For Quick Alerts
ALLOW NOTIFICATIONS  
For Daily Alerts

World's Most Valuable Brands ಪಟ್ಟಿಯಲ್ಲಿ ಭಾರತದ ಏಕೈಕ ಕಂಪನಿ

|

ವಿಶ್ವದ 100 ಅತೀ ಮೌಲ್ಯಯುತ ಬ್ರ್ಯಾಂಡ್ ಪಟ್ಟಿ ಬಿಡುಗಡೆಯಾಗಿದ್ದು ಈ ಪಟ್ಟಿಯಲ್ಲಿ ಭಾರತದ ಒಂದು ಕಂಪನಿ ಕಾಣಿಸಿಕೊಂಡಿದೆ. ಹೌದು, 100 ಅತೀ ಮೌಲ್ಯಯುತ ಬ್ರ್ಯಾಂಡ್ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿ ಟಾಟಾ ಗ್ರೂಪ್ ಕಾಣಿಸಿಕೊಂಡಿದೆ. ಭಾರತದ ಒಂದು ಬ್ರಾಂಡ್ ಮಾತ್ರ ಈ ಪಟ್ಟಿಯಲ್ಲಿದೆ.

 

Annual Global 500, 2022 ವಾರ್ಷಿಕ ಜಾಗತಿಕ ಪಟ್ಟಿಯಾದ ವಿಶ್ವದ 100 ಅತೀ ಮೌಲ್ಯಯುತ ಬ್ರ್ಯಾಂಡ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ 100 ಬ್ರ್ಯಾಂಡ್‌ನ ಪಟ್ಟಿಯಲ್ಲಿ ಭಾರತದ ಸಂಸ್ಥೆಯಾದ ಟಾಟಾ ಗ್ರೂಪ್ ಮಾತ್ರ ಕಾಣಿಸಿಕೊಂಡಿದೆ. ಇನ್ನು ಟೆಕ್ ಸಂಸ್ಥೆಗಳಾದ ಆಪಲ್, ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್, ಫೇಸ್‌ಬುಕ್ ಟಾಪ್ 5 ಸ್ಪಾಟ್‌ನಲ್ಲೇ ಉಳಿದುಕೊಂಡಿದೆ.

ಇನ್ನು 260.2 ಬಿಲಿಯನ್ ಡಾಲರ್ ಮೌಲ್ಯದ ಆಪಲ್ ಸಂಸ್ಥೆಯು ವಿಶ್ವದ 100 ಅತೀ ಮೌಲ್ಯಯುತ ಬ್ರ್ಯಾಂಡ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಗೂಗಲ್ ಕೂಡಾ ಟಾಪ್ 5 ಪಟ್ಟಿಯಲ್ಲಿ ಇದ್ದು, ಅದರ ಮೌಲ್ಯ 207.5 ಬಿಲಿಯನ್ ಡಾಲರ್ ಆಗಿದೆ. ಇನ್ನು ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ..

 ಟಾಪ್ 100 ಪಟ್ಟಿಗೆ ಟಾಟಾ ಗ್ರೂಪ್ ಎಂಟ್ರಿ

ಟಾಪ್ 100 ಪಟ್ಟಿಗೆ ಟಾಟಾ ಗ್ರೂಪ್ ಎಂಟ್ರಿ

ವಿಶ್ವದ 100 ಅತೀ ಮೌಲ್ಯಯುತ ಬ್ರ್ಯಾಂಡ್ ಪಟ್ಟಿಯಲ್ಲಿ ಭಾರತದ ಏಕೈಕ ಬ್ರ್ಯಾಂಡ್ ಟಾಟಾ ಗ್ರೂಪ್ ಮಾತ್ರ ಕಾಣಿಸಿಕೊಂಡಿದೆ. ಈ ವರ್ಷ ಟಾಟಾ ಗ್ರೂಪ್ ಈ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಟಾಟಾ ಗ್ರೂಪ್ ಬ್ರ್ಯಾಂಡ್ ಮೌಲ್ಯ ಶೇಕಡ 12.4ರಷ್ಟು ಏರಿಕೆಯಾಗಿದೆ. ಇನ್ನು ಟಾಟಾ ಗ್ರೂಪ್ ದಕ್ಷಿಣ ಏಷ್ಯಾದ ಅತೀ ದೊಡ್ಡ ಬ್ರ್ಯಾಂಡ್ ಆಗಿದೆ. ಈ ಸಂಸ್ಥೆಯ ಮೌಲ್ಯ 23.9 ಬಿಲಿಯನ್ ಡಾಲರ್ ಆಗಿದೆ.

 ಟಾಪ್ 10 ಅತೀ ಮೌಲ್ಯಯುತ ಬ್ರ್ಯಾಂಡ್ ಪಟ್ಟಿ

ಟಾಪ್ 10 ಅತೀ ಮೌಲ್ಯಯುತ ಬ್ರ್ಯಾಂಡ್ ಪಟ್ಟಿ

1. ಆಪಲ್: 355.1 ಬಿಲಿಯನ್ ಡಾಲರ್
2. ಅಮೆಜಾನ್: 350.3 ಬಿಲಿಯನ್ ಡಾಲರ್
3. ಗೂಗಲ್: 263.4 ಬಿಲಿಯನ್ ಡಾಲರ್
4. ಮೈಕ್ರೋಸಾಫ್ಟ್: 135.4 ಬಿಲಿಯನ್ ಡಾಲರ್
5. ವಾಲ್‌ಮಾರ್ಟ್: 184.2 ಬಿಲಿಯನ್ ಡಾಲರ್
6. ಸ್ಯಾಮ್‌ಸಂಗ್: 107.3 ಬಿಲಿಯನ್ ಡಾಲರ್
7. ಫೇಸ್‌ಬುಕ್: 101.2 ಬಿಲಿಯನ್ ಡಾಲರ್
8. ಐಸಿಬಿಸಿ: 75.1 ಬಿಲಿಯನ್ ಡಾಲರ್
9. ಹುವಾಯ್: 71.2 ಬಿಲಿಯನ್ ಡಾಲರ್
10. ವೆರಿಜಾನ್: 69.6 ಬಿಲಿಯನ್ ಡಾಲರ್

 

 

 ವಿಶ್ವದಲ್ಲೇ ಅತಿ ಹೆಚ್ಚು ಗಳಿಕೆ ಹೊಂದಿರುವ ಆಪ್ ಟಿಕ್‌ಟಾಕ್
 

ವಿಶ್ವದಲ್ಲೇ ಅತಿ ಹೆಚ್ಚು ಗಳಿಕೆ ಹೊಂದಿರುವ ಆಪ್ ಟಿಕ್‌ಟಾಕ್

ಟಿಕ್‌ಟಾಕ್ ಪ್ರತಿ ದಿನ ಖರೀದಿ ಹಾಗೂ ಸಬ್‌ಸ್ಕ್ರೀಷನ್‌ ಮೂಲಕ 2.5 ಮಿಲಿಯನ್ ಡಾಲರ್ ಸಂಪಾದನೆಯನ್ನು ಹೊಂದಿದೆ. ಇದು ವಿಶ್ವದಾದ್ಯಂತ ಬಳಕೆ ಮಾಡಲಾಗುವ ಅಂಡ್ರಾಯ್ಡ್ ಹಾಗೂ ಐಫೋನ್‌ನ ಲೆಕ್ಕಾಚಾರವಾಗಿದೆ. ಇದರಲ್ಲಿ ಜಾಹೀರಾತು ಹಾಗೂ ಐಪಾಡ್ ಲೆಕ್ಕಾಚಾರ ಒಳಗೊಂಡಿಲ್ಲ. ಇನ್ನು ಪ್ರತಿ ಗಂಟೆಗೆ ಟಿಕ್‌ಟಾಕ್ 1,04,000 ಡಾಲರ್ ಸಂಪಾದನೆಯನ್ನು ಮಾಡುತ್ತದೆ. ಮಾಸಿಕವಾಗಿ ಟಿಕ್‌ಟಾಕ್ ಆದಾಯ 75.8 ಮಿಲಿಯನ್ ಡಾಲರ್ ಆಗಿದೆ.

 Annual Global 500ನ ಮುಖ್ಯಾಂಶಗಳು

Annual Global 500ನ ಮುಖ್ಯಾಂಶಗಳು

* ಆಪಲ್ ವಿಶ್ವದ ಅತೀ ಮೌಲ್ಯಯುತ ಬ್ರ್ಯಾಂಡ್ ಆಗಿದ್ದು, ಇದರ ಮೌಲ್ಯ 355.1 ಬಿಲಿಯನ್ ಡಾಲರ್ ಆಗಿದೆ. ನಂತರದ ಸ್ಥಾನದಲ್ಲಿ ಅಮೆಜಾನ್, ಗೂಗಲ್ ಇದೆ.
* ಹೊಸದಾಗಿ ಈ ಪಟ್ಟಿಗೆ ಎಂಟ್ರಿ ನೀಡಿರುವ ಟಿಕ್‌ಟಾಕ್ ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿದೆ. ಸುಮಾರು ಶೇಕಡ 215ರಷ್ಟು ಬೆಳವಣಿಗೆ ಹೊಂದಿದೆ.
* ಟೆಕ್‌ ಅತೀ ಮೌಲ್ಯಯುತ ಇಂಡಸ್ಟ್ರೀಯಾಗಿ ಉಳಿದುಕೊಂಡಿದೆ. ಎರಡನೇ ಸ್ಥಾನದಲ್ಲಿ ರಿಟೇಲ್ ಇದೆ. ರಿಟೇಲ್ ಇಂಡಸ್ಟ್ರಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲೇ ಶೇಕಡ 46ರಷ್ಟು ಬೆಳವಣಿಗೆ ಕಂಡು, 1 ಟ್ರಿಲಿಯನ್ ಡಾಲರ್ ಅನ್ನು ದಾಟಿದೆ.
* ಇನ್ನು ಕೋವಿಡ್ ಸಾಂಕ್ರಾಮಿಕ ಫಾರ್ಮಾ ಇಂಡಸ್ಟ್ರಿಗೆ ಬಲತುಂಬಿದೆ. ಕೋವಿಡ್ ಲಸಿಕೆಯ ಪ್ರಾಮುಖ್ಯತೆ ಅಧಿಕವಾದ ಬಳಿಕ ಫಾರ್ಮಾ ಇಂಡಸ್ಟ್ರಿ ಅತೀ ವೇಗವಾಗಿ ಬೆಳವಣಿಗೆ ಹೊಂದಿದೆ. ಆದರೆ ಟೂರಿಸಂ ಸೆಕ್ಟರ್ ಕೋವಿಡ್‌ ಸಾಂಕ್ರಾಮಿಕಕ್ಕಿಂತ ಮುಂಚಿನ ಸ್ಥಿತಿಗೆ ಇನ್ನು ಕೂಡಾ ಮರಳಿಲ್ಲ.
* ಪಟ್ಟಿಯಲ್ಲಿ 2/3ರಷ್ಟು ತಮ್ಮ ದೇಶದ ಬ್ರ್ಯಾಂಡ್‌ಗಳನ್ನು ಹೊಂದಿರುವ ಯುಎಸ್ ಹಾಗೂ ಚೀನಾ ಪ್ರಮುಖ ದೇಶವಾಗಿದೆ. ಆದರೆ ಭಾರತ ಶೇಕಡ 42ರಷ್ಟು ಬೆಳವಣಿಗೆ ಹೊಂದಿ ಪಟ್ಟಿಗೆ ಸೇರ್ಪಡೆಯಾಗಿದೆ.
* ವಿಚಾಟ್ ವಿಶ್ವದ ಅತೀ ಬಲಿಷ್ಠ ಬ್ರ್ಯಾಂಡ್ ಆಗಿದೆ. ಸತತ ಎರಡನೇ ವರ್ಷ ಈ ಬ್ರ್ಯಾಂಡ್ 100ರಲ್ಲಿ 93.3 ಸ್ಕೋರ್ ಅನ್ನು ಗಳಿಸಿದೆ. ಹಾಗೆಯೇ AAA+ ರೇಟಿಂಗ್ ಅನ್ನು ಪಡೆದಿದೆ.
* ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲ ವಿಶ್ವದ 250 ಸಿಇಒಗಳ ಬ್ರ್ಯಾಂಡ್ ಫೈನಾನ್ಸ್ ಬ್ರಾಂಡ್ ಗಾರ್ಡಿಯನ್‌ಶಿಪ್ ಇಂಡೆಕ್ಸ್ 2022ರಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

English summary

World's 100 Most Valuable Brand: Only 1 Indian Co in List, Explained in Kannada

World's 100 Most Valuable Brand: Only One Indian Co Tata Group in World’s 100 Most Valuable Brand List.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X