For Quick Alerts
ALLOW NOTIFICATIONS  
For Daily Alerts

ಸಾವಿರಾರು ಕೋಟಿ ಮೌಲ್ಯದ ಆಸ್ತಿ ಇರುವ ಸಿನಿಮಾ ನಿರ್ಮಾಪಕರಿವರು...

|

ಹಿಂದಿ ಚಿತ್ರರಂಗದ ಬಗ್ಗೆ ಪ್ರಸ್ತಾವವಾದರೆ ಅದು ಸೂಪರ್ ಸ್ಟಾರ್ಸ್, ಸುರ ಸುಂದರಿಯರಾದ ಹೀರೋಯಿನ್ ಗಳು- ಅವರ ಹವ್ಯಾಸ, ಇಷ್ಟ ಮತ್ತು ಇಷ್ಟವಿಲ್ಲದವುಗಳು, ಗಾಸಿಪ್ ಗಳು, ಸಂಪಾದನೆ, ಭವಿಷ್ಯದ ಸಿನಿಮಾಗಳ ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ. ಸಿನಿಮಾ ನೋಡುಗರಾಗಲಿ ಮತ್ತು ಅಭಿಮಾನಿಗಳಾಗಲಿ 'ಇತರರ' ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿರುವುದಿಲ್ಲ.

ಅದರಲ್ಲೂ ಸಿನಿಮಾ ರಂಗದಲ್ಲಿದ್ದು, ಕೆಲವರು ಅಷ್ಟು ಶ್ರೀಮಂತರಾಗಿರುತ್ತಾರೆ ಎಂಬ ಊಹೆಯನ್ನೂ ಮಾಡಿರುವುದಿಲ್ಲ. ಅದರಲ್ಲೂ ಸಿನಿಮಾ ನಿರ್ಮಾಪಕರ ಬಗ್ಗೆಯಂತೂ ನೆನಪು ಮಾಡಿಕೊಳ್ಳುವುದು ದೂರದ ಮಾತಾಯಿತು. ಸಿನಿಮಾ ಚೆನ್ನಾಗಿರಲಿ, ಚೆನ್ನಾಗಿಲ್ಲದಿರಲಿ ಅಥವಾ ಸುಮಾರಾಗಿರಲಿ ಚಲನಚಿತ್ರದ ನಿರ್ಮಾಪಕರ ಪಾತ್ರವನ್ನು ಮರೆಯುವಂತಿಲ್ಲ.

ಹೆಚ್ಚು ಸಂಭಾವನೆ ಕೇಳಿ ಹಿಟ್ ಸಿನಿಮಾವನ್ನು ಕಳೆದುಕೊಂಡ ನಟ-ನಟಿಯರು

 

ತೆರೆಯ ಹಿಂದೆ ಇರುವ ನಿರ್ಮಾಪಕರು ಅಪರೂಪಕ್ಕೆ ಸುದ್ದಿಯಾಗುತ್ತಾರೆ. ಅದರಲ್ಲೂ ಅವರ ಶ್ರೀಮಂತಿಕೆ, ಸಂಪತ್ತಿನ ಬಗ್ಗೆ ಗೊತ್ತಾದರೆ ಅಚ್ಚರಿಯಾಗುತ್ತದೆ. ಒಂದು ಸಿನಿಮಾ ಮುನ್ನೂರು ಕೋಟಿ ಗಳಿಸಿದೆ ಅಂದರೆ ಅದರ ಮುಖ್ಯ ಪಾಲು ಪ್ರಮುಖ ಪಾತ್ರಧಾರಿಗಳದಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ವಾಸ್ತವ ಏನೆಂದರೆ, ಬಹು ದೊಡ್ಡ ಮೊತ್ತವು ಹಣ ಹೂಡಿಕೆ ಮಾಡಿದ ನಿರ್ಮಾಪಕರಿಗೆ ಸೇರುತ್ತದೆ.

ಹಿಂದಿ ಚಿತ್ರರಂಗದ ಅಂಥ ಶ್ರೀಮಂತ ನಿರ್ಮಾಪಕರ ಬಗ್ಗೆ ವಿವರಗಳು ಇಲ್ಲಿವೆ.

ಆದಿತ್ಯ ಚೋಪ್ರಾ

ಆದಿತ್ಯ ಚೋಪ್ರಾ

ಮುಂಬೈನ ನಿರ್ಮಾಪಕರಲ್ಲೇ ಅತ್ಯಂತ ಶ್ರೀಮಂತ ನಿರ್ಮಾಪಕ ಆದಿತ್ಯ ಚೋಪ್ರಾ. ತನ್ನ ತಂದೆ ನಿಧನದ ನಂತರ 'ಯಶ್ ರಾಜ್' ಫಿಲ್ಮ್ಸ್ ನ ಮುನ್ನಡೆಸುತ್ತಿರುವವರು ಇದೇ ಆದಿತ್ಯ. ಧೂಮ್, ಧೂಮ್ 2, ಗುಂಡೇ, ಚಕ್ ದೇ! ಇಂಡಿಯಾ, ದಿಲ್ ತೋ ಪಾಗಲ್ ಹೈ, ವಾರ್ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಮಾರುಕಟ್ಟೆ ತಜ್ಞರ ಪ್ರಕಾರ, ಆದಿತ್ಯ ಚೋಪ್ರಾ ಬಳಿ 6,000 ಕೋಟಿ ರುಪಾಯಿಗೂ ಹೆಚ್ಚು ಆಸ್ತಿ ಇದೆ.

ಶಾರುಕ್ ಖಾನ್- ಗೌರಿ ಖಾನ್

ಶಾರುಕ್ ಖಾನ್- ಗೌರಿ ಖಾನ್

ಶಾರುಕ್ ಖಾನ್ ಯಾರಿಗೆ ಗೊತ್ತಿಲ್ಲ? ಹಿಂದಿ ಚಿತ್ರರಂಗದ ಟಾಪ್ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು. ಆದರೆ ಶಾರುಕ್ ಅಂದರೆ ಅಷ್ಟೇ ಅಲ್ಲ, ಅವರು ಹಾಗೂ ಪತ್ನಿ ಗೌರಿ ಸೇರಿ 'ರೆಡ್ ಚಿಲ್ಲೀಸ್ ಎಂಟರ್ ಟೇನ್ ಮೆಂಟ್' ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಚೆನ್ನೈ ಎಕ್ಸ್ ಪ್ರೆಸ್, ದಿಲ್ ವಾಲೆ, ಡಿಯರ್ ಜಿಂದಗಿ, ರಾಯೀಸ್ ಮುಂತಾದ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಶಾರುಕ್ ಬೇರೆ ನಿರ್ಮಾಪಕರ ಸಿನಿಮಾದಲ್ಲೂ ಅಭಿನಯಿಸುತ್ತಾರೆ. ಭಾರೀ ಸಂಭಾವನೆಯನ್ನೂ ಪಡೆಯುತ್ತಾರೆ. ಶಾರುಕ್ ಹಾಗೂ ಗೌರಿ ಇಬ್ಬರ ಆಸ್ತಿಯೂ ಸೇರಿ 5,000 ಕೋಟಿಗೂ ಹೆಚ್ಚಿದೆಯಂತೆ.

ಕನ್ನಡದಲ್ಲಿ ಒಂದು ಸಿನ್ಮಾ ಮಾಡಲು ಎಷ್ಟು ಖರ್ಚಾಗುತ್ತೆ? ಪಿನ್ ಟು ಪಿನ್ ಲೆಕ್ಕಾಚಾರ

ಆರ್ಜುನ್ ಲಲ್ಲಾ
 

ಆರ್ಜುನ್ ಲಲ್ಲಾ

ಸಿನಿಮಾಪ್ರಿಯರಿಗೆ ಅರ್ಜುನ್ ಲಲ್ಲಾ ಹೆಸರು ಅಷ್ಟಾಗಿ ಪರಿಚಯ ಇರಲಿಕ್ಕಿಲ್ಲ. ಆದರೆ ಹಿಂದಿ ಚಿತ್ರರಂಗದಲ್ಲಿ ಬಹಳ ದೊಡ್ಡ ಹೆಸರು ಇವರದು. ಎರೋಸ್ ಇಂಟರ್ ನ್ಯಾಷನಲ್ ಸ್ಥಾಪಕರು ಅರ್ಜುನ್ ಲಲ್ಲಾ. ಈ ಸಂಸ್ಥೆ ಭಾರತಕ್ಕಷ್ಟೇ ಸೀಮಿತವಲ್ಲ. ಐವತ್ತೊಂದು ದೇಶಗಳಲ್ಲಿ ಎರೋಸ್ ಇಂಟರ್ ನ್ಯಾಷನಲ್ ವ್ಯವಹಾರ ಇದೆ. ತಜ್ಞರ ಪ್ರಕಾರ, ಅರ್ಜುನ್ ಲಲ್ಲಾರ ಆಸ್ತಿ ಮೌಲ್ಯ ಮೂರು ಸಾವಿರ ಕೋಟಿಗೂ ಹೆಚ್ಚು. ಎರೋಸ್ ನಿಂದ ನಿರ್ಮಾಣ ಮಾಡಿದ ಬಹು ಯಶಸ್ವಿ ಸಿನಿಮಾಗಳೆಂದರೆ, ಜಿಂದಗಿ ನ ಮಿಲೇಗಿ ದೊಬಾರ, ವಿಕಿ ಡೋನರ್, ಕಾಕ್ ಟೇಲ್, ಶೂಟೌಟ್ ಅಟ್ ವಡಾಲ, ರಾಮ್ ಲೀಲಾ ಮತ್ತು ಬಜರಂಗಿ ಭಾಯ್ ಜಾನ್.

ರೋನಿ ಸ್ಕ್ರೀವಲ್ಲ

ರೋನಿ ಸ್ಕ್ರೀವಲ್ಲ

ಯುಟಿವಿ ಮೋಷನ್ ಪಿಕ್ಚರ್ಸ್ ನ ಪ್ರಮುಖ ವ್ಯಕ್ತಿ ರೋನಿ ಸ್ಕ್ರೀವಲ್ಲ. ಜೋಧಾ ಅಕ್ಬರ್, ಬರ್ಫಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ರೋನಿ ಮತ್ತು ತಂಡ. ಅವರ ಒಟ್ಟು ಆಸ್ತಿ ಸಾವಿರದೈನೂರು ಕೋಟಿ ರುಪಾಯಿಯಷ್ಟಿದೆ.

ವಯಸ್ಕರ ಚಿತ್ರರಂಗದ ಅತ್ಯಂತ ಶ್ರೀಮಂತ ತಾರೆಯರ ಟಾಪ್ 20 ಪಟ್ಟಿ

ಕರಣ್ ಜೋಹರ್

ಕರಣ್ ಜೋಹರ್

ಹೆಸರಾಂತ- ಪರಿಚಿತ ನಿರ್ದೇಶಕ- ನಿರ್ಮಾಪಕ ಕರಣ್ ಜೋಹರ್. ಅವರ ನಿರ್ಮಾಣ ಸಂಸ್ಥೆ- ಧರ್ಮ ಪ್ರೊಡಕ್ಷನ್ಸ್. ಕರಣ್ ಜೋಹರ್ ನಟನೆಯನ್ನೂ ಮಾಡಿದ್ದಾರೆ. ಟೀವಿಯಲ್ಲಿ ಕಾರ್ಯಕ್ರಮ ನಿರೂಪಣೆಯನ್ನೂ ಮಾಡುತ್ತಾರೆ. ಕರಣ್ ಜೋಹರ್ ರ ಹೆಸರಾಂತ ಸಿನಿಮಾಗಳ ಪಟ್ಟಿ ಇಂತಿದೆ: ಯೇ ಜವಾನಿ ಹೈ ದಿವಾನಿ, ದ ಲಂಚ್ ಬಾಕ್ಸ್, ಸ್ಟೂಡೆಂಟ್ ಆಫ್ ದಿ ಇಯರ್ ಇನ್ನಷ್ಟು ಸಿನಿಮಾಗಳು. ಕರಣ್ ಜೋಹರ್ ಆಸ್ತಿ ಮೌಲ್ಯದ ಬಗ್ಗೆ ನಿರ್ದಿಷ್ಟ ಅಂಕಿ- ಅಂಶ ಇಲ್ಲದಿದ್ದರೂ ಅಂದಾಜು ಸಾವಿರದ ನಾನೂರು ಕೋಟಿಯಷ್ಟು ಆಸ್ತಿ ಇರಬಹುದು ಎನ್ನಲಾಗುತ್ತದೆ.

ಆಮಿರ್ ಖಾನ್- ಕಿರಣ್ ರಾವ್

ಆಮಿರ್ ಖಾನ್- ಕಿರಣ್ ರಾವ್

ಹಿಂದಿ ಚಿತ್ರರಂಗದ ಪ್ರತಿಭಾವಂತ ನಟ- ನಿರ್ದೇಶಕ- ನಿರ್ಮಾಪಕ ಆಮಿರ್ ಖಾನ್. ಅವರ ಸಿನಿಮಾಗಾಗಿ ಜನರು ಕಾಯುತ್ತಾರೆ. ಆಮಿರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಸಿನಿಮಾ ನಿರ್ಮಾಣವನ್ನೂ ಮಾಡುತ್ತಾರೆ. ತಾರೆ ಜಮೀನ್ ಪರ್, ಸೀಕ್ರೆಟ್ ಸೂಪರ್ ಸ್ಟಾರ್, ಪೀಪ್ಲಿ ಲೈವ್ ನಂಥ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗುವಂಥ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈ ದಂಪತಿಯ ಸಂಪತ್ತಿನ ಮೌಲ್ಯ ಅಂದಾಜು ಸಾವಿರದ ಮುನ್ನೂರು ಕೋಟಿ ರುಪಾಯಿ.

ಏಕ್ತಾ ಕಪೂರ್

ಏಕ್ತಾ ಕಪೂರ್

ಬಾಲಾಜಿ ಮೋಷನ್ ಪಿಕ್ಚರ್ಸ್ ಅನ್ನು ಮುನ್ನಡೆಸುತ್ತಿರುವವರು ಏಕ್ತಾ ಕಪೂರ್. ಆಕೆ ಸಿನಿಮಾ ರಂಗ ಪ್ರವೇಶಿಸಿದ್ದು ಬಹಳ ತಡವಾಗಿ. ಧಾರಾವಾಹಿಗಳ ನಿರ್ಮಾಣದಲ್ಲೇ ಹೆಚ್ಚು ತೊಡಗಿಕೊಂಡಿದ್ದರು. ಮಿಷನ್ ಇಸ್ತಾಂಬುಲ್, ಕೃಷ್ಣಾ ಕಾಟೇಜ್ ಸೇರಿ ಹಲವು ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಅವರ ನಿರ್ಮಾಣದ ಸಿನಿಮಾಗಳು ನೂರು ಕೋಟಿ ಗಳಿಕೆಯನ್ನೂ ಮೀರಿವೆ.

English summary

Bollywood Producers Have More Than Thousand Crores

Here is the list of richest Bollywood producers, who have more than 1,000 crores wealth.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more