತಿದೆ. ಆದರೆ ಇಲ್ಲಿರುವ ಶುಭಸುದ್ದಿ ಏನೆಂದರೆ ಭಾರತದಲ್ಲಿ ಆರೋಗ್ಯ ವಿಮೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಕೂಡಾ ಕವರ್ ಮಾಡಲಾಗುತ್ತದೆ. ಅದರಿಂದಾಗಿ ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ತಗುಲುವ ಖರ್ಚು ಕೊಂಚ ಕಡಿಮೆಯಾಗುತ್ತಿದೆ.

World Diabetes Day 2022: ಶುಗರ್ ಇದ್ದವರಿಗೆ ಹೆಲ್ತ್ ಇನ್ಷೂರೆನ್ಸ್ ಸಿಗುತ್ತಾ?World Diabetes Day 2022: ಶುಗರ್ ಇದ್ದವರಿಗೆ ಹೆಲ್ತ್ ಇನ್ಷೂರೆನ್ಸ್ ಸಿಗುತ್ತಾ?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್‌) ಪ್ರಕಾರ 2022ರಲ್ಲಿ ಭಾರತದಲ್ಲಿ 14.6 ಲಕ್ಷ ಹೊಸ ಕ್ಯಾನ್ಸರ್‌ ಪ್ರಕರಣಗಳು ದಾಖಲಾಗಿದೆ. ಪ್ರಸ್ತುತ ದೇಶದಲ್ಲಿ 2-2.5 ಮಿಲಿಯನ್ ಕ್ಯಾನ್ಸರ್ ಪ್ರಕರಣಗಳಿದೆ ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದಾಗಿ ಕ್ಯಾನ್ಸರ್‌ ಚಿಕಿತ್ಸೆಗಾಗಿ ಆರೋಗ್ಯ ವಿಮೆಯನ್ನು ಮಾಡಿಕೊಳ್ಳುವುದು ಮುಖ್ಯವಾಗಿದೆ. ಹಾಗೆಯೇ ನಿಮ್ಮ ಕುಟುಂಬಕ್ಕೂ ಆರೋಗ್ಯ ವಿಮೆ ಮಾಡಿಕೊಳ್ಳಿ. ಕ್ಯಾನ್ಸರ್ ವಿಮೆ ಎಂದರೇನು, ಇದರ ಅಗತ್ಯವೇನು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಕ್ಯಾನ್ಸರ್ ವಿಮೆ ಎಂದರೇನು?

ಕ್ಯಾನ್ಸರ್ ವಿಮೆ ಎಂದರೇನು?

ಕ್ಯಾನ್ಸರ್‌ ವಿಮೆ ಎಂಬುವುದು ವಿಭಿನ್ನ ರೀತಿಯ ಪಾಲಿಸಿಯಾಗಿದೆ. ಇದು ಕ್ಯಾನ್ಸರ್‌ನಿಂದಾಗಿ ಡಯಾಗ್ನಸ್‌ಗೆ ಒಳಗಾಗುತ್ತಿರುವವರಿಗೆ ವಿಮಾ ಸಹಾಯವನ್ನು ಒದಗಿಸುತ್ತದೆ. ಆದರೆ ಕ್ಯಾನ್ಸರ್ ವಿಮೆಯನ್ನು ಖರೀದಿಸಲು ಅದರದ್ದೇ ಆದ ನಿಯಮ ಮತ್ತು ಷರತ್ತುಗಳು ಇದೆ. ಆಸ್ಪತ್ರೆ, ಕಿಮೋಥೆರಪಿ, ರೆಡಿಯೇಷನ್, ಸರ್ಜರಿ, ಇತರೆ ಕ್ಯಾನ್ಸರ್ ಡಯಾಗ್ನಸಿಸ್, ಚಿಕಿತ್ಸೆ ಈ ಕ್ಯಾನ್ಸರ್ ವಿಮೆಯಲ್ಲಿ ಕವರ್ ಮಾಡಲಾಗುತ್ತದೆ.

 ಕ್ಯಾನ್ಸರ್ ವಿಮೆಯ ಪ್ರಾಮುಖ್ಯತೆಯೇನು?

ಕ್ಯಾನ್ಸರ್ ವಿಮೆಯ ಪ್ರಾಮುಖ್ಯತೆಯೇನು?

ಕ್ಯಾನ್ಸರ್‌ ವಿಮೆಯಿಂದಾಗಿ ಜನರು ಹಲವಾರು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಸ್ತುತ ಯಾವ ಸಂದರ್ಭದಲ್ಲಿ ಯಾವ ರೋಗ ನಮ್ಮಲ್ಲಿ ಕಂಡುಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ನಮ್ಮ ಸುತ್ತಮುತ್ತಲಿರುವ ಜನರಿಗೆ ಕ್ಯಾನ್ಸರ್ ಬಂದು ಸಾವನ್ನಪ್ಪಿರುವ ಹಲವಾರು ನಿದರ್ಶನಗಳನ್ನು ನಾವು ನೋಡಿದ್ದೇವೆ. ಕ್ಯಾನ್ಸರ್ ವಿಮೆಯಿದ್ದರೆ, ನಮಗೆ ತುರ್ತು ಸಂದರ್ಭದಲ್ಲಿ ಅಧಿಕ ಹಣವನ್ನು ಖರ್ಚು ಮಾಡದೆಯೇ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ.

 ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯಾವುದೆಲ್ಲ ಕವರ್ ಆಗುತ್ತದೆ?
 

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯಾವುದೆಲ್ಲ ಕವರ್ ಆಗುತ್ತದೆ?

* ಮೆಡಿಕಲ್ ವೆಚ್ಚದ ಜೊತೆಗೆ ಎಲ್ಲ ಕ್ಯಾನ್ಸರ್ ವಿಧ ಮತ್ತು ಸ್ಟೇಜ್‌ನಲ್ಲಿ ಈ ಕ್ಯಾನ್ಸರ್ ವಿಮೆಯ ಪ್ರಯೋಜನವನ್ನು ಪಡೆಯಬಹುದು.
* ಕ್ಯಾನ್ಸರ್ ಪಾಲಿಸಿಯು ಒಂದು ಸಮಯಕ್ಕಿಂತ ಅಧಿಕ ಕ್ಲೈಮ್ ಅನ್ನು ಮಾಡುವ ಅವಕಾಶವನ್ನು ನೀಡುತ್ತದೆ. ದೀರ್ಘಾವಧಿಯ ಚಿಕಿತ್ಸೆಯನ್ನು ಕವರ್ ಮಾಡುತ್ತದೆ.
* ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 80D ಅಡಿಯಲ್ಲಿ ಪ್ರೀಮಿಯಂ ಪಾವತಿಯಲ್ಲಿ ಸುಮಾರು 75,000 ರೂಪಾಯಿವವರೆಗೆ ತೆರಿಗೆ ಕಡಿತವನ್ನು ಕ್ಲೈಮ್ ಮಾಡುವ ಅವಕಾಶವಿದೆ.
* ಇನ್ನು ಕೆಲವು ವಿಮಾ ಸಂಸ್ಥೆಗಳು ಯಾವುದೇ ಕ್ಲೈಮ್ ಮಾಡದಿದ್ದಾಗ ಪ್ರತಿ ವರ್ಷ ಶೇಕಡ 10ರಷ್ಟು ಬೋನಸ್ ನೀಡುತ್ತದೆ.

English summary

World Cancer Day: Protect yourself with cancer specific health insurance Explained in Kannada

World Cancer Day: Protect yourself with cancer specific health insurance. What is Cancer Insurance, Need of this, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X