For Quick Alerts
ALLOW NOTIFICATIONS  
For Daily Alerts

Union Budget 2023 Highlights : ಕೇಂದ್ರ ಬಜೆಟ್‌ನ ಪ್ರಮುಖಾಂಶಗಳು ಇಲ್ಲಿದೆ

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಘೋಷಣೆ ಮಾಡಿದ್ದಾರೆ. ಪ್ರಮುಖವಾಗಿ ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ವಿನಾಯಿತಿ ಮೊತ್ತವನ್ನು ಏರಿಕೆ ಮಾಡಲಾಗಿದೆ. 5 ಲಕ್ಷ ರೂಪಾಯಿಯಿಂದ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಪ್ರಮುಖವಾಗಿ ಚಿನ್ನ, ಬೆಳ್ಳಿ, ಪ್ಲಾಟಿನಂ ಸೇರಿದಂತೆ ಹಲವಾರು ವಸ್ತುಗಳ ತೆರಿಗೆ ಸುಂಕವನ್ನು ಏರಿಸಲಾಗಿದೆ.

 

ಪ್ಯಾನ್‌ ಅನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಹಾಗೆಯೇ 7 ಪ್ರಮುಖ ಅಂಶಗಳು ನಮ್ಮನ್ನು ಅಮೃತ ಕಾಲದತ್ತ ಒಯ್ಯುತ್ತದೆ. ಇದು ಅಮೃತ ಕಾಲದ ಬಜೆಟ್ ಎಂದು ಕೂಡಾ ಕೇಂದ್ರ ವಿತ್ತ ಸಚಿವೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಮುಖಾಂಶಗಳು ಇಲ್ಲಿದೆ ಮುಂದೆ ಓದಿ.....

 

Union Budget 2023: ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲ ಡಿಜಿಟಲ್ ವ್ಯವಸ್ಥೆ ವ್ಯಾಪ್ತಿಗೆ PAN, ಏನಿದು ತಿಳಿಯಿರಿUnion Budget 2023: ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲ ಡಿಜಿಟಲ್ ವ್ಯವಸ್ಥೆ ವ್ಯಾಪ್ತಿಗೆ PAN, ಏನಿದು ತಿಳಿಯಿರಿ

2023-2024ನೇ ಸಾಲಿನ ಬಜೆಟ್ ಪ್ರಮುಖಾಂಶಗಳು

* ಈ ಬಜೆಟ್ ಅಮೃತ ಕಾಲದ ಬಜೆಟ್ ಆಗಿದೆ. ಭಾರತದ ಆರ್ಥಿಕತೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಶೇಕಡ 7ರಷ್ಟು ಬೆಳವಣಿಗೆಯಿದೆ. ಭಾರತಕ್ಕೆ ಉತ್ತಮ ಭವಿಷ್ಯವಿದೆ.

* ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಮುಂದಿನ ವರ್ಷಕ್ಕೆ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ.

 Union Budget 2023: ಕೇಂದ್ರ ಬಜೆಟ್‌ನ ಪ್ರಮುಖಾಂಶಗಳು ಇಲ್ಲಿದೆ

* 81 ಲಕ್ಷ ಸ್ವಸಹಾಯ ಗುಂಪುಗಳಿಗೆ ಸಹಾಯ ದನ ಮೀಸಲಿಡಲಾಗುತ್ತದೆ. ಮಹಿಳೆಯರ ಆರ್ಥಿಕ ಸಬಲೀಕರಣ ಗುರಿಯನ್ನು ಬಜೆಟ್ ಹೊಂದಿದೆ. ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಅಡಿ ಕರಕುಶಲಕರ್ಮಿಗಳಿಗೆ ನೂತನ ಯೋಜನೆಗಳನ್ನು ರೂಪಿಸಲಾಗುತ್ತದೆ. ಕೌಶಲ್ಯ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಲಾಗುತ್ತದೆ. ಪಿಎಂ ವಿಕಾಸ್ ಹೊಸ ಯೋಜನೆ ಮಾಡಲಾಗುತ್ತದೆ.

* ಏಳು ಅಂಶಗಳ ಆಧಾರದ ಮೇಲೆ ಬಜೆಟ್ ಮಂಡನೆ ಮಾಡಲಾಗಿದೆ. ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಯುವ ಸಬಲೀಕರಣ, ಆರ್ಥಿಕ ಸುಧಾರಣೆ, ಅಭಿವೃದ್ಧಿ, ಎಲ್ಲರಿಗೂ ಸಮಾನ ಸವಲತ್ತು, ಪರಿಸರ ಸ್ನೇಹಿ ಅಭಿವೃದ್ಧಿಗೆ ಕೇಂದ್ರದ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

* ಶ್ರೀ ಅನ್ನ ಜೋಳ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಸಜ್ಜೆ, ಶ್ರೀ ಅನ್ನ ಗೋಧಿ ಎಂಬ ವಾಕ್ಯದೊಂದಿಗೆ ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ ಮಾಡಲಾಗುತ್ತದೆ. ಹೈದರಾಬಾದ್‌ನಲ್ಲಿ ಶ್ರೀ ಅನ್ನ ಹೊಸ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಯುವ ಸಬಲೀಕರಣ ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಹಸಿರು ಕ್ರಾಂತಿ, ಸರ್ವರನ್ನ ಒಳಗೊಂಡ ಬೆಳವಣಿಗೆ, ಕೃಷಿಯಲ್ಲಿ ಸ್ಟಾರ್ಟಪ್‌ಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

* ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. 107 ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಮಾಡಲಾಗುತ್ತದೆ. 2014ರಿಂದ ಈವರೆಗೆ 157 ವೈದ್ಯಕೀಯ ಕಾಲೇಜುಗಳ ಸಹಭಾಗಿತ್ವದಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲಾಗಿದೆ.

* ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ನಷ್ಟವನ್ನು ತುಂಬಲು ಮಕ್ಕಳು ಮತ್ತು ಯುವಕರಿಗೆ ಉಪಯೋಗವಾಗುವಂತೆ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸುವ ಪ್ರಸ್ತಾಪನೆಯಿದೆ.

* ಬಂಡವಾಳ ಹೂಡಿಕೆ ಶೇಕಡ 33ರಷ್ಟು ಏರಿಕೆಯಾಗಿ 10 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

* ಕೃಷಿ ಕ್ಷೇತ್ರವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಸಂಯೋಜಿಸಲಾಗುವುದು. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು.
* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ ರಿಸರ್ಚ್ ಅನ್ನು ಶ್ರೇಷ್ಠತೆಯ ಕೇಂದ್ರವಾಗಿ ಬೆಂಬಲಿಸಲಾಗುತ್ತದೆ.

* ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಅಂತರ್ಗತ ರೈತ-ಕೇಂದ್ರಿತ ಪರಿಹಾರಗಳನ್ನು ಸಕ್ರಿಯಗೊಳಿಸಲಾಗುವುದು. ಕೃಷಿ ಒಳಹರಿವು, ಮಾರುಕಟ್ಟೆ ಇಂಟೆಲ್, ಕೃಷಿ ಉದ್ಯಮಕ್ಕೆ ಬೆಂಬಲ, ಸ್ಟಾರ್ಟ್‌ಅಪ್‌ಗಳಿಗೆ ಸುಧಾರಿತ ಪ್ರವೇಶಕ್ಕೆ ಸಹಾಯ ಮಾಡುತ್ತದೆ.

* ಸರಕಾರಿ ಏಜನ್ಸಿಗಳ ಎಲ್ಲಾ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಅನ್ನು ಸಾಮಾನ್ಯ ಗುರುತಿಸುವಿಕೆಯಾಗಿ (common identifier) ಬಳಸಲು ಸೂಚನೆಯನ್ನು ನೀಡಲಾಗುವುದು. ದೇಖೋ ಅಪ್ನಾ ದೇಶ್ ಎನ್ನುವ ಪ್ರವಾಸೋದ್ಯಮಕ್ಕೆ ಹೊಸ ಯೋಜನೆ ಘೋಷಣೆ ಮಾಡಲಾಗುವುದು ಎಂದು ವಿತ್ತ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹೇಳಿದರು.

* ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಅನ್ನು ಪ್ರಾರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಹೆಚ್ಚಿಸಲು ಯುವಕರಿಗೆ ವಿವಿಧ ರಾಜ್ಯಗಳಲ್ಲಿ 30 ಸ್ಕಿಲ್ ಇಂಡಿಯಾ ಅಂತರರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

* 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗಾಗಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಎಲ್ಲಾ ನಗರಗಳು ಮತ್ತು ಪಟ್ಟಣಗಳನ್ನು ಮ್ಯಾನ್‌ಹೋಲ್‌ ನಿಂದ ಮೆಷಿನ್ ಹೋಲ್ ಮೋಡ್‌ಗೆ ಪರಿವರ್ತನೆ ಮಾಡಲು ಸೆಪ್ಟಿಕ್ಸ್ ಟ್ಯಾಂಕ್‌ಗಳು ಮತ್ತು ಒಳಚರಂಡಿಗಳ ಶೇಕಡ 100 ಯಾಂತ್ರಿಕ ಡಿ-ಸ್ಲಡ್ಜಿಂಗ್ ಅನ್ನು ಸಕ್ರಿಯಗೊಳಿಸಲು ನಿರ್ಧರಿಸಲಾಗಿದೆ.

* ಬಂಗಾರ, ವಜ್ರ, ಬೆಳ್ಳಿ ಚಿನ್ನ ಸೇರಿದಂತೆ ರೆಡಿಮೇಡ್ ಬಟ್ಟೆ, ಸಿಗರೇಟ್ ದುಬಾರಿಯಾಗಲಿದೆ. ಮೊಬೈಲ್ ಫೋನ್ ಲೆನ್ಸ್ ಆಮದು ಸುಂಕ ರದ್ದಾಗಲಿದ್ದು, ಮೊಬೈಲ್, ಕ್ಯಾಮರಾ, ಟಿವಿ ಬೆಲೆ ಇಳಿಕೆಯಾಗಲಿದೆ. ಜೊತೆಗೆ ಬ್ಯಾಟರಿ ಮೇಲಿನ ಕಸ್ಟಮ್ಸ್ ದರ ಇಳಿಕೆಯಾಗಲಿದೆ.

* ಹೊಸ ತೆರಿಗೆ ಪದ್ದತಿಯಲ್ಲಿ ಬದಲಾವಣೆಯನ್ನು ತರಲಾಗಿದೆ. ಮೂರು ಲಕ್ಷದವರೆಗೆ ಯಾವುದೇ ವೈಯಕ್ತಿಕ ತೆರಿಗೆ ಇರುವುದಿಲ್ಲ. 3 ರಿಂದ 6 ಲಕ್ಷದವರೆಗೆ 5 ಪರ್ಸೆಂಟ್ ತೆರಿಗೆ, 6-9 ಲಕ್ಷದವರೆಗೆ 10 ಪರ್ಸೆಂಟ್ ತೆರಿಗೆ, 9ರಿಂದ 12ಲಕ್ಷದವರೆಗೆ 15 ಪರ್ಸೆಂಟ್ ತೆರಿಗೆ, 12ರಿಂದ 15ಲಕ್ಷದವರೆಗೆ 20 ಪರ್ಸೆಂಟ್ ತೆರಿಗೆ ಇರುತ್ತದೆ.

* ಡಿಜಿಟಲ್ ವಹಿವಾಟುಗಳಿಗೆ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಒಂದೇ ಸಾಮಾನ್ಯ ಗುರುತಿಸುವಿಕೆ ಆಗಿರಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.

* ಗೋವರ್ಧನ ಯೋಜನೆಯಡಿಯಲ್ಲಿ ಹತ್ತು ಸಾವಿರ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.

* ಹಸಿರು ಬೆಳವಣಿಗೆ: ಪಿಎಂ ಪ್ರಣಾಮ್ ಅಡಿಯಲ್ಲಿ ನೈಸರ್ಗಿಕ ಕೃಷಿ, ಹಸಿರು ಬೆಳವಣಿಗೆ ಹೆಚ್ಚಿಸಲು ಗ್ರೀನ್ ಕ್ರೆಡಿಟ್ ಯೋಜನೆ.

* ನ್ಯಾಷನಲ್ ಹೈಡ್ರೋಜನ್ ಮಿಷನ್‌ಗಾಗಿ 19,700 ಕೋಟಿ ರೂಪಾಯಿ ಬಜೆಟ್ ಹಂಚಿಕೆ.

* ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹಿರಿಯ ನಾಗರಿಕರು ಪ್ರಸ್ತುತ 30 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಬಹುದು. ಈ ಹಿಂದೆ 15 ಲಕ್ಷ ರೂಪಾಯಿ ಕನಿಷ್ಠ ಹೂಡಿಕೆಯಾಗಿತ್ತು.

* ಮಾಸಿಕ ಆದಾಯ ಯೋಜನೆಯ ಮೊತ್ತವನ್ನು 4.5 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿಗೆ ಏರಿಸಲಾಗಿದೆ.

* ಸಿಗರೇಟ್ ಕಸ್ಟಮ್ ಸುಂಕವನ್ನು ಶೇಕಡ 16ರಷ್ಟು ಏರಿಸಲಾಗಿದೆ.

* ಆದಾಯ ತೆರಿಗೆ ರಿಟರ್ನ್ ಪ್ರಕ್ರಿಯೆಯ ಅವಧಿಯನ್ನು 16 ದಿನಕ್ಕೆ ಇಳಿಸಲಾಗಿದೆ.

* ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ 15.5 ಲಕ್ಷ ಮತ್ತು ಅದಕ್ಕಿಂತ ಅಧಿಕ ಆದಾಯವನ್ನು ಹೊಂದಿರುವವರು 52.500 ರೂಪಾಯಿ ಸ್ಟಾಡರ್ಡ್ ಡಿಡಕ್ಷನ್ ಅನ್ನು ಪಡೆಯಬಹುದು.

English summary

Budget 2023: Highlights, Key Takeaways and Important Points of Union Budget in Kannada

Budget 2023 Highlights in Kannada: Here are some highlights, key takeaways and important points of FM Nirmala Sitharaman’s Union Budget 2023.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X