For Quick Alerts
ALLOW NOTIFICATIONS  
For Daily Alerts

ಉಚಿತವಾಗಿ LPG ಸಿಲಿಂಡರ್ ಪಡೆಯುವುದು ಹೇಗೆ? ಜೂನ್ 30ರವರೆಗೆ ಅವಕಾಶ!

|

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದು, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರುತ್ತಿದೆ. ಆದರೆ ಜೂನ್ ತಿಂಗಳಲ್ಲಿ ಮಾತ್ರ ಎಲ್‌ಪಿಜಿ ದರ ಬದಲಾಗಲಿಲ್ಲ.

 

ತೈಲ ಬೆಲೆ ಏರಿಕೆಯಿಂದಾಗಿ ಸರ್ಕಾರಿ ತೈಲ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಪ್ರತಿ ತಿಂಗಳು ಆರಂಭದಲ್ಲಿ ಎಲ್‌ಪಿಜಿ ದರ ಬದಲಾಗುತ್ತದೆ. ಜಾಗತಿಕ ಕಚ್ಚಾ ತೈಲ ದರಗಳು ಮತ್ತು ಕರೆನ್ಸಿ ವಿನಿಮಯ ದರಗಳ ಆಧಾರದ ಮೇಲೆ ಎಲ್‌ಪಿಜಿ ಬೆಲೆ ನಿಗದಿಯಾಗುತ್ತದೆ.

ಆದರೆ ಜೂನ್‌ನಲ್ಲಿ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ, ಆದರೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ತೀವ್ರ ಕಡಿತ ಕಂಡುಬಂದಿದೆ.

ಯಾವ ನಗರದಲ್ಲಿ ಎಷ್ಟಿದೆ ಎಲ್‌ಪಿಜಿ ಸಿಲಿಂಡರ್ ಬೆಲೆ?

ಯಾವ ನಗರದಲ್ಲಿ ಎಷ್ಟಿದೆ ಎಲ್‌ಪಿಜಿ ಸಿಲಿಂಡರ್ ಬೆಲೆ?

ಪ್ರಸ್ತುತ, ನವದೆಹಲಿಯಲ್ಲಿ ಎಲ್‌ಪಿಜಿ ದೇಶೀಯ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ 809.00 ರೂ. , ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ಗೆ 835.50 ರೂ., ಮುಂಬೈ ಸಿಲಿಂಡರ್‌ಗೆ 809.00 ರೂ. ಮತ್ತು ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ 825.00 ರೂ., ಬೆಂಗಳೂರಿನಲ್ಲಿ 812 ರೂಪಾಯಿ ನಿಗದಿಯಾಗಿದೆ.

ಕಳೆದ ವರ್ಷ ನವೆಂಬರ್‌ ಅವಧಿಯಲ್ಲಿ ದೆಹಲಿಯಲ್ಲಿ ಕೇವಲ 594 ರೂ.ಗಳಿದ್ದ ಎಲ್‌ಪಿಜಿ ಸಿಲಿಂಡರ್ ಬೆಲೆ ಸದ್ಯ 809.00 ರೂ. ತಲುಪಿದೆ. ಆದರೆ ನೀವು ಎಲ್‌ಪಿಜಿ ಸಿಲಿಂಡರ್ ಅನ್ನು ಒಂದು ಬಾರಿ ಬಹುತೇಕ ಉಚಿತವಾಗಿ ಖರೀದಿಸಬಹುದು ಎಂಬುದು ತಿಳಿದಿದೆಯೇ? ಹೌದು ನೀವು ಮನೆಯಲ್ಲಿಯೇ ಎಲ್‌ಪಿಜಿ ಸಿಲಿಂಡರ್ ಬುಕ್‌ ಮಾಡಿ, ಕ್ಯಾಶ್‌ಬ್ಯಾಕ್ ಪಡೆಯಬಹುದು.

800 ರೂ.ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

800 ರೂ.ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

ಪೇಟಿಎಂನ ಆನ್‌ಲೈನ್ LPG ಗ್ಯಾಸ್ ಬುಕಿಂಗ್ ಸೇವೆಯೊಂದಿಗೆ, ನಿಮ್ಮ ಮನೆಯಿಂದ ಕೆಲವೇ ಕ್ಲಿಕ್‌ಗಳಲ್ಲಿ ನೀವು ಸಿಲಿಂಡರ್ ಸಿಲಿಂಡರ್ ಬುಕ್ ಮಾಡಬಹುದು. ಮುಖ್ಯವಾಗಿ, ಪೇಟಿಎಂ ಆ್ಯಪ್ ಬಳಸಿ ಮೊದಲ ಬಾರಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಆರ್ಡರ್ ಮಾಡುವ ಗ್ರಾಹಕರಿಗೆ 800 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಈ ಆಫರ್ ಸದ್ಯ ಜೂನ್ 30, 2021 ರವರೆಗೆ ಮಾತ್ರ ಲಭ್ಯವಿದೆ.

Alert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯ

ಪೇಟಿಎಂನಲ್ಲಿ ಮೊದಲ ಬಾರಿಗೆ ಬುಕ್ ಮಾಡುವವರಿಗೆ ಸುವರ್ಣಾವಕಾಶ
 

ಪೇಟಿಎಂನಲ್ಲಿ ಮೊದಲ ಬಾರಿಗೆ ಬುಕ್ ಮಾಡುವವರಿಗೆ ಸುವರ್ಣಾವಕಾಶ

ಪೇಟಿಎಂನಲ್ಲಿ ಮೊದಲ ಬಾರಿಗೆ ಎಲ್‌ಪಿಜಿ ಸಿಲಿಂಡರ್ ಬುಕ್‌ ಮಾಡುವವರು 800 ರೂ ಕ್ಯಾಶ್‌ಬ್ಯಾಕ್‌ನೊಂದಿಗೆ, ನೀವು ಗ್ಯಾಸ್ ಸಿಲಿಂಡರ್ ಅನ್ನು ಬಹುತೇಕ ಉಚಿತವಾಗಿ ಪಡೆಯಬಹುದು.

ಒಮ್ಮೆ ನೀವು ಪೇಟಿಎಂನಿಂದ ಎಲ್‌ಪಿಜಿ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ನೀವು ಪ್ರಚಾರದ ಅಡಿಯಲ್ಲಿ ಕ್ಯಾಶ್‌ಬ್ಯಾಕ್ ಸ್ಕ್ರ್ಯಾಚ್‌ ಕಾರ್ಡ್ ಅನ್ನು ಸ್ವೀಕರಿಸುತ್ತೀರಿ. ನಿಮ್ಮ ಮೊದಲ ಎಲ್‌ಪಿಜಿ ಸಿಲಿಂಡರ್ ಅನ್ನು ನೀವು ಪೇಟಿಎಂನಿಂದ ಬುಕ್ ಮಾಡಿದ ತಕ್ಷಣ ಈ ಒಪ್ಪಂದವು ಅನ್ವಯವಾಗುತ್ತದೆ. ನೀವು ಕನಿಷ್ಟ 500 ರೂ. ಪಾವತಿಸಿದರೆ ಮಾತ್ರ ಈ ಪ್ರಚಾರ ಲಾಭವು ಮಾನ್ಯವಾಗಿರುತ್ತದೆ.

ಬುಕ್‌ ಮಾಡುವುದು ಹೇಗೆ?

ಬುಕ್‌ ಮಾಡುವುದು ಹೇಗೆ?

ಗಮನಿಸಿ: ಈ ಸ್ಕ್ರಾಚ್ ಕಾರ್ಡ್‌ನಲ್ಲಿ ಕನಿಷ್ಟ 10 ರೂ.ನಿಂದ ಮತ್ತು ಗರಿಷ್ಠ 800 ರೂ.ವರೆಗೆ ಕ್ಯಾಶ್‌ಬ್ಯಾಕ್ ಸಿಗಲಿದೆ.

English summary

Big Offer: Get A LPG Cylinder For Free Till June 30: Know More

Here the details of how to book LPG Cylinder For Free and get cashback. Know the condtions
Story first published: Saturday, June 5, 2021, 21:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X