For Quick Alerts
ALLOW NOTIFICATIONS  
For Daily Alerts

Home Insurance: ಕಡಿಮೆ ಪ್ರೀಮಿಯಂ ಕಟ್ಟಿಯೂ ಎಷ್ಟೆಲ್ಲ ಲಾಭ ಗೊತ್ತಾ?

|

ಕನಸಿನ ಮನೆ ಕಟ್ಟಿಕೊಳ್ಳುವುದು ಅಂದರೆ ಮಹಾನ್ ಸಾಹಸ. ಅದೇ ಸಮಯದಲ್ಲಿ ದುಬಾರಿಯೂ ಹೌದು. ಅಂಥದ್ದೊಂದು ಮನೆ ಕಟ್ಟಿ ಸುರಕ್ಷಿತವಾಗಿರುವ ಬಾಗಿಲು, ಕ್ಯಾಮೆರಾ ಅಥವಾ ಅಗತ್ಯ ಲಾಕಿಂಗ್ ಸಿಸ್ಟಮ್ ಇವೆಲ್ಲವನ್ನೂ ಅಳವಡಿಸದಿದ್ದರೆ ಹೇಗೆ? ಇನ್ನು ಜೀವನಮಾನದ ಬಹುತೇಕ ದುಡಿಮೆಯನ್ನು ಮನೆ ಸಾಲವನ್ನು ತೀರಿಸುವುದಕ್ಕೆ ಅಂತಲೇ ಮೀಸಲಿಡುವ ನಾವು, ಒಂದು ಮುಖ್ಯ ವಿಷಯವನ್ನು ಮರೆತು ಬಿಡ್ತೇವೆ. ಅದೇ ಹೋಮ್ ಇನ್ಷೂರೆನ್ಸ್. ಅಥವಾ ಮನೆ ವಿಮೆ.

 

ದೇಶದ ಟಾಪ್ 10 ಬ್ಯಾಂಕ್ ಗಳಲ್ಲಿ ಪರ್ಸನಲ್ ಬಡ್ಡಿ ದರ ಎಷ್ಟಿದೆ?ದೇಶದ ಟಾಪ್ 10 ಬ್ಯಾಂಕ್ ಗಳಲ್ಲಿ ಪರ್ಸನಲ್ ಬಡ್ಡಿ ದರ ಎಷ್ಟಿದೆ?

ಹೀಗೊಂದು ಇನ್ಷೂರೆನ್ಸ್ ಮಾಡಿಸಿದರೆ ಏನು ಪ್ರಯೋಜನ ಅಂತ ಯೋಚಿಸುತ್ತಿದ್ದೀರಾ? ಬಹಳ ಸಿಂಪಲ್. ಯಾವುದಾದರೂ ಅವಘಡದಿಂದ ಮನೆಗೆ ಹಾನಿಯಾಗಿ, ಅದರಿಂದ ಆರ್ಥಿಕ ನಷ್ಟ ಸಂಭವಿಸುವುದರಿಂದ ಈ ಇನ್ಷೂರೆನ್ಸ್ ಸುರಕ್ಷೆ ನೀಡುತ್ತದೆ. ಇಡೀ ಭಾರತದಲ್ಲೇ ಇನ್ಷೂರೆನ್ಸ್ ಪ್ರಮಾಣ 1% ಇದೆ. ಇನ್ನು ಹೋಮ್ ಇನ್ಷೂರೆನ್ಸ್ ಮತ್ತೂ ಕಡಿಮೆ.

ಯಾರು ಹೋಮ್ ಇನ್ಷೂರೆನ್ಸ್ ಖರೀದಿಸಬಹುದು, ಏನು ಕವರ್ ಆಗುತ್ತೆ?

ಯಾರು ಹೋಮ್ ಇನ್ಷೂರೆನ್ಸ್ ಖರೀದಿಸಬಹುದು, ಏನು ಕವರ್ ಆಗುತ್ತೆ?

ಮನೆಯ ಮಾಲೀಕರು ಅಥವಾ ಆಸ್ತಿಯಲ್ಲಿ ವಾಸವಿರುವವರು ಅಥವಾ ಬಾಡಿಗೆದಾರರು ಹೋಮ್ ಇನ್ಷೂರೆನ್ಸ್ ಪಾಲಿಸಿ ಖರೀದಿಸಬಹುದು. ಇನ್ನು ಯಾವುದಾದರೂ ಸಂಸ್ಥೆಯು ತನ್ನ ಸಿಬ್ಬಂದಿ, ಭಾಗೀದಾರರು ಅಥವಾ ಆಹ್ವಾನಿತರಿಗಾಗಿ ನಿರ್ಮಿಸಿರುವ ವಸತಿ ಉದ್ದೇಶದ ಆಸ್ತಿಗೂ ಇನ್ಷೂರೆನ್ಸ್ ಮಾಡಿಸಬಹುದು. ಇನ್ಷೂರೆನ್ಸ್ ಖರೀದಿ ಮಾಡಿದ ಮೇಲೆ ಅಗ್ನಿ ಅವಘಡ, ದರೋಡೆ, ಭಯೋತ್ಪಾದನೆ ಸೇರಿದಂತೆ ಇತರ ಅನಾಹುತಗಳು ಸಂಭವಿಸಿದಾಗ ನಷ್ಟವು ಕವರ್ ಆಗುತ್ತದೆ. ಇದರಲ್ಲಿ ಕಟ್ಟಡ, ಅದರಲ್ಲಿದ್ದ ಆಭರಣ, ಬೆಲೆ ಬಾಳುವ ವಸ್ತುಗಳು, ಕಲಾಕೃತಿಗಳು ಸಹ ಇದಲ್ಲಿ ಕವರ್ ಆಗುತ್ತದೆ. ಬಾಡಿಗೆದಾರರಾಗಿದ್ದಲ್ಲಿ ತಮ್ಮ ಸ್ವಂತ ವಸ್ತುಗಳು ಹಾಗೂ ಬೆಲೆಬಾಳುವ ಪದಾರ್ಥಗಳಿಗೆ ನಷ್ಟವಾದಲ್ಲಿ ಅದನ್ನು ಭರಿಸಿಕೊಳ್ಳಲು ಇದನ್ನು ಬಳಸಬಹುದು. ಇನ್ನು ಬಾಡಿಗೆ ಮನೆಯ ಮಾಲೀಕರು ಇನ್ಷೂರೆನ್ಸ್ ಮಾಡಿಸಿದಲ್ಲಿ ಆ ಮನೆ ನಾಶವಾದಲ್ಲಿ, ಬಾಡಿಗೆ ಬರುವುದು ನಿಂತುಹೋದಲ್ಲಿ ಅದರಿಂದಲೂ ಕವರ್ ಆಗುತ್ತದೆ. ಕೆಲವು ಇನ್ಷೂರೆನ್ಸ್ ಪಾಲಿಸಿಗಳಂತೂ ಒಂದು ದಿನದ ಕನಿಷ್ಠ ಅವಧಿಯಿಂದ ಗರಿಷ್ಠ ಐದು ವರ್ಷದ ತನಕ ದೊರೆಯುತ್ತವೆ.

ಮನೆ ವಿಮೆ ಯಾಕೆ ಮುಖ್ಯವಾಗುತ್ತದೆ?
 

ಮನೆ ವಿಮೆ ಯಾಕೆ ಮುಖ್ಯವಾಗುತ್ತದೆ?

ನೈಸರ್ಗಿಕ ವಿಕೋಪದಿಂದ ಮನೆಗೆ ಹಾನಿಯಾದಲ್ಲಿ, ಅದರ ಜತೆಗೆ ಆಸ್ತಿ ನಷ್ಟವಾದಲ್ಲಿ ಎಷ್ಟು ಮೊತ್ತಕ್ಕೆ ಇನ್ಷೂರೆನ್ಸ್ ಮಾಡಿಸಲಾಗಿರುತ್ತದೋ ಅಷ್ಟು ನಷ್ಟವನ್ನು ಇನ್ಷೂರೆನ್ಸ್ ಕಂಪೆನಿ ಭರಿಸುತ್ತದೆ. ಇನ್ಷೂರೆನ್ಸ್ ಮಾಡಿಸುವುದರಿಂದ ಮನೆ ಕಟ್ಟಡ ಮಾತ್ರವಲ್ಲ. ಅದರೊಳಗೆ ಇರುವ ವಸ್ತುಗಳಿಗೆ ಕವರ್ ಇರುತ್ತದೆ. ಇನ್ನು ಗೃಹಬಳಕೆ ವಸ್ತುಗಳು, ಫರ್ನೀಚರ್, ಬಟ್ಟೆ, ಲ್ಯಾಪ್ ಟಾಪ್, ಮೊಬೈಲ್ ಫೋನ್ ಸಹ ಸೇರಿದಂತೆ ಇತರ ವಸ್ತುಗಳು ಇದರಲ್ಲಿ ಕವರ್ ಆಗುತ್ತದೆ. ಆಭರಣಗಳಿಗೆ ಪ್ರತ್ಯೇಕವಾದ ಹೋಮ್ ಇನ್ಷೂರೆನ್ಸ್ ಕವರ್ ಬೇಕಾಗುತ್ತದೆ. ನೀವು ಹಾಕಿಕೊಳ್ಳುವ ಒಡವೆಗಳಿಗೂ ವಿಮೆ ಮಾಡಿಸಬಹುದು ಎಂಬುದು ಗೊತ್ತಿರಲಿ. ಬೆಂಕಿ ಅವಘಡದಂಥದ್ದು ಸಂಭವಿಸಿದಲ್ಲಿ ಈ ಹೋಮ್ ಇನ್ಷೂರೆನ್ಸ್ ಮೂಲಕ ಕಟ್ಟಡ ನಿರ್ಮಾಣ ವೆಚ್ಚ ಮಾತ್ರವಲ್ಲದೆ ತಾತ್ಕಾಲಿಕವಾಗಿ ಬೇರೆಡೆ ವಾಸಿಸಬೇಕಾದ ಅಗತ್ಯಕ್ಕೂ ಕವರ್ ಆಗುತ್ತದೆ. ಪಾಲಿಸಿದಾರರ ಮನೆಯಲ್ಲಿ ಕಳುವಾದರೆ ಅದು ಹಾಗೂ ಯಾವುದಾದರೂ ವಸ್ತುವಿಗೆ ಹಾನಿಯಾದಲ್ಲಿ ಅದಕ್ಕೂ ಅನ್ವಯಿಸುತ್ತದೆ.

ಮೂರು ಬಗೆಯಲ್ಲಿ ವಿಮೆ ಇದೆ

ಮೂರು ಬಗೆಯಲ್ಲಿ ವಿಮೆ ಇದೆ

ಮನೆಯಲ್ಲಿ ಅವಘಡವಾಗಿ, ಆ ಸಂದರ್ಭದಲ್ಲಿ ವ್ಯಕ್ತಿಗಳಿಗೆ ಅಪಘಾತವಾದರೆ ಆಗಲೂ ಇನ್ಷೂರೆನ್ಸ್ ಕವರ್ ಆಗುತ್ತದೆ. ಉದಾಹರಣೆಗೆ ಸಿಲಿಂಡರ್ ಸ್ಫೋಟ. ಅಥವಾ ನೆರೆಮನೆಯವರ ಕಟ್ಟಡ ನಿರ್ಮಾಣವೋ ಅಥವಾ ದುರಸ್ತಿಯೋ ಮಾಡುವಾಗ ನಿಮ್ಮ ಮನೆಗೆ ನಷ್ಟ ಸಂಭವಿಸಿದರೆ ಆ ಹಾನಿಯನ್ನು ತುಂಬಿಕೊಡಲಾಗುತ್ತದೆ. ಅದಕ್ಕಾಗಿ ಹೋಮ್ ಇನ್ಷೂರೆನ್ಸ್ ಅಡಿಯಲ್ಲಿ ಪಬ್ಲಿಕ್ ಲಯಬಿಲಿಟಿ ಕವರೇಜ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಹೋಮ್ ಇನ್ಷೂರೆನ್ಸ್ ನಲ್ಲಿ ಮೂರು ಬಗೆಯಲ್ಲಿ ಕವರ್ ಆಗುತ್ತದೆ. ಒಂದು ಇನ್ಷೂರೆನ್ಸ್ ಪಾಲಿಸಿ ಖರೀದಿಸುವ ವೇಳೆಯಲ್ಲಿ ಇನ್ಷೂರೆನ್ಸ್ ಮಾಡಿಸುವವರು ಇಷ್ಟು ಮೊತ್ತಕ್ಕೆ ಎಂದು ಪಾಲಿಸಿ ಮೊತ್ತವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅದರ ಆಧಾರದಲ್ಲಿ ಇನ್ಷೂರೆನ್ಸ್ ಕವರ್ ಆಗುತ್ತದೆ. ಇನ್ನು ಎರಡನೇ ವಿಧಾನ ಅಂದರೆ, ನಷ್ಟವಾದ ವಸ್ತುಗಳ ಬದಲಿಗೆ ಹೊಸ ವಸ್ತುಗಳನ್ನು ತೆಗೆದುಕೊಡುತ್ತದೆ ಇನ್ಷೂರೆನ್ಸ್ ಕಂಪೆನಿ. ಮೂರನೆ ಬಗೆಯಲ್ಲಿ, ಮನೆ ಅಥವಾ ವಸ್ತುಗಳ ಮಾರುಕಟ್ಟೆ ಮೌಲ್ಯವನ್ನು ಈಗಾಗಲೇ ಬಳಕೆ ಆಗಿರುವ ಆಧಾರದಲ್ಲಿ ಮೌಲ್ಯಮಾಪನ ಮಾಡಿ, ಪರಿಹಾರ ನೀಡಲಾಗುತ್ತದೆ.

ದಿನಕ್ಕೆ  5 ರುಪಾಯಿಯಂತೆಯೂ ಪ್ರೀಮಿಯಂ ಆರಂಭ

ದಿನಕ್ಕೆ 5 ರುಪಾಯಿಯಂತೆಯೂ ಪ್ರೀಮಿಯಂ ಆರಂಭ

ಹೋಮ್ ಇನ್ಷೂರೆನ್ಸ್ ಜತೆಗೆ ಇನ್ನಷ್ಟು ಕವರ್ ಗಳನ್ನು ಸೇರ್ಪಡೆ ಮಾಡಿಸಬಹುದು. ಬಾಡಿಗೆ ನಷ್ಟ, ತಾತ್ಕಾಲಿಕ ವಾಸ್ತವ್ಯ ಸ್ಥಳಾಂತರದ ಕವರ್, ಪಬ್ಲಿಕ್ ಲಯಬಿಲಿಟಿ, ಪೆಟ್ ಡಾಗ್ ಇನ್ಷೂರೆನ್ಸ್ ಕವರ್, ಎಟಿಎಂ ವಿಥ್ ಡ್ರಾ ಕವರ್, ವ್ಯಾಲೆಟ್ ಕಳುವುದು ಕವರ್, ಕೀ ಅಂಡ್ ಲಾಕ್ ಬದಲಿ ಕವರ್ ಮನೆಗೆ ಸಂಪೂರ್ಣ ಕವರ್ ಒದಗಿಸುತ್ತದೆ. ಮನೆಯ ಇನ್ಷೂರೆನ್ಸ್ ಗೆ ಪ್ರೀಮಿಯಂ ದಿನಕ್ಕೆ 5 ರುಪಾಯಿಯಂತೆಯೂ ಆರಂಭವಾಗುತ್ತದೆ. ಬಹಳ ಮಂದಿಗೆ ದೊಡ್ಡ ಅನಾಹುತವಾದ ಮೇಲೆ ತಮ್ಮ ತಪ್ಪಿನ ಅರಿವಾಗುತ್ತದೆ. ಆದರೆ ತಡವಾದ ಮೇಲೆ ಏನು ಪ್ರಯೋಜನ? ಆದ್ದರಿಂದ ಯಾವುದೇ ಸ್ಥಿರಾಸ್ತಿಗೆ ಇನ್ಷೂರೆನ್ಸ್ ಮಾಡಿಸುವ ಮೂಲಕ ಸುರಕ್ಷೆ ಪಡೆಯಿರಿ. ಇನ್ಷೂರೆನ್ಸ್ ಖರೀದಿ ಮಾಡುವ ಮುನ್ನ ಸಂಪೂರ್ಣವಾದ ಮಾಹಿತಿ ಪಡೆದು, ಮುಂದೆ ಹೆಜ್ಜೆ ಇಡಿ.

English summary

Home Insurance: What Are The Benefits And Who Can Choose?

Here is the benefits of home insurance explained. How much is the premium and what are the benefits details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X