For Quick Alerts
ALLOW NOTIFICATIONS  
For Daily Alerts

ಬಿಆರ್ ಚೋಪ್ರಾ ಬಂಗಲೆ ಮಾರಾಟ, ಜುಹು ಪ್ರದೇಶದಲ್ಲಿ ಆಸ್ತಿ ಮೌಲ್ಯ ಹೇಗಿದೆ?

|

ಭಾರತದಲ್ಲಿ ಸಂಚಲನ ಮೂಡಿಸಿದ ಟಿವಿ ಸರಣಿ ಮಹಾಭಾರತದ ನಿರ್ದೇಶಕ ಬಿಆರ್ ಚೋಪ್ರಾ ಅವರ ಜುಹುದಲ್ಲಿರುವ ಅದ್ದೂರಿ ಬಂಗಲೆ ಇತ್ತೀಚೆಗೆ ಮಾರಾಟವಾಗಿದೆ. ವರದಿಗಳ ಪ್ರಕಾರ 25,000 ಚದರ ಅಡಿ ವಿಸ್ತೀರ್ಣದ ಬಂಗಲೆಯನ್ನು 183 ಕೋಟಿ ರು ಗಳಿಗೆ ಮಾರಾಟ ಮಾಡಲಾಗಿದೆ. ಜುಹು ಪ್ರದೇಶದ ಆಸ್ತಿ ಮೌಲ್ಯ, ಸ್ಟಾಂಪ್ ಡ್ಯೂಟಿ ವಿವರ ಇಲ್ಲಿದೆ.

 

ಬಿಆರ್ ಚೋಪ್ರಾ ಬಂಗಲೆ ಇದ್ದ ವಸತಿ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಕೆ ರಹೇಜಾ ಕಾರ್ಪ್ ಸಂಸ್ಥೆ ಈ ಬಂಗಲೆಯನ್ನು ಖರೀದಿಸಿದೆ. ಬಿ. ಆರ್ ಚೋಪ್ರಾ ಬಂಗಲೆ ಆಸ್ತಿ ಅವರ ಸೊಸೆ ಮತ್ತು ದಿವಂಗತ ಚಲನಚಿತ್ರ ನಿರ್ಮಾಪಕ ರವಿ ಚೋಪ್ರಾ ಅವರ ಪತ್ನಿ ರೇಣು ಚೋಪ್ರಾರ ಹೆಸರಿನಲ್ಲಿತ್ತು. ಸೀ ಪ್ರಿನ್ಸೆಸ್ ಹೋಟೆಲ್ ಎದುರಿನಲ್ಲಿರುವ ಈ ಬಂಗಲೆ ಜಾಗದಲ್ಲಿ ಪ್ರೀಮಿಯಂ ವಸತಿ ಯೋಜನೆಯನ್ನು ರಹೇಜಾ ಸಂಸ್ಥೆ ಪ್ರಕಟಿಸಿದೆ.

ಎಕನಾಮಿಕ್ ಟೈಮ್ಸ್ ಪ್ರಕಾರ, ರೇಣು ಚೋಪ್ರಾ ಅವರಿಂದ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿರುವ ಕೆ ರಹೇಜಾ ಕಾರ್ಪ್, ಒಪ್ಪಂದದಂತೆ ಖರೀದಿದಾರರಿಗೆ ಮುದ್ರಾಂಕ ಶುಲ್ಕ ಪಾವತಿಸಿದ 11 ಕೋಟಿ ಸೇರಿದಂತೆ 183 ಕೋಟಿ ರೂಗೆ ಸೇಲ್ ಡೀಲ್ ಮಾಡಿಕೊಡಲಾಗಿದೆ.

ಬಿಆರ್ ಚೋಪ್ರಾ ಬಂಗಲೆ ಮಾರಾಟ, ಜುಹು ಪ್ರದೇಶದಲ್ಲಿ ಆಸ್ತಿ ಮೌಲ್ಯ?

ಕೋವಿಡ್ 19 ನಂತರದ ದಿನಗಳಲ್ಲಿ ಜುಹು ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಪ್ರಗತಿ ಕಂಡಿದ್ದು, ವಸತಿ ಸಮುಚ್ಚಯ, ವಾಣಿಜ್ಯ ಪ್ರದೇಶ ಅಭಿವೃದ್ಧಿ ಕಾಮಗಾರಿ ಹೆಚ್ಚಾಗುತ್ತಿದೆ. ಜನಪ್ರಿಯ ತಾರೆಯರು ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಆಸ್ತಿಗಳನ್ನು ಹೊಂದಿದ್ದಾರೆ.

ಬಿಆರ್ ಚೋಪ್ರಾ ಅವರ ಕಿರಿಯ ಸಹೋದರ ಯಶ್ ಚೋಪ್ರಾ ಅವರು ತಮ್ಮ ಮಗ ಆದಿತ್ಯ ಚೋಪ್ರಾ ಜೊತೆಗೆ ತಮ್ಮದೇ ಆದ ಯಶ್ ರಾಜ್ ಫಿಲ್ಮ್ಸ್ ಅನ್ನು ರಚಿಸುವ ಮೊದಲು ಬಿಆರ್ ಫಿಲ್ಮ್ಸ್‌ಗಾಗಿ ಹಲವಾರು ಹಿಟ್‌ಗಳನ್ನು ನಿರ್ದೇಶಿಸಿದರು ಮತ್ತು ನಿರ್ಮಿಸಿದ್ದಾರೆ.
ಇನ್ನು ಜುಹು ಪ್ರದೇಶದ ಆಸ್ತಿ ಮಾರಾಟ, ಮೌಲ್ಯ ನೋಂದಣಿ ವಿವರದ ಬಗ್ಗೆ ವಿವರಿಸುವುದಾದರೆ, ಇದು ಗ್ರೇಟರ್ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ ವ್ಯಾಪ್ತಿಗೆ ಒಳಪಡುತ್ತದೆ. ನಗರ ಪ್ರದೇಶದ ಕಾರ್ಪೊರೇಷನ್ ಕ್ಲಾಸ್ ಎ ಶ್ರೇಣಿಯಲ್ಲಿದ್ದು ವಿವಿಧ ಮೌಲ್ಯ ವಿವರ ಹೀಗಿದೆ

 

ಭೂಮಿಯ ದರ+ ಕಟ್ಟಡದ ಮೌಲ್ಯ ಪ್ರತ್ಯೇಕವಾಗಿರುತ್ತದೆ. ಪ್ರತಿ ಚದರ ಅಡಿ ಲೆಕ್ಕದಂತೆ ಗರಿಷ್ಠ ಮೌಲ್ಯ

79,838 - 93,750 ರು ಹಾಗೂ ಸರಾಸರಿ 93,750 ರು / ಚದರ ಅಡಿ

ಆಪಾರ್ಟ್ಮೆಂಟ್ ಆರಂಭಿಕ ಬೆಲೆ 44, 375 ರು ಪ್ರತಿ ಚದರಡಿ, 2,583 - 5 ಲಕ್ಷ ರು ಬೆಲೆ

English summary

BR Chopra's Mumbai bungalow sale deal, Stamp Duty Fee and Details

Legendary filmmaker R Chopra's Mumbai bungalow sale deal details 25,000 square-feet Mumbai bungalow sold for whopping Rs 183 crore
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X