For Quick Alerts
ALLOW NOTIFICATIONS  
For Daily Alerts

BBK 9 Winner Prize Money : ತೆರಿಗೆ ಕಡಿತವಾಗಿ ರೂಪೇಶ್ ಶೆಟ್ಟಿ ಜೇಬಿಗೆ ಇಳಿಯುವ ಮೊತ್ತವೆಷ್ಟು?

|

ಬಿಗ್ ಬಾಸ್ ಕನ್ನಡ ಸೀಸನ್ 9ರ ವಿಜೇತರು ಯಾರು ಎಂದು ನಮಗೆ ಈಗಾಗಲೇ ತಿಳಿದಿದೆ. ವಿಜೇತ ರೂಪೇಶ್ ಶೆಟ್ಟಿಗೆ ಬರೋಬ್ಬರಿ 60 ಲಕ್ಷ ರೂಪಾಯಿ ಹಣವು ಲಭ್ಯವಾಗಿದೆ. ಆದರೆ ಈ ಸಂಪೂರ್ಣ ಮೊತ್ತ ವಿಜೇತರಿಗೆ ಸಿಕ್ಕಲ್ಲ ಎಂಬುವುದು ನಿಮಗೆ ತಿಳಿದಿರಲಿ!

ಹೌದು, ಯಾವುದೇ ರಿಯಾಲಿಟಿ ಶೋ, ಲಾಟರಿಗಳು ಆಗಲಿ ಅದರಲ್ಲಿ ವಿಜೇತರಿಗೆ ಲಭ್ಯವಾಗುವ ಮೊತ್ತದಿಂದ ಟಿಡಿಎಸ್ ಅಥವಾ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 56(2)(ib) ಅಡಿಯಲ್ಲಿ ಬೇರೆ ಮೂಲಗಳಿಂದ ಪಡೆದ ಆದಾಯ ( Income From Other Sources) ತೆರಿಗೆಗೆ ಒಳಪಡುವಂತದ್ದು ಆಗಿದೆ. ಇದರಲ್ಲಿ ತೆರಿಗೆ ಕಡಿತವಾದ ಬಳಿಕವೇ ಉಳಿದ ಮೊತ್ತ ವಿಜೇತರ ಜೇಬಿಗೆ ಸೇರಲಿದೆ.

ಬಿಗ್ ಬಾಸ್ 16: ದಾಖಲೆ ಮಟ್ಟಕ್ಕೇರಿದ ಸಲ್ಮಾನ್ ಖಾನ್ ಗಳಿಕೆ!ಬಿಗ್ ಬಾಸ್ 16: ದಾಖಲೆ ಮಟ್ಟಕ್ಕೇರಿದ ಸಲ್ಮಾನ್ ಖಾನ್ ಗಳಿಕೆ!

ಇನ್ನು ಕೌನ್ ಬನೇಗಾ ಕರೋಡ್‌ಪತಿ 2000ರಲ್ಲಿ ಆರಂಭವಾದ ಬಳಿಕ ಹಣಕಾಸು ಕಾಯ್ದೆ 2001ರಲ್ಲಿ ತಿದ್ದುಪಡಿಯನ್ನು ಮಾಡಲಾಗಿದೆ. ಇದು ತೆರಿಗೆ ಕಡಿತ ಸಂಬಂಧಿತ ತಿದ್ದುಪಡಿಯಾಗಿದೆ. ಹಣಕಾಸು ಕಾಯ್ದೆ 2001ರ ಸೆಕ್ಷನ್ 194B ಅಡಿಯಲ್ಲಿ ಯಾವುದೇ ರಿಯಾಲಿಟಿ ಶೋಗಳಲ್ಲಿ ಲಭ್ಯವಾದ ಮೊತ್ತದ ಮೇಲೆ ಶೇಕಡ 30ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಹಾಗಾದರೆ ಬಿಗ್ ಬಾಸ್ ವಿಜೇತ ರೂಪೇಶ್ ಶೆಟ್ಟಿಗೆ ಲಭ್ಯವಾದ 60 ಲಕ್ಷ ರೂಪಾಯಿಯಲ್ಲಿ ಎಷ್ಟು ತೆರಿಗೆ ಕಡಿತವಾಗುತ್ತದೆ, ಎಷ್ಟು ಹಣ ಲಭ್ಯವಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ರೂಪೇಶ್‌ ಶೆಟ್ಟಿಗೆ ಲಭ್ಯವಾದ 60 ಲಕ್ಷ ರೂದಲ್ಲಿ ಎಷ್ಟು ಕಡಿತ?

ರೂಪೇಶ್‌ ಶೆಟ್ಟಿಗೆ ಲಭ್ಯವಾದ 60 ಲಕ್ಷ ರೂದಲ್ಲಿ ಎಷ್ಟು ಕಡಿತ?

ಕನ್ನಡ ಬಿಗ್‌ ಬಾಸ್‌ ಸೀಸನ್ 9ರ ವಿಜೇತ ರೂಪೇಶ್ ಶೆಟ್ಟಿಗೆ 50 ಲಕ್ಷ ರೂಪಾಯಿ ಲಭ್ಯವಾಗಿದೆ, ಹಾಗೆಯೇ ಆಕರ್ಷಕ ಟ್ರೋಫಿ ಲಭ್ಯವಾಗಿದೆ. ಹಾಗೆಯೇ ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿ ಕೂಡಾ ಲಭ್ಯವಾಗಿದೆ. ಒಟ್ಟಾಗಿ 60 ಲಕ್ಷ ರೂಪಾಯಿ ಮೊತ್ತವು ರೂಪೇಶ್ ಶೆಟ್ಟಿಗೆ ಲಭ್ಯವಾಗಿದೆ. ಆದರೆ ಈ 60 ಲಕ್ಷ ರೂಪಾಯಿಯಲ್ಲಿ ಸುಮಾರು ಶೇಕಡ 30ರಷ್ಟು ಮೊತ್ತವು ತೆರಿಗೆ ರೂಪದಲ್ಲಿ ಕಡಿತವಾಗಲಿದೆ. ಅಂದರೆ 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂಪಾಯಿ ಕಡಿತವಾಗಲಿದೆ. ಉಳಿದ ಮೊತ್ತ 42 ಲಕ್ಷ ರೂಪಾಯಿ ರೂಪೇಶ್ ಶೆಟ್ಟಿಗೆ ಲಭ್ಯವಾಗಲಿದೆ. ಇನ್ನು ಶೇಕಡ 3ರಷ್ಟು ಶಿಕ್ಷಣ ಸೆಸ್, ಶೇಕಡ 2ರಷ್ಟು ಸೆಕೆಂಡರಿ ಆಂಡ್ ಹೈಯರ್ ಸೆಕೆಂಡರಿ ಎಜುಕೇಷನ್ ಸೆಸ್ ಕೂಡಾ ಕಡಿತವಾಗುವ ಸಾಧ್ಯತೆಯು ಇದೆ. ಅಂದರೆ ಒಟ್ಟಾಗಿ ಶೇಕಡ 30.9ರಷ್ಟು ಕಡಿತವಾಗಬಹುದು.

ಕೂಲಿ ಕಾರ್ಮಿಕನಿಗೆ 14 ಕೋಟಿ ರೂ ಆದಾಯ ತೆರಿಗೆ ನೋಟಿಸ್!ಕೂಲಿ ಕಾರ್ಮಿಕನಿಗೆ 14 ಕೋಟಿ ರೂ ಆದಾಯ ತೆರಿಗೆ ನೋಟಿಸ್!

 ಹಾಗಾದರೆ ಯಾರಿಗೆಲ್ಲ ತೆರಿಗೆ ಅನ್ವಯವಾಗಲಿದೆ?

ಹಾಗಾದರೆ ಯಾರಿಗೆಲ್ಲ ತೆರಿಗೆ ಅನ್ವಯವಾಗಲಿದೆ?

ಲಾಟರಿ ಹಾಗೂ ಲಕ್ಕಿ ಡ್ರಾ, ರೇಸ್, ಕಾರ್ಡ್ ಗೇಮ್, ಗ್ಯಾಂಬ್ಲಿಂಗ್, ಬೆಟ್ಟಿಂಗ್, ಕ್ರಾಸ್‌ವರ್ಡ್ ಫಝಲ್, ಟಿವಿ ಶೋಗಳಲ್ಲಿ ಲಭ್ಯವಾಗುವ ಮೊತ್ತಕ್ಕೆ ತೆರಿಗೆ ಅನ್ವಯವಾಗಲಿದೆ. 10 ಸಾವಿರ ಅಥವಾ ಅದಕ್ಕಿಂತ ಅಧಿಕ ಮೊತ್ತಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಈ ತೆರಿಗೆ ಮಾನದಂಡವು ಎಲ್ಲ ರಿಯಾಲಿಟಿ ಶೋಗಳಿಗೆ ಅನ್ವಯವಾಗಲಿದೆ. ಒಂದು ವೇಳೆ 8 ಲಕ್ಷ ರೂಪಾಯಿ ಲಭ್ಯವಾಗಿದ್ದರೆ, ತೆರಿಗೆ ಕಡಿತವಾದ ಬಳಿಕ 2,47,200 ರೂಪಾಯಿ ಲಭ್ಯವಾಗಲಿದೆ.

 ತೆರಿಗೆ ವಿನಾಯಿತಿ ಪಡೆಯಬಹುದೇ?

ತೆರಿಗೆ ವಿನಾಯಿತಿ ಪಡೆಯಬಹುದೇ?

ಇನ್ನು ರಿಯಾಲಿಟಿ ಶೋಗಳಲ್ಲಿ ಲಭ್ಯವಾದ ಮೊತ್ತಕ್ಕೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆಯೇ ಎಂಬುವುದು ಕೂಡಾ ಹಲವಾರು ಮಂದಿಗೆ ಇರುವ ಅನುಮಾನವಾಗಿದೆ. ಇದಕ್ಕೆ ನಾವು ನೀಡುವ ಉತ್ತರ ಇಲ್ಲ ಎಂಬುವುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 58(4)ರ ಅಡಿಯಲ್ಲಿ ಗೇಮ್ ಶೋ, ರಿಯಾಲಿಟಿ ಶೋ, ಲಾಟರಿ ಮೂಲಕ ವ್ಯಕ್ತಿಯು ಗಳಿಸುವ ಮೊತ್ತಕ್ಕೆ ಯಾವುದೇ ತೆರಿಗೆ ವಿನಾಯಿತಿ ಲಭ್ಯವಾಗುವುದಿಲ್ಲ. ಈ ಮೊತ್ತದ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ. ಇನ್ನು ಕೆಲವರಿಗೆ ರಿಯಾಲಿಟಿ ಶೋನಲ್ಲಿ ಪಡೆದ ಮೊತ್ತವನ್ನು ಗಿಫ್ಟ್ ಆಗಿ ಪರಿಗಣಿಸಲಾಗುತ್ತದೆಯೇ ಎಂಬ ಅನುಮಾನವಿದೆ. ಅದಕ್ಕೂ ನಾವು ನೀಡುವ ಇಲ್ಲ ಎಂಬುವುದಾಗಿದೆ. ರಿಯಾಲಿಟಿ ಶೋನಲ್ಲಿ ಫ್ಲಾಟ್ ಅನ್ನು ಪಡೆದರೆ ಅದು ದುಬಾರಿ ಉಡುಗೊರೆಯಾಗುತ್ತದೆ. ಅದಕ್ಕೆ ಟಿಡಿಎಸ್ ಅನ್ವಯವಾಗುತ್ತದೆ.

English summary

Bigg Boss Kannada 9 Winner : How much does Bigg Boss winner get after Paying Tax On Rs 60 Lakh

Bigg boss kannada winner: winner roopesh shetty won’t get 60 lakh rupees, more than that, here is the winning amount and tax deduction details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X