For Quick Alerts
ALLOW NOTIFICATIONS  
For Daily Alerts

ಭಾರತೀಯರನ್ನು ವಾಪಸ್ ಕರೆತರುತ್ತೆ ಏರ್ ಇಂಡಿಯಾ; ಎಷ್ಟು ಗೊತ್ತಾ ರೇಟ್?

|

ಕೊರೊನಾ ಲಾಕ್ ಡೌನ್ ನಿಂದಾಗಿ ಹೊರದೇಶಗಳಲ್ಲಿ ಸಿಲುಕಿಕೊಂಡಿರುವ 15,000 ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ಸಲುವಾಗಿ ಮೇ 7ರಿಂದ 13ನೇ ತಾರೀಕಿನ ಮಧ್ಯೆ ಏರ್ ಇಂಡಿಯಾದಿಂದ 64 ವಿಮಾನಗಳು ಕಾರ್ಯ ನಿರ್ವಹಿಸಲಿವೆ ಎಂದು ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದ್ದಾರೆ.

 

ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 13ರ ನಂತರ ವಾಪಸ್ ಕರೆತರುವ ಪ್ರಯತ್ನಗಳಲ್ಲಿ ಭಾರತದ ಖಾಸಗಿ ವಿಮಾನಗಳು ಸಹ ಕೈ ಜೋಡಿಸಬಹುದು ಎಂದು ಸಚಿವರು ಹೇಳಿದ್ದಾರೆ. ಯಾರಿಗೆ ವಾಪಸಾತಿ ವಿಮಾನದಲ್ಲಿ ಅವಕಾಶ ದೊರೆಯುತ್ತದೋ ಅಂತಹವರು ಹಣವನ್ನು ಪಾವತಿ ಮಾಡಬೇಕಾಗುತ್ತದೆ.

ವಿಮಾನ ಪ್ರಯಾಣ ದರ ಎಷ್ಟು?

ವಿಮಾನ ಪ್ರಯಾಣ ದರ ಎಷ್ಟು?

ಯಾವ ದೇಶದಿಂದ ಭಾರತಕ್ಕೆ ವಿಮಾನ ದರ ಎಷ್ಟು ತಗುಲುತ್ತದೆ ಎಂಬ ವಿವರ ಹೀಗಿದೆ: ಲಂಡನ್- ದೆಹಲಿ ರು. 50,000, ಢಾಕಾ- ದೆಹಲಿ ರು. 12,000, ಗಲ್ಫ್ ರಾಷ್ಟ್ರಗಳಾದ ಅಬುಧಾಬಿ, ದುಬೈ ಹಾಗೂ ದೋಹಾದಿಂದ ಕೇರಳದ ಕೊಚ್ಚಿಗೆ ಒಂದು ಕಡೆಯ ದಾರಿಗೆ 15 ರಿಂದ 16 ಸಾವಿರ ರುಪಾಯಿ ದರ ವಿಧಿಸಲಾಗುತ್ತದೆ. ಇನ್ನು ಯುನೈಟೆಡ್ ಸ್ಟೇಟ್ಸ್ ನಿಂದ ಭಾರತಕ್ಕೆ 1,00,000 ರುಪಾಯಿ ಆಗುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡುತ್ತದೆ.

14 ದಿನಗಳ ಕಾಲ ಕ್ವಾರಂಟೇನ್

14 ದಿನಗಳ ಕಾಲ ಕ್ವಾರಂಟೇನ್

ಹೊರ ದೇಶಗಳಿಂದ ಬಂದ ಮೇಲೆ ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಗುತ್ತದೆ ಹಾಗೂ Covid- 19 ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕಾಲ ಕ್ವಾರಂಟೇನ್ ನಲ್ಲಿ ಇಡಲಾಗುತ್ತದೆ ಎಂದು ಕೇಂದ್ರ ಸಚಿವ ಪುರಿ ಮಾಹಿತಿ ನೀಡಿದ್ದಾರೆ. ಏರ್ ಇಂಡಿಯಾ ಮತ್ತು ಅದರ ಅಂಗ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ 64 ವಿಮಾನಗಳು ಯುಎಇ, ಯು.ಕೆ., ಯು.ಎಸ್., ಕತಾರ್, ಸೌದಿ ಅರೇಬಿಯಾ, ಸಿಂಗಪೂರ್, ಮಲೇಷಿಯಾ, ಫಿಲಿಪೈನ್ಸ್, ಬಾಂಗ್ಲಾದೇಶ್, ಬಹರೇನ್, ಕುವೈತ್ ಮತ್ತು ಒಮನ್ ನಿಂದ ಭಾರತೀಯರನ್ನು ವಾಪಸ್ ತಾಯ್ನಾಡಿಗೆ ಕರೆತರಲಿವೆ.

ಯಾವ ದೇಶಕ್ಕೆ ಭಾರತದ ಎಷ್ಟು ವಿಮಾನ?
 

ಯಾವ ದೇಶಕ್ಕೆ ಭಾರತದ ಎಷ್ಟು ವಿಮಾನ?

ಯುಎಇಗೆ 10 ವಿಮಾನ, ಯುಎಸ್ ಹಾಗೂ ಯು.ಕೆ.ಗೆ ತಲಾ ಏಳು ವಿಮಾನಗಳು, ಸೌದಿ ಅರೇಬಿಯಾ ಮತ್ತು ಸಿಂಗಪೂರ್ ಗೆ ತಲಾ ಐದು ವಿಮಾನ, ಕತಾರ್ ಗೆ ಎರಡು ವಿಮಾನ ಮೇ 7ರಿಂದ 13ನೇ ತಾರೀಕಿನ ಮಧ್ಯೆ ತೆರಳುತ್ತವೆ. ಇದೇ ಅವಧಿಯಲ್ಲಿ ಮಲೇಷ್ಯಾ ಹಾಗೂ ಬಾಂಗ್ಲಾದೇಶ್ ಗೆ ತಲಾ ಏಳು ವಿಮಾನ, ಕುವೈತ್ ಮತ್ತು ಫಿಲಿಪೈನ್ಸ್ ಗೆ ತಲಾ ಐದು ವಿಮಾನ ಮತ್ತು ಒಮನ್, ಬಹರೇನ್ ಗೆ ತಲಾ ಎರಡು ವಿಮಾನಗಳು ತೆರಳಲಿವೆ ಎಂದು ಕೇಂದ್ರ ಸಚಿವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

English summary

Evacuation Flight For Indians: Price And Other Details Here

Air India and it's subsidiary Air India express will evacuate Indians from various countries form May 7th to 13. Here is the details.
Story first published: Tuesday, May 5, 2020, 21:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X