For Quick Alerts
ALLOW NOTIFICATIONS  
For Daily Alerts

ಮಹಾಶಿವರಾತ್ರಿ 2022: ಈ ರಾಜ್ಯಗಳಲ್ಲಿ ಬ್ಯಾಂಕ್‌ ರಜೆ

|

ಭಾರತದಲ್ಲಿ ಮಾರ್ಚ್‌ನಲ್ಲಿ ಹಲವು ಬ್ಯಾಂಕ್ ರಜಾದಿನಗಳನ್ನು ಇರಲಿದೆ. ವಾರದ ರಜೆಗಳನ್ನು ಹೊರತುಪಡಿಸಿ ಉಳಿದ ಬ್ಯಾಂಕ್‌ ರಜೆಗಳು ಆಯಾ ರಾಜ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಮಾರ್ಚ್ 2022 ರ ಮೊದಲ ದಿನದಿಂದ, ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಭಾರತೀಯ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮಹಾ ಶಿವರಾತ್ರಿಯು ಶಿವನನ್ನು ಪೂಜಿಸುವ ವಾರ್ಷಿಕ ಹಿಂದೂ ಆಚರಣೆಯಾಗಿದೆ.

 

ಭಾರತದಲ್ಲಿ ಬ್ಯಾಂಕ್ ರಜಾದಿನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ವರ್ಗಾವಣೀಯ ಲಿಖಿತಗಳ ಅಧಿನಿಯಮ (ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್) ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಎಂದು ಮೂರು ವಿಭಾಗಗಳಲ್ಲಿ ವಿಂಗಡನೆ ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ನಿಯಮದಂತೆ ಬ್ಯಾಂಕ್‌ ರಜೆಗಳು ಇರಲಿದೆ.

Bank Holidays in March 2022: ಮಾರ್ಚ್‌ನಲ್ಲಿ 13 ದಿನ ಬ್ಯಾಂಕ್‌ ರಜೆ: ಯಾವೆಲ್ಲಾ ದಿನ ತಿಳಿಯಿರಿ

ಹಣಕಾಸು ವರ್ಷದ ಅಂತ್ಯದ ತಿಂಗಳಾದ ಮಾರ್ಚ್‌ನಲ್ಲಿ ಖಾಸಗೀ ಬ್ಯಾಂಕುಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಹಲವಾರು ದಿನಗಳ ಕಾಲ ಬಂದ್‌ ಆಗಿರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪಟ್ಟಿಯ ಪ್ರಕಾರ, ಮುಂದಿನ ತಿಂಗಳು ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆದಾಗ್ಯೂ, ಈ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಇರುವುದಿಲ್ಲ. ಕೆಲವೊಂದು ರಾಜ್ಯವಾರು ರಜೆಗಳು ಇದೆ. ಈ ತಿಂಗಳ ಆರಂಭದಲ್ಲಿಯೇ ಮಹಾಶಿವರಾತ್ರಿ ಹಿನ್ನೆಲೆ ಬ್ಯಾಂಕ್‌ಗಳು ರಜೆ ಇರಲಿದೆ. ಹಾಗಾದರೆ ಮಾರ್ಚ್ 1 ರಂದು ಯಾವ ರಾಜ್ಯಗಳಲ್ಲಿ ಬ್ಯಾಂಕ್‌ ರಜೆಗಳು ಇರಲಿದೆ ಎಂದು ತಿಳಿಯೋಣ, ಮುಂದೆ ಓದಿ..

 ಮಹಾಶಿವರಾತ್ರಿ 2022: ಈ ರಾಜ್ಯಗಳಲ್ಲಿ ಬ್ಯಾಂಕ್‌ ರಜೆ

ಮಹಾಶಿವರಾತ್ರಿ ಹಿನ್ನೆಲೆ ಬ್ಯಾಂಕ್‌ ರಜೆಗಳು

ಮಹಾಶಿವರಾತ್ರಿ ಮಾರ್ಚ್ 1, 2022 ರಂದು ಇರಲಿದ್ದು, ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನದ ಭಾಗವಾಗಿ ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಈ ಕಾರಣದಿಂದಾಗಿ ಮಾರ್ಚ್ 1, 2022 ರಂದು, ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಲಕ್ನೋ, ಮುಂಬೈ, ನಾಗ್ಪುರ, ರಾಯ್‌ಪುರ, ರಾಂಚಿ, ಶಿಮ್ಲಾ, ಶ್ರೀನಗರ, ತಿರುವನಂತಪುರದಲ್ಲಿ ಮಹಾಶಿವರಾತ್ರಿಯ ಕಾರಣ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.

 

ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ತೆಲಂಗಾಣ, ದೆಹಲಿ, ಕೇರಳ, ಆಂಧ್ರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಪಂಜಾಬ್, ಹರಿಯಾಣ, ಜಾರ್ಖಂಡ್, ಛತ್ತೀಸ್‌ಗಢ, ಉತ್ತರಾಖಂಡ, ಒಡಿಶಾ ಮತ್ತು ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ ಇರಲಿದೆ. ಮಹಾಶಿವರಾತ್ರಿ ಸೇರಿದಂತೆ ಹಲವಾರು ಹಬ್ಬದ ಸಂದರ್ಭಗಳಲ್ಲಿ, ದೇಶದಲ್ಲಿ ಮಾರ್ಚ್ ತಿಂಗಳು 13 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದರೆ ಪ್ರಮುಖವಾಗಿ ಮಾರ್ಚ್ ಒಂದರಂದು ಹಲವಾರು ರಾಜ್ಯಗಳಲ್ಲಿ ಬ್ಯಾಂಕ್‌ ರಜೆ ಇರಲಿದೆ.

ಮಾರ್ಚ್ ಬ್ಯಾಂಕ್‌ ರಜಾದಿನಗಳು

ಮಾರ್ಚ್ 01 ಮಹಾಶಿವರಾತ್ರಿ, ಮಾರ್ಚ್ 03 ಲೋಸರ್ (ಸಿಕ್ಕಿಮ್‌ನಲ್ಲಿ ಬ್ಯಾಂಕ್‌ ಬಂದ್‌), ಮಾರ್ಚ್ 04 ಚಾಪ್ಚಾರ್ ಕುಟ್ (ಮಿಜೋರಾಂನಲ್ಲಿ ಬ್ಯಾಂಕ್‌ ಬಂದ್‌), ಮಾರ್ಚ್ 06 ಭಾನುವಾರ ವಾರದ ರಜೆ, ಮಾರ್ಚ್ 12 ಎರಡನೇ ಶನಿವಾರ, ಮಾರ್ಚ್ 13 ಭಾನುವಾರ ವಾರದ ರಜೆ, ಮಾರ್ಚ್ 17 2022 ಹೋಳಿ (ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್‌ನಲ್ಲಿ ಬ್ಯಾಂಕ್‌ ಬಂದ್‌), ಮಾರ್ಚ್ 18 ಹೋಳಿ/ಹೋಳಿ 2ನೇ ದಿನ (ಕರ್ನಾಟಕ, ಒಡಿಸ್ಸಾ, ತಮಿಳುನಾಡು, ಮಣಿಪುರ, ತ್ರಿಪುರಾದಲ್ಲಿ ಬ್ಯಾಂಕ್‌ ಬಂದ್‌), ಮಾರ್ಚ್ 19 ಹೋಳಿ/ಯೋಸಾಂಗ್ 2ನೇ ದಿನ (ಒಡಿಸ್ಸಾ, ಮಣಿಪುರ, ಬಿಹಾರದಲ್ಲಿ ಬ್ಯಾಂಕ್‌ ಬಂದ್‌), ಮಾರ್ಚ್ 20 ಭಾನುವಾರ ವಾರದ ರಜೆ, ಮಾರ್ಚ್ 22 ಬಿಹಾರ ದಿವಸ (ಬಿಹಾರದಲ್ಲಿ ಬ್ಯಾಂಕ್‌ ಬಂದ್‌), ಮಾರ್ಚ್ 26 ನಾಲ್ಕನೇ ಶನಿವಾರ, ಮಾರ್ಚ್ 27 ಭಾನುವಾರ ವಾರದ ರಜೆ ಇರಲಿದೆ.

English summary

Bank Holidays in Mahashivratri 2022: Check The Full List of States Here

Bank Holidays in Mahashivratri 2022: Check The Full List of States Here.
Story first published: Tuesday, March 1, 2022, 8:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X