For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆ ಶೀಘ್ರ ಆರಂಭ, ದರ, ಪ್ರಯೋಜನ ಇತರೆ ಮಾಹಿತಿ

|

ಅಮೆಜಾನ್ ಬಳಕೆದಾರರಿಗೆ ಸಿಹಿಸುದ್ದಿಯೊಂದಿದೆ. ಹೌದು, ಅಮೆಜಾನ್ ಹೊಸದಾಗಿ ಪ್ರೈಮ್ ಲೈಟ್ ಚಂದಾದಾರಿಕೆಯನ್ನು ಆರಂಭಿಸುವ ತಯಾರಿಯಲ್ಲಿದೆ. ಭಾರತದಲ್ಲಿ ಶೀಘ್ರವೇ ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆ ಆರಂಭವಾಗಲಿದೆ. ಸಂಸ್ಥೆಯು ಈಗಾಗಲೇ ಪ್ರಯೋಗವನ್ನು ನಡೆಸುತ್ತಿದೆ. ಪ್ರಯೋಗ ಯಶಸ್ವಿಯಾದ ಬಳಿಕ ಚಂದಾದಾರಿಕೆ ಪ್ರಾರಂಭವಾಗಲಿದೆ.

 

ಪ್ರಸ್ತುತ ಬೆಟಾ ಟೆಸ್ಟರ್‌ಗಳ ಸಹಾಯದ ಮೂಲಕ ಸಂಸ್ಥೆಯು ಈ ಅಮೆಜಾನ್‌ನ ಹೊಸ ಪ್ರೈಮ್ ಲೈಟ್ ಚಂದಾದಾರಿಕೆಯ ಟೆಸ್ಟಿಂಗ್ ಕಾರ್ಯವನ್ನು ಮಾಡುತ್ತಿದೆ. ಈ ಪ್ರಕ್ರಿಯೆ ಪೂರ್ಣವಾದ ಬಳಿಕ ಚಂದಾದಾರಿಕೆಗೆ ತೆರೆದುಕೊಳ್ಳಲಿದೆ.

Amazon Layoff: ಭಾರತ ಸೇರಿ ಜಾಗತಿಕ ಸಾವಿರಾರು ನೌಕರರ ವಜಾಗೆ ಕಂಪನಿ ನಿರ್ಧಾರ, ಕಾರಣ ತಿಳಿಯಿರಿAmazon Layoff: ಭಾರತ ಸೇರಿ ಜಾಗತಿಕ ಸಾವಿರಾರು ನೌಕರರ ವಜಾಗೆ ಕಂಪನಿ ನಿರ್ಧಾರ, ಕಾರಣ ತಿಳಿಯಿರಿ

ಈ ನಡುವೆ ಅಮೆಜಾನ್ ಈ ಪ್ರೈಮ್ ಲೈಟ್‌ನ ಪ್ರಯೋಜನಗಳೇನು, ಎಷ್ಟು ದರವಿದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಿದೆ. ಹೆಸರೇ ಹೇಳುವಂತೆ ಇದು ಅಗ್ಗವಾದ ಪ್ಲ್ಯಾನ್ ಆಗಿದೆ. ಒರಿಜಿನಲ್ ವರ್ಜನ್‌ನಲ್ಲಿ ಇರುವ ಪ್ರಯೋಜನಕ್ಕೆ ಕೊಂಚ ಸಮೀಪವಾದ ಪ್ರಯೋಜನಗಳು ಚಂದಾದಾರಿರಿಗೆ ಈ ಹೊಸ ಆವೃತ್ತಿಯಿಂದ ಲಭ್ಯವಾಗಲಿದೆ. ಹಾಗಾದರೆ ಬೆಲೆ ಎಷ್ಟು, ಏನು ಪ್ರಯೋಜನ ಎಂದು ತಿಳಿಯೋಣ ಮುಂದೆ ಓದಿ....

 ಭಾರತದಲ್ಲಿ ಅಮೆಜಾನ್ ಪ್ರೈಮ್ ಲೈಟ್ ದರ

ಭಾರತದಲ್ಲಿ ಅಮೆಜಾನ್ ಪ್ರೈಮ್ ಲೈಟ್ ದರ

ಹೊಸ ಅಮೆಜಾನ್ ಪ್ರೈಮ್ ಲೈಟ್ ಪ್ಲ್ಯಾನ್‌ 999 ರೂಪಾಯಿಯ ಪ್ಲ್ಯಾನ್ ಆಗಿದೆ. ಸಂಸ್ಥೆಯು ಈ ದರವನ್ನು ಅಧಿಕೃತವಾಗಿ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ. ಇದು ಮೊಬೈಲ್‌ ವರ್ಜನ್‌ ಆಪ್‌ನಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ಈ ಚಂದಾದಾರಿಕೆಯು ಭಾರತದಲ್ಲಿ ಶೀಘ್ರವೇ ಆರಂಭವಾಗಲಿದೆ ಎಂದು ಸಂಸ್ಥೆಯು ಹೇಳಿದೆ. ಒರಿಜಿನಲ್ ಅಮೆಜಾನ್ ಪ್ರೈಮ್ ವಿಡಿಯೋ ವಾರ್ಷಿಕ ಚಂದಾದಾರಿಕೆಯು ಆರಂಭಿಕವಾಗಿ, 999 ರೂಪಾಯಿ ಆಗಿತ್ತು. ಆದರೆ ಪ್ರಸ್ತುತ ಚಂದಾದಾರಿಕೆ ಮೊತ್ತ ಏರಿಕೆಯಾಗಿದ್ದು, ವಾರ್ಷಿಕ ಚಂದಾದಾರಿಕೆ 1,499 ರೂಪಾಯಿ ಆಗಿದೆ. ಆದರೆ ಅಧಿಕ ಮಂದಿ ಚಂದಾದಾರಿಕೆಯನ್ನು ಮಾಡಬೇಕೆಂಬ ನಿಟ್ಟಿನಲ್ಲಿ ಸಂಸ್ಥೆಯು ಈಗ ಹೊಸ ಚಂದಾದಾರಿಕೆ ಪ್ಲ್ಯಾನ್ ಆರಂಭಿಸಲು ಸಜ್ಜಾಗಿದೆ.

 ಪ್ರೈಮ್ ಲೈಟ್ ಪ್ಲ್ಯಾನ್ ಪ್ರಯೋಜನಗಳು

ಪ್ರೈಮ್ ಲೈಟ್ ಪ್ಲ್ಯಾನ್ ಪ್ರಯೋಜನಗಳು

ಸಂಸ್ಥೆಯು ಅಮೆಜಾನ್ ಪ್ರೈಮ್ ಲೈಟ್ ಪ್ಲ್ಯಾನ್ ಬಗ್ಗೆ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ. ಲಭ್ಯವಾದ ಮಾಹಿತಿ ಪ್ರಕಾರ ಎಲ್ಲ ಜನರು ಈ ಹೊಸ ಪ್ಲ್ಯಾನ್‌ನ ಚಂದಾದಾರಿಕೆಯನ್ನು ಮಾಡಿದರೆ, ಎಲ್ಲ ವಿಡಿಯೋಗಳನ್ನು ನೋಡಲು ಸಾಧ್ಯವಾಗಲಿದೆ. ಹಾಗೆಯೇ ಯಾವುದೇ ಕಡಿತ, ನಿರ್ಬಂಧಗಳು ಈ ಪ್ಲ್ಯಾನ್‌ನಲ್ಲಿ ಇಲ್ಲ. ಆದರೆ ಎಚ್‌ಡಿ ಕ್ಲಾರಿಟಿಯಲ್ಲಿ ವಿಡಿಯೋವನ್ನು ನೋಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಜಾಹೀರಾತುಗಳು ಕೂಡಾ ಇರಲಿದೆ. ವಿಡಿಯೋಗಳ ನಡುವೆ ಯಾವ ರೀತಿ, ಯಾವ ಜಾಹೀರಾತುಗಳನ್ನು ಹಾಕಲಾಗುತ್ತದೆ, ಎಷ್ಟು ಜಾಹೀರಾತು ಇರಲಿದೆ, ಎಷ್ಟು ಸೆಕೆಂಡು, ನಿಮಿಷದ ಜಾಹೀರಾತು ಇರಲಿದೆ ಎಂಬ ಬಗ್ಗೆ ಅಮೆಜಾನ್ ಈವರೆಗೂ ಮಾಹಿತಿ ನೀಡಿಲ್ಲ. ಈ ಪ್ಲ್ಯಾನ್ ಚಂದಾದಾರಿಕೆ ಆರಂಭವಾದ ಬಳಿಕ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ.

 ಕ್ಲಾರಿಟಿ ಹೇಗಿರಲಿದೆ, ಟಿವಿಯಲ್ಲಿ ನೋಡಬಹುದಾ?
 

ಕ್ಲಾರಿಟಿ ಹೇಗಿರಲಿದೆ, ಟಿವಿಯಲ್ಲಿ ನೋಡಬಹುದಾ?

ಈ ಪ್ಲ್ಯಾನ್‌ನಲ್ಲಿ ವಿಡಿಯೋ, ಸಿನಿಮಾವನ್ನು ಎಚ್‌ಡಿ ಕ್ವಾಲಿಟಿಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಎಸ್‌ಟಿ ಕ್ವಾಲಿಟಿಯಲ್ಲಿ ನೋಡಲು ಮಾತ್ರ ಸಾಧ್ಯವಾಗಲಿದೆ. ಹಾಗೆಯೆ ಈ ಚಂದಾದಾರಿಕೆಯಲ್ಲಿ ಟಿವಿಯಲ್ಲಿ ಅಮೆಜಾನ್ ಪ್ರೈಮ್ ನೋಡಲು ಸಾಧ್ಯವಾಗುವುದಿಲ್ಲ. ಇದು ಮೊಬೈಲ್ ವರ್ಜನ್ ಪ್ಲ್ಯಾನ್ ಆಗಿದೆ. ಇದರಲ್ಲಿ ಎರಡು ದಿನದ ಉಚಿತ ಡೆಲಿವರಿ ಸೇವೆ ಇರಲಿದೆ. ಹಾಗೆಯೇ ಉಚಿತ ಸ್ಟಾಡರ್ಡ್ ಡೆಲಿವರಿ ಕೂಡಾ ಇರಲಿದೆ. ನಿಗದಿತ ವಸ್ತುಗಳಿಗೆ ಮುಂಜಾನೆ ಡೆಲಿವರಿ ಲಭ್ಯವಾಗಲಿದೆ. ಪ್ರತಿ ವಸ್ತುವನ್ನು 175 ರೂಪಾಯಿಗೆ ಪಡೆಯಲು ಸಾಧ್ಯವಾಗಲಿದೆ. ಆದರೆ ಅಮೆಜಾನ್ ಪ್ರೈಮ್ ಮ್ಯೂಸಿಕ್, ನೋ ಕಾಸ್ಟ್ ಇಎಂಐ, ಪ್ರೈಮ್ ಗೇಮಿಂಗ್ ಅಥವಾ ಪ್ರೀ ಇ-ಬುಕ್‌ಗಳು ಈ ಪ್ಲ್ಯಾನ್‌ನಲ್ಲಿ ಲಭ್ಯವಾಗುವುದಿಲ್ಲ.

 ಪ್ರಸ್ತುತ ಭಾರತದಲ್ಲಿರುವ ಪ್ಲ್ಯಾನ್ ಹೇಗಿದೆ?

ಪ್ರಸ್ತುತ ಭಾರತದಲ್ಲಿರುವ ಪ್ಲ್ಯಾನ್ ಹೇಗಿದೆ?

ಭಾರತದಲ್ಲಿ ಪ್ರಸ್ತುತ ಒಟ್ಟು ನಾಲ್ಕು ಅಮೆಜಾನ್ ಪ್ರೈಮ್ ಪ್ಲ್ಯಾನ್‌ಗಳು ಇದೆ. ಮಾಸಿಕವಾಗಿ 179 ರೂಪಾಯಿಯಿಂದ ಪ್ಲ್ಯಾನ್ ಆರಂಭವಾಗುತ್ತದೆ. ತ್ರೈಮಾಸಿಕಕ್ಕೆ (3 ತಿಂಗಳ ಚಂದಾದಾರಿಕೆ) 459 ರೂಪಾಯಿ ಆಗಿದೆ. ವಾರ್ಷಿಕ ಚಂದಾದಾರಿಕೆ 1,499 ರೂಪಾಯಿ ಆಗಿದೆ. ಈ ಎಲ್ಲ ಅಮೆಜಾನ್ ಪ್ಲ್ಯಾನ್‌ಗಳಿಗೆ ಒಂದೇ ರೀತಿಯ ಪ್ರಯೋಜನವಿದೆ. ಬರೀ ಚಂದಾದಾರಿಕೆ ಅವಧಿ ಮಾತ್ರ ಬೇರೆ ಬೇರೆಯಾಗಿದೆ. ಇದರೊಂದಿಗೆ ಗ್ರಾಹಕರು ಪ್ರೈಮ್ ಮ್ಯೂಸಿಕ್, ಅಮೆಜಾನ್‌ನಲ್ಲಿ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ, ಉಚಿತ ಒಂದು ಅಥವಾ ಎರಡು ದಿನದ ಡೆಲಿವರಿ ಸೇವೆ, ಇತರೆ ಪ್ರಯೋಜನ ಲಭ್ಯವಾಗಲಿದೆ.

English summary

Amazon to Launch Prime Lite subscription in India soon: Know Benefits and price details

Amazon is preparing to launch its new Prime Lite subscription in India. Amazon to Launch Prime Lite subscription in India soon, Know Benefits and price details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X