For Quick Alerts
ALLOW NOTIFICATIONS  
For Daily Alerts

ಎಲ್‌ಪಿಜಿ ಸಿಲಿಂಡರ್‌ ಬುಕ್‌‌ ಮಾಡಿ ಬಂಪರ್ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

|

ಕೊರೊನಾವೈರಸ್‌ ಸಾಂಕ್ರಾಮಿಕ ಹಾಗೂ ಅದರ ರೂಪಾಂತರ ಓಮಿಕ್ರಾನ್‌ ಪ್ರಕರಣಗಳ ಏರಿಕೆ ನಡುವೆ ದೇಶದಲ್ಲಿ ಹಣದುಬ್ಬರವು ಕೂಡಾ ಏರಿಕೆ ಆಗುತ್ತಿದೆ. ಈ ಹಣದುಬ್ಬರವು ಮಧ್ಯಮ ವರ್ಗದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಈ ಮಧ್ಯೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಗಗನಕ್ಕೇರುತ್ತಿದೆ.

ಈ ಮಧ್ಯೆಯೂ ನೀವು ಅಗ್ಗದ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯಲು ಬಯಸಿದರೆ, ನಿಮಗಾಗಿ ಒಂದು ಕೊಡುಗೆ ಇಲ್ಲಿದೆ. ಡಿಜಿಟಲ್ ಪಾವತಿಯನ್ನು ಸುಗಮಗೊಳಿಸುವ ಪಾಕೆಟ್ಸ್ ಆ್ಯಪ್ ಮೂಲಕ ಈ ಕೊಡುಗೆಯನ್ನು ನೀಡಲಾಗುತ್ತಿದೆ. ಇದಲ್ಲದೆ, ನೀವು ಈ ಅಪ್ಲಿಕೇಶನ್‌ನಿಂದ ಗ್ಯಾಸ್ ಸಿಲಿಂಡರ್ ಅನ್ನು ಬುಕಿಂಗ್ ಮಾಡುವಾಗ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪಡೆಯಬಹುದಾಗಿದೆ.

 ಎಲ್ಪಿಜಿ ಸಿಲಿಂಡರ್ ಬ್ಲಾಸ್ಟ್ ಆದ್ರೆ 30 ಲಕ್ಷ ರೂ.ವರೆಗೆ ವಿಮಾ ಪರಿಹಾರ ಪಡೆಯಬಹುದು .. ಗೊತ್ತೇ? ಎಲ್ಪಿಜಿ ಸಿಲಿಂಡರ್ ಬ್ಲಾಸ್ಟ್ ಆದ್ರೆ 30 ಲಕ್ಷ ರೂ.ವರೆಗೆ ವಿಮಾ ಪರಿಹಾರ ಪಡೆಯಬಹುದು .. ಗೊತ್ತೇ?

ಮಾಧ್ಯಮಗಳ ವರದಿಗಳ ಪ್ರಕಾರ, ಗ್ರಾಹಕರು ಪಾಕೆಟ್ಸ್ ಅಪ್ಲಿಕೇಶನ್ ಮೂಲಕ ಗ್ಯಾಸ್ ಸಿಲಿಂಡರ್‌ಗಳನ್ನು ಬುಕಿಂಗ್ ಮಾಡಿದರೆ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಪಾಕೆಟ್ಸ್ ಆ್ಯಪ್ ಅನ್ನು ಐಸಿಐಸಿಐ ಬ್ಯಾಂಕ್‌ನ ಅಧೀನಕ್ಕೆ ಒಳಪಟ್ಟಿದೆ.

 ಎಲ್‌ಪಿಜಿ ಬುಕ್‌‌ ಮಾಡಿ ಬಂಪರ್ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

ಇನ್ನು ಆಫರ್‌ನ ಭಾಗವಾಗಿ, ಗ್ರಾಹಕರು ಪಾಕೆಟ್ಸ್ ಅಪ್ಲಿಕೇಶನ್ ಮೂಲಕ ರೂ 200 ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ ಪಾವತಿಯನ್ನು ಮಾಡಿದರೆ, ಗ್ರಾಹಕರು 10 ಪ್ರತಿಶತದವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇನ್ನು ಗ್ರಾಹಕರು ಈ 10 ಪ್ರತಿಶತದವರೆಗೆ ಕ್ಯಾಶ್‌ಬ್ಯಾಕ್ ಪಡೆಯಲು ಯಾವುದೇ ಪ್ರೋಮೋಕೋಡ್ ಅನ್ನು ನಮೂದಿಸುವ ಅಗತ್ಯವಿಲ್ಲ.

ಯಾವುದೇ ಆಫರ್‌ನಲ್ಲೂ ಕೆಲವೊಂದು ನಿಯಮಗಳು ಆಫರ್‌ಗಳು ಇರುವುದು ಸಾಮಾನ್ಯ. ಅದರಂತೆ ಈ ಆಫರ್‌ನಲ್ಲೂ ಕೆಲವು ನಿಯಮ, ಮಾನದಂಡ, ಷರತ್ತುಗಳು ಇದೆ. ಪಾಕೆಟ್ಸ್ ಆ್ಯಪ್‌ನ ಈ ಕೊಡುಗೆಯ ಪ್ರಕಾರ ಒಂದು ತಿಂಗಳಲ್ಲಿ ಮೂರು ಬಿಲ್ ಪಾವತಿಗಳಿಗೆ ಮಾತ್ರ ಆಫರ್ ಮಾನ್ಯವಾಗಿರುತ್ತದೆ. ಕಂಪನಿಯ ಮಾರ್ಗಸೂಚಿಗಳ ಪ್ರಕಾರ, ಒಂದು ಗಂಟೆಯಲ್ಲಿ ಕೇವಲ 50 ಬಳಕೆದಾರರು ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಬಹುದು. ಇದಲ್ಲದೆ, ಗ್ರಾಹಕರು ಒಂದು ಗಂಟೆಯಲ್ಲಿ 1 ಬಹುಮಾನ/ಕ್ಯಾಶ್‌ಬ್ಯಾಕ್ ಮತ್ತು ಬಿಲ್ ಪಾವತಿಯ ಮೇಲೆ ತಿಂಗಳಲ್ಲಿ 3 ಬಹುಮಾನಗಳು/ಕ್ಯಾಶ್‌ಬ್ಯಾಕ್ ಗೆಲ್ಲಬಹುದು.

ಸಿಹಿಸುದ್ದಿ: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಇಳಿಕೆಸಿಹಿಸುದ್ದಿ: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಇಳಿಕೆ

ಗ್ಯಾಸ್ ಬುಕಿಂಗ್‌ನಲ್ಲಿ ಆಫರ್‌ ಪಡೆಯುವುದು ಹೇಗೆ?

* ನಿಮ್ಮ ಪಾಕೆಟ್ಸ್ ವಾಲೆಟ್ ಅಪ್ಲಿಕೇಶನ್ ತೆರೆಯಿರಿ
* ರೀಚಾರ್ಜ್ ಮತ್ತು ಬಿಲ್‌ ಪಾವತಿ ವಿಭಾಗಕ್ಕೆ ಹೋಗಿ
* Pay Bills ಮೇಲೆ ಕ್ಲಿಕ್‌ ಮಾಡಿ
* Choose Billers section ನಲ್ಲಿ ಇನ್ನೊಂದು ಬಾರಿ ಟ್ಯಾಪ್‌ ಮಾಡಿ
* ಬಳಿಕ ನಿಮಗೆ ನೀವು ಬುಕಿಂಗ್‌ ಆಯ್ಕೆ ಲಭ್ಯವಾಗಲಿದೆ
* ಈಗ ನಿಮ್ಮ ಎಲ್‌ಪಿಜಿ ಸೇವಾ ಪೂರೈಕೆದಾರರನ್ನು ಆಯ್ಕೆಮಾಡಿ
* ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
* ಈಗ ನಿಮ್ಮ ಬುಕಿಂಗ್ ಮೊತ್ತವನ್ನು ತೋರಿಸಲಾಗುತ್ತದೆ
* ಬುಕಿಂಗ್ ಮೊತ್ತದ ಮೇಲೆ ಕ್ಲಿಕ್‌ ಮಾಡಿ
* ಬುಕಿಂಗ್ ಮೊತ್ತವನ್ನು ಪಾವತಿಸಿ
* ಈ ವಹಿವಾಟು ಸಂಪೂರ್ಣವಾದ ಬಳಿಕ ನಿಮಗೆ ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ
* ಕ್ಯಾಶ್‌ಬ್ಯಾಕ್‌ ಅನ್ನು ಪಾಕೆಟ್ಸ್ ವ್ಯಾಲೆಟ್‌ಗೆ ಕ್ರೆಡಿಟ್ ಮಾಡಲಾಗುತ್ತದೆ

ಇನ್ನು ಪ್ರಸ್ತುತ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಗಗನಕ್ಕೇರುತ್ತಿದೆ. ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯು 902.50 ರೂಪಾಯಿ ಆಗಿದೆ. ಇನ್ನು ದಾರಾವಾಡದಲ್ಲಿ 919 ರೂಪಾಯಿ ಇದ್ದರೆ, ಗದಗ, ಕೊಪ್ಪಳದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯು 936 ರೂಪಾಯಿ ಆಗಿದೆ. ಹಾವೇರಿಯಲ್ಲಿ 937 ರೂಪಾಯಿ ಆಗಿದೆ. ಯಾದಗಿರಿಯಲ್ಲಿ 925.50 ರೂಪಾಯಿ ಆಗಿದ್ದು, ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲಿ 912 ರೂಪಾಯಿ 917 ರೂಪಾಯಿ ಆಸುಪಾಸಿನಲ್ಲಿ ಸಿಲಿಂಡರ್‌ ಬೆಲೆ ಇದೆ.

English summary

Book LPG Cylinder With Pockets App, Get Bumper Cashback, Here's Details In Kannada

Book LPG Cylinder With Pockets App, Get Bumper Cashback, Here's Details In Kannada.
Story first published: Friday, January 21, 2022, 9:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X