For Quick Alerts
ALLOW NOTIFICATIONS  
For Daily Alerts

EPFO Merge Accounts : 2 ಪಿಎಫ್‌ ಖಾತೆಯಿದೆಯೇ, ಹೀಗೆ ವಿಲೀನ ಮಾಡಿ

|

ನಿಮ್ಮಲ್ಲಿ ಒಂದಕ್ಕಿಂತ ಅಧಿಕ ಪಿಎಫ್ ಖಾತೆಯಿದೆಯೇ, ಹಾಗಿದ್ದರೆ ನೀವು ಎಲ್ಲ ಖಾತೆಯನ್ನು ವಿಲೀನ ಮಾಡುವುದು ಮುಖ್ಯವಾಗಿದೆ. ನೀವು ಮನೆಯಲ್ಲಿಯೇ ಕೂತು ಆನ್‌ಲೈನ್ ಮೂಲಕವೇ ನಿಮ್ಮ ಪಿಎಫ್‌ ಖಾತೆಗಳನ್ನು ವಿಲೀನ ಮಾಡಬಹುದು. ಹೀಗೆ ವಿಲೀನ ಮಾಡುವುದರಿಂದ ನಿಮ್ಮ ಖಾತೆಯಲ್ಲಿನ ಮೊತ್ತವು ಕೂಡಾ ಅಧಿಕವಾಗಲಿದೆ.

ನೀವು ಎಲ್ಲ ಖಾತೆಯನ್ನು ವಿಲೀನ ಮಾಡುವುದರಿಂದಾಗಿ ಪದೇ ಪದೇ ಲಾಗಿನ್ ಆಗುವ ತಾಪತ್ರಯ ಕೂಡಾ ತಪ್ಪುತ್ತದೆ. ಒಟ್ಟು ಮೊತ್ತದ ಲೆಕ್ಕಾಚಾರವು ಲಭ್ಯವಾಗಲಿದೆ. ಹಾಗೆಯೇ ನಿಮ್ಮ ಸಮಯವೂ ಕೂಡಾ ಉಳಿತಾಯವಾಗಲಿದೆ.

New EPF Rule : ಪಿಎಫ್ ನಿಯಮ: ಐದು ಪ್ರಮುಖ ಬದಲಾವಣೆಗಳು ಇಲ್ಲಿದೆNew EPF Rule : ಪಿಎಫ್ ನಿಯಮ: ಐದು ಪ್ರಮುಖ ಬದಲಾವಣೆಗಳು ಇಲ್ಲಿದೆ

ನೀವು ಆನ್‌ಲೈನ್ ಮೂಲಕವೇ ಸರಳವಾಗಿ ಎರಡು ಪಿಎಫ್ ಖಾತೆಗಳನ್ನು ವಿಲೀನ ಮಾಡಬಹುದು. ಹಾಗಾದರೆ ಈ ಒಂದಕ್ಕಿಂತ ಅಧಿಕವಿರುವ ಪಿಎಫ್ ಖಾತೆಯನ್ನು ಯಾಕಾಗಿ ನಾವು ವಿಲೀನ ಮಾಡಬೇಕು, ವಿಲೀನ ಮಾಡುವುದು ಯಾಕೆ ಮುಖ್ಯ, ಹೇಗೆ ವಿಲೀನ ಮಾಡುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಪಿಎಫ್ ಖಾತೆ ವಿಲೀನ ಯಾಕೆ ಮುಖ್ಯ?

ಪಿಎಫ್ ಖಾತೆ ವಿಲೀನ ಯಾಕೆ ಮುಖ್ಯ?

ನೀವು ಬೇರೆ ಸಂಸ್ಥೆಯಲ್ಲಿ ಉದ್ಯೋಗವನ್ನು ಆರಂಭ ಮಾಡುವಾಗ ಬೇರೆಯೇ ಪಿಎಫ್ ಖಾತೆಯನ್ನು ತೆರೆದಿರುವ ಸಾಧ್ಯತೆಗಳು ಇರುತ್ತದೆ. ನೀವು ಈಗಾಗಲೇ ಪಿಎಫ್ ಖಾತೆಯನ್ನು ಹೊಂದಿದ್ದರೆ ಹೊಸ ಸಂಸ್ಥೆಗೂ ಕೂಡಾ ಅದೇ ಯುಎಎನ್ ಸಂಖ್ಯೆಯನ್ನು ನೀವು ನೀಡುವುದು ಮುಖ್ಯವಾಗುತ್ತದೆ. ಹಾಗೆಯೇ ನೀವು ಹೊಸ ಸಂಸ್ಥೆಗೆ ಸೇರ್ಪಡೆಯಾದ ಬಳಿಕ ನಿಮ್ಮ ಹಳೆಯ ಯುಎಎನ್ ಸಂಖ್ಯೆಯನ್ನು ನೀಡಿದ್ದರೂ ಖಾತೆಯಲ್ಲಿನ ಮೊತ್ತ ಲಿಂಕ್ ಆಗಿರುವುದಿಲ್ಲ. ಇದರಿಂದಾಗಿ ನೀವು ಈ ಹಿಂದೆ ಇದ್ದ ಸಂಸ್ಥೆಯ ಪಿಎಫ್ ತೆಗೆಯುವುದು ಕಷ್ಟವಾಗಬಹುದು. ಹಳೆಯ ಖಾತೆಯಲ್ಲಿನ ಮೊತ್ತವನ್ನು ನಿಮ್ಮ ಈಗಿನ ಖಾತೆಗೆ ವರ್ಗಾಯಿಸಬೇಕಾದರೆ ಎರಡು ಖಾತೆಯನ್ನು ನೀವು ವಿಲೀನ ಮಾಡಬೇಕಾಗುತ್ತದೆ.

 ಇಪಿಎಫ್ ಖಾತೆಗಳನ್ನು ವಿಲೀನ ಮಾಡುವುದು ಹೇಗೆ?

ಇಪಿಎಫ್ ಖಾತೆಗಳನ್ನು ವಿಲೀನ ಮಾಡುವುದು ಹೇಗೆ?

ಹಂತ 1: unifiedportal-mem.epfindia.gov.in ಇಪಿಎಫ್ಒ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: One Member One EPF account ಮೇಲೆ ಕ್ಲಿಕ್ ಮಾಡಿ
ಹಂತ 3: ಸ್ಕ್ರೀನ್‌ನಲ್ಲಿ ನಿಮ್ಮ ಪಿಎಫ್‌ ಖಾತೆಗಳ ವಿವರದ ಜೊತೆ ವೈಯಕ್ತಿಕ ಮಾಹಿತಿ ಕಾಣಿಸಿಕೊಳ್ಳಲಿದೆ,
ಹಂತ 4: ನಿಮ್ಮ ಈ ಹಿಂದಿನ ಖಾತೆಯನ್ನು ಈ ಖಾತೆಯೊಂದಿಗೆ ಮರ್ಜ್ ಮಾಡಲು, ನಿಮ್ಮ ಹಳೆ ಅಥವಾ ಹೊಸ ಉದ್ಯೋಗಿಗಳ ಮಾಹಿತಿ ನಮೂದಿಸಬೇಕು
ಹಂತ 5: ನಿಮ್ಮ ಈ ಹಿಂದಿನ ಯುಎಎನ್ ಹಾಕಿ, ಹಿಂದಿನ ಪಿಎಫ್ ಖಾತೆ ಸಂಖ್ಯೆ, ಮೆಂಬರ್ ಐಡಿಯನ್ನು ನಮೂದಿಸಿ
ಹಂತ 6: ನೀವು ಒಟಿಪಿಯನ್ನು ನಮೂದಿಸಿದ ಬಳಿಕ ನಿಮ್ಮ ರಿಕ್ವೆಸ್ಟ್ ಸಬ್‌ಮಿಟ್ ಆಗಲಿದೆ.
ಹಂತ 7: ನಿಮ್ಮ ಪ್ರಸ್ತುತ ಉದ್ಯೋಗಿಗಳ ಅನುಮೋದನೆಯ ಬಳಿಕ ಹಳೆ ಖಾತೆಯು ಈ ಖಾತೆಗೆ ವಿಲೀನವಾಗಲಿದೆ.

 ಪಿಎಫ್ ಖಾತೆ ಯಾವಾಗ ನಿಷ್ಕ್ರಿಯವಾಗಲಿದೆ?

ಪಿಎಫ್ ಖಾತೆ ಯಾವಾಗ ನಿಷ್ಕ್ರಿಯವಾಗಲಿದೆ?

ನೀವು ಹೂಡಿಕೆ ಅಥವಾ ವಿತ್‌ಡ್ರಾ ಅನ್ನು ಮಾಡದೆ 36 ತಿಂಗಳುಗಳು ಆಗಿದ್ದರೆ ನಿಮ್ಮ ಪಿಎಫ್ ಖಾತೆಯು ನಿಷ್ಕ್ರಿಯವಾಗಲಿದೆ. ಅಂದರೆ ನಿಮ್ಮ ಪಿಎಫ್ ಖಾತೆಗೆ ಹಣ ಜಮೆಯಾಗದ ಮೂರು ವರ್ಷದವರೆಗೆ ಸಕ್ರಿಯವಾಗಿರುತ್ತದೆ. ಆ ಬಳಿಕ ಖಾತೆ ಸಂಪೂರ್ಣವಾಗಿ ನಿಷ್ಕ್ರಿಯವಾಗುತ್ತದೆ ಎಂದು ಇಪಿಎಫ್‌ಒ ಹೇಳಿದೆ. ಈ ಪಿಎಫ್ ಖಾತೆಯು ನಾನ್-ಆಪರೇಟಿವ್ ಎಂದು ವರ್ಗಾಯಿಸಲಾಗಿರುತ್ತದೆ. ಅಂದರೆ ನಿಮ್ಮ ಪಿಎಫ್ ಖಾತೆಯು ನಿಷ್ಕ್ರಿಯವಾಗಿದೆ

English summary

EPFO: How to Merge Two or More PF Accounts, Details in Kannada

You should merge your PF Account if you have two or more accounts as a PF Account Holder. how to Merge Two or More PF Accounts, details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X