For Quick Alerts
ALLOW NOTIFICATIONS  
For Daily Alerts

ಪಾನ್ ನಂಬರ್ ಕಳಕೊಂಡ್ರಾ? ಚಿಂತೆ ಬಿಡಿ, ಇಲ್ಲಿ ನೋಡಿ

|

ಇಂದು ಪ್ರತಿಯೊಂದು ವ್ಯವಹಾರಕ್ಕೂ ಪಾನ್ ಕಾರ್ಡ್ ಕಡ್ಡಾಯ ಎಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ನಿಮ್ಮ ಹೆಸರಿನಲ್ಲಿ ನೀಡಿರುವ ನಂಬರ್ ಅನ್ನು ಕಾಪಿ ಅಥವಾ ಡುಪ್ಲಿಕೇಟ್ ಮಾಡಲು ಸಾಧ್ಯವಿಲ್ಲ, ಅದನ್ನೇ ಎಲ್ಲ ಕಡೆ ಬಳಕೆ ಮಾಡಿಕೊಳ್ಳಬೇಕಾಗುತ್ತದೆ.

 

ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಆಕಸ್ಮಿಕವಾಗಿ ನಿಮ್ಮ ಪಾನ್ ಕಾರ್ಡ್ ಕಳೆದುಕೊಂಡರೆ ಅಥವಾ ನಂಬರ್ ಮರೆತುಹೋದರೆ ಏನು ಮಾಡಬೇಕು? ಹೌದು ಅದಕ್ಕೆ ಉತ್ತರ ಇಲ್ಲಿದೆ.[ಪಾನ್ ಕಾರ್ಡ್ ಸರಿ ಇಲ್ಲ: ದೂರು ದಾಖಲಿಸುವುದು ಹೇಗೆ?]

 
ಪಾನ್ ನಂಬರ್ ಕಳಕೊಂಡ್ರಾ? ಚಿಂತೆ ಬಿಡಿ, ಇಲ್ಲಿ ನೋಡಿ

ಪಾನ್ ಕಾರ್ಡ್ ಹೋಲ್ಡರ್ ಹೆಸರು, ಹುಟ್ಟಿದ ದಿನಾಂಕ, ತಂದೆಯ ಮೊದಲ ಮತ್ತು ಕಡೆಯ ಹೆಸರನ್ನು ಯಾವಾಗಲೂ ತಲೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆನ್ ಲೈನ್ ಮುಖಾಂತರ ನಿಮ್ಮ ಪಾನ್ ಕಾರ್ಡ್ ನ ಸಕಲ ಮಾಹಿತಿಯನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ನೋಡಿಕೊಂಡು ಬರೋಣ...[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

* ಮೊದಲು ಆದಾಯ ತೆರಿಗೆ ಇಲಾಖೆ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ
* ನಿಮ್ಮ ಜನ್ಮ ದಿನಾಂಕವನ್ನು ದಾಖಲು ಮಾಡಿ
* ನಿಮ್ಮ ಅಡ್ಡ ಹೆಸರು, ಮಧ್ಯದ ಹೆಸರು ಮತ್ತು ಕೊನೆಯ ಹೆಸರನ್ನು ದಾಖಲಿಸಿ
* ವಿಂಡೋ ಮೇಲೆ ಕಾಣುತ್ತಿರುವ ಕೋಡ್ ನ್ನು ನಿರ್ದಿಷ್ಟ ಜಾಗದಲ್ಲಿ ನಮೂದಿಸಿ
* ಇದೆಲ್ಲ ಆದ ಮೇಲೆ ಸಬ್ ಮಿಟ್ ಬಟನ್ ಒತ್ತಿ
ಎಲ್ಲ ಮಾಹಿತಿಗಳು ಸರಿಯಾಗಿದ್ದರೆ ನಿಮ್ಮ ಪಾನ್ ಕಾರ್ಡ್ ತೆರೆದುಕೊಳ್ಳುವುದು..

ನೆನಪಿನಲ್ಲಿರಲಿ
* ಪಾನ್ ಕಾರ್ಡ್ ನಲ್ಲಿ ಯಾವ ಹೆಸರು ನೀಡಿದ್ದೀರೋ ಇಲ್ಲಿಯೂ ಹಾಗೇ ಇರಬೆಕು
* ಜನ್ಮ ದಿನಾಂಕ ಸರಿಯಾಗಿ ಇರಬೇಕು

ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದು ಇನ್ನು ನಿಮ್ಮ ಕೈ ಸೇರದೇ ಇದ್ದರೂ ಪರಿಹಾರ ಮಾರ್ಗವಿದೆ. ಅಕ್ ನಾಲೆಜ್ ಮೆಂಟ್ ನಂಬರ್ ಅನ್ನು 53030 ಗೆ ಮೆಸೇಜ್ ಮಾಡಿದರೆ ಇನ್ನಷ್ಟು ಮಾಹಿತಿ ಸಿಗುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

Forgot Your Pan Number? Here's How To Retrieve Using Name & DOB Online

Permanent Account Number (PAN) is a mandatory document for most financial transactions and it also acts as identity proof in most cases. It is a unique number allotted to each individual and is valid for life time. Once the number is allotted There are chances that you must have misplaced your Pan Card and you are not aware of your number. To apply for the duplicate card or reprint the earlier card you must have your PAN number known. Not to worry in such cases, as there is a way to find the PAN by name and Date of birth (DOB) of individuals.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X