For Quick Alerts
ALLOW NOTIFICATIONS  
For Daily Alerts

ಕಂಪನಿ ಬದಲಿಸಿದಾಗ ಆನ್‌ನೈನಲ್ಲಿ ಪಿಎಫ್ ಖಾತೆ ವರ್ಗಾಯಿಸುವುದು ಹೇಗೆ?

|

ಇಂದಿನ ಕಾಲಘಟ್ಟದಲ್ಲಿ ಒಂದೇ ಕಂಪನಿಯಲ್ಲಿ ಬಹಳ ವರ್ಷ ಕೆಲಸದಲ್ಲಿರುವುದು ಅಪರೂಪವೆಂಬಂತಾಗಿದೆ. 10 ವರ್ಷದಲ್ಲಿ ಮೂರ್ನಾಲ್ಕು ಬಾರಿ ಕೆಲಸ ಬದಲಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಒಬ್ಬ ವ್ಯಕ್ತಿ ಹಲವಾರು ಪಿಎಫ್ ಖಾತೆಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲಸ ಬದಲಿಸಿದಾಗೆಲ್ಲಾ ಹೊಸ ಪಿಎಫ್ ಖಾತೆ ಸೃಷ್ಟಿಸಲಾಗುವುದು ಇದಕ್ಕೆ ಕಾರಣ.

ಯುಎಎನ್ ನಂಬರ್ ಆ್ಯಕ್ಟಿವೇಟ್ ಮಾಡಿದರೆ ನಿಮ್ಮ ಎಲ್ಲಾ ಪಿಎಫ್ ಖಾತೆಗಳು ಒಂದೇ ಪ್ಲಾಟ್‌ಫಾರ್ಮ್ ಅಡಿಗೆ ಬರುತ್ತವೆ. ಆದರೂ ಬಹು ಪಿಎಫ್ ಖಾತೆಗಳನ್ನು ವಿಲೀನಗೊಳಿಸಲು ಈಗ ಆನ್‌ಲೈನ್‌ನಲ್ಲಿ ಅವಕಾಶ ಇದೆ. ನಿಮ್ಮ ಎಲ್ಲಾ ಪಿಎಫ್ ಖಾತೆಗಳ ಹಣವನ್ನು ಒಂದೇ ಖಾತೆಗೆ ವರ್ಗಾಯಿಸಬಹುದು.

ಡಿಜಿಬ್ಯಾಂಕ್ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?ಡಿಜಿಬ್ಯಾಂಕ್ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಎನಿದು ಇಪಿಎಫ್?

ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್, ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ. ಇದು ಉದ್ಯೋಗಿಗಳ ನಿವೃತ್ತಿ ಭದ್ರತೆಗಾಗಿ ಸರ್ಕಾರ ಜಾರಿ ಮಾಡಿರುವ ಯೋಜನೆ. ಸರ್ಕಾರ ಮತ್ತು ಖಾಸಗಿಯ ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪಿಎಫ್ ಯೋಜನೆಯನ್ನು ಒದಗಿಸಬೇಕಾಗುತ್ತದೆ. ಉದ್ಯೋಗಿಗಳ ಸಂಬಳದ ಶೇ. 12 ಭಾಗವನ್ನು ಪಿಎಫ್ ಖಾತೆಗೆ ಪ್ರತೀ ತಿಂಗಳು ಜಮೆ ಮಾಡಬೇಕಾಗುತ್ತದೆ.

ಈ ಅಂಶ ಗಮನದಲ್ಲಿಡಿ...

ಈ ಅಂಶ ಗಮನದಲ್ಲಿಡಿ...

ಇಪಿಎಫ್ ಖಾತೆಯನ್ನು ಇನ್ನೊಂದು ಖಾತೆಗೆ ಟ್ರಾನ್ಸ್‌ಫರ್ ಮಾಡುವ ಮುನ್ನ ಈ ಕೆಳಗಿನ ಅಂಶಗಳನ್ನು ಖಾತ್ರಿಪಡಿಸಿಕೊಳ್ಳಿ.

* ಇಪಿಎಫ್ ಪೋರ್ಟಲ್‌ನಲ್ಲಿ ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್) ಅನ್ನು ಆ್ಯಕ್ಟಿವೇಟ್ ಮಾಡಬೇಕು. ಮೊಬೈಲ್ ನಂಬರ್ ನೊಂದಾಯಿತವಾಗಿರಬೇಕು.
* ಬ್ಯಾಂಕ್ ಖಾತೆ, ಐಎಫ್‌ಎಸ್‌ಸಿ ಕೋಡ್ ಇತ್ಯಾದಿ ವಿವರ ಭರ್ತಿ ಮಾಡಬೇಕು. ಈ ಬ್ಯಾಂಕ್ ವಿವರವನ್ನು ನೀವು ಕೆಲಸ ಮಾಡುವ ಕಂಪನಿ ದೃಢೀಕರಿಸಬೇಕು.
* ಯುಎಎನ್‌ಗೆ ಆಧಾರ್ ಲಿಂಕ್ ಮಾಡಬೇಕು.
* ನೀವು ಕಂಪನಿಗೆ ಸೇರಿದ ದಿನ ಮತ್ತು ಬಿಟ್ಟ ದಿನವನ್ನು ನಮೂದಿಸಬೇಕು.
* ಒಂದು ಐಡಿ, ಒಂದು ವರ್ಗಾವಣೆ ಮಾತ್ರ ಸಾಧ್ಯ.

 

ಇಪಿಎಫ್ ಖಾತೆ ಆನ್‌ಲೈನ್‌ನಲ್ಲಿ ವರ್ಗಾಯಿಸುವುದು ಹೀಗೆ

ಇಪಿಎಫ್ ಖಾತೆ ಆನ್‌ಲೈನ್‌ನಲ್ಲಿ ವರ್ಗಾಯಿಸುವುದು ಹೀಗೆ

ಇಪಿಎಫ್‌ನ ಮೆಂಬರ್‌ಇಂಟರ್ಫೇಸ್ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿರಿ.
* ಒನ್ ಮೆಂಬರ್-ಒನ್ ಇಪಿಎಫ್ ಅಕೌಂಟ್ ಅನ್ನು ಆಯ್ದುಕೊಳ್ಳಿ
* ಅಲ್ಲಿರುವ ವಿವರವನ್ನು ಪರಿಶೀಲಿಸಿ, ನಂತರ 'ಗೆಟ್ ಡೀಟೈಲ್ಸ್' ಮೇಲೆ ಕ್ಲಿಕ್ ಮಾಡಿ.
* ನೀವು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯ ಯುಎಎನ್ ಐಡಿಯನ್ನು ನಮೂದಿಸಿ
* ಗೆಟ್ ಓಟಿಪಿ ಕ್ಲಿಕ್ ಮಾಡಿದಾಗ ಸಿಗುವ ನಂಬರ್ ಅನ್ನು ನಮೂದಿಸಿ, ನಂತರ ಸಬ್ಮಿಟ್ ಕೊಡಿ.
* ಪಿಎಫ್ ಟ್ರಾನ್ಸ್‌ಫರ್‌ಗೆ ಮನವಿ ಮಾಡುವ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ
* ಈ ಪ್ರಕ್ರಿಯೆ ಬಳಿಕ ಟ್ರ್ಯಾಕಿಂಗ್ ಐಡಿ ಜನರೇಟ್ ಆಗುತ್ತದೆ.

ಬೇಕಾಗುವ ದಾಖಲೆಗಳು
* ರಿವೈಸ್ಡ್ ಫಾರ್ಮ್ 13 ಅನ್ನು ನೀವು ಲಗತ್ತಿಸಬೇಕಾಗುತ್ತದೆ.
* ಪ್ಯಾನ್, ಆಧಾರ್ ಇತ್ಯಾದಿ ಐಡಿ ಪ್ರೂಫ್ ಬೇಕಾಗುತ್ತದೆ
* ಯುಎಎನ್ ಐಡಿ
* ಈಗ ಕೆಲಸ ಮಾಡುವ ಕಂಪನಿಯ ವಿವರ
* ಸಂಬಳ ಹಾಕಲಾಗುವ ಬ್ಯಾಂಕ್ ಖಾತೆಯ ವಿವರ
* ಪಿಎಫ್ ಖಾತೆಯ ವಿವರ

 

ಟ್ರಾನ್ಸ್‌ಫರ್ ಸ್ಟೇಟಸ್ ಪರಿಶೀಲಿಸುವುದು ಹೀಗೆ

ಟ್ರಾನ್ಸ್‌ಫರ್ ಸ್ಟೇಟಸ್ ಪರಿಶೀಲಿಸುವುದು ಹೀಗೆ

ವೆಬ್‌ಸೈಟ್ ಮೂಲಕ:
* ಅಧಿಕೃತ ವೆಬ್‌ಸೈಟ್‌ಗೆ ಹೋಗಿ
* ಕ್ಲೈಮ್ ಸ್ಟೇಟಸ್ ಆಯ್ಕೆ ಮಾಡಿ
* ನಿಮ್ಮ ಪಿಎಫ್ ಕಚೇರಿ ಇರುವ ರಾಜ್ಯ ಆಯ್ದುಕೊಳ್ಳಿ
* ರೀಜನಲ್ ಆಫೀಸ್ ಆಯ್ಕೆ ಮಾಡಿ
* ಅಕೌಂಟ್ ನಂಬರ್ ನಮೂದಿಸಿ ಸಬ್ಮಿಟ್ ಕ್ಲಿಕ್ ಮಾಡಿ. ಆಗ ನಿಮ್ಮ ಟ್ರ್ಯಾಕಿಂಗ್ ಸ್ಟೇಟಸ್ ಕಾಣುತ್ತದೆ.

ಪೋರ್ಟಲ್ ಮೂಲಕ:
* ಇಪಿಎಫ್‌ಒ ಪೋರ್ಟಲ್‌ಗೆ ಹೋಗಿ
* ಯುಎಎನ್ ಮೂಲಕ ಲಾಗಿನ್ ಆಗಿ
* ಆನ್‌ಲೈನ್ ಸರ್ವಿಸಸ್‌ಗೆ ಹೋಗಿ
* ಟ್ರ್ಯಾಕ್ ಕ್ಲೇಮ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
* ಟ್ರಾನ್ಸ್‌ಫರ್ ಕ್ಲೇಮ್ ಸ್ಟೇಟಸ್ ಆಯ್ದುಕೊಂಡರೆ ಅದು ಎಲ್ಲಿಯವರೆಗೆ ಬಂದಿದೆ ಎಂಬುದು ಗೊತ್ತಾಗುತ್ತದೆ.

 

English summary

EPF Account: Know How To Transfer In Online

If one changes the job he can transfer his previous job's PF account to the current one through online process. Know the details on how to do it.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X