For Quick Alerts
ALLOW NOTIFICATIONS  
For Daily Alerts

ಚುನಾವಣಾ ಚೀಟಿಯನ್ನು (Voter ID) ಆನ್ಲೈನ್ ಮೂಲಕ ಪಡೆಯುವುದು ಹಾಗು ತಿದ್ದುಪಡಿ ಮಾಡುವುದು ಹೇಗೆ?

ಚುನಾವಣಾ ಚೀಟಿ (ಮತದಾನ ಚೀಟಿ) ಪ್ರಾಮುಖ್ಯತೆ ಬಗ್ಗೆ ನಮಗೆಲ್ಲಾ ಗೊತ್ತಿದೆ. ಮತದಾನ ಚಲಾಯಿಸುವಾಗ ವೋಟರ್ ಐಡಿ ಬೇಕಾಗುತ್ತದೆ ಹಾಗು ಗುರುತಿನ ಚೀಟಿಯಾಗಿ ಬೇರೆ ಬೇರೆ ಸಂದರ್ಭದಲ್ಲಿ ಬಳಕೆ ಮಾಡುತ್ತೇವೆ.

|

ಚುನಾವಣಾ ಚೀಟಿ (ಮತದಾನ ಚೀಟಿ) ಪ್ರಾಮುಖ್ಯತೆ ಬಗ್ಗೆ ನಮಗೆಲ್ಲಾ ಗೊತ್ತಿದೆ. ಮತದಾನ ಚಲಾಯಿಸುವಾಗ ವೋಟರ್ ಐಡಿ ಬೇಕಾಗುತ್ತದೆ ಹಾಗು ಗುರುತಿನ ಚೀಟಿಯಾಗಿ ಬೇರೆ ಬೇರೆ ಸಂದರ್ಭದಲ್ಲಿ ಬಳಕೆ ಮಾಡುತ್ತೇವೆ. ಆದರೆ ಇಂತಹ ಬಹುಮುಖ್ಯವಾದ ಗುರುತಿನ ಚೀಟಿ ಕಳೆದು ಹೋದರೆ ಇಲ್ಲವೇ ಹಾಳಾಗಿದ್ದರೆ ಅದನ್ನು ಮತ್ತೆ ಪಡೆಯುವುದು ಹೇಗೆ? ಹೊಸ ವೋಟರ್ ಐಡಿ ಪಡೆಯುವುದು ಹೇಗೆ? ಯಾರನ್ನು ಸಂಪರ್ಕಿಸಬೇಕು? ಇತ್ಯಾದಿ ಸಂಗತಿಗಳ ಬಗ್ಗೆ ನಮ್ಮಲ್ಲೇ ಬಹಳ ಜನಗಳಿಗೆ ತಿಳಿದಿರುವುದಿಲ್ಲ. ಅದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿ ನೀಡಲಾಗಿದೆ. ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

 

ವೆಬ್ಸೈಟ್ ಗೆ ಬೇಟಿ ನೀಡಿ

ವೆಬ್ಸೈಟ್ ಗೆ ಬೇಟಿ ನೀಡಿ

ವೋಟರ್ ಐಡಿಗೆ ಸಂಬಂಧಿತ ಮಾಹಿತಿಗಾಗಿ ಮೊದಲು http://www.nvsp.in/ ವೆಬ್ಸೈಟ್ ಗೆ ಬೇಟಿ ಕೊಡಿ.
1. Apply online for registration of new voter/due to shifting from AC
2. Apply online for registration of overseas voter
3. Deletion or objection in electoral roll
4. Correction of entries in electoral roll
5. Transposition within Assembly
6. Track application status
7. Search Your Name in Electoral Roll
ಇತ್ಯಾದಿ ಆಪ್ಷನ್ ಗಳಿದ್ದು, ನಿಮಗೆ ಬೇಕಾದ ವಿಧಾನ ಆಯ್ಕೆ ಮಾಡಿ ಮುಂದುವರೆಯಿರಿ. ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

ಹಾಳಾದ/ಕಳೆದುಕೊಂಡ ವೋಟರ್ ಐಡಿ ಪಡೆಯಲು

ಹಾಳಾದ/ಕಳೆದುಕೊಂಡ ವೋಟರ್ ಐಡಿ ಪಡೆಯಲು

ವೆಬ್ಸೈಟ್ ಗೆ ಬೇಟಿ ನೀಡಿದರೆ ಪರದೆಯ ಎಡ ಭಾಗದಲ್ಲಿ ಒಂದು search ಅಂತ ಒಂದು ಆಪ್ಷನ್ ಇರುತ್ತದೆ. Search your name in electoral role ಮೇಲೆ ಕ್ಲಿಕ್ ಮಾಡಿ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಕೇಳುವ ಮಾಹಿತಿಯನ್ನು ನಮೂದಿಬೇಕಾಗುತ್ತದೆ.
- Search by Details ಅಥವಾ Search by EPIC No. ನಮೂದಿಸಿ ದಾಖಲೆ ಗಳನ್ನು ಲಗತ್ತಿಸಿ, ಕಳೆದುಕೊಂಡ/ಹಾಳಾದ ವೋಟರ್ ಐಡಿ ಪಡೆದುಕೊಳ್ಳಬಹುದು. (https://electoralsearch.in/)

ಮೊದಲ ಬಾರಿ ವೋಟರ್ ಐಡಿ ಪಡೆಯಲು
 

ಮೊದಲ ಬಾರಿ ವೋಟರ್ ಐಡಿ ಪಡೆಯಲು

ಅರ್ಜಿದಾರರು ಮೊದಲ ಬಾರಿಗೆ ಚುನಾವಣಾ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸುವುದಕ್ಕಾಗಿ ಅಥವಾ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಿಸುವುದಕ್ಕಾಗಿ ಈ ವಿಧಾನ ಆಯ್ಕೆ ಮಾಡಿಕೊಳ್ಳಬೇಕು. Form 6 ನಲ್ಲಿ ಮಾಹಿತಿಗಳನ್ನು ನಮೂದಿಸಿ, ದಾಖಲಾತಿಗಳನ್ನು ಲಗತ್ತಿಸಿ ಸಬ್ಮಿಟ್ ಮಾಡಬೇಕು. (ಲಿಂಕ್ - http://www.nvsp.in/Forms/Forms/form6?lang=en-GB)

ಆನ್ಲೈನ್ ಅರ್ಜಿ ಸ್ಟೇಟಸ್ ತಿಳಿಯಲು

ಆನ್ಲೈನ್ ಅರ್ಜಿ ಸ್ಟೇಟಸ್ ತಿಳಿಯಲು

ಈಗಾಗಲೇ ನೀವು ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಿದ್ದು, ಅದರ ಬಗ್ಗೆ ಮಾಹಿತಿ ಪಡೆಯಲು Track application status (application status) ಕ್ಲಿಕ್ ಮಾಡಿ, ಮೂಲಕ ರೆಫರೆನ್ಸ್ ಐಡಿ ನಮೂದಿಸಿ ತಿಳಿದುಕೊಳ್ಳಬಹುದು. (http://www.nvsp.in/Forms/Forms/trackstatus)

ತಿದ್ದುಪಡಿ ಮಾಡಲು

ತಿದ್ದುಪಡಿ ಮಾಡಲು

ನಿಮ್ಮ ವೋಟರ್ ಐಡಿಯಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಲು ಬಯಸುವವರು Form 8 ನಲ್ಲಿನ ನಿಗದಿತ ಕಾಲಂಗಳನ್ನು ತುಂಬಿ, ದಾಖಲಾತಿಗಳನ್ನು ಲಗತ್ತಿಸಿ ಸಬ್ಮಿಟ್ ಮಾಡಬೇಕು. http://www.nvsp.in/Forms/Forms/form8?lang=en-GB

ಪ್ರಿಂಟ್ ಔಟ್ ತೆಗೆದುಕೊಳ್ಳಿ

ಪ್ರಿಂಟ್ ಔಟ್ ತೆಗೆದುಕೊಳ್ಳಿ

ನಿಮಗೆ ಬೇಕಾಗಿರುವ ಈ ಮೇಲಿನ ಯಾವುದೇ ವಿವರಗಳನ್ನು ನಮೂದಿಸಿದ ನಂತರ ನೀವು ಆನ್ಲೈನ್ ನಲ್ಲಿ ನಿಮ್ಮ ವೋಟರ್ ID ಡೌನ್ಲೋಡ್ ಮಾಡಿಕೊಳ್ಳಬಹುದು.ಅಲ್ಲದೇ ಅದನ್ನು ಪ್ರಿಂಟ್ ಮಾಡಿ ಲ್ಯಾಮಿನೇಟ್ ಮಾಡಿಸಬಹುದು.

ಶೇರ್ ಮಾಡಿ

ಶೇರ್ ಮಾಡಿ

ಚುನಾವಣಾ ಚೀಟಿಗೆ ಸಂಬಂಧಿತ ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ. ಅವರಿಗೂ ಸಹಾಯ ವಾಗಬಹುದು. ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ. ಎಲ್ಲರಿಗೂ ಇದರ ಪ್ರಯೋಜನ ಸಿಗುವಂತಾಗಲಿ.

English summary

How to get Voter ID through Online, How to correction?

How to get Voter ID through Online, How to correction.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X