For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ರುಪಾಯಿ ಯಾಕೆ ಮುಖ್ಯ? ಪ್ರಮುಖ ಕಾರಣಗಳು ಇಲ್ಲಿವೆ

|

ನವದೆಹಲಿ, ನ. 8: ಭಾರತದಲ್ಲಿ ಡಿಜಿಟಲೀಕರಣ ಬಹಳ ವೇಗದಲ್ಲಿ ಸಾಗುತ್ತಿದೆ. ಡಿಜಿಟಲ್ ಭಾರತ ಎಂಬ ಮಹಾಗುರಿಗೆ ಪೂರಕವಾದ ಕ್ರಮಗಳನ್ನು ಸರ್ಕಾರ ಬಹಳಷ್ಟು ತೆಗೆದುಕೊಳ್ಳುತ್ತಿದೆ. ಅದರಲ್ಲಿ ಡಿಜಿಟಲ್ ರುಪಾಯಿ ಪ್ರಮುಖ ಹೆಜ್ಜೆ. ಆರ್‌ಬಿಐ ಹೊರತಂದಿರುವ ಡಿಜಿಟಲ್ ಕರೆನ್ಸಿ ಈಗಾಗಲೇ ಪ್ರಾಯೋಗಿಕವಾಗಿ ಹಂತದಲ್ಲಿದೆ. ಭಾರತದ ಹಣದ ವಹಿವಾಟು ಪ್ರಕ್ರಿಯೆಯಲ್ಲಿ ಡಿಜಿಟಲ್ ರುಪಾಯಿ ಬಹಳ ದೊಡ್ಡ ಪರಿವರ್ತನೆ ಮತ್ತು ಕ್ರಾಂತಿ ತರಲಿದೆ ಎಂಬಂತಹ ಮಾತು ದಟ್ಟವಾಗಿ ಕೇಳಿಬರುತ್ತಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಚ್‌ಎಸ್‌ಬಿಸಿ ಬ್ಯಾಂಕ್ ಹೀಗೆ ದೇಶದ ಒಂಬತ್ತು ಬ್ಯಾಂಕುಗಳನ್ನು ಡಿಜಿಟಲ್ ರುಪಾಯಿಯ ಪ್ರಾಯೋಗಿಕ ಹಂತದಲ್ಲಿ ಬಳಸಿಕೊಳ್ಳುತ್ತಿರುವುದಾಗಿ ಆರ್‌ಬಿಐ ಹೇಳಿದೆ.

ಮದುವೆ ನೋಡು ಬ್ಯುಸಿನೆಸ್ ಮಾಡು; ಭಾರತದಲ್ಲಿ ವೆಡಿಂಗ್ ಸೀಸನ್ ಮೆರುಗುಮದುವೆ ನೋಡು ಬ್ಯುಸಿನೆಸ್ ಮಾಡು; ಭಾರತದಲ್ಲಿ ವೆಡಿಂಗ್ ಸೀಸನ್ ಮೆರುಗು

ಈಗ ಮೊದಲ ಪ್ರಾಯೋಗಿಕ ಹಂತದಲ್ಲಿ ಹೋಲ್‌ಸೇಲ್ ಸೆಗ್ಮೆಂಟ್‌ನಲ್ಲಿ ಸಿಬಿಡಿಸಿಯ ಚಲಾವಣೆ ಆಗುತ್ತಿದೆ. ಸರ್ಕಾರೀ ಸಂಸ್ಥೆಗಳ ಷೇರುಗಳ ವಹಿವಾಟಿಗೆ ಸದ್ಯಕ್ಕೆ ಇದರ ಬಳಕೆ ಆಗುತ್ತಿದೆ. ಅಂತರ್ ಬ್ಯಾಂಕ್ ವಹಿವಾಟು ಇತ್ಯಾದಿಯಲ್ಲಿ ಡಿಜಿಟಲ್ ರುಪಾಯಿಯನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೀಟೇಲ್ ಮಾರುಕಟ್ಟೆಯಲ್ಲಿ ಇದರ ಪ್ರಯೋಗ ಆಗಲಿದ್ದು, ಇದರ ಸ್ಪಂದನೆ ಮತ್ತು ಉಪಯುಕ್ತತೆ ಹೇಗಿದೆ ನೋಡಿಕೊಂಡು ಒಂದು ವರ್ಷದಲ್ಲಿ ದೇಶವ್ಯಾಪಿ ಸಾರ್ವತ್ರಿಕವಾಗಿ ಇದರ ಬಳಕೆ ಮಾಡುವ ಯೋಜನೆ ಆರ್‌ಬಿಐನದ್ದು.

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಥವಾ ಡಿಜಿಟಲ್ ರುಪಾಯಿ ಭಾರತದ ಭವಿಷ್ಯದ ಹಣದ ವ್ಯವಸ್ಥೆ ಆಗಿರಲಿದೆ ಎನ್ನುವುದಕ್ಕೆ ಹಲವು ಕಾರಣಗಳಿವೆ. ಅವುಗಳನ್ನು ಇಲ್ಲಿ ವಿವರಿಸಲಾಗಿದೆ.

ಸ್ಮಾರ್ಟ್‌ಟಿವಿಯಲ್ಲಿ ಪ್ರಾಬಲ್ಯದ ದುರ್ಬಳಕೆ ತನಿಖೆ, ಗೂಗಲ್ ಮೇಲೆ ಮತ್ತೆ ದಂಡ?ಸ್ಮಾರ್ಟ್‌ಟಿವಿಯಲ್ಲಿ ಪ್ರಾಬಲ್ಯದ ದುರ್ಬಳಕೆ ತನಿಖೆ, ಗೂಗಲ್ ಮೇಲೆ ಮತ್ತೆ ದಂಡ?

 ಕ್ರಿಪ್ಟೋಗಿಂತ ತುಸು ಭಿನ್ನ

ಕ್ರಿಪ್ಟೋಗಿಂತ ತುಸು ಭಿನ್ನ

ಆರ್‌ಬಿಐ ಹಲವು ರೂಪದ ಹಣವನ್ನು ಚಲಾವಣೆಯಲ್ಲಿಟ್ಟಿದೆ. ಅದರಲ್ಲಿ ಕಾಗದದ ನೋಟು ಕೂಡ ಒಂದು. ಕ್ರಿಪ್ಟೋಕರೆನ್ಸಿ ಹವಾ ಶುರುವಾದ ಬಳಿಕ ಕೆಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಪ್ರತ್ಯೇಕ ಡಿಜಿಟಲ್ ಕರೆನ್ಸಿ ತಂದಿವೆ. ಆರ್‌ಬಿಐ ಕೂಡ ಡಿಜಿಟಲ್ ರುಪೀ ಅಭಿವೃದ್ಧಿಪಡಿಸಿದೆ. ಕ್ರಿಪ್ಟೋಕರೆನ್ಸಿಯ ತಂತ್ರಜ್ಞಾವನ್ನು ಅಳವಡಿಸಿಕೊಂಡಿದೆಯಾದರೂ ಡಿಜಿಟಲ್ ರುಪಾಯಿ ಮತ್ತ ಕ್ರಿಪ್ಟೋಕರೆನ್ಸಿ ಮಧ್ಯೆ ಪ್ರಮುಖ ವ್ಯತ್ಯಾಸ ಇದೆ. ಕ್ರಿಪ್ಟೋಕರೆನ್ಸಿ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಇದ್ದರೆ, ಡಿಜಿಟಲ್ ರುಪಾಯಿಯು ಆರ್‌ಬಿಐ ನಿಯಂತ್ರಣದಲ್ಲಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಇರುತ್ತದೆ.

ಪ್ರೋಗ್ರಾಮಿಂಗ್ ವಿಶೇಷತೆ

ಪ್ರೋಗ್ರಾಮಿಂಗ್ ವಿಶೇಷತೆ

ಪ್ರತಿಯೊಂದು ಡಿಜಿಟಲ್ ರುಪಾಯಿಯನ್ನೂ ವಿಶೇಷವಾಗಿ ಗುರುತಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು. ಇದರ ಪ್ರೋಗ್ರಾಮಿಂಗ್ ಕೂಡ ಮಾಡಬಹುದು. ಅಂದರೆ ನಿರ್ದಿಷ್ಟ ಕಾರ್ಯಕ್ಕೆ ಅನುಗುಣವಾಗಿ ಡಿಜಿಟಲ್ ರುಪಾಯಿಯನ್ನು ರೂಪಿಸಬಹುದು. ಚಲಾವಣೆಯ ಕಾಲಮಿತಿ, ಯಾವ ವರ್ಗಕ್ಕೆ ಸೀಮಿತವಾಗಬೇಕು ಇತ್ಯಾದಿಯನ್ನು ಪ್ರೋಗ್ರಾಮಿಂಗ್ ಮಾಡಲು ಸಾಧ್ಯ.

ಬ್ಲಾಕ್‌ಚೈನ್‌ನ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್‌ಗಳಲ್ಲಿ ಡಿಜಿಟಲ್ ರುಪಾಯಿ ನಮೂದಾಗುತ್ತಾ ಹೋಗುತ್ತದೆ. ಈ ಲೆಡ್ಜರ್‌ಗಳಲ್ಲಿ ಡಿಜಿಟಲ್ ರುಪಾಯಿಯ ವಹಿವಾಟು ಮತ್ತು ಬ್ಯಾಲೆನ್ಸ್ ಅನ್ನು ದಾಖಲಿಸಲು ಅವಕಾಶ ನೀಡಲಾಗುತ್ತದೆ.

ಮೇಲೆ ತಿಳಿಸಿದ ಈ ಮೂರು ಅಂಶಗಳು ಹಣದ ಚಲಾವಣೆಯಲ್ಲಿ ಗಮನಾರ್ಹ ಪರಿವರ್ತನೆ ತರಲು ಸಾಧ್ಯ ಎಂಬುದು ತಜ್ಞರ ಅನಿಸಿಕೆ.

 

ವಂಚನೆ ತಪ್ಪಿಸಬಹುದು
 

ವಂಚನೆ ತಪ್ಪಿಸಬಹುದು

ಡಿಜಿಟಲ್ ರುಪಾಯಿ ನಮ್ಮ ದೇಶದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗೆ ಹೆಚ್ಚು ಕಾರ್ಯಕ್ಷಮತೆ, ಪಾರದರ್ಶಕತೆಯನ್ನು ಒದಗಿಸಿ ಬಲಪಡಿಸುವ ನಿರೀಕ್ಷೆ ಇದೆ. 2018ರಿಂದ 2020ರ ಅವಧಿಯಲ್ಲಿ ಭಾರತೀಯ ಬ್ಯಾಂಕುಗಳು ವಂಚನೆಯಿಂದಾಗಿ ಸುಮಾರು 50 ಬಿಲಿಯನ್ ಡಾಲರ್ (4 ಲಕ್ಷ ಕೋಟಿ ರುಪಾಯಿ) ಹಣ ಕಳೆದುಕೊಂಡಿವೆ ಎಂದು ಒಂದು ವರದಿ ಹೇಳುತ್ತದೆ. ಇದಕ್ಕೆ ಪ್ರಮುಖ ಕಾರಣ, ಸಾಲ ಪಡೆದವರು ಉದ್ದೇಶಿತ ಕಾರ್ಯಕ್ಕೆ ಆ ಹಣ ವಿನಿಯೋಗಿಸದೇ ದುರ್ಬಳಕೆ ಮಾಡಿಕೊಂಡಿರುವುದು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಗೃಹ ಸಾಲವಾದರೆ ಮನೆ ಕಟ್ಟಲು ಬಳಕೆ ಮಾಡಬೇಕು. ಗೃಹ ಸಾಲ ಪಡೆದು ನೀವು ಬೇರೆಯದಕ್ಕೆ ಅದನ್ನು ಬಳಸುವುದು ವಂಚನೆ ಎನಿಸುತ್ತದೆ. ಅದೇ ರೀತಿ ಒಂದು ಸಂಸ್ಥೆ ಸಾಲ ಪಡೆಯಲು ಕಾರಣಗಳನ್ನು ನೀಡಬೇಕಾಗುತ್ತದೆ. ಆ ಕಾರ್ಯಕ್ಕೆ ಸಾಲದ ಬಳಕೆ ಆಗಿದೆಯೇ ಎಂಬುದನ್ನು ಸಂಸ್ಥೆಯ ಆಡಿಟ್ ರಿಪೋರ್ಟ್ ಇತ್ಯಾದಿಯನ್ನು ಬ್ಯಾಂಕು ಪರಿಶೀಲಿಸುತ್ತದೆ.

ಡಿಜಿಟಲ್ ಕರೆನ್ಸಿಯ ಹರಿವಿನ ಮೇಲೆ ನಿಗಾ ಇಡಲು ಸಾಧ್ಯವಾಗುವುದರಿಂದ ಈ ಮೇಲಿನ ಸಮಸ್ಯೆ ನೀಗಿಸುವ ಸಾಧ್ಯತೆ ಇದೆ.

 

ಟ್ರ್ಯಾಕಿಂಗ್ ಸಾಧ್ಯ

ಟ್ರ್ಯಾಕಿಂಗ್ ಸಾಧ್ಯ

ಡಿಜಿಟಲ್ ರುಪಾಯಿಗೆ ಜಾಗತಿಕ ಮಾನ್ಯತೆ ಇರುತ್ತದೆ. ಅನಿವಾಸಿ ಭಾರತೀಯರೂ ಸಿಬಿಡಿಸಿಯನ್ನು ಹೊಂದಿ ವಹಿವಾಟು ನಡೆಸಬಹುದು. ಡಿಜಿಟಲ್ ರುಪಾಯಿ ಬಳಸಲು ನಿಮಗೆ ಬ್ಯಾಂಕ್ ಖಾತೆಯೇ ಇರಬೇಕೆಂದಿಲ್ಲ. ಇದು ಬಹಳಷ್ಟು ಮಂದಿಗೆ ಅನುಕೂಲ ಮಾಡಿಕೊಡುತ್ತದೆ.

ಡಿಜಿಟಲ್ ರುಪಾಯಿಯ ವಹಿವಾಟು ರಿಯಲ್ ಟೈಮ್‌ನಲ್ಲಿ ನಡೆಯುವುದರಿಂದ ಮತ್ತು ಅದನ್ನು ಟ್ರ್ಯಾಕ್ ಮಾಡುವುದೂ ಸುಲಭವಾದ್ದರಿಂದ ಸರ್ಕಾರಕ್ಕೆ ಹಣಕಾಸು ನೀತಿ ರೂಪಿಸುವುದು ಹೆಚ್ಚು ಸುಲಭವಾಗುತ್ತದೆ.

ಈಗಾಗಲೆ ಸಮರ್ಪಕವಾಗಿರುವ ನೇರ ಹಣ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

 

ನೋಟುಗಳನ್ನು ಮುದ್ರಿಸುವ ತಲೆನೋವು ಕಡಿಮೆ

ನೋಟುಗಳನ್ನು ಮುದ್ರಿಸುವ ತಲೆನೋವು ಕಡಿಮೆ

ನೋಟುಗಳನ್ನು ಮುದ್ರಿಸುವುದು ಆರ್‌ಬಿಐಗೆ ದೊಡ್ಡ ತಲೆನೋವಿನ ಕೆಲಸ. ಇದಕ್ಕೆ ವೆಚ್ಚವೂ ಹೆಚ್ಚು. ಹಣದ ದುರ್ಬಳಕೆ ಆದರೆ ಗೊತ್ತಾಗುವುದಿಲ್ಲ. ಡಿಜಿಟಲ್ ಕರೆನ್ಸಿಯಿಂದ ಆರ್‌ಬಿಐಗೆ ನೋಟು ಮುದ್ರಿಸುವ ಒತ್ತಡ ಕಡಿಮೆ ಆಗುತ್ತದೆ. ಸದಾ ವರ್ಚುವಲ್ ಆಗಿ ಹಣ ಚಲಾವಣೆಯಲ್ಲಿರುತ್ತದೆ.

ನೋಟುಗಳಂತೆ ಡಿಜಿಟಲ್ ಕರೆನ್ಸಿಯನ್ನು ಹಾಳು ಮಾಡಲು ಆಗುವುದಿಲ್ಲ. ಎಲ್ಲಿಯಾದರೂ ಕಳೆದುಹೋದೀತೆಂಬ ಆತಂಕ ಇರುವುದಿಲ್ಲ. ಒಂದು ಡಿಜಿಟಲ್ ಕರೆನ್ಸಿಯ ಜೀವಿತಾವಧಿ ಅಸೀಮಿತವಾದುದು.

 

English summary

Digital Rupee, From Preventing Fraud To Ease Of Use, Know Its Uses

RBI has launched Digital Rupee in specific segment, hoping to implement completely in one year. Know how digital currency will become the future of money in India.
Story first published: Tuesday, November 8, 2022, 13:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X