For Quick Alerts
ALLOW NOTIFICATIONS  
For Daily Alerts

UPI, RTGS, NEFT, IMPS: ಈ ಹಣ ವರ್ಗಾವಣೆ ಸೇವೆಗಳಲ್ಲಿ ಯಾವುದು ಉತ್ತಮ?

|

ಇತ್ತೀಚಿನ ದಿನಗಳಲ್ಲಿ ಇ-ವ್ಯಾಲೆಟ್ಸ್ ಮತ್ತು ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ನಂತಹ ಹಲವಾರು ಡಿಜಿಟಲ್ ಪಾವತಿ ಮತ್ತು ಹಣ ವರ್ಗಾವಣೆ ಆಯ್ಕೆಗಳು ತುಂಬಾ ಜನಪ್ರಿಯವಾಗಿವೆ. ಇದರ ಪರಿಣಾಮವಾಗಿ ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಫಂಡ್ ಟ್ರಾನ್ಸ್ಫರ್ (NEFT), ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ಮತ್ತು ತಕ್ಷಣದ ಪಾವತಿ ಸೇವೆ (IMPS) ಹಿಂದಿನಗಿಂತ ಪ್ರಾಮುಖ್ಯತೆ ಪಡೆದಿದ್ದು, ವೇಗವಾಗಿ ಬೆಳೆವಣಿಗೆಯಾಗುತ್ತಿವೆ. NEFT, RTGS, IMPS ಬಗ್ಗೆ ನಿಮಗೆಷ್ಟು ಗೊತ್ತು?

ವೇಗವಾಗಿ ಹಣ ವರ್ಗಾವಣೆ ಜೊತೆ ಜೊತೆಗೆ, ಬ್ಯಾಂಕಿಂಗ್ ವಹಿವಾಟಿನ ಮೇಲೆ ವಿಧಿಸಲಾದ ಶುಲ್ಕಗಳು ಸಹ ಕುಸಿದಿದೆ. ವಾಸ್ತವವಾಗಿ, ಆನ್ಲೈನ್ ​​ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ, ಹೆಚ್ಚಿನ ಬ್ಯಾಂಕುಗಳು ಈ ಎಲೆಕ್ಟ್ರಾನಿಕ್ ಸೇವೆಗಳ ಮೇಲೆ ವಿಧಿಸಿದ ಶುಲ್ಕ ಗಣನೀಯವಾಗಿ ಕಡಿತಗೊಳಿಸಿವೆ ಅಥವಾ ಅವುಗಳನ್ನು ಬಿಟ್ಟುಕೊಟ್ಟಿದೆ ಎನ್ನಬಹುದು.

 

ಹಾಗಿದ್ದರೆ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ (ನೆಟ್ ಬ್ಯಾಂಕಿಂಗ್) ವ್ಯವಸ್ಥೆಯಲ್ಲಿ ಹಣ ವರ್ಗಾವಣೆ ಮಾಡುವ ವಿಧಾನಗಳಲ್ಲಿ ಯಾವುದು ಉತ್ತಮ ಆಯ್ಕೆ ನೋಡೋಣ ಬನ್ನಿ..

ಯುಪಿಐ

ಯುಪಿಐ

ಯುಪಿಐನ ಪ್ರಮುಖ ಉಪಯೋಗವೆಂದರೆ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸುವ ಅಗತ್ಯವಿರುವುದಿಲ್ಲ.

WhatsApp ಇತ್ತೀಚೆಗೆ ತನ್ನ ಯುಪಿಐ ಸೇವೆಯನ್ನು ಪ್ರಾರಂಭಿಸಿದೆ, ಆದರೆ ಇದನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿಲ್ಲ, ಮತ್ತು ಪ್ರಸ್ತುತ ವಿಚಾರಣಾ ಕ್ರಮದಲ್ಲಿದೆ. ಯುಪಿಐ ಗೂಗಲ್ ತೇಜ್ ಮತ್ತು ಫೋನ್ ಪೇ ನಂತಹ ಇತರ ವೇದಿಕೆಗಳಲ್ಲಿ ಲಭ್ಯವಿದೆ. ಸರ್ಕಾರಿ-ಚಾಲಿತ ಭೀಮ್ ಅಪ್ಲಿಕೇಶನ್ (BHIM app) ಸಹ ಯುಪಿಐ ಸೇವೆಯನ್ನು ಒದಗಿಸುತ್ತದೆ.

ಯುಪಿಐ ಏನು? ಪಡೆಯುವುದು ಹೇಗೆ ಹಾಗೂ ಲಾಭಗಳೇನು?

ಯುಪಿಐ ಪಡೆಯುವ ವಿಧಾನ

ಯುಪಿಐ ಪಡೆಯುವ ವಿಧಾನ

ಪ್ಲೇ ಸ್ಟೋರ್ ನಿಂದ ಆಫ್ ಡೌನ್ಲೋಡ್ ಮಾಡಿ, ಫೋನಿನಲ್ಲಿ ಇನ್ಸ್ಟಾಲ್ ಮಾಡಿ.

- ಆಪ್ ಲಾಗಿನ್ ಆಗಿ

- ಅಗೋಚರ ವಿಳಾಸ ರಚಿಸಿ

- ನಿಮ್ಮ ಬ್ಯಾಂಕ್ ಖಾತೆ ಸೇರಿಸಿ

- ಎಂ ಪಿನ್ ಸೆಟ್ ಮಾಡಿಕೊಳ್ಳಿ

ಮೊಬೈಲ್ ನಲ್ಲಿ ಯುಪಿಐ ಆಪ್ ಡೌನ್ಲೋಡ್ ಮಾಡುವುದು ಹೇಗೆ?

NEFT (ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್):
 

NEFT (ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್):

ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ (NEFT) ಸೇವೆ ಬಳಸಿಕೊಂಡು ಎಷ್ಟು ಹಣ ವರ್ಗಾವಣೆ ಮಾಡಬಹುದು ಎಂಬುದರ ಬಗ್ಗೆ ಯಾವುದೇ ಮಿತಿಯಿಲ್ಲ. ಆದಾಗ್ಯೂ, ಈ ವಹಿವಾಟುಗಳನ್ನು ಬ್ಯಾಂಕಿನ ಕೆಲಸದ ಸಮಯದಲ್ಲಿ ಮಾತ್ರ ಕೈಗೊಳ್ಳಬಹುದು. ಪ್ರತಿ ಅರ್ಧ ಗಂಟೆಗೆ ವ್ಯವಹಾರಗಳನ್ನು ತೆರವುಗೊಳಿಸಲಾಗುತ್ತದೆ. ಎನ್ಇಎಫ್ಟಿಯಲ್ಲಿ ವಿಧಿಸಲಾದ ಶುಲ್ಕಗಳು ತೀರಾ ಕಡಿಮೆಯಿದ್ದು, ರೂ. 25, ಜೊತೆಗೆ ತೆರಿಗೆ ಒಳಗೊಂಡಿರುತ್ತದೆ.

ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ (NEFT) ಎಂಬ ಹಣ ರವಾನೆ ಮಾಡುವ ವಿಧಾನವಾಗಿದೆ. ಐಎಫ್ ಎಸ್ ಸಿ ಕೋಡ್ ಬಳಸಿ ರವಾನೆ ಮಾಡಿದ ಹಣ ಕೆಲವೇ ಗಂಟೆಗಳಲ್ಲಿ ವರ್ಗಾವಣೆಯಾಗುತ್ತದೆ. ಹಣ ರವಾನೆ ಮಾಡುವಾಗ ಫಲಾನುಭವಿಯ ಖಾತೆ ಸಂಖ್ಯೆಯನ್ನು ಸೇರಿಸಬೇಕು. ನಂತರ ವರ್ಗಾವಣೆ ಮಾಡಬೇಕಾದ ಹಣವನ್ನು ನಮೂದಿಸಬೇಕು. ಒಂದು ದಿನಕ್ಕೆ 10 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದು.

RTGS(ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್)

RTGS(ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್)

ಕನಿಷ್ಠ ಮೊತ್ತದ ವ್ಯವಹಾರವನ್ನು ಎರಡು ಲಕ್ಷದವರೆಗಿನ ಎನ್ಇಎಫ್ಟಿಗಿಂತ ಭಿನ್ನವಾಗಿ, ಈ ವ್ಯವಹಾರಗಳನ್ನು ಯಾವಾಗ ಬೇಕಾದರೂ ಮಾಡಬಹುದು. ಇಲ್ಲಿ ಹಣ ರವಾನೆಯ ವೇಗ ಜಾಸ್ತಿಯಾಗಿದ್ದು, ಹೆಚ್ಚು ಪ್ರಮಾಣದ ಹಣ ವರ್ಗಾವಣೆ ಮಾಡಬಹುದು. ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಹಣ ರವಾನಿಸಬಹುದು. ಒಂದು ದಿನಕ್ಕೆ ಕನಿಷ್ಟ 2 ಲಕ್ಷದಿಂದ ಗರಿಷ್ಠ 10 ಲಕ್ಷದವರೆಗೆ ಹಣ ರವಾನಿಸಬಹುದು. ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್ (ಆರ್ಟಿಜಿಎಸ್) ಹೆಚ್ಚಿನ ಮೊತ್ತ ಹೊಂದಿರುವ ವ್ಯವಹಾರಗಳಿಗೆ ಉತ್ತಮವಾಗಿದ್ದು, ನೈಜ ಸಮಯದಲ್ಲಿ ಪ್ರಕ್ರಿಯೆ ನಡೆಯುತ್ತದೆ. RTGS ಶುಲ್ಕ ರೂ. 55 ಹಾಗು ತೆರಿಗೆ ಒಳಗೊಂಡಿರುತ್ತದೆ. ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ನಡುವಿನ ಮೂಲಭೂತ ವ್ಯತ್ಯಾಸವೆಂದರೆ ಸಮಯ.

ಇಮಿಡಿಯಟ್ ಫಂಡ್ ಟ್ರಾನ್ಸಫರ್(IMPS)

ಇಮಿಡಿಯಟ್ ಫಂಡ್ ಟ್ರಾನ್ಸಫರ್(IMPS)

ಇಮಿಡಿಯಟ್ ಫಂಡ್ ಟ್ರಾನ್ಸಫರ್ ಮೂಲಕ ಹಣವನ್ನು ವೇಗವಾಗಿ ವರ್ಗಾವಣೆ ಮಾಡಬಹುದು. ಆದರೆ ಎಲ್ಲ ಬ್ಯಾಂಕ್ ಗಳು ಈ ಬಗೆಯ ಸೌಲಭ್ಯ ನೀಡಿಲ್ಲ. ನಿಮ್ಮ ಇಂಟರ್ ನೆಟ್ ಬ್ಯಾಂಕಿಂಗ್ ತಾಣಕ್ಕೆ ಹೋಗಿ ಪರಿಶೀಲನೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ. ಒಂದು ಬಾರಿಯ ಪೇಮೆಂಟ್ ಅಥವಾ ಹಣ ವರ್ಗಾವಣೆಗಾಗಿ ಯುಪಿಐಗೆ ಆದ್ಯತೆ ನೀಡಬಹುದು. ಏಕೆಂದರೆ ಇದು ವಿವಿಧ ಪ್ಲಾಟ್ಫಾರ್ಮ್ ಗಳ ಮೂಲಕ ಪ್ರವೇಶಿಸಬಹುದು.

English summary

UPI, NEFT, RTGS, IMPS: Which Is Better Money Transfer Service

National Electronics Funds Transfer (NEFT), Real Time Gross Settlement (RTGS) and Immediate Payment Service (IMPS) have improvised to become faster than earlier.
Story first published: Wednesday, December 5, 2018, 10:53 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more