For Quick Alerts
ALLOW NOTIFICATIONS  
For Daily Alerts

ಈ 6 ಸ್ಟಾಕ್ಸ್ ಖರೀದಿಸಿ ಒಳ್ಳೆ ರಿಟರ್ನ್ಸ್ ಗಳಿಸಿ, ಇದು ಶೇರ್ ಖಾನ್ ಸಲಹೆ

|

ಜನಪ್ರಿಯ ಬ್ರೋಕರೇಜ್ ಸಂಸ್ಥೆಯಾದ ಶೇರ್‌ಖಾನ್, ಸಿಮೆಂಟ್ ವಲಯದ ಇತ್ತೀಚಿನ ವರದಿಗಳ ಆಧಾರದ ಮೇಲೆ ಹೂಡಿಕೆದಾರರಿಗೆ ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಯಾವ ಸ್ಟಾಕ್ಸ್ ಖರೀದಿಸಿದರೆ ಸಂಭಾವ್ಯ ಲಾಭವನ್ನು ಪಡೆಯಬಹುದು ಎಂಬ ಸಲಹೆ ನೀಡಿದೆ.ಪ್ರಮುಖ ಆರು ಸಿಮೆಂಟ್ ಸ್ಟಾಕ್‌ಗಳನ್ನು ಆಯ್ಕೆ ಮಾಡಿದೆ.

ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಕ ರಾಷ್ಟ್ರವಾಗಿದ್ದು, ಚೀನಾವನ್ನು ಮಾತ್ರ ಹಿಂದಿಕ್ಕಿದೆ. ಚೀನಾವು 2019 ರಲ್ಲಿ 2.2 ಶತಕೋಟಿ ಮೆಟ್ರಿಕ್ ಟನ್ ಸಿಮೆಂಟ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಇದು ಜಾಗತಿಕ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚಿನದನ್ನು ಹೊಂದಿದೆ.

ಆದರೆ ಭಾರತ ಜಾಗತಿಕ ಸಾಮರ್ಥ್ಯದ ಸುಮಾರು ಶೇಕಡ 8ರಷ್ಟನ್ನು ಹೊಂದಿದೆ. ಸಿಮೆಂಟ್ ಉದ್ಯಮವು ಸಾಮಾಜಿಕ-ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಸರ್ಕಾರಕ್ಕೆ ಸಿಮೆಂಟ್ ಉತ್ಪಾದನೆಯಿಂದ 500 ಶತಕೋಟಿ ರೂಪಾಯಿಗೂ ಅಧಿಕ ಆದಾಯ ಲಭ್ಯವಾಗುತ್ತದೆ.

ಭಾರತದ ಟಾಪ್ 10 ಸಿಮೆಂಟ್ ಕಂಪನಿಗಳು: ಇಲ್ಲಿದೆ ಪಟ್ಟಿಭಾರತದ ಟಾಪ್ 10 ಸಿಮೆಂಟ್ ಕಂಪನಿಗಳು: ಇಲ್ಲಿದೆ ಪಟ್ಟಿ

ಬ್ರೋಕರೇಜ್ ಶಿಫಾರಸು ಮಾಡಿದ ಷೇರುಗಳಲ್ಲಿ ಶ್ರೀ ಸಿಮೆಂಟ್ಸ್ ಲಿಮಿಟೆಡ್, ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್, ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್, ದಿ ರಾಮ್‌ಕೋ ಸಿಮೆಂಟ್ಸ್ ಲಿಮಿಟೆಡ್, ಜೆ ಕೆ ಸಿಮೆಂಟ್ ಲಿಮಿಟೆಡ್, ಮತ್ತು ದಾಲ್ಮಿಯಾ ಭಾರತ್ ಲಿಮಿಟೆಡ್ ಸೇರಿವೆ. ಸ್ಟಾಕ್ ಮತ್ತು ಇತರ ಪ್ರಮುಖ ಅಂಶಗಳಿಗೆ ಸಂಬಂಧಿಸಿದ ವಿವರಗಳನ್ನು ಮುಂದೆ ನೀಡಲಾಗಿದೆ.

ಶ್ರೀ ಸಿಮೆಂಟ್ಸ್ ಲಿಮಿಟೆಡ್

ಶ್ರೀ ಸಿಮೆಂಟ್ಸ್ ಲಿಮಿಟೆಡ್

ಶ್ರೀ ಸಿಮೆಂಟ್ಸ್ ಲಿಮಿಟೆಡ್ Large Cap ಅಡಿಯಲ್ಲಿ ಬರಲಿದ್ದು ಶೇ 36ರಷ್ಟು ಏರಿಕೆ ಕಂಡಿದೆ. ಈ ಸಮಯಕ್ಕೆ 19,513.30 ಪ್ರತಿ ಷೇರಿನಂತೆ ವ್ಯವಹರಿಸುತ್ತಿದೆ. 52 ವಾರಗಳ ಗರಿಷ್ಠ ಮಟ್ಟ 31, 469 ರು ಹಾಗೂ ಕನಿಷ್ಠ 17,865 ರು ತಲುಪಿತ್ತು. ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಡಿವಿಡೆಂಡ್ ನೀಡುತ್ತಾ ಬಂದಿದೆ. 90 ರು ಪ್ರತಿ ಷೇರಿನಂತೆ ಜುಲೈ 13, 2022ರಂದು ಎಕ್ಸ್ ಡಿವಿಡೆಂಡ್ ಘೋಷಿಸಿದೆ. ಡಿವಿಡೆಂಡ್ ರಿಟರ್ನ್ 0.45% ನಷ್ಟಿದೆ.

ಇದು ವಾರ್ಷಿಕ 44.4 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಶ್ರೀ ಜಂಗ್ ರೋಧಕ್, ಬಂಗೂರ್ ಮತ್ತು ರಾಕ್‌ಸ್ಟ್ರಾಂಗ್ ಕಂಪನಿಯ ಬ್ರಾಂಡ್‌ಗಳು ಆಗಿದೆ. ಮಾರುಕಟ್ಟೆ ಕ್ಯಾಪಿಟಲ್ 94,784 ಕೋಟಿ ರೂಪಾಯಿ ಆಗಿದೆ. ಆದಾಯ: 12,555 ಕೋಟಿ ಮಾರುಕಟ್ಟೆ ಕ್ಯಾಪ್: 72,291 ಕೋಟಿ ಉದ್ಯೋಗಿಗಳು: 6,299

ಮಾರುಕಟ್ಟೆ ಟಾರ್ಗೆಟ್ 26,000 ಪ್ರತಿ ಷೇರಿನಂತೆ ವ್ಯವಹರಿಸಬಹುದು ಎಂಬ ಸೂಚನೆ ಸಿಕ್ಕಿದೆ. ಷೇರ್ ಖಾನ್ ನಿರೀಕ್ಷೆಯಂತೆ ಶ್ರೀ ಸಿಮೆಂಟ್ ಷೇರು ವರ್ಷದಿಂದ ವರ್ಷಕ್ಕೆ ಲೆಕ್ಕದಂತೆ ಶೇ 16ರಷ್ಟು ಹಾಗೂ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 3ರಂತೆ ಪ್ರಗತಿ ಕಾಣುವ ಸಾಧ್ಯತೆಯಿದೆ. EBITDA ಪ್ರತಿ ಟನ್ 1,099ರು ನಿರೀಕ್ಷೆ ಹೊಂದಿದೆ.

ಅಲ್ಟ್ರಾಟೆಕ್ ಸಿಮೆಂಟ್

ಅಲ್ಟ್ರಾಟೆಕ್ ಸಿಮೆಂಟ್

ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಭಾರತದ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ ಮತ್ತು ವಿಶ್ವದ ಅತ್ಯಂತ ಪ್ರತಿಷ್ಠಿತ ಸಿಮೆಂಟ್ ಉತ್ಪಾದಕರಲ್ಲಿ ಒಂದಾಗಿದೆ. ಸದ್ಯದ ಮಾರುಕಟ್ಟೆ ದರ(CMP) 5,712.75 ರು ಪ್ರತಿ ಷೇರಿನಂತೆ ವ್ಯವಹರಿಸುತ್ತಿದೆ. 52 ವಾರಗಳ ಗರಿಷ್ಠ ಮಟ್ಟ 8269 ರು ಹಾಗೂ ಕನಿಷ್ಠ 5157 ರು ತಲುಪಿತ್ತು.

ವಾರ್ಷಿಕ 102.75 ಮಿಲಿಯನ್ ಟನ್‌ಗಳ ಬೂದು ಸಿಮೆಂಟ್ ಅನ್ನು ಸಂಸ್ಥೆ ಉತ್ಪಾದನೆ ಮಾಡುತ್ತದೆ. ಬಿರ್ಲಾ ವೈಟ್ ಎಂಬುದು ಅಲ್ಟ್ರಾಟೆಕ್ ಅನ್ನು ಮಾರಾಟ ಮಾಡುವ ಬ್ರಾಂಡ್ ಹೆಸರು.
ಆದಾಯ: 38,657 ಕೋಟಿ
ಮಾರುಕಟ್ಟೆ ಕ್ಯಾಪ್: 107,207 ಕೋಟಿ
ಉದ್ಯೋಗಿಗಳು: 120,000

ಪ್ರತಿ ಷೇರಿನ PE ಮೌಲ್ಯ 22.74 ಹಾಗೂ ಸೆಕ್ಟರ್ PE 27.11 ಇದೆ. ಈಕ್ವಿಟಿ ಡಿವಿಡೆಂಡ್ 380% ಅಥವಾ 38 ರು ಪ್ರತಿ ಷೇರಿನಂತೆ ನೀಡಲಾಗಿದೆ. ಡಿವಿಡೆಂಡ್ ಫಲ 0.65% ಇದೆ.

ಷೇರ್ ಖಾನ್ ಸಲಹೆ: 7100 ರು ಪ್ರತಿ ಷೇರು ಮುಟ್ಟಬಹುದು. ಹೂಡಿಕೆದಾರರು 5792 ಬಂದಾಗ ಖರೀದಿಗೆ ಉತ್ಸಾಹ ತೋರಲಿದ್ದಾರೆ. ವರ್ಷದಿಂದ ವರ್ಷಕ್ಕೆ ಶೇ 13.5% ಹಾಗೂ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 4% ಏರಿಕೆ ಹಾಗೂ EBITDA/ಟನ್ 1187 ರು ತಲುಪಬಹುದು. ವಿದ್ಯುತ್ ಹಾಗೂ ತೈಲ ದರ ಏರಿಳಿತದ ಮೇಲೆ ಇದು ಅವಲಂಬಿತ.

ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್

ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್

ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ಸದ್ಯದ ಮಾರುಕಟ್ಟೆ ದರ 1,389 ರು ಪ್ರತಿ ಷೇರಿನಂತೆ ವ್ಯವಹರಿಸುತ್ತಿದೆ. 52 ವಾರಗಳ ಗರಿಷ್ಠ ಮಟ್ಟ 1929 ರು ಹಾಗೂ ಕನಿಷ್ಠ 1276 ರು ತಲುಪಿತ್ತು. ಸ್ಟಾಕ್ಸ್ PE 12.01 ಹಾಗೂ ಸೆಕ್ಟರ್ PE 29.50 ಇದೆ. ಮಾರುಕಟ್ಟೆ ಮೌಲ್ಯ 90,670 ಕೋಟಿ ರು ಹಾಗೂ ಡಿವಿಡೆಂಡ್ ಫಲ 0,73% ಸಿಗಲಿದೆ. ಕಳೆದ ಐದು ವರ್ಷಗಳಲ್ಲಿ ಸತತವಾಗಿ ಡಿವಿಡೆಂಡ್ ಘೋಷಿಸಿದೆ. ಈಕ್ವಿಟಿ ಡಿವಿಡೆಂಡ್ 500% ಅಥವಾ 10 ರು ಪ್ರತಿ ಷೇರಿನಂತೆ ಮಾರ್ಚ್ 2022ರಲ್ಲಿ ಘೋಷಿಸಲಾಗಿದೆ.

ಈ ಷೇರುಗಳು1740ರು ಮುಟ್ಟುವ ಎಲ್ಲಾ ಸಾಧ್ಯತೆಗಳಿದ್ದು, ಉತ್ತಮ ಆದಾಯ ಹಾಗೂ ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭ ತರಬಲ್ಲುದು ಎಂದು ಷೇರ್ ಖಾನ್ ಅಂದಾಜಿಸಿದೆ.

ರಾಮ್ಕೋ ಸಿಮೆಂಟ್ ಲಿಮಿಟೆಡ್

ರಾಮ್ಕೋ ಸಿಮೆಂಟ್ ಲಿಮಿಟೆಡ್

ರಾಮ್‌ಕೋ ಸಿಮೆಂಟ್ಸ್ ಲಿಮಿಟೆಡ್ ದಕ್ಷಿಣ ಭಾರತದ ಪ್ರಸಿದ್ಧ ವ್ಯಾಪಾರ ಸಮೂಹವಾದ ರಾಮ್‌ಕೋ ಗ್ರೂಪ್‌ನ ಪ್ರಮುಖ ಕಂಪನಿಯಾಗಿದೆ

ಒಟ್ಟು ಉತ್ಪಾದನಾ ಸಾಮರ್ಥ್ಯ 16.45 ಮೆಟ್ರಿಕ್ ಟನ್ ಆಗಿದೆ. ಇದು ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಸಿಮೆಂಟ್ ಬ್ರಾಂಡ್ ಆಗಿದೆ. ಆದಾಯ: 5,310 ಕೋಟಿ ಮಾರುಕಟ್ಟೆ ಕ್ಯಾಪ್: 17,090 ಕೋಟಿ ಉದ್ಯೋಗಿಗಳು: 3034

ಸದ್ಯದ ಮಾರುಕಟ್ಟೆ ದರ 650 ರು ಪ್ರತಿ ಷೇರಿನಂತೆ ವ್ಯವಹರಿಸುತ್ತಿದೆ. 52 ವಾರಗಳ ಗರಿಷ್ಠ ಮಟ್ಟ 1132 ರು ಹಾಗೂ ಕನಿಷ್ಠ 575 ರು ತಲುಪಿತ್ತು. ಸದ್ಯ ಗರಿಷ್ಠ ಮಟ್ಟಕ್ಕಿಂತ ಶೇ 42ರಷ್ಟು ಪ್ರಗತಿ ಕಂಡಿದೆ. ಸ್ಟಾಕ್ಸ್ PE 17.44 ಹಾಗೂ ಸೆಕ್ಟರ್ PE 27.11 ಇದೆ. ಮಾರುಕಟ್ಟೆ ಮೌಲ್ಯ 90,670 ಕೋಟಿ ರು ಹಾಗೂ ಡಿವಿಡೆಂಡ್ ಫಲ 0,73% ಸಿಗಲಿದೆ. ಕಳೆದ ಐದು ವರ್ಷಗಳಲ್ಲಿ ಸತತವಾಗಿ ಡಿವಿಡೆಂಡ್ ಘೋಷಿಸಿದೆ. ಈಕ್ವಿಟಿ ಡಿವಿಡೆಂಡ್ 300% ಅಥವಾ 3 ರು ಪ್ರತಿ ಷೇರಿನಂತೆ ಮಾರ್ಚ್ 2022ರಲ್ಲಿ ಘೋಷಿಸಲಾಗಿದೆ.

ಈ ಷೇರುಗಳು 850 ರು ಮುಟ್ಟುವ ಎಲ್ಲಾ ಸಾಧ್ಯತೆಗಳಿದ್ದು, 650 ರು ಪ್ರತಿ ಷೇರು ಗಡಿ ದಾಟಿ ಉತ್ತಮ ಆದಾಯ ತರಬಲ್ಲುದು ಎಂದು ಷೇರ್ ಖಾನ್ ಅಂದಾಜಿಸಿದೆ.

ದಾಲ್ಮಿಯಾ ಭಾರತ್ ಲಿಮಿಟೆಡ್

ದಾಲ್ಮಿಯಾ ಭಾರತ್ ಲಿಮಿಟೆಡ್

ವಾರ್ಷಿಕ 9 ಮಿಲಿಯನ್ ಟನ್ ಸಾಮರ್ಥ್ಯದ ಸಿಮೆಂಟ್ ಉತ್ಪಾದನಾ ಘಟಕಗಳನ್ನು ಹೊಂದಿದೆ. 1939 ರಿಂದ ಸಿಮೆಂಟ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದಾಲ್ಮಿಯಾ ಭಾರತ್ ಲಿಮಿಟೆಡ್ ತೈಲ ಬಾವಿಗಳು, ರೈಲ್ವೇ ಸ್ಲೀಪರ್‌ಗಳು ಮತ್ತು ಏರ್‌ಸ್ಟ್ರಿಪ್‌ಗಳಿಗೆ ಬಳಸುವ ಸೂಪರ್-ಸ್ಪೆಷಾಲಿಟಿ ಸಿಮೆಂಟ್ ತಯಾರಿಕ ಸಂಸ್ಥೆಯಾಗಿದೆ.
ಆದಾಯ: 9,642 ಕೋಟಿ
ಮಾರುಕಟ್ಟೆ ಕ್ಯಾಪ್: 27009 ಕೋಟಿ
ಉದ್ಯೋಗಿಗಳು: 5,634

ಸದ್ಯದ ಮಾರುಕಟ್ಟೆ ದರ 1441 ರು ಪ್ರತಿ ಷೇರಿನಂತೆ ವ್ಯವಹರಿಸುತ್ತಿದೆ. 52 ವಾರಗಳ ಗರಿಷ್ಠ ಮಟ್ಟ 2548 ರು ಹಾಗೂ ಕನಿಷ್ಠ1212 ರು ತಲುಪಿತ್ತು. ಸದ್ಯ ಗರಿಷ್ಠ ಮಟ್ಟಕ್ಕಿಂತ ಶೇ 43ರಷ್ಟು ಪ್ರಗತಿ ಕಂಡಿದೆ. ಸ್ಟಾಕ್ಸ್ PE 23 ಹಾಗೂ ಸೆಕ್ಟರ್ PE 27.11 ಇದೆ. ಮಾರುಕಟ್ಟೆ ಮೌಲ್ಯ 90,670 ಕೋಟಿ ರು ಹಾಗೂ ಡಿವಿಡೆಂಡ್ ಫಲ 0.62% ಸಿಗಲಿದೆ. ಕಳೆದ ಐದು ವರ್ಷಗಳಲ್ಲಿ ಸತತವಾಗಿ ಡಿವಿಡೆಂಡ್ ಘೋಷಿಸಿದೆ. ಈಕ್ವಿಟಿ ಡಿವಿಡೆಂಡ್ 450% ಅಥವಾ 9 ರು ಪ್ರತಿ ಷೇರಿನಂತೆ ಮಾರ್ಚ್ 2022ರಲ್ಲಿ ಘೋಷಿಸಲಾಗಿದೆ.

ಈ ಷೇರುಗಳು 850 ರು ಮುಟ್ಟುವ ಎಲ್ಲಾ ಸಾಧ್ಯತೆಗಳಿದ್ದು, 1850 ರು ಪ್ರತಿ ಷೇರು ಗಡಿ ದಾಟಿ ಉತ್ತಮ ಆದಾಯ ತರಬಲ್ಲುದು, ವರ್ಷದಿಂದ ವರ್ಷಕ್ಕೆ ಶೇ 16 ಹಾಗೂ ತ್ರೈಮಾಸಿಕ ತ್ರೈಮಾಸಿಕದಂತೆ ಶೇ 6ರಷ್ಟು ಪ್ರಗತಿ ಕಾಣಬಹುದು ಎಂದು ಷೇರ್ ಖಾನ್ ಅಂದಾಜಿಸಿದೆ.

ಜೆಕೆ ಸಿಮೆಂಟ್ಸ್

ಜೆಕೆ ಸಿಮೆಂಟ್ಸ್

ಜೆಕೆ ಸಿಮೆಂಟ್ಸ್ ಲಿಮಿಟೆಡ್ ಸದ್ಯದ ಮಾರುಕಟ್ಟೆ ದರ 435 ರು ಪ್ರತಿ ಷೇರಿನಂತೆ ವ್ಯವಹರಿಸುತ್ತಿದೆ. 52 ವಾರಗಳ ಗರಿಷ್ಠ ಮಟ್ಟ 816 ರು ಹಾಗೂ ಕನಿಷ್ಠ366 ರು ತಲುಪಿತ್ತು. ಸದ್ಯ ಗರಿಷ್ಠ ಮಟ್ಟಕ್ಕಿಂತ ಶೇ 43ರಷ್ಟು ಪ್ರಗತಿ ಕಂಡಿದೆ. ಸ್ಟಾಕ್ಸ್ PE 11.04ಹಾಗೂ ಸೆಕ್ಟರ್ PE 27.11 ಇದೆ. ಮಾರುಕಟ್ಟೆ ಮೌಲ್ಯ 5118 ಕೋಟಿ ರು ಹಾಗೂ ಡಿವಿಡೆಂಡ್ ಫಲ 1.15% ಸಿಗಲಿದೆ. ಕಳೆದ ಐದು ವರ್ಷಗಳಲ್ಲಿ ಸತತವಾಗಿ ಡಿವಿಡೆಂಡ್ ಘೋಷಿಸಿದೆ. ಈಕ್ವಿಟಿ ಡಿವಿಡೆಂಡ್ 150% ಅಥವಾ 15 ರು ಪ್ರತಿ ಷೇರಿನಂತೆ ಮಾರ್ಚ್ 2022ರಲ್ಲಿ ಘೋಷಿಸಲಾಗಿದೆ.

ಈ ಷೇರುಗಳು 600 ರು ಮುಟ್ಟುವ ಎಲ್ಲಾ ಸಾಧ್ಯತೆಗಳಿದ್ದು,1850 ರು ಪ್ರತಿ ಷೇರು ಗಡಿ ದಾಟಿ ಉತ್ತಮ ಆದಾಯ ತರಬಲ್ಲುದು, ವರ್ಷದಿಂದ ವರ್ಷಕ್ಕೆ ಶೇ 8 ಹಾಗೂ ತ್ರೈಮಾಸಿಕ ತ್ರೈಮಾಸಿಕದಂತೆ ಶೇ 4 ರಷ್ಟು ಪ್ರಗತಿ ಕಾಣಬಹುದು ಎಂದು ಷೇರ್ ಖಾನ್ ಅಂದಾಜಿಸಿದೆ.

ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ: ಮೇಲಿನ ಷೇರುಗಳನ್ನು ಶೇರ್‌ಖಾನ್‌ನ ಬ್ರೋಕರೇಜ್ ವರದಿಯಿಂದ ಆಯ್ದುಕೊಳ್ಳಲಾಗಿದೆ. ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಹಣಕಾಸಿನ ನಷ್ಟದ ಅಪಾಯವನ್ನುಂಟುಮಾಡುತ್ತದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆ ವಹಿಸಬೇಕು. ಲೇಖನದ ಆಧಾರದ ಮೇಲೆ ನಿರ್ಧಾರಗಳ ಪರಿಣಾಮವಾಗಿ ಉಂಟಾಗುವ ಯಾವುದೇ ನಷ್ಟಗಳಿಗೆ ಗ್ರೇನಿಯಮ್ ಮಾಹಿತಿ ತಂತ್ರಜ್ಞಾನಗಳು, ಲೇಖಕರು ಮತ್ತು ಬ್ರೋಕರೇಜ್ ಹೌಸ್ ಜವಾಬ್ದಾರರಾಗಿರುವುದಿಲ್ಲ.

English summary

Brokerage firm Sharekhan Recommends but this 6 Cement Stocks

Sharekhan, renowned brokerage firm, has come out with latest report on cement sector and chosen top six cement stocks for investors that will give potential return if they buy them at the current market price.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X