For Quick Alerts
ALLOW NOTIFICATIONS  
For Daily Alerts

20 ರಿಂದ 30ರ ವಯಸ್ಸಿನಲ್ಲೇ ಶ್ರೀಮಂತರಾಗಲು 7 ಸೂತ್ರಗಳು

|

ಪ್ರತಿಯೊಬ್ಬರು ಶ್ರೀಮಂತರಾಗಲು ಬಯಸುವುದು ಸಾಮಾನ್ಯ. ಎಂದಾದರೂ ಒಂದು ದಿನ ನಾನು ಶ್ರೀಮಂತನಾಗುತ್ತೇನೆ ಎಂಬ ನಂಬಿಕೆ, ಬಯಕೆಯನ್ನು ಹೊಂದಿರುವವರು, ಮುಂದೊಂದು ದಿನ ಕೋಟ್ಯಾಧಿಪತಿಯಾಗಬೇಕು ಎಂದು ಕನಸು ಕಾಣುವವರು ಕಮ್ಮಿ ಏನಿಲ್ಲ. ಅನೇಕರು ಒಂದಲ್ಲಾ ಒಂದು ದಿನ ಶ್ರೀಮಂತರಾಗಲೇಬೇಕೆಂದು ಗುರಿಯನ್ನಿಟ್ಟುಕೊಂಡಿರುತ್ತಾರೆ. ಹರೆಯದಲ್ಲೇ ಈ ಗುರಿಯನ್ನು ತಲುಪಬೇಕಾದರೆ ಕಠಿಣ ಪರಿಶ್ರಮ, ನಿರ್ಧಾರದ ಜೊತೆಗೆ ಕೆಲ ಸೂತ್ರಗಳನ್ನು ಪಾಲಿಸಬೇಕಾಗುತ್ತದೆ.

20 ರಿಂದ 30ರ ವಯಸ್ಸಿನೊಳಗೆ ಒಳ್ಳೆಯ ಯೋಜನೆಗಳನ್ನು ರೂಪಿಸಿಕೊಂಡರೆ ಯಾವುದೇ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ದಿಢೀರ್‌ ಎಂದು ಶ್ರೀಮಂತರಾಗಲು ಯಾವುದೇ ಅಡ್ಡ ಮಾರ್ಗಗಳಿಲ್ಲ. ನಿಮ್ಮ ಯೋಜನೆಗಳನ್ನು ಯಾವ ರೀತಿಯಲ್ಲಿ ಕಾರ್ಯಗತಗೊಳಿಸುತ್ತೀರಾ ಎಂಬುದರ ಆಧಾರದ ಮೇಲೆ ನಿಮ್ಮ ಭವಿಷ್ಯ ನಿರ್ಧಾರಗೊಳ್ಳುತ್ತದೆ.

ಏನನ್ನು ಪಾಲಿಸಿದರೆ ಹರೆಯ ವಯಸ್ಸಿನಲ್ಲೇ ಶ್ರೀಮಂತರಾಗಲು ಸಹಾಯವಾಗುತ್ತದೆ ಎಂಬುದಕ್ಕೆ ಕೆಲವು ಸಲಹೆಗಳನ್ನು ನೀಡಲಾಗಿದ್ದು, ಈ ಕೆಳಗಿನ ಸೂತ್ರಗಳು ನಿಮ್ಮನ್ನು ಶ್ರೀಮಂತರಾಗಿಸಲು ಸಹಾಯ ಮಾಡುತ್ತವೆ.

1. ಮುಂದೂಡುವುದನ್ನು ಮೊದಲು ನಿಲ್ಲಿಸಿ

1. ಮುಂದೂಡುವುದನ್ನು ಮೊದಲು ನಿಲ್ಲಿಸಿ

ಯಾವುದೇ ಯೋಜನೆಯನ್ನು ಕೈಗೊಳ್ಳುವ ಮುನ್ನ ಮುಂದೂಡುವುದನ್ನು ಮೊದಲು ನಿಲ್ಲಿಸುವುದನ್ನು ಅರಿತುಕೊಳ್ಳಬೇಕು. ಹರೆಯದ ವಯಸ್ಸಿನಲ್ಲೇ ಸ್ವಲ್ಪ ಮಟ್ಟಿನ ಹೆಚ್ಚಿನ ಉದಾಸೀನ ಭಾವ ಇರುವುದು ಸಹಜ. ಆದರೆ ಯಾವುದೇ ಕಾರ್ಯ ಕೈಗೊಳ್ಳುವಾಗ ಇನ್ನೂ ಸಮಯವಿದೆ ಎಂದು ಮುಂದೂಡುವುದನ್ನು ಆದಷ್ಟು ತಡೆಗಟ್ಟಬೇಕು. ಉದಾಹರಣೆಗೆ ಯಾವುದಾದರೂ ಕೆಲಸಕ್ಕೆ 2 ತಿಂಗಳ ನಿಗದಿತ ಸಮಯವಿರುತ್ತದೆ. ಆದರೆ ಇನ್ನೂ ಒಂದು ತಿಂಗಳು ಇದೆ ಮಾಡಿದರಾಯ್ತು ಎಂದು ಮುಂದೂಡುವ ಮನೋಭಾವವನ್ನು ಹೊರಹಾಕಬೇಕು.

ಈ ರೀತಿಯ ಮನೋಭಾವವನ್ನು ತ್ಯಜಿಸದೇ ಹೋದಲ್ಲಿ ನೀವು ಹರೆಯದಲ್ಲೇ ಕೈಗೊಳ್ಳಬೇಕಾಗಿದ್ದ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ 10 ವರ್ಷ ಹೆಚ್ಚಿನ ವಯಸ್ಸಾಗಿರುತ್ತೀರಿ. ಹೀಗಾಗಿ ಮೊದಲ ಹೆಜ್ಜೆಯೇ ಮುಂದೂಡುವುದನ್ನು ತಪ್ಪಿಸಬೇಕು.

 

2. ಶ್ರೀಮಂತರಾಗಲು ಯಾವುದೇ ಚಮತ್ಕಾರವಿಲ್ಲ

2. ಶ್ರೀಮಂತರಾಗಲು ಯಾವುದೇ ಚಮತ್ಕಾರವಿಲ್ಲ

ಈ ಮೇಲೆ ತಿಳಿಸಿದಂತೆ ನೀವು ಶ್ರೀಮಂತರಾಗಲು ಇವುಗಳು ಸೂತ್ರವೇ ಹೊರತು ಯಾವದೇ ಚಮತ್ಕಾರ(ಮ್ಯಾಜಿಕ್) ಮಾಡಲು ಸಾಧ್ಯವಿಲ್ಲ. ದಿಢೀರ್ ಎಂದು ಚಮತ್ಕಾರದಿಂದ ಯಾರೂ ಶ್ರೀಮಂತರಾಗುವುದಿಲ್ಲ. ಆದರೆ ಅತ್ಯಂತ ಉತ್ತಮವಾದ ಸೂತ್ರ ಎಂದರೆ ನೀವು ಖರ್ಚು ಮಾಡುವುದಕ್ಕಿಂತ ಹೆಚ್ಚಿನದನ್ನು ಸಂಪಾದಿಸಿ ಮತ್ತು ಹೆಚ್ಚು ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿ.

ಯಾವ ರೀತಿಯಲ್ಲಿ ಎಲ್ಲಿ ಹಣವನ್ನು ಹೂಡಿಕೆ ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ. ಆದರೆ ಭವಿಷ್ಯದಲ್ಲಿ ನಿಮಗೆ ಹೆಚ್ಚಿನ ಆದಾಯ ತಂದುಕೊಡುವ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ. ಶ್ರೀಮಂತರಾಗಲು ಮತ್ತೊಂದು ಹೆಜ್ಜೆಯೇ ಖರ್ಚಿಗಿಂತ ಹೆಚ್ಚಿನದನ್ನು ಸಂಪಾದಿಸುವುದು ಹಾಗೂ ಹೆಚ್ಚು ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದಾಗಿದೆ.

 

3. ನಿಮ್ಮ ಮೇಲೆಯೇ ಹೂಡಿಕೆ ಮಾಡಿಕೊಳ್ಳಿ

3. ನಿಮ್ಮ ಮೇಲೆಯೇ ಹೂಡಿಕೆ ಮಾಡಿಕೊಳ್ಳಿ

ನಿಮ್ಮ ಮುಂದಿನ ಗುರಿ ನಿಮ್ಮ ಮೇಲೆಯೇ ಹೂಡಿಕೆ ಮಾಡಿಕೊಳ್ಳುವುದಾಗಿದೆ. ಶ್ರೀಮಂತರಾಗಲು ನಿಮಗೆ ನೀವೆ ದೊಡ್ಡ ಸಂಪನ್ಮೂವಾಗಿರುತ್ತೀರಿ. ನಿಮ್ಮ ಮೇಲೆಯೇ ಹೂಡಿಕೆ ಮಾಡುವುದು ಎಂದರೆ ನಿಮ್ಮ ಹೆಚ್ಚು ಸಮಯವನ್ನು ವಿದ್ಯಾಭ್ಯಾಸದಲ್ಲಿ , ನಿಮ್ಮ ಸ್ವಂತ ಕೌಶಲ್ಯವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವುದು, ನಿಮ್ಮ ಯೋಜನೆಗಳಿಗೆ ಸಹಾಯ ಆಗಬಲ್ಲ ವ್ಯಕ್ತಿಗಳನ್ನು ಭೇಟಿ ಮಾಡುವುದಾಗಿದೆ.

ಈ ಮೂಲಕ ನೀವು ಹೆಚ್ಚಿನ ವಿದ್ಯಾವಂತರು, ಕೌಶಲ್ಯವಂತರು, ಅನುಭವಿಗಳ ಜೊತೆಗೆ ಉತ್ತಮ ಜನರ ಜೊತೆಗೆ ಸಂಪರ್ಕ ಹೆಚ್ಚಿಸಿಕೊಂಡಿದ್ದಲ್ಲಿ ನಿಮಗೆ ಹೆಚ್ಚಿನ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಅಂದರೆ ಹೆಚ್ಚು ಸಂಬಳ ಬರುವಂತಹ ಕೆಲಸ ಸಿಗುವ ಅವಕಾಶಗಳು ಸಿಗುವ ಜೊತೆಗೆ ಬಲವಾದ ಆರ್ಥಿಕ ಅಡಿಪಾಯ ಹಾಕಲು ಸಾಧ್ಯ.

 

4. ನಿಮ್ಮ ಬಜೆಟ್ ರೂಪಿಸಿಕೊಳ್ಳಿ

4. ನಿಮ್ಮ ಬಜೆಟ್ ರೂಪಿಸಿಕೊಳ್ಳಿ

ಈ ಮೇಲಿನ 2ನೇ ಸೂತ್ರವನ್ನು ಮರೆಯದರಿ, ಹೆಚ್ಚು ಹಣ ಸಂಪಾದಿಸಿ ಖರ್ಚು ಕಮ್ಮಿ ಮಾಡುವುದು. ಹಾಗೂ ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದು. ಇದರ ಜೊತೆಗೆ ನಿಮ್ಮದೇ ಆದ ಬಜೆಟ್‌ ಅನ್ನು ರೂಪಿಸಿಕೊಳ್ಳಿ ನೀವು ದಿನನಿತ್ಯ ಮಾಡುತ್ತಿರುವ ಖರ್ಚು ಎಷ್ಟು ಹಾಗೂ ನೀವು ಗಳಿಸುತ್ತಿರುವ ಆದಾಯವೆಷ್ಟು ಎಂಬ ಬಜೆಟ್ ರೂಪಿಸಿ.

ಈ ಮೂಲಕ ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಕೆಲವು ವಿಚಾರಗಳಿಗೆ ನಿಮಗೆ ಗೊತ್ತಿಲ್ಲದೆಯೇ ಹಣವು ಖರ್ಚಾಗುತ್ತಿರುತ್ತದೆ. ಈ ರೀತಿಯ ಅನವಶ್ಯಕ ಖರ್ಚುಗಳನ್ನು ಗುರುತಿಸಲು ಮತ್ತು ಅವುಗಳನ್ನು ತಡೆಗಟ್ಟಲು ನಿಮ್ಮ ಬಜೆಟ್ ರೂಪುರೇಷೆಗಳು ಸಹಾಯವಾಗುತ್ತವೆ. ಅಲ್ಲದೆ ನಿಮ್ಮ ಹಣ ಉಳಿತಾಯ ಹೆಚ್ಚು ಮಾಡುತ್ತದೆ.

 

5. ಎಷ್ಟು ಸಾಧ್ಯವೋ ಅಷ್ಟು ಬೇಗ ಸಾಲವನ್ನು ತೀರಿಸಿ

5. ಎಷ್ಟು ಸಾಧ್ಯವೋ ಅಷ್ಟು ಬೇಗ ಸಾಲವನ್ನು ತೀರಿಸಿ

ನೀವು ಉಳಿತಾಯವನ್ನು ಶುರುಮಾಡುವುದಕ್ಕಿಂತ ಅಥವಾ ಹೆಚ್ಚಿಸುವುದಕ್ಕೆ ಮೊದಲು ನೀವು ನಿಮ್ಮ ಸಾಲವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ತೀರಿಸಲು ಪ್ರಯತ್ನಿಸುವುದು ಉತ್ತಮ. ಉದಾಹರಣೆಗೆ ಕ್ರೆಡಿಟ್‌ ಕಾರ್ಡ್ ಸಾಲ, ವಿದ್ಯಾಭ್ಯಾಸಕ್ಕೆ ಮಾಡಿರುವ ಸಾಲ ಅಥವಾ ಗೃಹ ಸಾಲ, ಕಾರ್ ಲೋನ್ ಮುಂತಾದವುಗಳು ಹೆಚ್ಚು ಬಡ್ಡಿಯನ್ನು ನಿಮ್ಮಿಂದ ಕಟ್ಟಿಸಲು ಕಾರಣವಾಗುತ್ತವೆ. ಇದರಿಂದ ನೀವು ಪ್ರತಿ ತಿಂಗಳು ಮಾಡಬೇಕಿರುವ ಉಳಿತಾಯದ ಮೊತ್ತವು ಕರಗುತ್ತದೆ.

ಭವಿಷ್ಯದ ದೃಷ್ಠಿಯಿಂದ ಉಳಿತಾಯ ಹೆಚ್ಚಿಸಬೇಕು ಎಂದಾದರೆ ಈ ರೀತಿಯ ಸಾಲಗಳನ್ನು ಎಷ್ಟು ಸಾಧ್ಯವಾಗುತ್ತದೆಯೇ ಅಷ್ಟು ಬೇಗ ಮುಗಿಸಿದರೆ ಹೆಚ್ಚಿನ ಬಡ್ಡಿ ಕಟ್ಟುವುದು ತಪ್ಪಿಸಬಹುದು.

 

6. ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ

6. ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ

ನೀವು ಹರೆಯ ವಯಸ್ಸಿನವರಾಗಿದ್ದರೆ ನಿಮ್ಮ ಮುಂದೆ ಸಾಕಷ್ಟು ವರ್ಷಗಳು ಇರುತ್ತದೆ. ಈ ವೇಳೆಯಲ್ಲಿ ಕೆಲವು ರಿಸ್ಕ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚು ರಿಸ್ಕ್‌ ತೆಗೆದುಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಅವಕಾಶಗಳ ಸೃಷ್ಠಿಗೂ ಸಾಧ್ಯ. ಕೆಲವರು ರಿಸ್ಕ್ ತೆಗೆದುಕೊಂಡು ತಮ್ಮ ಕೆಲಸವನ್ನೇ ಬಿಟ್ಟು ಸ್ವಂತ ಬಿಜೆನೆಸ್‌ ಆರಂಭಿಸಿ ಯಶಸ್ಸು ಸಾಧಿಸಿದ್ದನ್ನೂ ನೀವು ನೋಡಿರುತ್ತೀರಿ.

ಹೆಚ್ಚಿನ ಕಾಲಾವಕಾಶ ಇದ್ದದಾಗ ಹೊಸ ಉದ್ದಿಮೆ ಅಥವಾ ಅವಕಾಶವನ್ನು ಹುಡುಕಿಕೊಂಡು ಹೋಗಲು ಸಾಧ್ಯ. ಒಂದು ವೇಳೆ ನೀವು ಅಂದುಕೊಂಡ ಕಾರ್ಯ ಯಶಸ್ವಿಯಾಗದಿದ್ರೂ ಮತ್ತೆ ಹಿಂದಿರುಗಲು ಹೆಚ್ಚಿನ ಸಮಯವಿರುತ್ತದೆ. ಆದರೆ ಕಾಲ ಮೀರಿದ ಮೇಲೆ ಈ ರೀತಿಯಾದ ರಿಸ್ಕ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬಹುತೇಕ ಜನರು ಸುರಕ್ಷಿತವಾದ ಮಾರ್ಗವನ್ನೇ ಆಯ್ದುಕೊಳ್ಳುತ್ತಾರೆ. ಆದರೆ ನೀವು ಏನಾದರೂ ಹೊಸತನ್ನು, ಕಷ್ಟವಾದದನ್ನು ಪ್ರಯತ್ನಿಸಿದಲ್ಲಿ ಯಶಸ್ಸು ಸಾಧಿಸುವ ಅವಕಾಶವು ಮುಂದಿರುತ್ತದೆ.

 

7. ವೈವಿಧ್ಯತೆಯ ಮೂಲಕ ಯಶಸ್ಸು ಸಾಧ್ಯ

7. ವೈವಿಧ್ಯತೆಯ ಮೂಲಕ ಯಶಸ್ಸು ಸಾಧ್ಯ

20 ರಿಂದ 30 ರ ಹರೆಯದಲ್ಲಿ ರಿಸ್ಕ್‌ ತೆಗೆದುಕೊಳ್ಳುವುದು ಕೂಡು ಉತ್ತಮ ಯೋಜನೆಯಾಗಿದ್ದು, ಜೊತೆಗೆ ನಿಮ್ಮ ಪ್ರಯತ್ನಗಳಲ್ಲಿ ವೈವಿಧ್ಯತೆಯನ್ನು ಸಾಧಿಸುವುದು ಉತ್ತಮ ಪ್ರಯತ್ನವಾಗಿದೆ. ಅಂದರೆ ಯಾವುದಾದರೂ ಒಂದೇ ಕೌಶಲ್ಯತೆಯನ್ನು ಬೆಳೆಸಿಕೊಳ್ಳುವದು ಅಥವಾ ಒಂದೇ ತರಹ ವೃತ್ತಿಪರ ಸಂಪರ್ಕಗಳನ್ನು ಇಟ್ಟುಕೊಳ್ಳುವುದನ್ನು ಮಾಡದಿರಿ. ಜೊತೆಗೆ ಒಂದೇ ರೀತಿಯ ಹೂಡಿಕೆಯನ್ನು ಅವಲಂಭಿಸದಿರಿ ಹಾಗೆಯೇ ಒಂದೇ ವಿಚಾರದಲ್ಲಿ ಉಳಿತಾಯ ಮಾಡಲು ಹೋಗದಿರಿ.

ಬದಲಾಗಿ, ಬಹು ಆದಾಯ ಯೋಜನೆಗಳನ್ನು ರೂಪಿಸಿಕೊಳ್ಳಿ . ನಿಮ್ಮ ಗುರಿಗಳು ಮತ್ತು ವ್ಯವಹಾರದ ಯಶಸ್ಸಿಗಾಗಿ ಹಲವಾರು ಬ್ಯಾಕಪ್ ಯೋಜನೆಗಳನ್ನು ರಚಿಸಿ ಮತ್ತು ಹೊಸ ಅವಕಾಶಗಳನ್ನು ರೂಪಿಸಿಕೊಳ್ಳಿ. ಹೀಗೆ ಮಾಡುವುದರಿಂದ ಯಾವುದಾದರೂ ಒಂದರಲ್ಲಿ ನಷ್ಟವುಂಟಾದರೇ ಅದನ್ನು ಮತ್ತೊಂದರಲ್ಲಿ ಸರಿದೂಗಿಸಲು ಸಾಧ್ಯವಾಗುತ್ತದೆ.

ಈ ಏಳು ಸೂತ್ರಗಳನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡರೆ ನಿಮ್ಮ ಹಣ ವ್ಯರ್ಥವಾಗದಂತೆ ಹಾಗೂ ಉಳಿತಾಯ ಹೆಚ್ಚಿಸಲು, ಜೊತೆಗೆ ಹೆಚ್ಚು ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿದರೆ ಶ್ರೀಮಂತರಾಗಲು ಸಹಾಯವಾಗುತ್ತದೆ.

 

English summary

7 Suggestions Becoming Wealthy In Your Young Age

These are 7 Strategies can help you do it weatlhy while you are still Young
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X