For Quick Alerts
ALLOW NOTIFICATIONS  
For Daily Alerts

Happy Birthday Ratan Tata: ರತನ್ ಟಾಟಾ ಬಳಿ ಇರುವ 5 ದುಬಾರಿ ವಸ್ತುಗಳಿವು

|

ಭಾರತದ ಪ್ರಮುಖ ಉದ್ಯಮಿ ರತನ್ ಟಾಟಾ ಜನರ ಮೇಲೆ ಅತೀ ಅಧಿಕ ಪ್ರಭಾವ ಬೀರಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ರತನ್ ಟಾಟಾಗೆ ಈಗ 85 ವರ್ಷವಾಗಿದೆ. ಭಾರತದ ಉದ್ಯಮಿ ರತನ್ ಟಾಟಾ ಡಿಸೆಂಬರ್ 28ರಂದು 85ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಇವರ ಬಗ್ಗೆ ಕೆಲವೊಂದು ವಿಶೇಷ ವಿಚಾರಗಳನ್ನು ನಾವಿಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

 

ರತನ್ ಟಾಟಾ ಭಾರತದಲ್ಲಿ ಹೆಚ್ಚು ಪ್ರಭಾವ ಬೀರಿದ ಉದ್ಯಮಿಯಾಗಿದ್ದಾರೆ. ಟಾಟಾ ಸನ್ಸ್‌ನ ಚೇರ್‌ಮನ್ ಆಗಿ ಈ ಹಿಂದೆ ರತನ್ ಟಾಟಾ ಕಾರ್ಯನಿರ್ವಹಣೆ ಮಾಡಿದ್ದಾರೆ. ರತನ್ ಭಾರತದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮಾತ್ರವಲ್ಲ ಹಲವಾರು ದಾನ ಧರ್ಮಗಳ ಮೂಲಕ ಹೆಸರುವಾಸಿಯಾಗಿದ್ದಾರೆ.

ರತನ್ ಟಾಟಾ ಹೆಚ್ಚು ಹಾಸ್ಯ ಪ್ರವೃತ್ತಿಯನ್ನು ಕೂಡಾ ಹೊಂದಿದ್ದು, ಹಲವಾರು ಸ್ಪೂರ್ತಿಧಾಯಕ ಮಾತುಗಳಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಆದರೆ ಈ ಸಂದರ್ಭದಲ್ಲಿ ರತನ್ ಟಾಟಾರ ಶ್ರೀಮಂತಿಕೆ ಬಗ್ಗೆ ನಾವು ತಿಳಿಯುವುದು ಬೇಡವೇ? ರತನ್ ಟಾಟಾರ ಬಳಿ ಇರುವ ಅತೀ ದುಬಾರಿ ವಸ್ತುಗಳ ಪಟ್ಟಿ ನಾವಿಲ್ಲಿ ಮಾಡಿದ್ದೇವೆ. ಮುಂದೆ ಓದಿ...

 ದುಬಾರಿ ಕಾರು: ಫೆರಾರಿ ಕ್ಯಾಲಿಫೋರ್ನಿಯಾ

ದುಬಾರಿ ಕಾರು: ಫೆರಾರಿ ಕ್ಯಾಲಿಫೋರ್ನಿಯಾ

ರತನ್ ಟಾಟಾ ತನ್ನ ದುಬಾರಿ ಕಾರು ಫೆರಾರಿ ಕ್ಯಾಲಿಫೋರ್ನಿಯಾವನ್ನು ಅತೀ ಹೆಚ್ಚು ಪ್ರೀತಿ ಮಾಡುತ್ತಾರೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಇದು ನಿಗೂಢ ವಿಚಾರವೂ ಏನಲ್ಲ. 4.3-litre V8 ಪವರ್ ಅನ್ನು ಹೊಂದಿರುವ 2+2 ಹಾರ್ಡ್ ಡೋರ್ ಸಿಸ್ಟಮ್ ಹೊಂದಿರುವ ಕಾರು ಇದಾಗಿದೆ. ಈ ಕಾರನ್ನು ಹೆಚ್ಚಾಗಿ ರತನ್ ಟಾಟಾ ಬಳಸುತ್ತಾರೆ. ಇದರಲ್ಲೇ ಹೆಚ್ಚಾಗಿ ಪ್ರಯಾಣಿಸುತ್ತಾರೆ.

 ಖಾಸಗಿ ಜೆಟ್ ಬಗ್ಗೆ ತಿಳಿದಿದೆಯೇ?

ಖಾಸಗಿ ಜೆಟ್ ಬಗ್ಗೆ ತಿಳಿದಿದೆಯೇ?

ರತನ್ ಟಾಟಾ ಡಸೌಲ್ಟ್ ಫಾಲ್ಕೋನ್ 2000 ( Dassault Falcon 2000)ರ ಮಾಲೀಕರಾಗಿದ್ದಾರೆ. ಆದರೆ ಬೇರೆ ಶ್ರೀಮಂತ ವ್ಯಕ್ತಿಗಳ ಐಷಾರಾಮಿ ಜೆಟ್‌ಗಳಂತೆ ಇದಲ್ಲ. ಈ ಜೆಟ್‌ಗೆ ರತನ್ ಟಾಟಾರೇ ಪೈಲೇಟ್ ಆಗಿದ್ದಾರೆ. 17ನೇ ವಯಸ್ಸಿಗೆ ರತನ್ ಟಾಟಾ ಮೊದಲ ಬಾರಿಗೆ ವಿಮಾನ ಹಾರಿಸಿದ್ದರು. ಏರ್ ಶೋನಲ್ಲಿ F-16 ಫೈಟರ್ ಜೆಟ್ ಹಾರಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಗೆ ರತನ್ ಟಾಟಾ ಪಾತ್ರರಾಗಿದ್ದಾರೆ.

 ಮುಂಬೈನಲ್ಲಿನ ರತನ್ ಟಾಟಾರ ಬಂಗಲೆ
 

ಮುಂಬೈನಲ್ಲಿನ ರತನ್ ಟಾಟಾರ ಬಂಗಲೆ

ಮುಂಬೈನ ಕೊಲಾಬಾದಲ್ಲಿ ರತನ್ ಟಾಟಾರ ಬಂಗಲೆಯಿದೆ. ಇದು ಸುಮಾರು 13,350 ಚದರ ಅಡಿಯ ಬಂಗಲೆಯಾಗಿದೆ. ಇದರ ಅಂದಾಜು ವೆಚ್ಚ 150 ಕೋಟಿ ರೂಪಾಯಿಯಾಗಿದೆ. ಇದು ಆರಬ್ಬೀ ಸಮುದ್ರದ ವೀವ್ ಅನ್ನು ಹೊಂದಿದೆ. ಟಾಪ್‌ನಲ್ಲಿ ಸ್ವಿಮ್ಮಿಂಗ್ ಪೂಲ್ ಇದೆ. ಬೇರೆ ಸ್ವಿಮ್ಮಿಂಗ್ ಪೂಲ್ ಕೂಡಾ ಇದೆ. ಸನ್ ಡೆಕ್, ಸಿನಿಮಾ ಹಾಲ್, 10 ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಖಾಸಗಿ ಲೈಬ್ರರಿ, ಜಿಮ್, ಆಟದ ಕೋಣೆ ಕೂಡಾ ಇದರಲ್ಲಿದೆ.

 ಮಾಸೆರಾಟಿ ಕ್ವಾಟ್ರೊಪೋರ್ಟ್

ಮಾಸೆರಾಟಿ ಕ್ವಾಟ್ರೊಪೋರ್ಟ್

ಮಸೆರಟಿ ಕ್ವಾಟ್ರೊಪೋರ್ಟ್ ಕಾರನ್ನು ಕೂಡಾ ರತನ್ ಟಾಟಾ ಹೊಂದಿದ್ದಾರೆ. ಇದು ಕೂಡಾ ದುಬಾರಿ ಕಾರುಗಳ ಪೈಕಿ ಒಂದಾಗಿದೆ. ಇದು ಇಟಾಲಿಯನ್ ಐಷಾರಾಮಿ ಕಾರು ಆಗಿದೆ. ಇದರ ಟಾಪ್ ಸ್ಪೀಡ್ 270 kph ಆಗಿದೆ. ಇದರ ಮೌಲ್ಯ ಸುಮಾರು 100,000 ಡಾಲರ್ ಆಗಿದೆ.

 ಲ್ಯಾಂಡ್ ರೋವರ್ ಫ್ರೀಲ್ಯಾಂಡರ್

ಲ್ಯಾಂಡ್ ರೋವರ್ ಫ್ರೀಲ್ಯಾಂಡರ್

ರತನ್ ಟಾಟಾ ತನ್ನ ಉದ್ಯಮವನ್ನು ಹೆಚ್ಚು ವಿಸ್ತಾರ ಮಾಡುವ ಮುನ್ನವೇ ಅವರ ಕಾರಿನ ಗ್ಯಾರೇಜ್‌ನಲ್ಲಿ ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ ಕಂಡು ಬಂದಿದೆ. ಇದು ನಾಲ್ಕು ಸಿಲಿಂಡರ್ ಡಿಸೇಲ್ ಇಂಜಿನ್ ಅನ್ನು ಹೊಂದಿದೆ. 187 bhp ಪವರ್ ಅನ್ನು ಹೊಂದಿದೆ.

English summary

Happy Birthday Ratan Tata: Know the most expensive things owned by Indian industrialist Ratan Tata

Happy Birthday Ratan Tata: On December 28, the Indian industrialist Ratan Tata will turn 85 years old. Know the most expensive things owned by Indian industrialist Ratan Tata. details in kannada.
Story first published: Wednesday, December 28, 2022, 13:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X