For Quick Alerts
ALLOW NOTIFICATIONS  
For Daily Alerts

ಮಹಿಳೆಯರು ವ್ಯಾಪಾರ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?, ಇಲ್ಲಿದೆ ವಿವರ

|

ವಿಶ್ವದಲ್ಲಿ ಮಹಿಳೆಯರು ಅದೇಷ್ಟೋ ಸಾಧನೆಗಳನ್ನು ಮಾಡಿದ್ದಾರೆ. ವ್ಯಾಪಾರದಲ್ಲಿಯೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಪ್ರಸ್ತುತ ಈ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳೆಯರು ವ್ಯಾಪಾರವನ್ನು ಆರಂಭ ಮಾಡಲು ಯೋಜನೆ ರೂಪಿಸುತ್ತಿದ್ದಾರೆ. ಆದರೆ ಅದಕ್ಕಾಗಿ ಹಣಬೇಕಾಲ್ಲವೇ?

ಮಹಿಳೆಯರು ವ್ಯಾಪಾರ ಮಾಡಲು ಬಯಸಿದರೆ ಸಾಲವನ್ನು ಪಡೆದುಕೊಳ್ಳಬಹುದು. ಸರ್ಕಾರದ ಹಲವಾರು ಯೋಜನೆಗಳು ಕೂಡಾ ಮಹಿಳೆಯರಿಗೆ ಸ್ವಾವಲಂಭಿಗಳಾಗಲು ಉತ್ತೇಜನವನ್ನು ನೀಡುತ್ತದೆ. ಹಲವಾರು ಸಾಲ ಯೋಜನೆಗಳು ಇದೆ.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ವ್ಯಾಪಾರ ವಲಯದಲ್ಲಿ ಛಾಪು ಮೂಡಿಸಿದ ಮಹಿಳೆಯರುರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ವ್ಯಾಪಾರ ವಲಯದಲ್ಲಿ ಛಾಪು ಮೂಡಿಸಿದ ಮಹಿಳೆಯರು

ಮುದ್ರಾ ಯೋಜನೆ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸೆಂಟ್ ಕಲ್ಯಾಣಿ, ಭಾರತೀಯ ಮಹಿಳಾ ಬ್ಯಾಂಕ್‌ (ಎಸ್‌ಬಿಐ) ನಿಂದ ಶ್ರೀನಗರ ಮತ್ತು ಅನ್ನಪೂರ್ಣ ಸಾಲ ಯೋಜನೆ, ಕೆನರಾ ಬ್ಯಾಂಕ್‌ನಿಂದ ಸಿಂಧ್ ಮಹಿಳಾ ಶಕ್ತಿ ಯೋಜನೆ ಹೀಗೆ ಹಲವಾರು ಬ್ಯಾಂಕುಗಳು ಮಹಿಳೆಯರಿಗೆ ವ್ಯಾಪಾರ ಮಾಡಲು ಸಾಲವನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಹಾಗಾದರೆ ಈ ಸಾಲವನ್ನು ಪಡೆಯುವುದು ಹೇಗೆ, ಅರ್ಜಿ ಸಲ್ಲಿಸುವುದು ಹೇಗೆ, ಇದಕ್ಕೆ ಇರಬೇಕಾದ ಅರ್ಹತೆಯೇನು, ಮಾನದಂಡವೇನು ಎಂದು ತಿಳಿಯಲು ಮುಂದೆ ಓದಿ...

 ಮಹಿಳೆಯರಿಗೆ ಸಾಲ ಸುಲಭ ಲಭ್ಯತೆ

ಮಹಿಳೆಯರಿಗೆ ಸಾಲ ಸುಲಭ ಲಭ್ಯತೆ

ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿ ಮಹಿಳೆಯರಿಂದ ವ್ಯಾಪಾರ ಸಾಲಗಳ ಬೇಡಿಕೆಯು ಹೆಚ್ಚಳವಾಗುತ್ತಿದೆ. ಹೆಚ್ಚು ಹೆಚ್ಚು ಮಹಿಳೆಯರು ಸ್ಟಾರ್ಟ್ ಅಪ್ ಪರಿಕಲ್ಪನೆಯೊಂದಿಗೆ ವ್ಯಾಪಾರ ಆರಂಭ ಮಾಡಿಕೊಂಡಿದ್ದಾರೆ. ಮಹಿಳೆಯರ ಈ ವ್ಯಾಪಾರ ಬೆಳೆಯಲು ಹಣವು ಅತ್ಯಗತ್ಯವಾಗಿದೆ. ಇದಕ್ಕಾಗಿ ಮಹಿಳೆಯರಿಗೆ ವ್ಯಾಪಾರ ಸಾಲ ನೀಡಲು ಹಲವು ಹಣಕಾಸು ಸಂಸ್ಥೆಗಳು ಮುಂದಾಗಿವೆ. ಸರಿಯಾದ ಕ್ರೆಡಿಟ್ ಪ್ರೋಫೈಲ್ ಹೊಂದಿದ್ದರೆ ಕಡಿಮೆ ಬಡ್ಡಿದರದಲ್ಲಿ ಮಹಿಳೆಯರಿಗೆ ವ್ಯಾಪಾರ ಸಾಲ ಸುಲಭವಾಗಿ ಲಭ್ಯವಾಗಲಿದೆ.

 ಸಾಲದ ಬಳಕೆಯಲ್ಲಿ ಹಲವಾರು ವಿಧ

ಸಾಲದ ಬಳಕೆಯಲ್ಲಿ ಹಲವಾರು ವಿಧ

ವ್ಯಾಪಾರ ಮಾಲೀಕರಾಗಿ ನಿಮ್ಮ ರಸ್ತೆಯು ಅಡೆತಡೆಗಳಿಂದ ತುಂಬಿರುತ್ತದೆ. ಹಲವಾರು ಸಮಸ್ಯೆಗಳನ್ನು ಏಕಕಾಲದಲ್ಲಿ ನಿಭಾಯಿಸಲು ನಿಮಗೆ ಹಣದ ಅಗತ್ಯವಿರುತ್ತದೆ. ಕೆಲವೊಮ್ಮೆ ಸ್ಟಾಕ್‌ಗಳು ಮತ್ತು ದಾಸ್ತಾನುಗಳಿಗೆ ನಿಮಗೆ ಹಣ ಬೇಕಾಗುತ್ತದೆ. ಹೊಸ ಯಂತ್ರೋಪಕರಣಗಳನ್ನು ಖರೀದಿಸಲು ನಿಮಗೆ ಹಣದ ಅಗತ್ಯವಿರುತ್ತದೆ. ಮಹಿಳೆಯರಿಗಾಗಿ ಬಿಸಿನೆಸ್ ಲೋನ್ ಅನ್ನು ಅನ್ನು ನೀಡಲಾಗುತ್ತಿದ್ದು, ಅದು ವಿವಿಧ ವ್ಯಾಪಾರದ ಅವಶ್ಯಕತೆಗಳನ್ನು ಸುಲಭವಾಗಿ ಪೂರೈಸುತ್ತದೆ. ಇದಲ್ಲದೆ, ಅಂತಹ ಸಾಲಗಳನ್ನು ನಿಮ್ಮ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಸರಿಹೊಂದಿಸಬಹುದು. ನೀವು ವರ್ಕಿಂಗ್ ಕ್ಯಾಪಿಟಲ್ ಲೋನ್‌ಗೆ ಅರ್ಜಿ ಸಲ್ಲಿಸಬಹುದು. ವೈದ್ಯಕೀಯ ವೃತ್ತಿಪರರು ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ವೈದ್ಯಕೀಯ ಸಲಕರಣೆಗಳ ಸಾಲವನ್ನು ತೆಗೆದುಕೊಳ್ಳಬಹುದು.

 ಮೇಲಾಧಾರ ಸಾಲವೆಂಬ ಆತಂಕವೇ?

ಮೇಲಾಧಾರ ಸಾಲವೆಂಬ ಆತಂಕವೇ?

ಮಹಿಳಾ ಉದ್ಯಮಿಗಳು ಎದುರಿಸುವ ಅತ್ಯಂತ ಸಾಮಾನ್ಯ ಸವಾಲು ಎಂದರೆ ಮೇಲಾಧಾರಕ್ಕೆ ಬದಲಾಗಿ ಹಣದ ಲಭ್ಯತೆ. ಅಂದರೆ ಚಿನ್ನ, ಆಸ್ತಿಪಾಸ್ತಿ ಅಡವಿಟ್ಟು ಸಾಲವನ್ನು ಪಡೆಯುವುದು ಆಗಿದೆ. ಆದರೆ ಮಹಿಳೆಯರಿಗೆ ವ್ಯಾಪಾರ ಸಾಲ ಪಡೆಯುವ ವೇಳೆ ಮೇಲಾಧಾರ ಇಡುವ ಅಥವಾ ಅಡವು ಇಡುವ ಅವಶ್ಯಕತೆ ಇಲ್ಲ. ಸಾಲ ನೀಡುವ ಬ್ಯಾಂಕ್ ಕನಿಷ್ಠ ಅರ್ಹತಾ ಮಾನದಂಡಗಳನ್ನು ಪೂರೈಸುವವರೆಗೆ ಹಣವು ಸುಲಭವಾಗಿ ಲಭ್ಯವಿರುತ್ತದೆ. ಒಂದು ವೇಳೆ ನೀವು ಕನಿಷ್ಟ ಅರ್ಹತೆಯ ಕೊರತೆಯನ್ನು ಹೊಂದಿದ್ದರೆ, ಸಹ-ಅರ್ಜಿದಾರರನ್ನು ಸೇರ್ಪಡೆ ಮಾಡಿಕೊಳ್ಳಬಹುದು. ಸಹ-ಅರ್ಜಿದಾರರು ನಿಮ್ಮ ಸಂಗಾತಿಯಾಗಿರಬಹುದು ಅಥವಾ ನಿಮ್ಮ ವ್ಯಾಪಾರ ಪಾಲುದಾರರಾಗಿರಬಹುದು.

 ನಿಮ್ಮ ಅವಧಿಗೆ ಸಾಲ

ನಿಮ್ಮ ಅವಧಿಗೆ ಸಾಲ

ಮಹಿಳೆಯರಿಗೆ ವ್ಯಾಪಾರ ಸಾಲಗಳು ಅವರಿಗೆ ಬೇಕಾದ ಮರುಪಾವತಿ ಅವಧಿಯಲ್ಲಿ ಲಭ್ಯವಿದೆ. ಮರುಪಾವತಿಯನ್ನು ನೀವು ಮಾಡುವ ವಿಚಾರದಲ್ಲಿ ಇಎಂಐ ಮೊತ್ತ, ಅವಧಿ ನೀವು ಆಯ್ಕೆ ಮಾಡಬಹುದಾಗಿದೆ. ನೀವು ನಿಮ್ಮ ವ್ಯಾಪಾರಕ್ಕೆ ಅನುಗುಣವಾಗಿ ಇಎಂಐ ಅವಧಿ ಆಯ್ಕೆ ಮಾಡಿಕೊಳ್ಳಬಹುದು.

 ಲಾಭ ಹಂಚಿಕೆ ಇಲ್ಲ, ಸ್ಪರ್ಧಾತ್ಮಕ ಬಡ್ಡಿ ದರ

ಲಾಭ ಹಂಚಿಕೆ ಇಲ್ಲ, ಸ್ಪರ್ಧಾತ್ಮಕ ಬಡ್ಡಿ ದರ

ಮಹಿಳಾ ಉದ್ಯಮಿಗಳು ಖಾಸಗಿ ಷೇರುಗಳ ಮೂಲಕ ಹಣವನ್ನು ಸಂಗ್ರಹಿಸುವ ಸಾಧ್ಯತೆ ಇದೆ. ಹಾಗೆ ಮಾಡುವುದರಿಂದ ಹಲವಾರು ನ್ಯೂನ್ಯತೆಗಳು ಇದೆ. ಉದಾಹರಣೆಗೆ, ನೀವು ಹೂಡಿಕೆದಾರರೊಂದಿಗೆ ಲಾಭವನ್ನು ಹಂಚಿಕೊಳ್ಳಬೇಕಾಗುತ್ತದೆ. ಇದಲ್ಲದೆ, ನಿಮ್ಮ ಕಂಪನಿಯ ಯಾವುದೇ ನಿರ್ಧಾರಕ್ಕೆ ಹೂಡಿಕೆದಾರರ ಅಭಿಪ್ರಾಯ ಬೇಕಾಗುತ್ತದೆ. ಆದ್ದರಿಂದ ನೀವು ವ್ಯಾಪಾರ ಸಾಲವನ್ನು ಸರಿಯಾಗಿ ಆಯ್ಕೆ ಮಾಡಿಕೊಂಡು ಷೇರುಗಳ ಮೂಲಕ ವ್ಯಾಪಾರ ಆರಂಭ ಮಾಡದೆ ಇರುವುದು ಉತ್ತಮ. ನೀವು ಸಾಲ ಪಡೆದ ಬಳಿಕ ಸಾಲ ನೀಡಿದ ಬ್ಯಾಂಕ್ ನಿಮ್ಮಿಂದ ಲಾಭದ ಪಾಲು ಕೇಳುವುದಿಲ್ಲ. ಇನ್ನು ಬ್ಯಾಂಕುಗಳು ಮಹಿಳೆಯರಿಗೆ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನಮ್ಮ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರ ಎಂದು ತೋರಿಸಲು ಬ್ಯಾಂಕುಗಳ ನಡುವೆ ಸ್ಪರ್ಧೆ ಇದೆ.

 ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ವ್ಯಾಪಾರ ಸಾಲವನ್ನು ಪಡೆಯುವಾಗ ಉತ್ತಮ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ.

* ಸಾಲ ನೀಡುವ ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ, ವ್ಯಾಪಾರ ಸಾಲ ವಿಭಾಗಕ್ಕೆ ಹೋಗಿ
* ಅಗತ್ಯ ದಾಖಲೆ, ಕನಿಷ್ಠ ಅರ್ಹತೆ ಷರತ್ತುಗಳನ್ನು ಓದಿ
* ಆನ್‌ಲೈನ್ ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆ ಅಪ್‌ಲೋಡ್ ಮಾಡಿ
* ಸಾಲ ನೀಡುವ ಬ್ಯಾಂಕ್ ನಿಮ್ಮ ವಿವರ ಪರಿಶೀಲನೆ ಮಾಡಿ, ಹೆಚ್ಚುವರಿ ಮಾಹಿತಿಗೆ ನಿಮ್ಮನ್ನು ಸಿಬ್ಬಂದಿ ಸಂಪರ್ಕಿಸುತ್ತಾರೆ
* ಹೆಚ್ಚುವರಿ ಮಾಹಿತಿ ಪಡೆದ ಬಳಿಕ ನಿಮಗೆ ನಿಮಗೆ ಪ್ರಸ್ತಾವನೆ ಪತ್ರ ಕಳುಹಿಸಲಾಗುತ್ತದೆ (ಸಾಲ, ಬಡ್ಡಿದರ ಮೊದಲಾದ ಮಾಹಿತಿ)
* ನೀವು written acceptance ನೀಡಬೇಕು, ಬಳಿಕ ಸಾಲದ ಮೊತ್ತ ಜಮೆ ಆಗಲಿದೆ.

English summary

Business Loan for Women Eligibility, Interest rates, Schemes and How to Apply in Kannada

Business Loan for Women : Check Business Loan for Women Features, Benefits, Eligibility, Interest Rates, Loan Schemes, Documents Required and How to apply in Kannada.
Story first published: Thursday, June 2, 2022, 13:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X