For Quick Alerts
ALLOW NOTIFICATIONS  
For Daily Alerts

ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಿರಾ? ಈಗ ನಿಯಮಗಳು ಬದಲಾಗಿವೆ..

ವಿದೇಶಾಂಗ ಸಚಿವಾಲಯವು ಪಾಸ್ಪೋರ್ಟ್ ಅರ್ಜಿ ಸಲ್ಲಿಕೆಗಾಗಿ ಇತ್ತೀಚಿಗಷ್ಟೆ ಹೊಸ ನಿಯಮಾವಳಿಗಳನ್ನು ಘೋಷಿಸಿದೆ. ಈ ನೂತನ ನಿಯಮಾವಳಿಂದಾಗುವ ಪ್ರಮುಖ ಬದಲಾವಣೆಗಳ ಸಾರಾಂಶವನ್ನು ಇಲ್ಲಿ ನೀಡುತ್ತಿದ್ದೇವೆ.

|

ವಿದೇಶಾಂಗ ಸಚಿವಾಲಯವು ಪಾಸ್ಪೋರ್ಟ್ ಅರ್ಜಿ ಸಲ್ಲಿಕೆಗಾಗಿ ಇತ್ತೀಚಿಗಷ್ಟೆ ಹೊಸ ನಿಯಮಾವಳಿಗಳನ್ನು ಘೋಷಿಸಿದೆ. ಈ ನೂತನ ನಿಯಮಾವಳಿಂದಾಗುವ ಪ್ರಮುಖ ಬದಲಾವಣೆಗಳ ಸಾರಾಂಶವನ್ನು ಇಲ್ಲಿ ನೀಡುತ್ತಿದ್ದೇವೆ. ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

 

ಜನ್ಮ ದಾಖಲೆ ಪುರಾವೆಗಳು

ಜನ್ಮ ದಾಖಲೆ ಪುರಾವೆಗಳು

ಈ ಮೊದಲಿದ್ದ ನಿಯಮಾವಳಿಗಳಂತೆ, 26 ಜನವರಿ 1989 ರಂದು ಅಥವಾ ಆನಂತರ ಜನಿಸಿದ ಅರ್ಜಿದಾರರಿಗೆ ಅರ್ಜಿಯ ಜೊತೆ ತಮ್ಮ ಜನನ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ಆದರೆ ಹೊಸ ನಿಯಮಾವಳಿಯಲ್ಲಿ ಇದನ್ನು ಸಡಿಲಿಸಲಾಗಿದೆ. ಈಗ ಅರ್ಜಿದಾರನು ಈ ಕೆಳಕಾಣಿಸಿದ ಜನ್ಮ ದಿನಾಂಕವನ್ನೊಳಗೊಂಡ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿದರೆ ಸಾಕು.
- ಜನನ ಮತ್ತು ಮರಣ ನೋಂದಣಾಧಿಕಾರಿಗಳಿಂದ ಅಥವಾ ಪುರಸಭಾ ನಿಗಮದಿಂದ ಅಥವಾ 1969 ರ ಜನನ ಮತ್ತು ಮರಣ ಕಾಯಿದೆ ಅಡಿಯಲ್ಲಿ ಭಾರತದಲ್ಲಿ ಜನಿಸಿದ ಶಿಶುವಿನ ಜನನವನ್ನು ಪ್ರಮಾಣೀಕರಿಸುವ ಅಧಿಕಾರ ಹೊಂದಿರುವ ಇತರ ಯಾವುದೇ ನಿಗದಿತ ಅಧಿಕಾರಿಗಳಿಂದ ಪಡೆದುಕೊಂಡ ಜನನ ಪ್ರಮಾಣಪತ್ರ.
- ಕಡೆಯ ಬಾರಿಗೆ ಹಾಜರಾದ ಶಾಲೆಯಿಂದ/ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಯಿಂದ ನೀಡಲ್ಪಟ್ಟ ವರ್ಗಾವಣಾ ಪತ್ರ/ ಶಾಲೆಯನ್ನು ತೊರೆದ ಪತ್ರ/ಮೆಟ್ರಿಕ್ಯುಲೆಶನ್ ಪ್ರಮಾಣ ಪತ್ರ
- ಪ್ಯಾನ್ (PAN) ಕಾರ್ಡ್.
- ಆಧಾರ್ ಕಾರ್ಡ್/ ಇ-ಆಧಾರ್.
- ಅರ್ಜಿದಾರನ ಇಲಾಖೆಯ ಅಥವಾ ಸಚಿವಾಲಯದ ಸಂಬಂಧಪಟ್ಟ ಆಡಳಿತ ಅಧಿಕಾರಿಗಳಿಂದ ಅಥವಾ ಉಸ್ತುವಾರಿ ಅಧಿಕಾರಿಗಳಿಂದ ಕ್ರಮವಾಗಿ ಧೃಢೀಕರಿಸಲ್ಪಟ್ಟ ಅರ್ಜಿದಾರರ ಸೇವಾ ದಾಖಲೆಯ ಉದ್ಧೃತಭಾಗದ (extract) (ಸರ್ಕಾರಿ ನೌಕರರಿಗೆ ಮಾತ್ರ ಅನ್ವಯ) ಅಥವಾ ವೇತನದ ಪಿಂಚಣಿ ಅದೇಶದ (ನಿವೃತ್ತ ಸರ್ಕಾರಿ ನೌಕರರಿಗೆ ಮಾತ್ರ) ನಕಲು.
- ವಾಹನ ಚಾಲನಾ ಪರವಾನಗಿಪತ್ರ (Driving license)
- ಭಾರತದ ಚುನಾವಣಾ ಆಯೋಗದಿಂದ ನೀಡಲ್ಪಟ್ಟ ಭಾವಚಿತ್ರವುಳ್ಳ ಚುನಾವಣಾ ಗುರುತಿನ ಚೀಟಿ (Election Photo Identity Card)
- ಸಾರ್ವಜನಿಕ ಜೀವವಿಮಾ ನಿಗಮಗಳು/ಸಂಸ್ಠೆಗಳು ನೀಡಿರುವ ವಿಮಾ ಪಾಲಿಸಿಯ ಬಾಂಡ್

ತಂದೆ ತಾಯಿ/ಕಾನೂನುಬದ್ದ ಪೋಷಕರ ವಿವರ
 

ತಂದೆ ತಾಯಿ/ಕಾನೂನುಬದ್ದ ಪೋಷಕರ ವಿವರ

ಸ್ವಾಗತಾರ್ಹ ವಿಚಾರವೆಂದರೆ, ಹೊಸ ಪಾಸ್ಪೋರ್ಟ್ ನಿಯಮದಲ್ಲಿ ತಂದೆ ಹಾಗೂ ತಾಯಿ ಅಥವಾ ಇಬ್ಬರೂ ಪೋಷಕರ ವಿವರವನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಮೊದಲಿದ್ದ ಕಡ್ಡಾಯವಾಗಿ ನಮೂದಿಸುವ ಅಗತ್ಯವನ್ನು ಕೈ ಬಿಡಲಾಗಿದೆ. ಈಗ ಅರ್ಜಿದಾರನು ತಂದೆ ತಾಯಿಯಾಗಲಿ ಅಥವಾ ಕಾನೂನುಬದ್ದ ಪೋಷಕರಾಗಲಿ ಯಾವುದೇ ಒಬ್ಬರ ಹೆಸರನ್ನು ನೀಡಿದರೆ ಸಾಕು. ಇದು ಏಕಾಂಗಿ ಪೋಷಕರಿಂದ ಬೆಳೆಸಲ್ಪಟ್ಟ ಮಕ್ಕಳು ಅಥವಾ ಅನಾಥ ಮಕ್ಕಳು ಪಾಸ್ಪೋರ್ಟ್ ಅರ್ಜಿ ಸಲ್ಲಿಸುವುದನ್ನು ಸರಳ ಮಾಡಿಕೊಡುತ್ತದೆ.

ಸಾಧು, ಸಂತರಿಗೆ ಅವಕಾಶ

ಸಾಧು, ಸಂತರಿಗೆ ಅವಕಾಶ

ಆಧ್ಯಾತ್ಮಿಕ ಉದ್ದೇಶಿತ ಜನರಿಗೆ (ಸಾಧುಗಳು/ ಸನ್ಯಾಸಿಗಳು), ಅವರು ತಮ್ಮ ತಂದೆ ತಾಯಿಯರ ಹೆಸರನ್ನು ನಮೂದಿಸುವ ಬದಲಾಗಿ, ತಮ್ಮ ಆಧ್ಯಾತ್ಮಿಕ ನಾಯಕರ ಹೆಸರನ್ನು ನಮೂದಿಸುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ.

ಅನುಬಂಧಗಳು

ಅನುಬಂಧಗಳು

ಮೊದಲಿದ್ದ ಒಟ್ಟು 15 ಅನುಬಂಧಗಳನ್ನು ಈಗ 9 ಅನುಬಂಧಗಳಿಗೆ ಮೊಟಕುಗೊಳಿಸಲಾಗಿದೆ. ಅನುಬಂಧ A, C, D, E, J ಮತ್ತು K ಯನ್ನು ತೆಗೆದು ಹಾಕಲಾಗಿದೆ ಹಾಗೂ ಕೆಲವನ್ನು ವಿಲೀನಗೊಳಿಸಲಾಗಿದೆ. ಕಡಿಮೆ ಅನುಬಂಧವೆಂದರೆ ನಿಮಗೆ ದಾಖಲೆಗಳನ್ನು ಒಟ್ಟುಗೂಡಿಸುವುದರಲ್ಲಿ ಕಡಿಮೆ ಶ್ರಮ.

ಧೃಢೀಕರಣ

ಧೃಢೀಕರಣ

ಈ ಹಿಂದೆ ಎಲ್ಲಾ ಅನುಬಂಧಗಳನ್ನು ನೋಟರಿ/ಎ‌ಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟು/ಪ್ರಥಮ ದರ್ಜೆ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟು ಗಳಿಂದ ಧೃಢೀಕರಿಸುವ ಅಗತ್ಯವಿತ್ತು. ಇನ್ನು ಮುಂದೆ ಈ ಎಲ್ಲಾ ಅನುಬಂಧಗಳನ್ನು ಅರ್ಜಿದಾರನು ಒಂದು ಸಾದಾ ಕಾಗದದ ಮೇಲೆ ಸ್ವಯಂ ಘೋಷಣಾ ರೂಪದಲ್ಲಿ ಸಲ್ಲಿಸಬಹುದು. ಇದು ನಿಮಗೆ ದಾಖಲೆಗಳ ಧೃಡೀಕರಣದ ಸಲುವಾಗಿ ಈ ಹಿಂದೆ ನೀವು ಮಾಡಬೇಕಿದ್ದ ಓಡಾಟದ ಶ್ರಮದಿಂದ ಮುಕ್ತಿ ದೊರಕಿಸುತ್ತದೆ.

ವಿವಾಹಿತರು/ವಿಚ್ಛೇದಿತರು

ವಿವಾಹಿತರು/ವಿಚ್ಛೇದಿತರು

ವಿವಾಹ ಪ್ರಮಾಣ ಪತ್ರ ನೀಡುವ ಅಗತ್ಯವನ್ನು ತೆಗೆದು ಹಾಕಲಾಗಿದೆ (ಅನುಬಂಧ K ಜೊತೆಗೆ). ವಿಚ್ಛೇದಿತರಾದರೆ, ಅರ್ಜಿದಾರರು ತಮ್ಮ ಸಂಗಾತಿಯ ಹೆಸರನ್ನು ನೀಡುವ ಅಗತ್ಯ ಇಲ್ಲ. ಇದೊಂದು ಬದಲಾಗುತ್ತಿರುವ ಸಾಮಾಜಿಕ ನಿಯಮಗಳನ್ನು ಪರಿಗಣಿಸಿ ಮಾಡಿರುವ ಆಸಕ್ತಿದಾಯಿಕ ಬೆಳವಣಿಗೆ.

ಉದ್ಯೋಗ ಸಂಬಂಧಿಸಿದ ತುರ್ತು ಪಾಸ್ಪೋರ್ಟ್ ಗಳು

ಉದ್ಯೋಗ ಸಂಬಂಧಿಸಿದ ತುರ್ತು ಪಾಸ್ಪೋರ್ಟ್ ಗಳು

ತುರ್ತಾಗಿ ಪಡೆಯಬೇಕಾದ ಪಾಸ್ಪೋರ್ಟ್ ಗಳಿಗೆ ಸರ್ಕಾರಿ ಉದ್ಯೋಗಿಗಳು ನಿರಪೇಕ್ಷಣಾ ಪತ್ರ (NOC) ಅಥವಾ ತಮ್ಮ ಉದ್ಯೋಗದಾತರಿಂದ ಗುರುತಿನ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗದಿದ್ದರೆ, ಅಂತಹವರು ತಾವು ಒಂದು ಸಾಮಾನ್ಯ ಪಾಸ್ಪೋರ್ಟ್ ಗಾಗಿ ಅರ್ಜಿಯನ್ನು ಸಲ್ಲಿಸುತ್ತಿರುವ ವಿಷಯವನ್ನು ತಮ್ಮ ಉದ್ಯೋಗದಾತರಿಗೆ ಈಗಾಗಲೇ ಪತ್ರ ಮುಖೇನ ತಿಳಿಸಿದ್ದೇವೆ ಎಂದು ಒಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಪಾಸ್ಪೋರ್ಟ್ ವಿತರಣಾ ಪ್ರಾಧಿಕಾರಕ್ಕೆ ನೀಡಿ ಅರ್ಜಿ ಸಲ್ಲಿಸಬಹುದು.

ವೆಬ್ಸೈಟ್ ಗೆ ಭೇಟಿ ನೀಡಿ

ವೆಬ್ಸೈಟ್ ಗೆ ಭೇಟಿ ನೀಡಿ

ವಿದೇಶಾಂಗ ಸಚಿವಾಲಯವು ಹೊರಡಿಸಿರುವ ಹೊಸ ಪಾಸ್ಪೋರ್ಟ್ ನಿಯಮಗಳ ಬಗ್ಗೆ ವಿವರವಾಗಿ ತಿಳಿಯಲು ನೀವು ಅದರ ವೆಬ್ಸೈಟ್ ಗೆ ಭೇಟಿ ನೀಡಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ, ಈ ನಡೆಯು, ಸಾರ್ವಜನಿಕರಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭ ಹಾಗೂ ಗೋಜಲುಮುಕ್ತಗೊಳಿಸಿದೆ. ಇದೊಂದು ಸ್ವಾಗತಾರ್ಹ ಹೆಜ್ಜೆಯೆಂದೇ ನಾವು ಭಾವಿಸುತ್ತೆವೆ.

ಕೊನೆಮಾತು

ಕೊನೆಮಾತು

ಪಾಸ್ಪೋರ್ಟ್ ಇಲ್ಲವೆಂಬ ನೆಪ ಹೇಳಿ ಈವರೆಗೆ ಪ್ರಯಾಣಕ್ಕೆ ಹೊರಡುವುದನ್ನು ತಪ್ಪಿಸಿಕೊಳ್ಳುತ್ತಿದ್ದದ್ದನ್ನು ಇನ್ನಾದರೂ ಬಿಟ್ಟು ಬಿಡಿ. ಈಗಲೇ ಆರ್ಜಿ ಸಲ್ಲಿಸಿ ಪಾಸ್ಪೋರ್ಟ್ ಪಡೆದು ಪ್ರಯಾಣಿಸಲು ಆರಂಭಿಸಿ. ರಜಾ ದಿನಗಳಲ್ಲಿ ನಿಮ್ಮ ಮುಂದಿನ ಸಾಹಸ ಕಾರ್ಯ ಪ್ರಾರಂಭಿಸುವ ಮೊದಲು, ಅದಕ್ಕೆ ಅವಶ್ಯಕವಾದ ವಸ್ತುಗಳನ್ನು ಖರೀದಿಸಲು ಸಂಬಂಧಪಟ್ಟ ವೆಬ್ಸೈಟ್ ಗೆ ಭೇಟಿ ನೀಡಲು ಮರೆಯದಿರಿ.

English summary

Applying for a Passport? New Passport Rules In India 2018

The Ministry of External Affairs just recently announced a new set of rules for applying for a passport.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X