For Quick Alerts
ALLOW NOTIFICATIONS  
For Daily Alerts

ರೈತರ ಬೆಳೆ ಸಾಲ ಮನ್ನಾ: ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೆ? ಚೆಕ್ ಮಾಡೋದು ಹೇಗೆ?

ಕರ್ನಾಟಕ ಸರ್ಕಾರವು ರೈತರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿ ತಂದಿದೆ. ಅವುಗಳಲ್ಲಿ ರೈತರ ಬೆಳೆ ಸಾಲ ಮನ್ನಾ ಪರಿಹಾರ ಯೋಜನೆ ಪ್ರಮುಖವಾದುದ್ದಾಗಿದೆ.

|

ಕರ್ನಾಟಕ ಸರ್ಕಾರವು ರೈತರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿ ತಂದಿದೆ. ಅವುಗಳಲ್ಲಿ ರೈತರ ಬೆಳೆ ಸಾಲ ಮನ್ನಾ ಪರಿಹಾರ ಯೋಜನೆ ಪ್ರಮುಖವಾದುದ್ದಾಗಿದೆ. http://clws.karnataka.gov.in/ ವೆಬ್ಸೈಟ್ ಮೂಲಕ ರೈತರ ಸಾಲ ಮನ್ನಾ ವಿವರ ಮತ್ತು ಬ್ಯಾಂಕ್ ವಿವರಗಳನ್ನು ಒದಗಿಸುತ್ತದೆ. ಕೃಷಿ ಸಾಲಮನ್ನಾ ಸೌಲಭ್ಯಕ್ಕೆ ಅರ್ಹರಾಗಿರುವ ಫಲಾನುಭವಿಗಳ ಅಧಿಕೃತ ಪಟ್ಟಿ ಈ ಪೋರ್ಟಲ್ ನಲ್ಲಿ ಲಭ್ಯವಿದೆ. ಅರ್ಹ ಫಲಾನುಭವಿಗಳನ್ನು ಇಲ್ಲಿ ತಮ್ಮ ಹೆಸರನ್ನು ಪರಿಶೀಲನೆ ಮಾಡಬಹುದು ಹಾಗು ಡೌನ್ಲೋಡ್ ಕೂಡ ಮಾಡಬಹುದಾಗಿದೆ. ಬನ್ನಿ ನೋಡೋಣ..

ಯೋಜನಾ ವಿವರ

ಯೋಜನಾ ವಿವರ

ಯೋಜನೆ: ಬೆಳೆ ಸಾಲ ಮನ್ನಾ ಪರಿಹಾರ ಯೋಜನೆ
ರಾಜ್ಯ: ಕರ್ನಾಟಕ:
ಪ್ರಯೋಜನ: ರೂ. 2 ಲಕ್ಷದವರೆಗೆ ಸಾಲ ಮನ್ನಾ
ಫಲಾನುಭವಿಗಳು: ಅರ್ಹ ರೈತರು
ಅಧಿಕೃತ ಜಾಲತಾಣ: www.clws.karnataka.gov.in
ಸಹಾಯವಾಣಿ: 8277864019, 8277864020, 8277864021, 8277864022, 8277864023, 8277864024, 8277864025, 8277864026

ರಾಜ್ಯ ಸರ್ಕಾರ

ರಾಜ್ಯ ಸರ್ಕಾರ

ಕರ್ನಾಟಕ ಸರ್ಕಾರವು ರೈತರ ಮತ್ತು ಬ್ಯಾಂಕುಗಳ ಬೆಳೆ ಸಾಲ ಮನ್ನಾ ಯೋಜನಾ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದೆ. ಇದು ಫಲಾನುಭವಿ ರೈತರ ಪಟ್ಟಿ ಮತ್ತು ಬ್ಯಾಂಕ್ ವಿವರ ಒಳಗೊಂಡಿದೆ. www.clws.karnataka.gov.in ಪೋರ್ಟಲ್ ಮೂಲಕ ನಿಮಗೆ ಮಾಹಿತಿಯನ್ನು ಚೆಕ್ ಮಾಡಬಹುದು. ಜೊತೆಗೆ ಡೌನ್ಲೋಡ್ ಮಾಡಬಹುದು.

ನಿಮ್ಮ ಹೆಸರನ್ನು ಚೆಕ್ ಮಾಡೋದು ಹೇಗೆ?
 

ನಿಮ್ಮ ಹೆಸರನ್ನು ಚೆಕ್ ಮಾಡೋದು ಹೇಗೆ?

ಹಂತ 1: ಕರ್ನಾಟಕ ಸಾಲ ಮನ್ನಾ ಯೋಜನೆಯ ಅಧಿಕೃತ ವೆಬ್ಸೈಟ್ ಮುಖಾಂತರ ಮಾಹಿತಿ ಪಡೆಯಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. 
ಹಂತ 2: ಸಿಟಿಜನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಸರ್ವಿಸ್ ಫಾರ್ ಸಿಟಿಜನ್ (Services For Citizen) ಸೆಕ್ಷನ್ ನಲ್ಲಿರುವ INDIVIDUAL LOANEE REPORT ಮೇಲೆ ಕ್ಲಿಕ್ ಮಾಡಿ.
ಹಂತ 3: ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಇವುಗಳಲ್ಲಿ ಯಾವುದಾದರು ಒಂದನ್ನು ಟೈಪ್ ಮಾಡಿ, ರಿಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 4: ನೀವು ಸಾಲ ಮನ್ನಾ ಯೋಜನೆಗೆ ಅರ್ಹರಾಗಿದ್ದರೆ ಅಲ್ಲಿ ವಿವಿಧ ಬ್ಯಾಂಕುಗಳ, ಸಾಲದ ವಿವರಗಳ ಮತ್ತು ಮನ್ನಾ ಆಗಿರುವ ಮೊತ್ತದ ಮಾಹಿತಿ ಲಭ್ಯವಿರುತ್ತದೆ.

http://clws.karnataka.gov.in/

ಬೆಳೆ ಸಾಲ ಮನ್ನಾ ಪೇಮೆಂಟ್ ಸರ್ಟಿಫಿಕೇಟ್ ಡೌನ್ಲೋಡ್ ಮಾಡೋದು ಹೇಗೆ?

ಬೆಳೆ ಸಾಲ ಮನ್ನಾ ಪೇಮೆಂಟ್ ಸರ್ಟಿಫಿಕೇಟ್ ಡೌನ್ಲೋಡ್ ಮಾಡೋದು ಹೇಗೆ?

ಹಂತ 1: ಕರ್ನಾಟಕ ಸಾಲ ಮನ್ನಾ ಯೋಜನೆಯ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ. http://clws.karnataka.gov.in/
ಹಂತ 2: ಸರ್ವಿಸ್ ಫಾರ್ ಸಿಟಿಜನ್ (Services For Citizen) ಆಪ್ಷನ್ ಗೆ ಹೋಗಿ, CITIZEN PAYMENT CERTIFICATE FOR PACS ಮೇಲೆ ಕ್ಲಿಕ್ ಮಾಡಿ.
ಹಂತ 3: ಮುಂದಿನ ಹಂತದಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ನಮೂದಿಸಿ, ಡಿಟೇಲ್ಸ್ ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

ಹೆಚ್ಚಿನ ಮಾಹಿತಿ

ಹೆಚ್ಚಿನ ಮಾಹಿತಿ

ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಲ್ಲಿ ನೀಡಲಾಗಿರುವ ಲಿಂಕ್ ಮೇಲೆ ಕ್ಇಲಕ್ ಮಾಡಿ.

ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ.. ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..

ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ? ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

English summary

Crop Loan Waiver Scheme: How to check your name beneficiaries list?

The Karnataka Government has launched a website to provide all the information about Crop Loan Waiver Relief Scheme online.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X