For Quick Alerts
ALLOW NOTIFICATIONS  
For Daily Alerts

Year Ender 2022: 2022ರಲ್ಲಿ ವಿಶ್ವವಿಖ್ಯಾತರಾದ ಭಾರತೀಯ ಮಹಿಳಾ ವ್ಯಾಪಾರಿಗಳ ಬಗ್ಗೆ ತಿಳಿಯಿರಿ

|

ವಿಶ್ವದ ಎಲ್ಲ ದೇಶಗಳ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪೂರ್ವವಾದುದು. ಜಗತ್ತಿನ ಯಾವುದೇ ದೇಶವು ಬೆಳವಣಿಗೆ ಹೊಂದಬೇಕಾದರೆ ಮಹಿಳೆಯರ ಕೊಡುಗೆ ಕೂಡಾ ಅತೀ ಮುಖ್ಯವಾಗಿದೆ. ಅದರಲ್ಲೂ ಪ್ರಸ್ತುತ ಎಲ್ಲ ವಲಯದಲ್ಲೂ ಮಹಿಳೆಯರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ವಿಶ್ವದಲ್ಲಿ ಪ್ರಮುಖ ಸ್ಥಾನಗಳಲ್ಲಿ ಇರುವ ಮಹಿಳೆಯರು ಬೆಳವಣಿಗೆ ಎಂಬ ಏಣಿಯನ್ನು ಏರುತ್ತಲ್ಲೇ ಇದ್ದಾರೆ. ತಮ್ಮ ಯಶಸ್ಸಿನ ಹೆಜ್ಜೆಯ ಮೂಲಕ ಯುವತಿಯರಿಗೆ ಸ್ಫೂರ್ತಿಯನ್ನು ನೀಡುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಹಲವಾರು ಮಹಿಳೆಯರು ವಿಶ್ವವಿಖ್ಯಾತರಾಗಿದ್ದಾರೆ.

ಏಷ್ಯಾದ ಟಾಪ್-20 ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಭಾರತೀಯರು; ಯಾರವರು?ಏಷ್ಯಾದ ಟಾಪ್-20 ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಭಾರತೀಯರು; ಯಾರವರು?

2022ರಲ್ಲಿ ಹಲವಾರು ಮಹಿಳಾ ವ್ಯಾಪಾರಿಗಳು ವಿಶ್ವದಲ್ಲಿ ಹೆಸರನ್ನು ಗಳಿಸಿದ್ದಾರೆ, ಜಗತ್ತಿಗೆ ಸ್ಪೂರ್ತಿಯನ್ನು ನೀಡಿದ್ದಾರೆ. ಹಾಗೆಯೇ ಲಕ್ಷಾಧಿಪತಿಯಿಂದ, ಕೋಟ್ಯಾಧಿಪತಿಗಳು ಆಗುತ್ತಿದ್ದಾರೆ. 2023 ಅಥವಾ ಹೊಸ ವರ್ಷ ಇನ್ನು ಕೆಲವೇ ವಾರಗಳಲ್ಲಿ ಬರಲಿದೆ. ಅದಕ್ಕೂ ಮುನ್ನ 2022ರಲ್ಲಿ ಜನಪ್ರಿಯರಾಗಿರುವ, ಶ್ರೀಮಂತರಾಗಿರುವ ಭಾರತದ ಮಹಿಳಾ ವ್ಯಾಪಾರಿಗಳ ಬಗ್ಗೆ ತಿಳಿಯಿರಿ

 ಶೀತಲ್ ಕಪೂರ್ ಯಾರು?

ಶೀತಲ್ ಕಪೂರ್ ಯಾರು?

ಎಸ್‌ಎಚ್‌ಆರ್‌ ಲೈಫ್‌ಸೈಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹ ನಿರ್ದೇಶಕರಾದ ಶೀತಲ್ ಕಪೂರ್ ದೇಶದ ಪ್ರಖ್ಯಾತ ಮಹಿಳಾ ವ್ಯಾಪಾರಿಗಳಲ್ಲಿ ಒಬ್ಬರಾಗಿದ್ದಾರೆ. ತನ್ನ 40ನೇ ವಯಸ್ಸಿನಲ್ಲಿ ವ್ಯಾಪಾರವನ್ನು ಆರಂಭ ಮಾಡಿದ ಶೀತಲ್ ಕಪೂರ್ ಪ್ರಸ್ತುತ 400 ಕೋಟಿ ರೂಪಾತಿ ಮೌಲ್ಯದ ವ್ಯಾಪಾರವನ್ನು ಹೊಂದಿದ್ದಾರೆ. ತನ್ನ ಪತಿ ಸಂದೀಪ್ ಕಪೂರ್ ಜೊತೆಯಾಗಿ 2010ರಲ್ಲಿ ಭಾರತೀಯ ಮಹಿಳೆಯರ ಸಾಂಪ್ರಾದಾಯಿಕ ಉಡುಪುಗಳ ಮಳಿಗೆಯನ್ನು ಶೀತಲ್ ಕಪೂರ್ ಆರಂಭ ಮಾಡಿದ್ದಾರೆ. ಈ ದಂಪತಿಯು ಮೂರು ವರ್ಷದಲ್ಲೇ ದೇಶದಲ್ಲಿ 10 ಮಳಿಗೆಗಳನ್ನು ತೆರೆದಿದ್ದಾರೆ. ಹಾಗೆಯೇ ಪ್ರಸ್ತುತ 100ರಷ್ಟು ಮಳಿಗೆಯನ್ನು ಹೊಂದಿದ್ದಾರೆ. ಸುಮಾರು 500 ಮಳಿಗೆಗಳನ್ನು ತೆರೆಯುವ ನಿಟ್ಟಿನಲ್ಲಿ ಶೀತಲ್ ಕಪೂರ್ ಕಾರ್ಯಪ್ರವೃತ್ತರಾಗಿದ್ದಾರೆ.

ಮಹಿಳೆಯರಿಗೆ 10 ಯಶಸ್ವಿ ಬಿಸಿನೆಸ್ ಐಡಿಯಾ ಇಲ್ಲಿದೆ ನೋಡಿಮಹಿಳೆಯರಿಗೆ 10 ಯಶಸ್ವಿ ಬಿಸಿನೆಸ್ ಐಡಿಯಾ ಇಲ್ಲಿದೆ ನೋಡಿ

 ಪ್ರೀತಿ ರತಿ ಗುಪ್ತಾ

ಪ್ರೀತಿ ರತಿ ಗುಪ್ತಾ

ಪ್ರೀತಿ ರತಿ ಗುಪ್ತಾ ಮಹಿಳೆಯರಿಗಾಗಿರುವ ಭಾರತದ ಮೊದಲ ಹಣಕಾಸು ಪ್ಲಾಟ್‌ಫಾರ್ಮ್ ಎಲ್‌ಎಕ್ಸ್‌ಎಂಇ ಯ ಸ್ಥಾಪಕರಾಗಿದ್ದಾರೆ. ತನ್ನ 17ನೇ ವರ್ಷದಲ್ಲಿ ವ್ಯಾಪಾರ ಕ್ಷೇತ್ರಕ್ಕೆ ಧುಮುಕಿದ ಪ್ರೀತಿ ರತಿ ಗುಪ್ತಾ, ಎಲ್ಲ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರ್ಯರಾಗಿರಬೇಕು ಎಂದು ನಂಬಿಕೊಂಡಿದ್ದಾರೆ. ಬಹುತೇಕ ಮನೆಗಳಲ್ಲಿ ಮಹಿಳೆಯರು ಹಣಕಾಸಿನ ವಿಚಾರಕ್ಕೆ ಬಂದಾಗ ಪುರುಷರ ಮೇಲೆ ಅವಲಂಭಿತರಾಗಿದ್ದಾರೆ, ಈಗಲೂ ಹಾಗೆಯೇ ಮುಂದುವರಿಯುತ್ತಿದೆ. ಆದರೆ ಈಗ ಶಿಕ್ಷಣ ಎಲ್ಲವನ್ನು ಬದಲಾವಣೆ ಮಾಡುತ್ತಿದೆ. ಮಹಿಳೆಯರು ಆರ್ಥಿಕವಾಗಿ ಯಾರಿಗೂ ಅವಲಂಭಿತರಾಗಿರಬಾರದು ಎಂದು ಪ್ರೀತಿ ಹೇಳುತ್ತಾರೆ. ಗೂಗಲ್‌ ಆಯ್ಕೆ ಮಾಡಿದ 20 ಉತ್ತಮ ಮಹಿಳಾ ಪ್ರಾತಿನಿಧ್ಯದ ಸಂಸ್ಥೆಗಳ ಪೈಕಿ ಎಲ್‌ಎಕ್ಸ್‌ಎಂಇ ಕೂಡಾ ಒಂದಾಗಿದೆ.

 ಮಸಾಬಾ ಗುಪ್ತಾ ಬಗ್ಗೆ ತಿಳಿದಿದೆಯೇ?

ಮಸಾಬಾ ಗುಪ್ತಾ ಬಗ್ಗೆ ತಿಳಿದಿದೆಯೇ?

ಮಸಾಬಾ ಗುಪ್ತಾ ಫ್ಯಾಷನ್ ಡಿಸೈನರ್ ಹಾಗೂ ನಟಿಯಾಗಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಮಸಾಬಾ ಮಸಾಬಾ ಸೀಸನ್ 2 ಆರಂಭವಾಗುವುದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಈ ಮಹಿಳಾ ವ್ಯಾಪಾರಿಯ ಬಗ್ಗೆ ಭಾರೀ ಚರ್ಚೆಗಳು ನಡೆದಿತ್ತು. ಫ್ಯಾಷನ್ ಡಿಸೈನರ್ ಹೊಸ ಹೊಸ ಕಲೆಕ್ಷನ್‌ಗಳನ್ನು ಜನರಿಗೆ ಪರಿಚಯಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ.

Richest Women in India 2022: ಭಾರತದಲ್ಲಿ ಅತೀ ಶ್ರೀಮಂತ ಮಹಿಳೆ ಯಾರು?Richest Women in India 2022: ಭಾರತದಲ್ಲಿ ಅತೀ ಶ್ರೀಮಂತ ಮಹಿಳೆ ಯಾರು?

 ಸೋಮ ಮಂಡಲ್, ಗಜಲ್ ಅಲಾಘ್, ನಮಿತಾ ಥಾಪರ್

ಸೋಮ ಮಂಡಲ್, ಗಜಲ್ ಅಲಾಘ್, ನಮಿತಾ ಥಾಪರ್

ಸೋಮ ಮಂಡಲ್, ಗಜಲ್ ಅಲಾಘ್, ನಮಿತಾ ಥಾಪರ್ ಭಾರತದ ಪ್ರಸಿದ್ಧ ಮಹಿಳಾ ವ್ಯಾಪಾರಿಗಳು ಆಗಿದ್ದಾರೆ. ಫೋರ್ಬ್ಸ್‌ನ 20 ಏಷ್ಯಾದ ಮಹಿಳಾ ವ್ಯಾಪಾರಿಗಳ ಪಟ್ಟಿಯಲ್ಲಿ ಈ ಮೂವರು ವ್ಯಾಪಾರಿಗಳು ಇದ್ದಾರೆ. ಸೋಮನ್ ಮಂಡಲ್ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ (ಎಸ್‌ಎಐಎಲ್) ಮುಖ್ಯಸ್ಥರಾಗಿದ್ದಾರೆ. ನಮಿತಾ ಥಾಪರ್ ಎಮ್‌ಕ್ಯೂರ್ ಫಾರ್ಮಾದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಗಜಲ್ ಅಲಾಘ್ ಹನ್ಸ ಕನ್ಸ್ಯೂಮರ್‌ನ ಮುಖ್ಯ ಅಧಿಕಾರಿಯಾಗಿದ್ದಾರೆ. ಈ ಮೂವರು ಮಲ್ಟಿ ಬಿಲಿಯನ್ ಕಂಪನಿಗಳನ್ನು ಹೊಂದಿದ್ದಾರೆ.

ಆಕಾಂಕ್ಷ ಭಾರ್ಗವ

ಆಕಾಂಕ್ಷ ಭಾರ್ಗವ

ಆಂಕಾಕ್ಷ ಭಾರ್ಗವ ತನ್ನ ಕುಟುಂಬದ ವ್ಯಾಪಾರವನ್ನು ಮುನ್ನಡೆಸುತ್ತಿದ್ದಾರೆ. ನವೆಂಬರ್‌ನಲ್ಲಿ HerZindagia ಅನ್ನು ಆರಂಭ ಮಾಡಿದ್ದಾರೆ. ಹೆಚ್ಚಾಗಿ ಮಹಿಳೆಯರು ಎಲ್ಲ ಮುತುವರ್ಜಿ ತೆಗೆದುಕೊಂಡು ಕೆಲಸ ಮಾಡುತ್ತಾರೆ, ಎಂದು ಹೇಳುವ ಆಕಾಂಕ್ಷ ಭಾರ್ಗವ ಎಲ್ಲ ವಲಯಕ್ಕೂ ಮಹಿಳೆಯರ ಕೊಡುಗೆ ಅಗತ್ಯವಾಗಿದೆ. ಆರಂಭದಲ್ಲಿ, ಆಕಾಂಕ್ಷ ಅಂಡರ್‌ಡಾಗ್ ಎಂದು ಕರೆಯಲಾಗುತ್ತಿತ್ತು.

 ಶ್ರೀಮಂತ ಮಹಿಳಾ ವ್ಯಾಪಾರಿ

ಶ್ರೀಮಂತ ಮಹಿಳಾ ವ್ಯಾಪಾರಿ

ಫೋರ್ಬ್ಸ್‌ನ ಶ್ರೀಮಂತ ಮಹಿಳಾ ವ್ಯಾಪಾರಿಗಳ ಪಟ್ಟಿಯಲ್ಲಿ ಫಲ್ಗುಣಿ ನಾಯರ್ ಹಾಗೂ ಸಾವಿತ್ರಿ ಜಿಂದಾಲ್ ಇದ್ದಾರೆ. ಅವರ ನಿವ್ವಳ ಆದಾಯವು ಮಿಲಿಯನ್ ದಾಟಿದೆ. ಜಿಂದಾಲ್ 91ನೇ ಸ್ಥಾನದಲ್ಲಿದ್ದು ನಿವ್ವಳ ಆದಾಯ 17.7 ಬಿಲಿಯನ್ ಡಾಲರ್ ಆಗಿದೆ. ಇನ್ನೊಂದೆಡೆ ನಾಯರ್‌ ನಿವ್ವಳ ಆದಾಯ 4.5 ಬಿಲಿಯನ್ ಡಾಲರ್ ಆಗಿದೆ. ಭಾರತದಲ್ಲಿ ಫಲ್ಗುಣಿ ನಾಯರ್ ನಾಯ್ಕ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ. ಇನ್ನು ಈ ಶ್ರೀಮಂತ ಮಹಿಳಾ ವ್ಯಾಪಾರಿಗಳ ಪಟ್ಟಿಯಲ್ಲಿ ರಾಧಾ ವೆಂಬು, ಕಿರಣ್ ಮಂಜೂದಾರ್ ಶ್ಹಾ, ಅನು ಅಗ, ಲೀನಾ ತಿವಾರಿ ಕೂಡಾ ಇದ್ದಾರೆ.

English summary

Year Ender 2022: Meet Indian Businesswomen who wowed us in this year

Year Ender 2022 : Let’s take a look at the women entrepreneurs who wowed us in the past 12 months. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X