For Quick Alerts
ALLOW NOTIFICATIONS  
For Daily Alerts

ಬೆಂಗಳೂರು ನೆರೆ: ಕಾರಿಗೆ ಹಾನಿಯಾದರೆ ವಿಮೆ ಕ್ಲೈಮ್ ಮಾಡುವುದು ಹೇಗೆ?

|

ಚಂಡಮಾರುತ, ಭೂಕಂಪ, ಪ್ರವಾಹ, ನೆರೆ, ಆಲಿಕಲ್ಲು ಮಳೆಯಂತಹ ನೈಸರ್ಗಿಕ ವಿಕೋಪಗಳು ಅನಿರೀಕ್ಷಿತವಾಗಿದೆ. ಪ್ರಸ್ತುತ ಹವಾಮಾನ ಇಲಾಖೆಯು ಹವಾಮಾನ ಹೇಗೆ ಇರಲಿದೆ ಎಂಬ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತದೆಯಾದರೂ ನಾವು ಈ ಮಳೆ, ಚಂಡಮಾರುತವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕಳೆದ ಹಲವಾರು ವರ್ಷಗಳಿಂದ ಭಾರತದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಆಸ್ತಿಗಳಿಗೆ ಹಾನಿಯಾಗಿದೆ.

ಪ್ರಸ್ತುತ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಲ್ಲಿ ಭಾರೀ ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ನೆರೆಯಾಗಿದೆ. ದಾರಿಯಲ್ಲಿ ನೀರು ತುಂಬಿಕ ಜನರ ಓಡಾಟ್ಟಕ್ಕೆ ಭಾರೀ ಕಷ್ಟವಾಗಿದೆ. ಇನ್ನು ಹಲವಾರು ವಾಹನಗಳಿಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಕಾರಿನ ವಿಮೆಯನ್ನು ಕ್ಲೈಮ್ ಮಾಡಿಕೊಳ್ಳಬಹುದು.

ಕಾರು ವಿಮೆ: ಪ್ರೀಮಿಯಂಗಳ ಶೇ.25 ಕ್ಲೇಮ್‌ಗೆ ಎಚ್‌ಡಿಎಫ್‌ಸಿ ಅವಕಾಶಕಾರು ವಿಮೆ: ಪ್ರೀಮಿಯಂಗಳ ಶೇ.25 ಕ್ಲೇಮ್‌ಗೆ ಎಚ್‌ಡಿಎಫ್‌ಸಿ ಅವಕಾಶ

ಈ ನೆರೆ ಸಂದರ್ಭದಲ್ಲಿ ನೀವು ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದೆಯೇ ನಿಮ್ಮ ಕಾರಿಗೆ ಆದ ಹಾನಿಗಾಗಿ ವಿಮೆ ಕ್ಲೈಮ್ ಮಾಡಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಸಮಯ ಹಾಗೂ ಹಣ ಎರಡನ್ನು ಕೂಡಾ ಉಳಿತಾಯ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಕೆಲವು ವಿಮಾ ಪಾಲಿಸಿಗಳು ಕಳ್ಳತನ ಹಾಗೂ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿಯೂ ಕ್ಲೈಮ್ ಮಾಡಲು ಸಾಧ್ಯವಾಗಲಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಕೂಡಲೇ ಕಾರನ್ನು ಸ್ಟಾರ್ಟ್ ಮಾಡಬೇಡಿ

ಕೂಡಲೇ ಕಾರನ್ನು ಸ್ಟಾರ್ಟ್ ಮಾಡಬೇಡಿ

ನೀವು ಈ ಕಾರು ವಿಮೆಯ ಬಗ್ಗೆ ಪ್ರಮುಖವಾಗಿ ಕೆಲವು ಅಂಶಗಳನ್ನು ತಿಳಿದರಲೇ ಬೇಕಾಗುತ್ತದೆ. ಇಲ್ಲವಾದರೆ ನಿಮಗೆ ಭಾರೀ ನಷ್ಟವಾಗಬಹುದು. ನಿಮ್ಮ ಕಾರು ನೆರೆಯಿಂದಾಗಿ ಹಾನಿಯಾದಾಗ ನೀವು ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆಯೂ ತಿಳಿದಿರಬೇಕಾಗುತ್ತದೆ. ನೆರೆಯಿಂದಾಗಿ ಕಾರು ಹಾನಿಯಾದಾಗ ನೀವು ಕಾರನ್ನು ಕೂಡಲೇ ಸ್ಟಾರ್ಟ್ ಮಾಡಲು ಮುಂದಾಗಬಹುದು. ಆದರೆ ಗಮನದಲ್ಲಿ ಇರಲಿ, ಈ ಸಂದರ್ಭದಲ್ಲಿ ಕೂಡಲೇ ಕಾರನ್ನು ಸ್ಟಾರ್ಟ್ ಮಾಡಬೇಡಿ. ನೀವು ನೆರೆಯಿಂದಾಗಿ ಕಾರು ಹಾನಿಯಾಗಿರುವಾಗ ಕಾರನ್ನು ಸ್ಟಾರ್ಟ್ ಮಾಡಿದರೆ ಕಾರಿನ ಇಂಜಿನ್‌ಗೆ ಹಾನಿಯಾಗುತ್ತದೆ. ಇದು ನಿಮ್ಮ ವಿಮೆಯಲ್ಲಿ ಕವರ್ ಆಗದೆ ಇರುವ ಸಾಧ್ಯತೆ ಇದೆ. ಆದ್ದರಿಂದಾಗಿ ಕಾರನ್ನು ಹಾಗೆಯೇ ಇರಿಸಿ ಅದರ ಫೋಟೋವನ್ನು ತೆಗೆಯುವುದು ಉತ್ತಮ. ಕಾರಿನಲ್ಲಿ ಬೇರೆ ಏನಾದರೂ ಹಾನಿಯಾಗಿದ್ದರೆ ಅದರ ಫೋಟೋವನ್ನು ಕೂಡಾ ತೆಗಿಯಿರಿ.

 ನಿಮ್ಮ ವಿಮಾ ಸಂಸ್ಥೆ ಶೀಘ್ರ ಮಾಹಿತಿ ನೀಡಿ

ನಿಮ್ಮ ವಿಮಾ ಸಂಸ್ಥೆ ಶೀಘ್ರ ಮಾಹಿತಿ ನೀಡಿ

ನೆರೆಯಿಂದಾಗಿ ಒಂದೆರಡಲ್ಲ ಹಲವಾರು ಕಾರು, ವಾಹನಗಳಿಗೆ ಹಾನಿ ಉಂಟಾಗಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯಿಂದ ಹಲವಾರು ಮಂದಿ ಒಂದೇ ಸಮಯಕ್ಕೆ ವಿಮಾ ಕ್ಲೈಮ್ ಮಾಡಬಹುದು. ಆದ್ದರಿಂದಾಗಿ ನಿಮ್ಮ ವಿಮಾ ಸಂಸ್ಥೆಗೆ ಆದಷ್ಟು ಶೀಘ್ರವಾಗಿ ಕಾರಿಗೆ ಹಾನಿ ಆಗಿರುವ ಬಗ್ಗೆ ಮಾಹಿತಿ ನೀಡಿ. ಕೂಡಲೇ ನಿಮ್ಮ ಕಾರನ್ನು ಸರ್ವಿಸ್ ಸೆಂಟರ್‌ಗೆ ಕಳುಹಿಸಿ. ನೀವು ಗ್ರಾಹಕರ ಸಹಾಯವಾಣಿ ಮೂಲಕ ಅಥವಾ ಇಮೇಲ್ ಮೂಲಕ ನಿಮ್ಮ ಕಾರಿನ ವಿಮಾ ಸಂಸ್ಥೆಯನ್ನು ಸಂಪರ್ಕ ಮಾಡಬಹುದಾಗಿದೆ. ನೀವುವಿಮಾ ಕ್ಲೈಮ್‌ಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಭರ್ತಿ ಮಾಡಬೇಕಾಗುತ್ತದೆ. ಫೋಟೋಗಳನ್ನು ಕೂಡಾ ನೀವು ಹಾಕಬಹುದು. ನೀವು ನಿಮ್ಮ ವಿಮಾ ಸಂಸ್ಥೆಯ ಮೊಬೈಲ್ ಆಪ್‌ನಲ್ಲಿಯೂ ಈ ಕಾರ್ಯವನ್ನು ಮಾಡಬಹುದು. ಆದರೆ ಹೆಚ್ಚು ಸಮಯ ತೆಗೆದುಕೊಳ್ಳಬೇಡಿ. ಯಾಕೆಂದರೆ ಅಧಿಕ ಸಮಯವನ್ನು ನೀವು ತೆಗೆದುಕೊಂಡಂತೆ ನಿಮ್ಮ ಕಾರಿಗೆ ಹಾನಿ ಹೆಚ್ಚಾಗಲಿದೆ. ನಿಮ್ಮ ವಿಮಾ ಸಂಸ್ಥೆಯಿಂದ ಕ್ಲೈಮ್ ಪಡೆಯಲು ಕೂಡಾ ಅಧಿಕ ಸಮಯ ಬೇಕಾಗಬಹುದು.

 ವಿಮೆ ಕ್ಲೈಮ್ ರಿಜಿಸ್ಟರ್ ಮಾಡುವ ಹಂತಗಳು

ವಿಮೆ ಕ್ಲೈಮ್ ರಿಜಿಸ್ಟರ್ ಮಾಡುವ ಹಂತಗಳು

ಹಂತ 1: ನಿಮ್ಮ ಕಾರು ವಿಮಾ ಸಂಸ್ಥೆಗೆ ಕರೆ ಮೂಲಕ, ಇಮೇಲ್ ಮೂಲಕ ಮಾಹಿತಿ ನೀಡಿ
ಹಂತ 2: ನೆರೆ ಸಂದರ್ಭ ಕಾರು ಎಲ್ಲಿತ್ತು ಹಾಗೂ ವಿಮೆಯ ಬಗ್ಗೆ ವಿವರಿಸಿ
ಹಂತ 3: ಸಂಸ್ಥೆ ಕ್ಲೈಮ್ ರಿಜಿಸ್ಟರ್ ಸಂಖ್ಯೆ ನೀಡಲಿದೆ. ಇದನ್ನು ನೀವು ರೆಫೆರೆನ್ಸ್ ಸಂಖ್ಯೆಯಾಗಿ ಬಳಸಬಹುದು
ಹಂತ 4: ಕಾರನ್ನು ಪಿಕ್‌ಅಪ್ ಮಾಡಲು ನಿಮಗೆ ನಿರ್ದಿಷ್ಟ ಸಮಯವನ್ನು ನೀಡಲಾಗುತ್ತದೆ.
ಹಂತ 5: ಕಾರಿನ ಹಾನಿ ಪರಿಶೀಲನೆ ಮಾಡಲಾಗುತ್ತದೆ. ಇದಾದ ಬಳಿಕ ಕಾರು ರಿಪೇರಿ ಮೊತ್ತದ ಬಗ್ಗೆ ನಿರ್ಧಾರವಾಗಲಿದೆ
ಹಂತ 6: ಎಲ್ಲ ಪ್ರಕ್ರಿಯೆ ಬಳಿಕ ಕ್ಲೈಮ್ ಅಪ್ರುವಲ್ ಫಾರ್ಮ್ ಮೇಲೆ ಸಹಿ ಮಾಡಿ, ಕಾಪಿಯನ್ನು ಇಟ್ಟುಕೊಳ್ಳಿ
ಹಂತ 7: ಕಾರು ಯಾವಾಗ ರಿಪೇರಿ ಆಗಲಿದೆ, ನಿಮಗೆ ಯಾವಾಗ ಲಭ್ಯವಾಗಲಿದೆ ಎಂಬ ಮಾಹಿತಿ ತಿಳಿಯಲಿದೆ.
ಹಂತ 8: ನಗದುರಹಿತ ಕ್ಲೈಮ್ ಆಗಿದ್ದರೆ ವಿಮಾ ಸಂಸ್ಥೆ ನೇರವಾಗಿ ಗ್ಯಾರೆಜ್‌ಗೆ ಹಣ ಪಾವತಿ ಮಾಡಲಿದೆ.
ಹಂತ 9: ಹಣ ಮರುಪಾವತಿಯಾಗಿದ್ದರೆ ನಿಮಗೆ ಹಣ ಲಭ್ಯವಾಗಲಿದೆ.

 ವಿಮೆಯ ಮೇಲೆ ಪ್ರಭಾವ ಬೀರುತ್ತದೆ ಕಾರಿನ ಮೋಡಿಫಿಕೇಶನ್! ವಿಮೆಯ ಮೇಲೆ ಪ್ರಭಾವ ಬೀರುತ್ತದೆ ಕಾರಿನ ಮೋಡಿಫಿಕೇಶನ್!

English summary

Bengaluru Floods: How to Claim Insurance in Case Car Gets Damaged in Floods

Bengaluru Floods: How to Claim Insurance in Case Your Car Gets Damaged Due to Floods. Here are a few points to follow if you are looking to file an insurance claim for your flood damaged vehicle.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X