For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಸೋಂಕಿಗೆ ನಿಮ್ಮ ಹೆಲ್ತ್ ಇನ್ಷುರೆನ್ಸ್‌ ಕವರ್ ಆಗುತ್ತಾ?

|

ಕೊರೊನಾವೈರಸ್‌ ವಿಶ್ವದಲ್ಲಿ ಭಾರೀ ಭಯ ಮೂಡಿಸಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ಹರಡಿದೆ. ಭಾರತದಲ್ಲೂ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.

ಕೊರೊನಾವೈರಸ್ ಹರಡುವಿಕೆಯು ಈಗಾಗಲೇ ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಭಾರತದ ಮೇಲೂ ಕೊರೊನಾ ಪ್ರಭಾವ ಬೀರಿದ್ದು ಜನರ ಆದಾಯಕ್ಕೆ ಹೊಡೆತ ನೀಡಿದೆ. ಈ ನಡುವೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆಗೆ ಹೆಲ್ತ್ ಇನ್ಷುರೆನ್ಸ್ ಕವರ್ ಆಗುತ್ತಾ? ಇಲ್ವಾ? ಎಂಬ ಗೊಂದಲವು ಶುರುವಾಗಿದೆ. ಸಾಮಾನ್ಯವಾಗಿ ನಿಮ್ಮಲ್ಲಿರುವ ಗೊಂದಲದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಪ್ರಯತ್ನ ಈ ಕೆಳಗಿದೆ ಓದಿ.

ಭಾರತದಲ್ಲಿ 200ಕ್ಕೂ ಹೆಚ್ಚು ಪ್ರಕರಣಗಳು

ಭಾರತದಲ್ಲಿ 200ಕ್ಕೂ ಹೆಚ್ಚು ಪ್ರಕರಣಗಳು

ದೇಶದಲ್ಲಿ ಈವರೆಗೂ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಈಗಾಗಲೇ ನಾಲ್ವರು ಈ ಮಹಾಮಾರಿಗೆ ಪ್ರಾಣ ತೆತ್ತಿದ್ದಾರೆ. ದೇಶದಲ್ಲಿ ಕೊರೊನಾಗೆ ಬಲಿಯಾಗಿದ್ದು ನಮ್ಮ ಕರ್ನಾಟಕ ರಾಜ್ಯದಲ್ಲಿ ಅನ್ನೋದು ದುರದೃಷ್ಟಕರ.

ವಿಶ್ವದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಜನರು ಈ ಸೋಂಕಿಗೆ ಒಳಗಾಗಿದ್ದಾರೆ. 11,000 ಅಧಿಕ ಜನರು ಸಾವನ್ನಪ್ಪಿದ್ದಾರೆ. ಚೀನಾ, ಇಟಲಿ, ಸ್ಪೇನ್ ,ಜರ್ಮನಿಯಲ್ಲಿ ಅತಿ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ನಡುವೆ ಒಳ್ಳೆಯ ಸುದ್ದಿ ಎಂದರೆ ಲಸಿಕೆ ಇಲ್ಲದಿದ್ದರೂ 91 ಸಾವಿರಕ್ಕೂ ಅಧಿಕ ಜನರು ವಿಶ್ವದಲ್ಲಿ ಈ ವೈರಸ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ.

 

ಕೊರೊನಾವೈರಸ್‌ಗೆ ಹೆಲ್ತ್‌ ಇನ್ಷುರೆನ್ಸ್ ಕವರ್ ಆಗುತ್ತಾ?

ಕೊರೊನಾವೈರಸ್‌ಗೆ ಹೆಲ್ತ್‌ ಇನ್ಷುರೆನ್ಸ್ ಕವರ್ ಆಗುತ್ತಾ?

ಕೊವಿಡ್-19 ಭಾರತದಲ್ಲೂ ಭಾರೀ ಭಯ ಮೂಡಿಸುತ್ತಿದೆ. ಕೊರೊನಾವೈರಸ್‌ ಬಂದ್ರೆ ಹೆಲ್ತ್‌ ಇನ್ಷುರೆನ್ಸ್‌ ಕವರ್ ಆಗುತ್ತಾ ಎಂಬ ಪ್ರಶ್ನೆ ಮೂಡುವುದು ಸಹಜ. ಈಗಾಗಲೇ ಕೊರೊನಾವೈರಸ್ ಬಂದಿದ್ರೆ ಹೆಲ್ತ್‌ ಇನ್ಷುರೆನ್ಸ್‌ ಖರೀದಿಸುವಂತಿಲ್ಲ. ಅಂದರೆ ಖರೀದಿಸಿದ್ರು ಹೆಲ್ತ್‌ ಇನ್ಷುರೆನ್ಸ್‌ ವ್ಯಾಪ್ತಿಗೆ ಬರುವುದಿಲ್ಲ. ಈಗಾಗಲೇ ಹೆಲ್ತ್ ಇನ್ಷುರೆನ್ಸ್‌ ಹೊಂದಿದ್ದು ಬಳಿಕ ಕೊರೊನಾವೈರಸ್ ಬಂದರೆ ಹೆಲ್ತ್ ಇನ್ಷುರೆನ್ಸ್ ಕವರ್ ಆಗುತ್ತದೆ. ಡೆಂಗ್ಯೂ ಮಲೇರಿಯಾ ರೀತಿಯಲ್ಲೇ ಈ ಖರ್ಚನ್ನು ಹೆಲ್ತ್ ಇನ್ಷುರೆನ್ಸ್‌ನಲ್ಲಿ ಕವರ್ ಆಗುತ್ತೆ.

ಕೊರೊನಾವೈರಸ್‌ನಿಂದಾಗಿ ಸಾಕಷ್ಟು ಖರ್ಚು ಆಗುತ್ತದೆ

ಕೊರೊನಾವೈರಸ್‌ನಿಂದಾಗಿ ಸಾಕಷ್ಟು ಖರ್ಚು ಆಗುತ್ತದೆ

ಪಾಲಿಸಿಬಜಾರ್.ಕಾಮ್‌ನ ಹೆಲ್ತ್‌ ಇನ್ಷುರೆನ್ಸ್‌ ಮುಖ್ಯಸ್ಥ ಅಮಿತ್ ಛಾಬ್ರ. ಹೇಳುವ ಪ್ರಕಾರ ಕೊರೊನಾವೈರಸ್‌ ಬಂದರೆ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್‌ಗೆ ಭಾರೀ ಖರ್ಚಾಗುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಯು 10 ಲಕ್ಷದವರೆಗೂ ಹೆಲ್ತ್‌ ಇನ್ಷುರೆನ್ಸ್‌ ಹೊಂದಿದ್ದರೆ ಉತ್ತಮ ಎಂದಿದ್ದಾರೆ.

ಹೆಲ್ತ್ ಇನ್ಷುರೆನ್ಸ್ ಮಾಡಿಸಿ ಎಷ್ಟು ದಿನ ಆಗಿರಬೇಕು?

ಹೆಲ್ತ್ ಇನ್ಷುರೆನ್ಸ್ ಮಾಡಿಸಿ ಎಷ್ಟು ದಿನ ಆಗಿರಬೇಕು?

ಹೆಲ್ತ್‌ ಇನ್ಷುರೆನ್ಸ್‌ ಮಾಡಿಸಿ ಒಂದೆರಡು ದಿನದಲ್ಲಿ ಕೊರೊನಾವೈರಸ್‌ ಬಂದರೆ ಹೆಲ್ತ್‌ ಇನ್ಷುರೆನ್ಸ್ ಕವರ್ ಆಗುವುದಿಲ್ಲ. ಹೆಲ್ತ್‌ ಇನ್ಷುರೆನ್ಸ್ ಮಾಡಿಸಿ 30 ದಿನಗಳಾಗಿದ್ದರೆ ಮಾತ್ರ ಟ್ರೀಟ್‌ಮೆಂಟ್‌ಗೆ ಇನ್ಷುರೆನ್ಸ್‌ ಕವರ್‌ ಆಗುತ್ತದೆ. ಅಪಘಾತದ ಸಂದರ್ಭದಲ್ಲಿ ಮಾತ್ರ 30 ದಿನಗಳ ಒಳಗೆ ಇನ್ಷುರೆನ್ಸ್‌ ಕವರ್ ಆಗುತ್ತದೆ. ಹೀಗಾಗಿ ಇನ್ಷುರೆನ್ಸ್ ಮಾಡಿಸಿ 31 ದಿನಗಳಿಂದ ಇನ್ಷುರೆನ್ಸ್‌ ವ್ಯಾಪ್ತಿಗೆ ಬರುತ್ತದೆ.

ಹೆಲ್ತ್‌ ಇನ್ಷುರೆನ್ಸ್ ಕ್ಲೈಮ್‌ ಹೇಗೆ ನಡೆಯುತ್ತದೆ?

ಹೆಲ್ತ್‌ ಇನ್ಷುರೆನ್ಸ್ ಕ್ಲೈಮ್‌ ಹೇಗೆ ನಡೆಯುತ್ತದೆ?

ನೀವು ಮಾಡಿಸಿರುವ ಹೆಲ್ತ್‌ ಇನ್ಷುರೆನ್ಸ್‌ ಕಂಪನಿಯು ಯಾವೆಲ್ಲಾ ಆಸ್ಪತ್ರೆಗಳ ನೆಟ್‌ವರ್ಕ್‌ ಹೊಂದಿದೆ ಎಂದು ತಿಳಿದುಕೊಳ್ಳಿ. ಇನ್ಷುರೆನ್ಸ್‌ನ ನೆಟ್‌ವರ್ಕ್ ಆಸ್ಪತ್ರೆಗಳಿಗೆ ನೀವು ಹೋದರೆ ಕ್ಯಾಶ್‌ಲೆಸ್‌ ಕ್ಲೈಮ್ ಮಾಡಿಕೊಳ್ಳಬಹುದು. ಯಾವುದೇ ದೊಡ್ಡ ಇನ್ಷರೆನ್ಸ್‌ ದೊಡ್ಡ ಮಟ್ಟದ ನೆಟ್‌ವರ್ಕ್ ಹೊಂದಿರುತ್ತದೆ.

ನೀವು ನೆಟ್‌ವರ್ಕ್ ಆಸ್ಪತ್ರೆಗೆ ಹೋದರೆ ಹೆಚ್ಚು ಅನುಕೂಲ. ಈ ಮೂಲಕ ಹಣ ಪಾವತಿಸದೇ ನೀವು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಇನ್ನು 2ನೇ ರೀತಿಯಲ್ಲಿ ಕ್ಲೈಮ್ ಎಂದರೆ ''ರೀ ಎಂಬರ್ಸ್‌ಮೆಂಟ್‌'' ಆಗಿದೆ. ನೆಟ್‌ವರ್ಕ್ ಆಸ್ಪತ್ರೆ ಹೊರತುಪಡಿಸಿ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಬಿಲ್‌ ಕ್ಲೈಮ್ ಮಾಡಿಕೊಳ್ಳಬಹುದು.

 

ಹೆಲ್ತ್ ಇನ್ಷುರೆನ್ಸ್‌ ಖರೀದಿ ಹೆಚ್ಚಾಗಬಹುದು!

ಹೆಲ್ತ್ ಇನ್ಷುರೆನ್ಸ್‌ ಖರೀದಿ ಹೆಚ್ಚಾಗಬಹುದು!

ಕೊರೊನಾವೈರಸ್ ಭೀತಿಯಿಂದಾಗಿ ಹೆಲ್ತ್‌ ಇನ್ಷುರೆನ್ಸ್‌ ಖರೀದಿಗೆ ಜನರು ಮುಂದಾಗಬಹುದು. ಕೆಲವರು ನಮಗೆ ಏನು ಆಗುವುದಿಲ್ಲ, ಎಂದು ನಂಬಿದವರು ಮೊದಲು ಹೆಲ್ತ್‌ ಇನ್ಷುರೆನ್ಸ್‌ ಮಾಡಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ಪಾಲಿಸಿಬಜಾರ್.ಕಾಮ್‌ನ ಹೆಲ್ತ್‌ ಇನ್ಷುರೆನ್ಸ್‌ ಮುಖ್ಯಸ್ಥ ಅಮಿತ್ ಛಾಬ್ರ.

English summary

Does Your Health Insurance Cover Coronavirus Treatment

Do our health insurance policies protect us against the deadly virus that is Covid-19 and every insurance will cover or not?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X