For Quick Alerts
ALLOW NOTIFICATIONS  
For Daily Alerts

ಆಧಾರ್ ಆಧಾರಿತ ಇ-ಕೆವೈಸಿ ಎಂದರೇನು?

ಬ್ಯಾಂಕ್ ಖಾತೆ ತೆರೆಯುವಾಗ ಇಲ್ಲವೇ ಮ್ಯೂಚುವಲ್ ಫಂಡ್ ಖಾತೆ ತೆರೆಯುವಾಗ ನಿಮ್ಮ ವಿಳಾಸದ ಮಾಹಿತಿ, ದಾಖಲಾತ್ರಿಗಳನ್ನು ನೀಡಬೇಕಾಗುತ್ತದೆ. ಯುಐಡಿಎಐ ಆಧಾರದಲ್ಲಿ ಇದನ್ನು ನೀಡಲಾಗಿರುತ್ತದೆ.

|

ಆಧಾರ್ ಸಂಖ್ಯೆ ಹೊಂದಿರುವವರು ಇ ಕೆವೈಸಿ (know your customer) ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಆಧಾರ್ ಕಾರ್ಡ್ ಹೊಂದಿರುವವರಿಗೆ ಈ ಸಂಖ್ಯೆಯನ್ನು ನೀಡಲಾಗಿರುತ್ತದೆ.

 

ಹಾಗಾದರೆ ಇ ಕೆವೈಸಿ ಎಲ್ಲಿ ಬಳಕೆ ಮಾಡಿಕೊಳ್ಳಬಹುದು? ಇದರ ಬಳಕೆಯ ಮಾರ್ಗಗಳೇನು ನೋಡೋಣ.

 
ಆಧಾರ್ ಆಧಾರಿತ ಇ-ಕೆವೈಸಿ ಎಂದರೇನು?

ಬ್ಯಾಂಕ್ ಖಾತೆ ತೆರೆಯುವಾಗ ಇಲ್ಲವೇ ಮ್ಯೂಚುವಲ್ ಫಂಡ್ ಖಾತೆ ತೆರೆಯುವಾಗ ನಿಮ್ಮ ವಿಳಾಸದ ಮಾಹಿತಿ, ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಯುಐಡಿಎಐ ಆಧಾರದಲ್ಲಿ ಇದನ್ನು ನೀಡಲಾಗಿರುತ್ತದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?
ಯಾವುದೇ ಸಂಸ್ಥೆ ಇ ಕೆವೈಸಿ ಸೌಲಭ್ಯ ಪಡೆದುಕೊಳ್ಳಲು ಯುಐಡಿಎಐ ನಿಂದ ಅನುಮೋದನೆ ಹಾಗು ಮಾನ್ಯತೆ ಪಡೆಯಬೇಕಾಗುತ್ತದೆ.
ಇದು ಬಯೋಮೆಟ್ರಿಕ್ ಆಧಾರದಲ್ಲಿ ಕೆಲಸ ಮಾಡುತ್ತದೆ. ಆಧಾರ್ ಕಾರ್ಡ್ ಮತ್ತು ವಿಳಾಸ ದೃಢೀಕರಣದಲ್ಲಿ ಲಿಂಗ, ವಿಳಾಸ, ವಯಸ್ಸು ಎಲ್ಲವೂ ಹೊಂದಾಣಿಕೆಯಾಗಬೇಕಾಗುತ್ತದೆ.
ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿಯೊಂದನ್ನು ಕಳುಹಿಸಿಕೊಡಲಾಗುತ್ತದೆ. ಅದರ ಮೂಲಕವೇ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ಆನ್ ಲೈನ್ ಮುಖಾಂತರ ಡೌನ್ಲೋಡ್ ಮಾಡಿಕೊಂಡ ಆಧಾರ್ ಕಾರ್ಡ್ ಗಳನ್ನು ಸಹ ಬ್ಯಾಂಕ್ ಗಳು ಸ್ವೀಕಾರ ಮಾಡುತ್ತವೆ.

ಆಧಾರ್ ಇಕೆವೈಸಿ ಅನ್ನು ಯಾವ ಸಂಸ್ಥೆ ಬಳಸಿಕೊಳ್ಳಬಹುದು?
* ಮಾನ್ಯತೆ ಪಡೆದ ಷೇರು ವ್ಯವಹಾರದ ಸಂಸ್ಥೆಗಳು
* ಬ್ಯಾಂಕ್ ಗಳು
* ಮಾನ್ಯತೆ ಪಡೆದ ಷೇರು ಸಂಸ್ಥೆಗಳ ಮೂಲಕ ಷೇರು ದಲ್ಲಾಳಿಗಳು
* ಅಸೋಸಿಯೇಷನ್ ​​ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ
* ಎಎಮ್ಎಫ್ಐ ಮೂಲಕ ದೊರೆಯುವ ಮ್ಯೂಚುವಲ್ ಫಂಡ್
* ಕೆವೈಸಿ ನೋಂದಣಿ ಏಜೆನ್ಸಿಗಳು

English summary

What Is Aadhaar Based e-KYC?

Electronic Know Your Customer, better known as e-KYC is a service, which can be availed by persons who have Aadhaar numbers.
Story first published: Wednesday, April 25, 2018, 17:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X