For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ: ಆರೋಗ್ಯ, ಶಿಕ್ಷಣ ಸೆಸ್‌ ಎಂದರೇನು, ನಿಮ್ಮ ಮೇಲೆ ಏನು ಪ್ರಭಾವ?

|

ಆದಾಯ ತೆರಿಗೆ ಎಂಬುವುದು ನಮ್ಮ ಜೀವನದ ಒಂದು ಭಾಗವಾಗಿದೆ. ನಾವು ಪ್ರತಿ ವರ್ಷವೂ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಇಷ್ಟಪಡುತ್ತೀರೋ ಇಲ್ಲವೋ, ಆದರೆ ಆದಾಯ ತೆರಿಗೆಯನ್ನು ನೀವು ಪಾವತಿ ಮಾಡಲೇಬೇಕು. ಅದರೊಂದಿಗೆ ಪ್ರತಿ ವರ್ಷವೂ ಆರೋಗ್ಯ ಹಾಗೂ ಶಿಕ್ಷಣ ಸೆಸ್ ಅನ್ನು ಕೂಡಾ ಪಾವತಿಸಬೇಕು.

ಹೌದು, ಆರೋಗ್ಯ ಹಾಗೂ ಶಿಕ್ಷಣ ಸೆಸ್ ಆದಾಯ ತೆರಿಗೆಯ ಒಂದು ಭಾಗವಾಗಿದೆ. ಈ ಸೆಸ್ ಅನ್ನು ಸರ್ಕಾರವು ನಮ್ಮ ಮೇಲೆ ವಿಧಿಸುತ್ತದೆ. ನಿರ್ದಿಷ್ಟ ಸೇವೆ ಅಥವಾ ಕ್ಷೇತ್ರದ ಬೆಳವಣಿಗೆಗಾಗಿ ಸರ್ಕಾರವು ಸೆಸ್ ಅನ್ನು ವಿಧಿಸುತ್ತದೆ. ಅದರಂತೆಯೇ ಈ ಶಿಕ್ಷಣ ಹಾಗೂ ಆರೋಗ್ಯ ಸೆಸ್ ಆಗಿದೆ. ಇದನ್ನು ನೇರ ಅಥವಾ ಪರೋಕ್ಷ ತೆರಿಗೆಯ ಮೂಲಕ ನಮ್ಮ ಮೇಲೆ ಸರ್ಕಾರವು ವಿಧಿಸುತ್ತದೆ.

ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ತೆರಿಗೆ ಪಾವತಿಸುವುದು ಹೇಗೆ?ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ತೆರಿಗೆ ಪಾವತಿಸುವುದು ಹೇಗೆ?

ಆದರೆ ಹಲವಾರು ಮಂದಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಸರ್ಕಾರ ನಮ್ಮಿಂದಲೇ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ತೆರಿಗೆಯನ್ನು ಪಡೆಯುತ್ತದೆ ಎಂಬುವುದು ಸಾಮಾನ್ಯ ನಾಗರಿಕರಲ್ಲಿ ಹಲವಾರು ಮಂದಿಗೆ ತಿಳಿಯದ ವಿಚಾರ. ಹಾಗಾದರೆ ಈ ಆರೋಗ್ಯ ಹಾಗೂ ಶಿಕ್ಷಣ ಸೆಸ್ ಎಂದರೇನು, ಯಾವಾಗ, ಯಾವ ಸರ್ಕಾರ ಆರಂಭ ಮಾಡಿದೆ, ಇದು ನಮ್ಮ ಮೇಲೆ ಪ್ರಭಾವ ಬೀರುತ್ತದೆಯೇ ಎಂದು ತಿಳಿಯೋಣ ಮುಂದೆ ಓದಿ...

 ಈ ಸೆಸ್ ಯಾವಾಗ ಆರಂಭವಾಗಿದ್ದು?

ಈ ಸೆಸ್ ಯಾವಾಗ ಆರಂಭವಾಗಿದ್ದು?

ಈ ಸೆಸ್ ಅನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಚಯಿಸಿದೆ. ಈ ಹಿಂದೆ ಉನ್ನತ ಶಿಕ್ಷಣ ಸೆಸ್ ಶೇಕಡ 3ರಷ್ಟಿತ್ತು. ಆದರೆ 2018ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಕೇಂದ್ರ ಬಜೆಟ್ 2018ರಲ್ಲಿ ಈ ಸೆಸ್ ಅನ್ನು ಆರೋಗ್ಯ ಹಾಗೂ ಶಿಕ್ಷಣ ಸೆಸ್ ಆಗಿ ಬದಲಾವಣೆ ಮಾಡಿದ್ದಾರೆ. ಆರೋಗ್ಯ ಹಾಗೂ ಶಿಕ್ಷಣ ಸೆಸ್ ಶೇಕಡ 4ರಷ್ಟು ಇರುತ್ತದೆ.

 ಈ ಸೆಸ್ ಮರುಪಾವತಿ ಪಡೆಯಬಹುದು!

ಈ ಸೆಸ್ ಮರುಪಾವತಿ ಪಡೆಯಬಹುದು!

ನೀವು ಭಾರತೀಯ ನಾಗರಿಕರಾಗಿದ್ದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87A ಅಡಿಯಲ್ಲಿ ಈ ಸೆಸ್ ಮರುಪಾವತಿಯನ್ನು ಪಡೆಯಬಹುದು. ಆದರೆ ನಿಮ್ಮ ಆದಾಯವು 5 ಲಕ್ಷ ರೂಪಾಯಿಗಿಂತ ಅಧಿಕವಾಗಿರಬಾರದು. ಅಧಿಕವಾಗಿದ್ದರೆ, ಮರುಪಾವತಿ ಪಡೆಯಲು ಸಾಧ್ಯವಾಗುವುದಿಲ್ಲ. ಶಿಕ್ಷಣ ಸೆಸ್ ಅನ್ನು ಲೆಕ್ಕಾಚಾರ ಮಾಡುವ ಮುನ್ನ ಆದಾಯ ತೆರಿಗೆಯಿಂದ ಈ ಸೆಸ್ ಅನ್ನು ಕಡಿತ ಮಾಡಲಾಗುತ್ತದೆ. ಮರುಪಾವತಿಯು ಶೇಕಡ 100ರಷ್ಟು ಆಗಿರಬಹುದು ಅಥವಾ 12,500 ರೂಪಾಯಿಯಷ್ಟು ಆಗಿರಬಹುದು. ಯಾವುದು ಕಡಿಮೆಯೋ ಅಷ್ಟು ಮೊತ್ತ ರಿಫಂಡ್ ಆಗುತ್ತದೆ ಎಂದು ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

 ಈ ಸೆಸ್ ಏತಕ್ಕಾಗಿ ಕಡಿತ?

ಈ ಸೆಸ್ ಏತಕ್ಕಾಗಿ ಕಡಿತ?

ಹೆಸರೇ ಹೇಳುವಂತೆ ಆರೋಗ್ಯ ಹಾಗೂ ಶಿಕ್ಷಣ ಸೆಸ್ ಅನ್ನು ಕೇಂದ್ರ ಸರ್ಕಾರವು ಸಂಗ್ರಹ ಮಾಡುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಪ್ರಮುಖ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಸೆಸ್ ಅನ್ನು ಸಂಗ್ರಹ ಮಾಡುತ್ತದೆ. ಅಂದರೆ ನೀವು ಪಾವತಿ ಮಾಡುವ ಆದಾಯ ತೆರಿಗೆಯು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸಹಕಾರಿಯಾಗುತ್ತದೆ. ಇನ್ನು ಒಂದು ಹಣಕಾಸು ವರ್ಷದಲ್ಲಿ ಸಂಗ್ರಹ ಮಾಡಿದ ಸೆಸ್ ಆ ಹಣಕಾಸು ವರ್ಷದಲ್ಲಿ ಪೂರ್ಣವಾಗಿ ಬಳಕೆಯಾಗದಿದ್ದರೆ, ಆ ಮೊತ್ತವನ್ನು ಮುಂದಿನ ಹಣಕಾಸು ವರ್ಷದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಬಳಕೆ ಮಾಡಲಾಗುತ್ತದೆ.

 ಸರ್ಕಾರ ಈ ಸೆಸ್ ಹಣ ಯಾವುದಕ್ಕೆ ಬಳಸುತ್ತದೆ?

ಸರ್ಕಾರ ಈ ಸೆಸ್ ಹಣ ಯಾವುದಕ್ಕೆ ಬಳಸುತ್ತದೆ?

* FISDOM ಪ್ರಕಾರ ಕೇಂದ್ರ ಸರ್ಕಾರವು ಈ ಸೆಸ್ ಹಣವನ್ನು ಪ್ರಾಥಮಿಕ, ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ ಬಳಸುತ್ತದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬಳಸುತ್ತದೆ.
* ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ನೀಡಲು ಈ ಸೆಸ್ ಹಣವನ್ನು ಬಳಕೆ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಶಾಲೆಯನ್ನು ತೊರೆಯುವ ಪ್ರಮಾಣ ಈ ಬಿಸಿಯೂಟ ಆರಂಭ ಮಾಡಿದಾಗಿನಿಂದ ಕಡಿಮೆಯಾಗಿದೆ ಎಂದು ಸಾಬೀತಾಗಿದೆ.
* ಇಂಟರ್‌ನೆಟ್ ಸೌಲಭ್ಯವನ್ನು ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡಲು ಕೂಡಾ ಈ ಸೆಸ್ ಮೊತ್ತ ಬಳಕೆ
* ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್-ಡಿಜಿಟಲ್ ಕನೆಕ್ಟಿವಿಟಿ ಹೆಚ್ಚಿಸಲು ಬಳಕೆ
* ಪ್ರಾಧ್ಯಾಪಕರು, ಇತರೆ ಸಿಬ್ಬಂದಿಗಳಿಗೆ ವೇತನವನ್ನು ನೀಡಲು ಈ ಮೊತ್ತದ ಬಳಕೆ
* ರಾಷ್ಟ್ರೀಯ ಶಿಕ್ಷಣ ಅಭಿಯಾನದಂತಹ ಅಭಿಯಾನದ ಆರಂಭಕ್ಕಾಗಿ ಈ ಸೆಸ್ ಬಳಕೆ
* ಶಾಲಾ-ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೌಲಭ್ಯ ಹೆಚ್ಚಿಸಲು ಬಳಕೆ

English summary

Health & Education Cess In Income Tax: What's this, Does It Impact You?, Explained in Kannada

health & education cess is an integral part of the income tax you pay every year. What's this, Does It Impact You?, Explained in Kannada.
Story first published: Friday, November 25, 2022, 16:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X