For Quick Alerts
ALLOW NOTIFICATIONS  
For Daily Alerts

Credit Card : ಕ್ರೆಡಿಟ್ ಕಾರ್ಡ್‌ನ ಪ್ರಯೋಜನ ಹೆಚ್ಚಿಸುವುದು ಹೇಗೆ?

|

ಪ್ರಸ್ತುತ ಜನರು ಡೆಬಿಟ್ ಕಾರ್ಡ್‌ಗಿಂತ ಅಧಿಕವಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ. ಯಾವುದೇ ವಸ್ತುವನ್ನು ಖರೀದಿ ಮಾಡುವುದಾದರೂ ಜನರು ಪ್ರಸ್ತುತ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿ ಬಳಿಕ ಸಾಲವನ್ನು ಇಎಂಐ ಮೂಲಕ ಪಾವತಿ ಮಾಡುತ್ತಾರೆ. ಜನರಿಗೆ ಕ್ರೆಡಿಟ್ ಕಾರ್ಡ್ ಬಳಸುವುದು ಅತೀ ಸುಲಭವಾಗಿದೆ.

ಇಷ್ಟು ಮಾತ್ರವಲ್ಲದೆ ಹಲವಾರು ಸಂಸ್ಥೆಗಳು ಪ್ರಸ್ತುತ ಕ್ರೆಡಿಟ್ ಕಾರ್ಡ್‌ ಜೊತೆ ಹಲವಾರು ರಿವಾರ್ಡ್‌ಗಳನ್ನು ನೀಡುತ್ತದೆ. ಜನರು ಕ್ರೆಡಿಟ್ ಕಾರ್ಡ್‌ನತ್ತ ಆಕರ್ಷಿತರಾಗಲಿ ಎಂದು ಈ ರಿವಾರ್ಡ್‌ಗಳನ್ನು ನೀಡಲಾಗುತ್ತದೆ. ಆದರೆ ನೀವು ಬುದ್ಧಿವಂತಿಕೆಯಿಂದ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ಈ ರಿವಾರ್ಡ್‌ಗಳಿಂದ ಭಾರೀ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಆರ್‌ಬಿಐ ಹೊಸ ಕ್ರೆಡಿಟ್ ಕಾರ್ಡ್ ನಿಯಮ; ಮಿನಿಮಮ್ ಅಮೌಂಟ್ ಕಟ್ಟುವವರು ನಿರಾಳಆರ್‌ಬಿಐ ಹೊಸ ಕ್ರೆಡಿಟ್ ಕಾರ್ಡ್ ನಿಯಮ; ಮಿನಿಮಮ್ ಅಮೌಂಟ್ ಕಟ್ಟುವವರು ನಿರಾಳ

ನೀವು ಕ್ರೆಡಿಟ್ ಕಾರ್ಡ್‌ನಿಂದ ಮಾಡುವ ಎಲ್ಲ ವಹಿವಾಟಿಗೂ ಪಾಯಿಂಟ್ಸ್‌ಗಳು ಲಭ್ಯವಾಗುತ್ತದೆ. ಅದನ್ನು ನೀವು ಶಾಪಿಂಗ್, ಪ್ರವಾಸ ಹಾಗೂ ಇತರೆ ಖರೀದಿಗಳಿಗಾಗಿ ಬಳಕೆ ಮಾಡಬಹುದು. ಆದರೆ ಹಲವಾರು ಮಂದಿಗೆ ಈ ಪಾಯಿಂಟ್ಸ್‌ ಬಗ್ಗೆ ಮಾಹಿತಿಯೇ ಇಲ್ಲ. ನಿಮ್ಮ ಕ್ರೆಡಿಟ್ ಕಾರ್ಡ್‌ನ ಪ್ರಯೋಜನವನ್ನು ಹೆಚ್ಚಿಸಬೇಕಾದರೆ ನೀವು ಈ ಹಂತಗಳನ್ನು ಪಾಲಿಸಬೇಕು. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಉತ್ತಮ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳಿ

ಉತ್ತಮ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳಿ

ನೀವು ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡುವುದಕ್ಕೂ ಮುನ್ನ ನೀವು ಯಾವುದಕ್ಕೆ ಅಧಿಕ ಖರ್ಚು ಮಾಡುತ್ತೀರಿ ಎಂದು ನೋಡಿಕೊಳ್ಳಬೇಕು. ಅದರ ಆಧಾರದಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳಬೇಕು. ಉದಾಹರಣೆಗೆ ನೀವು ಹೆಚ್ಚಾಗಿ ಶಾಪಿಂಗ್ ಮಾಡುವುದಾದರೆ ಶಾಪಿಂಗ್ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿ, ನೀವು ಪ್ರವಾಸ ಅಧಿಕವಾಗಿ ಮಾಡುವುದಾದಾರೆ ಪ್ರವಾಸ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿ, ಅದರಲ್ಲಿ ಹೋಟೆಲ್ ಮೆಂಬರ್‌ಶಿಪ್ ಹಾಗೂ ವಿಮಾನ ನಿಲ್ದಾಣ ಉಚಿತ ಪ್ರವೇಶ ಅವಕಾಶಗಳು ಇರುತ್ತದೆ. ಕಾರ್ಡ್‌ನ ಫೀಚರ್, ರಿವಾರ್ಡ್ ಪಾಯಿಂಟ್, ಲಭ್ಯವಿರುವ ರಿಯಾಯಿತಿ, ಇತರೆ ಅಧಿಕ ಪ್ರಯೋಜನವನ್ನು ನಾವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಎಲ್ಲ ಮಾರ್ಗಸೂಚಿ, ನಿಯಮವನ್ನು ಸರಿಯಾಗಿ ಓದಿಕೊಳ್ಳಿ. ನೀವು ನಿಮಗೆ ಈ ಕಾರ್ಡ್ ಉಪಯೋಗಕಾರಿಯೇ ಎಂದು ನೋಡಿಕೊಂಡು ಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳಿ.

 ಬೋನಸ್, ವೆಲ್‌ಕಮ್ ಬೆನಿಫಿಟ್ ಬಗ್ಗೆ ತಿಳಿದಿರಲಿ
 

ಬೋನಸ್, ವೆಲ್‌ಕಮ್ ಬೆನಿಫಿಟ್ ಬಗ್ಗೆ ತಿಳಿದಿರಲಿ

ನೀವು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ನೀವು ವೆಲ್‌ಕಮ್ ಬೆನಿಫಿಟ್ ಅಥವಾ ಸೈನ್‌ಅಪ್ ಬೋನಸ್‌ಗೆ ಅರ್ಹರಾಗಿರಬಹುದು. ಈ ವೆಲ್‌ಕಮ್ ಬೋನಸ್‌ ನೀವು ನಿಮ್ಮ ಹಣವನ್ನು ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ರಿವಾರ್ಡ್ ಪಾಯಿಂಟ್, ಕ್ಯಾಷ್‌ಬ್ಯಾಕ್, ವೋಚರ್, ರಿಯಾಯಿತಿ ಮೂಲಕ ನಿಮ್ಮ ಹಣವನ್ನು ನೀವು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಆದರೆ ಎಲ್ಲ ಕ್ರೆಡಿಟ್ ಕಾರ್ಡ್‌ಗಳು ಈ ಪ್ರಯೋಜನವನ್ನು ಅಥವಾ ಬೆನಿಫಿಟ್ ಅನ್ನು ಹೊಂದಿರುವುದಿಲ್ಲ ಎಂಬುವುದು ನಿಮಗೆ ನೆನಪಿರಲಿ. ಇನ್ನು ಎರಡು ಕ್ರೆಡಿಟ್ ಕಾರ್ಡ್‌ಗಳು ಕೂಡಾ ಒಂದೇ ಬೆನಿಫಿಟ್ ಅನ್ನು ನೀಡುವುದಿಲ್ಲ ಎಂಬುವುದು ಕೂಡಾ ನಿಮಗೆ ತಿಳಿದಿರಲಿ. ಇದು ತಿಳಿದಿಲ್ಲದಿದ್ದರೆ ನೀವು ನಿಮಗೆ ಪ್ರಯೋಜನಕ್ಕೆ ಬಾರದ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿಕೊಳ್ಳಬಹುದು. ಎಲ್ಲ ಕ್ರೆಡಿಟ್ ಕಾರ್ಡ್‌ನಲ್ಲಿ ಈ ವೆಲ್‌ಕಮ್ ಬೆನಿಫಿಟ್ ಲಭ್ಯವಾಗದು. ನೀವು ಹೆಚ್ಚಿನ ಲಾಭವನ್ನು ಪಡೆಯಬೇಕಾದರೆ ಯಾವ ಕ್ರೆಡಿಟ್ ಕಾರ್ಡ್‌ನಲ್ಲಿ ನಿಮಗೆ ಅಧಿಕ ವೆಲ್‌ಕಮ್ ಬೆನಿಫಿಟ್ ಲಭ್ಯವಾಗುತ್ತದೆ. ಯಾವ ನಿಯಮವಿದೆ ಎಂದು ನೋಡಿಕೊಳ್ಳಬೇಕು.

 ಬಡ್ಡಿದರವಿಲ್ಲದ ಅವಧಿ ನಿಮಗೆ ಗೊತ್ತೇ?

ಬಡ್ಡಿದರವಿಲ್ಲದ ಅವಧಿ ನಿಮಗೆ ಗೊತ್ತೇ?

ಕ್ರೆಡಿಟ್ ಕಾರ್ಡ್‌ನಲ್ಲಿ ಸಾಮಾನ್ಯವಾಗಿ ಇಂಟ್ರೆಸ್ಟ್ ಫ್ರೀ ಪಿರೆಡ್ ಅಥವಾ ಬಡ್ಡಿದರವಿಲ್ಲದ ಅವಧಿ ಇರುತ್ತದೆ. ಈ ಅವಧಿಯು 20ರಿಂದ 55 ದಿನಗಳು ಆಗಿರಬಹುದು. ನೀವು ಯಾವ ರೀತಿಯ ಕಾರ್ಡ್ ಅನ್ನು ಆಯ್ಕೆಮಾಡಿಕೊಂಡಿದ್ದೀರಿ ಅದರ ಮೇಲೆ ಇಂಟ್ರೆಸ್ಟ್ ಫ್ರೀ ಪಿರೆಡ್ ನಿರ್ಧಾರವಾಗುತ್ತದೆ. ನೀವು ಅಧಿಕ ಇಂಟ್ರೆಸ್ಟ್ ಫ್ರೀ ಪಿರೆಡ್ ಇರುವ ಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ. ಇದರಿಂದಾಗಿ ನೀವು ಬಡ್ಡಿದರವಿಲ್ಲದೆ ಸಾಲವನ್ನು ಮರುಪಾವತಿ ಮಾಡಲು ಹೆಚ್ಚು ದಿನಗಳು ಲಭ್ಯವಾಗಲಿದೆ. ನೀವು ಅಧಿಕ ಇಂಟ್ರೆಸ್ಟ್ ಫ್ರೀ ಪಿರೆಡ್ ಇರುವ ಕಾರ್ಡ್ ಅನ್ನು ಆಯ್ಕೆ ಮಾಡಿಕೊಂಡರೆ, ನಿಮ್ಮ ಬಿಲ್ ಅನ್ನು ನೀವು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಕ್ರೆಡಿಟ್ ಸ್ಕೋರ್ ನೋಡಿಕೊಳ್ಳಿ

ಕ್ರೆಡಿಟ್ ಸ್ಕೋರ್ ನೋಡಿಕೊಳ್ಳಿ

ಕ್ರೆಡಿಟ್ ಕಾರ್ಡ್ ಹಾಗೂ ಕ್ರೆಡಿಟ್ ಸ್ಕೋರ್‌ ಪರಸ್ಪರ ಸಂಬಂಧವನ್ನು ಹೊಂದಿದೆ. ನೀವು ಎಷ್ಟು ಸಾಲವನ್ನು ಪಡೆಯಲು ಅರ್ಹರಾಗಿದ್ದೀರಿ ಎಂಬುವುದನ್ನು ಈ ಕ್ರೆಡಿಟ್ ಸ್ಕೋರ್ ನಿರ್ಧಾರ ಮಾಡುತ್ತದೆ. ನೀವು ಕ್ರೆಡಿಟ್ ಕಾರ್ಡ್ ಪಾವತಿಯನ್ನು ವಿಳಂಬ ಮಾಡಿದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿತವಾಗಬಹುದು. ನಿಮ್ಮ ಹಣಕಾಸು ವಹಿವಾಟಿನ ಮೇಲೆ ಈ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ. ಆದ್ದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೀವು ನಿಗಾ ವಹಿಸುವುದು ಉತ್ತಮ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಅಪ್‌ಗ್ರೇಡ್ ಮಾಡಿಕೊಂಡು ಬಳಸಬಹುದು. ಹಾಗೆಯೇ ಹೆಚ್ಚಿನ ರಿವಾರ್ಡ್‌ಗಳನ್ನು ಕೂಡಾ ಪಡೆಯಬಹುದು.

ರಿವಾರ್ಡ್ ಪಾಯಿಂಟ್ ಬಗ್ಗೆ ಗಮನವಿರಲಿ, ರಿಡೀಮ್ ಮಾಡಿಕೊಳ್ಳಿ

ರಿವಾರ್ಡ್ ಪಾಯಿಂಟ್ ಬಗ್ಗೆ ಗಮನವಿರಲಿ, ರಿಡೀಮ್ ಮಾಡಿಕೊಳ್ಳಿ

ಕ್ರೆಡಿಟ್ ಕಾರ್ಡ್ ರಿವಾರ್ಡ್ ಮೂಲಕ ನೀವು ಪಾಯಿಂಟ್ ಅನ್ನು ರಿಡೀಮ್ ಮಾಡಿಕೊಂಡು ಯಾವುದಾದರೂ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತದೆ. ನೀವು ಈ ಪಾಯಿಂಟ್‌ಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುತ್ತಿದ್ದೀರಾ ನೋಡಿಕೊಳ್ಳಿ. ಬಹುತೇಕ ರಿವಾರ್ಡ್ ಪಾಯಿಂಟ್‌ಗಳು ಅಂತಿಮ ದಿನವನ್ನು ಹೊಂದಿರುತ್ತದೆ. ಅಂದರೆ ನಿಗದಿತ ದಿನಗಳವರೆಗೆ ಮಾತ್ರ ಅದರ ವ್ಯಾಲಿಡಿಟಿ ಇರುತ್ತದೆ. ಆದ್ದರಿಂದಾಗಿ ನೀವು ಈ ಬಗ್ಗೆ ಗಮನ ಹರಿಸುವುದು ಮುಖ್ಯ. ಅವಧಿ ಮುಗಿಯುವುದಕ್ಕೂ ಮುನ್ನ ಕ್ರೆಡಿಟ್ ಕಾರ್ಡ್ ರಿವಾರ್ಡ್ ರಿಡೀಮ್ ಮಾಡಿಕೊಂಡು ಬಳಸಿಕೊಳ್ಳಿ.

English summary

Credit Card: How to Maximise Credit Card Benefits, Explained in Kannada

To maximise the benefits of your card, you must follow the steps. How to Maximise Credit Card Benefits, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X